19th April 2024
Share

ಗ್ರೌಂಡ್ ರಿಯಾಲಿಟಿ :

ತುಮಕೂರು ಮಹಾನಗರ ಪಾಲಿಕೆಯಲ್ಲಿ ವಾರ್ಡ್ ಸಮಿತಿ ರಚಿಸಲು ತುಮಕೂರು ನಗರ ವಿಧಾನಸಭಾ ಸದಸ್ಯರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ ಆರಂಭದಲ್ಲಿಯೇ ಐ.ಎ.ಎಸ್ ಅಧಿಕಾರಿ ಶಿವಯೋಗಿ ಕಳಸದ್‌ರವರು ಆಡಳಿತಾಧಿಕಾರಿಯಾಗಿದ್ದಾಗಲೇ ಸಭೆ ನಡವಳಿಕೆ ಮಾಡಿಸಿದ್ದರು.

  ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ಯಾವ ರೀತಿ ವಾರ್ಡ್ ಸಮಿತಿ ರಚಿಸಿದ್ದಾರೆ ಎಂಬ ಮಾಹಿತಿಯನ್ನು ಸಂಗ್ರಹಿಸಿದ್ದರು, ಆಗಿನ ಆಯುಕ್ತರಾಗಿದ್ದ ಶ್ರೀ ಮಂಜುನಾಥ್ ಸ್ವಾಮಿರವರು ಮತ್ತು ಪಾಲಿಕೆ ಮ್ಯಾನೇಜರ್ ಶ್ರೀ ಮಹೇಶ್‌ರವರು ವಿಧಾನಸಭಾ ಸದಸ್ಯರಿಗೆ ಎಲ್ಲಾ ಮಾಹಿತಿ ನೀಡಿ   ಮನವರಿಕೆ ಮಾಡಿದ್ದರು.

   ಕ್ರಮ ಕೈಗೊಳ್ಳುವ ವೇಳೆಗೆ ಪಾಲಿಕೆ ಚುನಾವಣೆ ಬಂದು ನೆನೆಗುದಿಗೆ ಬಿದ್ದಿತ್ತು. ನಂತರ ಮಹಾನಗರ ಪಾಲಿಕೆಯಲ್ಲಿ ವಿಷಯ ಮಂಡಿಸಿ ಪರ ವಿರೋಧ ನಡೆಯುತ್ತಿರುವಾಗ ತುಮಕೂರು ಸ್ಮಾರ್ಟ್ ಸಿಟಿಯಲ್ಲಿ ನಡೆದ ದಿಶಾ ಸಮಿತಿಯಲ್ಲಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ತುಮಕೂರು ನಗರ ವಿಧಾನಸಭಾ ಸದಸ್ಯರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಖಡಕ್ ಸೂಚನೆ ನೀಡಿ ನಿಯಮನುಸಾರ ವಾರ್ಡ್ ಸಮಿತಿ ಮತ್ತು ಬಡಾವಣೆ ಸಮಿತಿ ರಚಿಸಿ ಅವರುಗಳ ಸೇವೆಯನ್ನು ತುಮಕೂರು ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಬಳಸಿಕೊಳ್ಳಲು ಸೂಚನೆ ನೀಡಿದ್ದರು.

   ಆ ವೇಳೆಗೆ ನ್ಯಾಯಾಲಯದಲ್ಲಿ ಸಾರ್ವಜನಿಕ ಮೊಕೊದ್ದಮೆ ದಾಖಲಾಗಿರುವ ವಿಷಯವೂ ಸಭೆಯಲ್ಲಿ ಚರ್ಚೆಗೆ ಬಂದಿತ್ತು. ಪ್ರಸ್ತುತ ಪಾಲಿಕೆ ವಾರ್ಡ್ ಸಮಿತಿ ರಚಿಸಲು ಮುಂದಾಗಿದೆ. ಬಹಳ ದಿವಸಗಳಿಂದ ಹಲವಾರು ಸಂಘ ಸಂಸ್ಥೆಗಳು ಸಹ ಹೋರಾಟ ಮಾಡಿಕೊಂಡು ಬಂದಿರುವುದು ಸಹ ಒಳ್ಳೆಯ ಬೆಳವಣಿಗೆ.

 ಇದೂವರೆಗೂ ತುಮಕೂರು ಮಹಾನಗರ ಪಾಲಿಕೆಯಲ್ಲಿ ಬಡಾವಣೆ ಗಡಿ ಗುರುತಿಸಿಲ್ಲ, ರಸ್ತೆ ಮತ್ತು ವೃತ್ತಗಳಿಗೆ ಹೆಸರುಗಳನ್ನು ಅಧಿಕೃತವಾಗಿ ಗೆಜಿಟ್ ನೋಟಿಫಿಕೇಷನ್ ಮಾಡಿಲ್ಲ, ಕೂಡಲೇ ಅಗತ್ಯ ಕ್ರಮಕೈಗೊಂಡು ನಿಯಮ ಪ್ರಕಾರ ಬಡಾವಣೆವಾರು ನಾಗರೀಕ ಸಮಿತಿಗಳ ಪ್ರತಿ ನಿಧಿಗಳನ್ನು ಆಯ್ಕೆ ಮಾಡುವುದು ಅಗತ್ಯವಾಗಿದೆ.