26th December 2024
Share

  ಭಾರತದ ಸಂವಿಧಾನವನ್ನು, ಸುಪ್ರೀಂ ಕೋರ್ಟ್ ತೀರ್ಪನ್ನು ಎಲ್ಲರೂ ಗೌರವಿಸ ಬೇಕು. ತುಮಕೂರು ನಗರ ಅದಕ್ಕೆ ಹೊರತಾಗಿಲ್ಲ.

 ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ಜಿಲ್ಲೆಯ ಅಭಿವೃದ್ಧಿ ವಿಚಾರಗಳ ಬಗ್ಗೆ ಎಲ್ಲಾ ಹಾಲಿ ಮತ್ತು ಮಾಜಿ ಚುನಾಯಿತ ಜನ ಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಲು ಮಹತ್ತರವಾದ ನಿರ್ಣಯ ಕೈಗೊಳ್ಳಲಾಗಿದೆ.

  ಆದ್ದರಿಂದ ಪಕ್ಷಾತೀತ ಎಲ್ಲಾ ರಾಜಕೀಯ ಪಕ್ಷಗಳು ಸಹ ತಮ್ಮ ಅಭಿಪ್ರಾಯಗಳ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ  ನೀಡಲೇ ಬೇಕು. ಇಲ್ಲವಾದಲ್ಲಿ ನುಣಚಿಕೊಳ್ಳುವ ಪ್ರವೃತ್ತಿ ಎಂದು ಜನತೆ ತಿಳಿದು ಕೊಳ್ಳಲಿದ್ದಾರೆ.

ನಗರದಲ್ಲಿರುವ ಎಲ್ಲಾ ಜಾತಿ ಸಂಘಟನೆಗಳು, ನಾಗರೀಕ ಸಂಸ್ಥೆಗಳು ಮತ್ತು ಅಭಿವೃದ್ಧಿ ಪರ ಚಿಂತಕರು ಸಹ ತಮ್ಮ ಅಭಿಪ್ರಾಯಗಳ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ  ನೀಡಿ.

 ಇದು ಯಾರ ಮನೆಯ ಮದುವೆ ಅಲ್ಲ ಆಹ್ವಾನ ಪತ್ರಿಕೆ ನೀಡಲು ಇದು ಡಿಜಿಟಲ್ ಯುಗ ಸೋಶಿಯಲ್ ಮೀಡಿಯಾದಲ್ಲಿ ಉತ್ತರಿಸಿದರೂ ಸಾಕು.

 ವಿಶೇಷವಾಗಿ ತುಮಕೂರು ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್‌ರವರು, ತುಮಕೂರು ನಗರ ವಿಧಾನಸಭಾ ಸದಸ್ಯ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು, ಮಾಜಿ ಸಂಸದ ಶ್ರೀ ಎಸ್.ಪಿ.ಮುದ್ದುಹನುಮೇ ಗೌಡರವರು. ಮಾಜಿ ಶಾಸಕ ಶ್ರೀ ಎಸ್.ಷಫಿಅಹ್ಮದ್, ಶ್ರೀ ಸೊಗಡು ಶಿವಣ್ಣ, ಶ್ರೀ ರಫಿಕ್ ಅಹಮ್ಮದ್ ಮತ್ತು ವಿದೇಶದಲ್ಲಿ ನೆಲಸಿರುವ ಮಾಜಿ ಶಾಸಕರಾದ ಶ್ರೀ ನಜೀರ್‌ಅಹಮ್ಮದ್‌ರವರು ತಾವು ಮೊದಲು ಎಲ್ಲರೂ ಒಟ್ಟಿಗೆ ಸೇರಿ ಸಭೆ ನಡೆಸಿ ಅಥವಾ ಪ್ರತ್ಯೇಕವಾಗಿ ನಿಮ್ಮಗಳ ಅಭಿಪ್ರಾಯ ಪತ್ರ ನೀಡುವ ಮೂಲಕ ನಿಮ್ಮ ಜವಾಬ್ಧಾರಿ ಪ್ರದರ್ಶಿಸಿ.

ಇಲ್ಲ ಎಲ್ಲರೂ ಸಾಧ್ಯವಾಗುವುದಾದರೆ ಒಂದು ವಾರ ವಿದೇಶ ಪ್ರವಾಸಕ್ಕೆ ತೆರಳಿರಿ.

ತುಮಕೂರಿನ ಶಕ್ತಿಪೀಠ ಪೌಂಡೇಷನ್ ತನ್ನ ಸ್ಪಷ್ಟ ಈ ಕೆಳಕಂಡ ಅಭಿಪ್ರಾಯವನ್ನು ತಿಳಿಸಲಿದೆ.

ಭಾರತದ ಸಂವಿಧಾನವನ್ನು, ಸುಪ್ರೀಂ ಕೋರ್ಟ್ ತೀರ್ಪನ್ನು ಎಲ್ಲರೂ ಗೌರವಿಸಲೇ ಬೇಕು. ಇದರಲ್ಲಿ ರಾಜಕೀಯ ಬೇಡ ಜನತೆಗೆ ಶಾಶ್ವತ ನೆಮ್ಮದಿ ಬೇಕು. ಸರ್ಕಾರಿ ಜಮೀನಿನಲ್ಲಾಗಲಿ, ಸ್ವಂತ ಜಮೀನಿನಲ್ಲಾಗಲಿ, ಯಾವುದೇ ಕಾಲದಲ್ಲಿ ನಿರ್ಮಾಣ ಮಾಡಿರಲಿ ರಸ್ತೆ ಅಭಿವೃದ್ಧಿಗೆ ತೊಂದರೆ ಆದಲ್ಲಿ ಯಾವುದೇ ಧರ್ಮದ ಕಟ್ಟಡ ಇರಲಿ ತೆರವುಗೊಳಿಸಲೇ ಬೇಕು.

ಆದರೆ ಹೆಚ್.ಎ.ಎಲ್ ಮಾದರಿಯಲ್ಲಿ ಪರ್‍ಯಾಯ ಸರ್ಕಾರಿ ಜಾಗ ಅಥವಾ ಪರಿಹಾರ ನೀಡಲು ಹಾಲಿ ಇರುವ ಕಟ್ಟಡ ಮತ್ತು ನಿವೇಶನದ ಮೌಲ್ಯ ಮಾಪನ ಮಾಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿ, ಒಂದು ವೇಳೆ ಸರ್ಕಾರ ಪರಿಹಾರ ಕೊಡಲು ಬರುವುದಿಲ್ಲಾ ಎಂದಾದರೆ ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ನಗರದಲ್ಲಿ ಭಿಕ್ಷೆ ಎತ್ತಿ ಎಲ್ಲ ಧರ್ಮದವರಿಗೂ ಶೇಕಡವಾರು ಪರಿಹಾರ ನೀಡಲು ಕ್ರಮಕೈಗೊಳ್ಳಿ.

  ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ. ಮಾಧುಸ್ವಾಮಿರವರು ಈ ಬಗ್ಗೆ ಸರ್ಕಾರದ ನಿಲುವನ್ನು ತಿಳಿಸುವುದು ಅಗತ್ಯವಾಗಿದೆ.

ಶ್ರೀ ಡಾ.ರಾಕೇಶ್ ಕುಮಾರ್ ಐಎಎಸ್, ಶ್ರೀ ಶಿವಕುಮಾರ್ ಕೆಎಎಸ್, ಶ್ರೀ ಬೂಭಾಲನ್ ಐಎಎಸ್ ಮತ್ತು ಶ್ರೀ ವಂಶಿಕೃಷ್ಣ ಐಪಿಎಸ್ ನಿಮಗೆ ಸಂಪೂರ್ಣ ಬೆಂಬಲ. ಸರ್ವೇಯನ್ನು ಪಕ್ಕಾಮಾಡಿ ಯಾರಿಗೂ ಅನ್ಯಾಯ ವಾಗಬಾರದು ಅಷ್ಟೆ. ಕಾನೂನು ಪ್ರಕಾರ ಮುಂದುವರೆಯಿರಿ.

 ಸಭೆಗಳು ಸಾಕು ಸಾರ್ ಸಾಕು.