12th September 2024
Share

ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಮತದಾರರಾದ ಶ್ರೀ ಇಮ್ರಾನ್‌ಪಾಷರವರು ಸಾಮಾಜಿಕ ಜಾಲತಾಣದಲ್ಲಿ ಗಂಭೀರವಾದ ಅಭಿವೃದ್ಧಿ ಪ್ರಶ್ನೆಗಳನ್ನು ಕೇಳಿದ್ದಾರೆ. ಅವರಿಗೆ ಕೂಡಲೇ ಉತ್ತರಿಸುವ ಜವಾಬ್ಧಾರಿ ತಮ್ಮದಾಗಿದೆ.

  ಚುನಾಯಿತ ಜನಪ್ರತಿನಿಧಿಗಳು ಸಾಮಾಜಿಕ ಜಾಲತಾಣವನ್ನು ಗಮನಿಸಿ ಎಂದು ದೇಶದ ಪ್ರಧಾನ ಮಂತ್ರಿಗಳು ಕರೆ ನೀಡಿದ್ದಾರೆ. ತುಮಕೂರು ನಗರದಲ್ಲಿನ ವಸತಿ ರಹಿತರಿಗೆ ನಿವೇಶನ ಮತ್ತು ವಸತಿ ಕಲ್ಪಿಸುವ ಜವಾಬ್ಧಾರಿ ತಮಗೂ ಇದೆ. ತುಮಕೂರು ಮಹಾನಗರಪಾಲಿಕೆಯ ಆಯುಕ್ತರಿಗೆ ಈ ಮೆಸೆಜ್‌ನ್ನು ಫಾರ್‌ವಾರ್ಡ್ ಮಾಡಿ ಉತ್ತರಿಸಲು ತಿಳಿಸುವುದು ಅಗತ್ಯವಾಗಿದೆ.

 ನಾನು ತುಮಕೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಶ್ರೀ ವೈ.ಎಸ್. ಸಿದ್ದೇಗೌಡರವರ ಬಗ್ಗೆ  ಟೀಕೆ ಮಾಡಿದ್ದೇನೆ. ಅದು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅಧ್ಯಯನ ಕೇಂದ್ರದ ವಿಷಯಾದಾರಿತ. ಅವರೊಂದಿಗೂ ಕಠಿಣ ಶಬ್ಧಗಳಲ್ಲಿ  ಚರ್ಚಿಸಿದ್ದೇನೆ,

  ಅವರು ನನಗೆ ಒಂದು ವಿಷಯ ತಿಳಿಸಿದರು, ಅವರು ಪ್ರತಿದಿನ ಸುಮಾರು 10  ಘಂಟೆಗೆ ಒಂದು ಸಭೆ ನಡೆಸಿ ನಿನ್ನೆ ದಿವಸ ಯಾರು ಯಾರು, ಯಾವ ಯಾವ, ಎಷ್ಟು ಕೆಲಸಗಳನ್ನು ಮಾಡಿದ್ದೀರಾ, ಬಾಕಿ ಇರುವ ಕೆಲಸಗಳೆಷ್ಟು? ಏಕೆ? ಎಂಬ ಬಗ್ಗೆ ಪ್ರಗತಿ ಪರಿಶೀಲನೆ ಮಾಡುವ ಮೂಲಕ ಕಡತಗಳು ನೆನೆಗುದಿಗೆ ಬೀಳದ ಹಾಗೆ ಕ್ರಮ ಕೈಗೊಳ್ಳುತ್ತಿದ್ದಾರಂತೆ.

  ಒಂದು ವೇಳೆ ಅದು ನಿಜವಾಗಿದ್ದಲ್ಲಿ ತಾವೂ ಪರಿಶೀಲಿಸಿ, ಸ್ಮಾರ್ಟ್ ಸಿಟಿಯಿಂದ ನಗರದಲ್ಲಿ ಹಾಕಿಸಿರುವ ಡಿಸ್‌ಪ್ಲೆ ಗಳಲ್ಲಿ ಸಭೆಯ ಫೋಟೋ ಮತ್ತು ವಿವರಗಳೊಂದಿಗೆ ಪ್ರಚಾರ ಮಾಡಿಸುವುದು ಅಗತ್ಯವಾಗಿದೆ.

 ಇದೇ ಮಾದರಿಯನ್ನು ತಾವು ತುಮಕೂರು ಮಹಾನಗರ ಪಾಲಿಕೆಯೂ ಸೇರಿದಂತೆ ಎಲ್ಲಾ ಕಚೇರಿಗಳಲ್ಲಿ ಜಾರಿ ಮಾಡಿದರೇ ಅದೇ ನಿಜವಾದ ಸ್ಮಾರ್ಟ್,

 ಶ್ರೀ ಇಮ್ರಾನ್‌ಪಾಷರವರೇ ತಾವು ನಮ್ಮ ಶಕ್ತಿಪೀಠದ ಬಗ್ಗೆಯೂ ಕೆಲವು ಸಲಹೆ ನೀಡಿದ್ದೀರಾ, ನಿಮಗೆ ಧನ್ಯವಾದಗಳು ಬಹುಷಃ ನಾವು ಯಾವುದೇ ಕೆಲಸವನ್ನು ಮಾಡಬೇಕಾದರೇ ಬ್ರಾಹ್ಮಣ ಜೋತಿಷಿಗಳನ್ನು ಕೇಳುವುದು ವಾಡಿಕೆ.

  ನಾನು ಇನ್ನೂ ಶಕ್ತಿಪೀಠಕ್ಕೆ ಎಂಬ್ಲಾಮ್ ಮಾಡಿಸಿಲ್ಲ, ಈ ವಿಷಯಕ್ಕೆ ನಾನು ಬ್ರಾಹ್ಮಣ ಜೋತಿಷಿಗಳನ್ನು ಕೇಳುವ ಅಗತ್ಯವಿಲ್ಲದ ಹಾಗೆ ತಾವೇ ಶಂಖ ಪದ ಬಳಸಿದ್ದೀರಾ? ಅದನ್ನೆ ಮುಂದಿನ ಸಭೆಯಲ್ಲಿ ಚರ್ಚಿಸಿ ಶಂಖವನ್ನೇ ಎಂಬ್ಲಾಮ್ ಆಗಿ ಮಾಡಿದರೇ ಹೇಗೆ ಎಂದು ಯೋಚಿಸುತ್ತಿದ್ದೇನೆ.

  ಜೊತೆಗೆ ನಾನು ಸಹ ದಿಶಾ ಸಮಿತಿ ಸದಸ್ಯನಾಗಿರುವುದರಿಂದ ಮುಂದಿನ ದಿಶಾ ಸಮಿತಿ ಸಭೆಯಲ್ಲಿ ಚರ್ಚಿಸಿ ನೀವು ಕೇಳಿರುವ ತುಮಕೂರು ನಗರದ ನಿವೇಶನ ಮತ್ತು ವಸತಿ ಬಗ್ಗೆ ಮಾಹಿತಿಯನ್ನು ನೀಡಲು ಇಚ್ಚಿಸಿದ್ದೇನೆ.

 ನಿಮ್ಮ ಗಮನಕ್ಕೆ ಒಂದು ವಿಚಾರ ತರಬಯಸುತ್ತೇನೆ, ದೇಶದ ಯಾವುದೇ ಒಬ್ಬ ಶಾಸಕ ಹೋರಾಟಗಾರರ ಅನಿಸಿಕೆಗಳನ್ನು ಗುರುತಿಸಿ ಅಧಿಕಾರಿಗಳ ಸಭೆ ನಡೆಸಿ,   ಸರ್ಕಾರಿ ಜಮೀನುಗಳನ್ನು ಗುರುತಿಸಲು ಶ್ರಮಿಸುತ್ತಿರುವ ಶ್ರೀ ಇಮ್ರಾನ್ ಪಾಷ ಎಂಬುವವರ ಹೆಸರನ್ನು ಸಭೆ ನಿರ್ಣಯದಲ್ಲಿ ಬರೆಸಿ ಪರಿಶೀಲಿಸಲು ಸೂಚನೆ ನೀಡಿರುವ ಉದಾಹರಣೆ ಇದ್ದಲ್ಲಿ ತಿಳಿಸಿ.

ನಂತರ ಆತನನ್ನು ಕರೆಸಿ ನೋಡಾಪ್ಪಾ ನೀನೂ ಸಹಕರಿಸು ಬಡವರಿಗೆ ಅನೂಕೂಲ ಮಾಡೋಣ ಎಂದು ಹೇಳಿರುವ ವಿಷಯವೂ ತುಮಕೂರಿನಲ್ಲಿ ನಡೆದಿದೆ. ಅದು ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ದೊಡ್ಡಗುಣ ವಲ್ಲವೇ? ಉತ್ತರಿಸುವಿರಾ ?