19th April 2024
Share

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಶ್ರೀ ಎಸ್.ಆರ್.ಪಾಟೀಲ್‌ರವರು ತಾವು ಸಚಿವರಾಗಿದ್ದಾಗ ಸ್ಮಾರ್ಟ್ ವಿಲೇಜ್ ಕನಸು ಕಂಡಿದ್ದರು. ಈ ಬಗ್ಗೆ ಸಾಕಷ್ಟು ಭಾರಿ ಸುದ್ಧಿ ಮಾಡಿದ್ದು ಇತಿಹಾಸ

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಕನಸಿನ ಸಂಸದರ ಆದರ್ಶ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆ, ಡಿಜಿಟಲ್ ಇಂಡಿಯಾ ಹೀಗೆ ಹಲವಾರು ಯೋಜನೆಗಳಡಿಯಲ್ಲಿ ಯಾವ ರೀತಿ ಕೆಲಸವಾಗುತ್ತಿದೆ, ಯಾವ ರೀತಿ ಆಗಬೇಕಾಗಿತ್ತು ಎಂಬ ಬಗ್ಗೆ ಮಾಹಿತಿಗಳನ್ನು ಕಲೆಹಾಕುವ ಮೂಲಕ ಮತ್ತೆ ಸ್ಮಾರ್ಟ್ ವಿಲೇಜ್ ಬಗ್ಗೆ ಗಮನ ಸೆಳೆಯಲು ಮುಂದಾಗಿದ್ದಾರೆ ಎಂಬ ಮಾಹಿತಿಯನ್ನು ಬಲ್ಲ ಮೂಲಗಳು ತಿಳಿಸಿವೆ.

  ಸರ್ಕಾರದ ವೈಪಲ್ಯಗಳನ್ನು ರಾಜ್ಯದ ಜನತೆ ಮುಂದೆ ಎಳೆ ಎಳೆಯಾಗಿ ಬಿಡಿಸಿಡುವ ಮೂಲಕ ಡಿಜಿಟಲ್ ಇಂಡಿಯಾದ ಮೋದಿಯವರಿಗೆ ಡಿಜಿಟಲ್ ಟಾಂಗ್ ನೀಡಲು ಸಜ್ಜಾಗುತ್ತಿದ್ದಾರಂತೆ.

 ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಇಲಾಖಾವಾರು ಜಿಐಎಸ್ ಲೇಯರ್‌ಗಳನ್ನು ಯಾವ ರೀತಿ ಮಾಡುತ್ತಿದ್ದಾರೆ. ಡಿಜಿಟಲ್ ಡೇಟಾಗಳನ್ನು ಯಾವ ರೀತಿ ಸಂಗ್ರಹಿಸುತ್ತಿದ್ದಾರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳು ಏನಾಗಿವೆ ಎಂಬ ಕರಾರು ವಕ್ಕಾದ ಮಾಹಿತಿಯ ಸಂಗ್ರಹದತ್ತ ಮಗ್ನರಾಗಿದ್ದಾರಂತೆ.

ರಾಜ್ಯ ಮಟ್ಟದ ಒಂದು ವಿಷನ್ ಗ್ರೂಪ್ ರಚಿಸಿ ಸ್ಮಾರ್ಟ್ ವಿಲೇಜ್ ರೂಪು ರೇಷೆ ತಯಾರಿಸುವ ಯೋಚನೆ ಮಾಡುವ ಮೂಲಕ ವಿಧಾನ ಪರಿಷತ್ತಿನ ನಾಯಕರಾಗಿ ಗ್ರಾಮೀಣ ಭಾಗದ ಜನರತ್ತ ಗಮನ ಹರಿಸಿರುವುದು ನಿಜಕ್ಕೂ ಸ್ವಾಗಾತಾರ್ಹ.