28th March 2024
Share

 R.ASHOK REVENU MINISTER : VERY GOOD IDEA

ಕಂದಾಯ ಸಚಿವರಾದ ಆರ್.ಅಶೋಕ್‌ರವರು ಡಿಸಿಗಳೇ ಹಳ್ಳಿಗಳಿಗೆ ಹೊರಡಿ ಎಂಬ ಕಾರ್ಯಕ್ರಮ ಘೋಶಿಸಿದ್ದಾರೆ.

ವೃದ್ಧಾಪ್ಯ ವೇತನಕ್ಕೆ ಆಧಾರ್ ವಯಸ್ಸೇ ಆಧಾರ ಎಂದಿದ್ದಾರೆ. ನಿಜಕ್ಕೂ VERY GOOD IDEA ಒಳ್ಳೆಯ ಚಿಂತನೆ.

ಇದೇ ರೀತಿ ಎಲ್ಲದಕ್ಕೂ ಚಿಂತನೆ ಮಾಡಿ ಸ್ವಾಮಿ.

ಪ್ರತಿಯೊಬ್ಬರಿಗೂ ವಯಸ್ಸಿಗೆ ಅನುಗುಣವಾಗಿ ಆಗಬೇಕಾಗಿರುವ ಎಲ್ಲಾ ದಾಖಲೆಗಳು ತಂತಾನೆ ಆಗಬೇಕು.

ಹುಟ್ಟಿದ ತಕ್ಷಣ ಜನನ ಪತ್ರ,

ಆಧಾರ್ ಮತ್ತು ಹೆಸರು ನೊಂದಣೆ.

ಪಾಸ್ ಫೋರ್ಟ್,

ರೇಷನ್ ಕಾರ್ಡ್‌ಗೆ ಹೆಸರು ಸೇರ್ಪಡೆ,

ಬ್ಯಾಂಕ್ ಖಾತೆ,

ಆರೋಗ್ಯ ಮಾಹಿತಿ,

ಶಾಲಾ ದಾಖಲಾತಿ ಮಾಹಿತಿ,

೧೮ ವರ್ಷ ತುಂಬಿದ ನಂತರ ಮತದಾನ ಪತ್ರ,

ಪಾನ್ ಕಾರ್ಡ್,

ಡ್ರ್ಯೆವಿಂಗ್ ಲೈಸೆನ್ಸ್,

ವಿವಾಹದ ದಿನ ವಿವಾಹ ನೋಂದಣಿ,

ಕುಟುಂಬ ವಿಭಾಗವಾದರೆ ಆಸ್ತಿ ದಾಖಲೆ ಬದಲಾವಣಿ,

ಆಸ್ತಿ ಮಾರಾಟ ಅಥವಾ ಖರೀದಿ ನಂತರ ಸಂಬಂಧಿಸಿದ ಕಾಗದ ಪತ್ರ,

ವಿದ್ಯಾಭ್ಯಾಸದ ಮಾಹಿತಿಗಳು.

ಸ್ಕಿಲ್ ಮಾಹಿತಿಗಳು.

ಸ್ವಯಂ ಉದ್ಯೋಗ ಸೌಲಭ್ಯ.

ಉದ್ಯೋಗ ಸಿಕ್ಕಿದ ತಕ್ಷಣ ಸರ್ವೀಸ್ ರೆಕಾರ್ಡ್ ಇತ್ಯಾದಿ ದಾಖಲೆಗಳು.

ಮರಣ ನಂತರ ಮರಣ ಪತ್ರ.

ಆಯಾ ವಯಸ್ಸಿಗೆ ಅನುಗುಣವಾಗಿ ತಂತಾನೆ ಗುರುತಿನ ಪತ್ರಗಳು ಮನೆ ಬಾಗಿಲಿಗೆ ಬರಬೇಕು.

ಯಾರು ಯಾವುದಕ್ಕೂ ಅರ್ಜಿ ಹಾಕುವ ವ್ಯವಸ್ಥೆ ಇರಲೇ ಬಾರದು. ವಯಸ್ಸಿಗೆ ಅನುಗುಣವಾಗಿ ಸಾಮಾಜಿಕ ಭದ್ರತೆ ಯೋಜನೆಗಳ ವಿತರಣೆಯಾಗಬೇಕು. 

ಬೇಡಿಕೆಗೆ ಒಂದು ಕೋಡ್ ಒತ್ತಿದ ತಕ್ಷಣ ಕೆಲಸ ಆಗಬೇಕು.

ಸಂಬಂಧಿಸಿದ ಎಲ್ಲಾ ಇಲಾಖೆಗಳ ಸಹಯೋಗದಲ್ಲಿ ಯೋಜನೆ ಜಾರಿಯಾಗಲಿ.

ಡಿಜಿಟಲ್ ಸೋಷಿಯಲ್ ಆಡಿಟ್ :- ಪ್ರತಿಯೊಂದು ಇಲಾಖೆಯ ಅನುದಾನ ಯಾವ ಉದ್ದೇಶಕ್ಕೆ ಖರ್ಚಾಗಿದೆ ಎಂಬ ಬಗ್ಗೆ

ವ್ಯಕ್ತಿಗಳ – ಆಧಾರ್.

ಕುಟುಂಬದ-ವಂಶವೃಕ್ಷ,

ಕಾiಗಾರಿಗಳ-ಲ್ಯಾಟ್ ಲ್ಯಾಗ್ ಆಧಾರಿತ ವಿಲೇಜ್ ನಕ್ಷೆಯಲ್ಲಿ ಕ್ಲಿಕ್ ಮಾಡಿದರೆ ಸಂಪೂರ್ಣ ವಿವರ ದೊರೆಯುವ ಡಿಜಿಟಲ್ ಸೋಶಿಯಲ್ ಆಡಿಟ್ ಜಾರಿ.

ಲೋಕಾಯುಕ್ತ, ಸಕಾಲ, ಮಾಹಿತಿ ಹಕ್ಕು ಅಧಿನಿಯಮ, ಎಸಿಬಿ ಕೆಲಸಗಳಿಗೆ ವಿರಾಮ ದೊರೆತು ಪಾರದರ್ಶಕ ಆಡಳಿತಕ್ಕೆ ಭದ್ರ ಬುನಾದಿಯಾಗಲಿದೆ.

ಬೇಕಾದರೆ ತತ್ಕಾಲ್ ಯೋಜನೆ ಜಾರಿ ಮಾಡಿ.

ಬೇಗ ಕೆಲಸ ಮಾಡಿವದರಿಗೆ ಬೋನಸ್ ನೀಡಿ,

ಆ ಹಣವನ್ನು ಜನರ ಬಳಿ ಪಡೆಯಿರಿ.