ಕೇಂದ್ರ ಸರ್ಕಾರದ 2020-21 ನೇ ಸಾಲಿನ ಮುಂಗಡ ಪತ್ರ ಕೃಷಿ ಪರವಾಗಿದೆ, 2022 ರ ವೇಳೆಗೆ ರೈತರ ಆದಾಯ ದುಪ್ಪಟ್ಟು ಮಾಡುವ ನಿರ್ಧಿಷ್ಠ ಹಾದಿಯತ್ತ ಸಾಗುವ ದಿಕ್ಸೂಚಿಯಂತಿದೆ.
ಈ ಭಾರಿಯ ವಿಶೇಷ ಎಂದರೆ ಜಿಲ್ಲೆಗಳನ್ನು ಗುರಿಯಾಗಿಸಿಕೊಂಡು ಯೋಜನೆ ರೂಪಿಸಿರುವುದು ನಿಜಕ್ಕೂ ಉತ್ತಮವಾಗಿದೆ. ಆಯಾ ಜಿಲ್ಲೆಯ ಎಂಪಿಗಳ ತಾಕತ್ತು ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ಮೂಲಕ ನಿರ್ಧಿಷ್ಠ ಜವಾಬ್ದಾರಿ ನೀಡಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.
100 ಜಿಲ್ಲೆಗಳಿಗೆ ನೀರಾವರಿ. (ಈ ಭಾರಿಯೂ ನದಿ ಜೋಡಣೆ ಬಗ್ಗೆ ಚಕಾರವಿಲ್ಲ)
ಜಲಜೀವನ್ ಮಿಷನ್‌ಗಾಗಿ ಹೆಚ್ಚಿನ ಅನುದಾನ,
ಜಿಲ್ಲೆಗೊಂದು ರೈತರ ಉತ್ಪನ್ನದ ಕ್ಲಸ್ಟರ್.
ಜಿಲ್ಲೆಗೊಂದು ರಫ್ತು ಹಬ್.
ಜಿಲ್ಲೆಗೊಂದು ಮೆಡಿಕಲ್ ಕಾಲೇಜು.
ಜಿಲ್ಲೆಗೊಂದು ಹೈಟೆಕ್ ಆಸ್ಪತ್ರೆ.
ಡೇಟಾ ಸೆಂಟರ್ ಪಾರ್ಕ್ ಸ್ಥಾಪನೆ.
ತಾಲ್ಲೂಕಿಗೊಂದು ರೈತರ ಉತ್ಪನ್ನಗಳಿಗೆ ಕೋಲ್ಡ್ ಸ್ಟೋರೇಜ್/ ಗೌಡಾನ್.
ರೈತರ ಉತ್ಪನ್ನಗಳಿಗೆ ಮಾರುಕಟ್ಟೆಗಾಗಿ ಮಹಿಳೆಯರ ಮೂಲಕ ಗ್ರಾಮ ಪಂಚಾಯಿತಿ ಮಟ್ಟದ ಯೋಜನೆ.
ಕೃಷಿ ರೈಲು ಮತ್ತು ಕೃಷಿ ಉಡಾನ್.
ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ.
ಮೀನುಗಾರರಿಗೂ ಎಫ್.ಪಿ.ಓ ಮಾದರಿ.
ಈ ರೀತಿ ರೈತರಿಗಾಗಿ 16 ಅಂಶಗಳ ಯೋಜನೆ ನಿಜಕ್ಕೂ ಕ್ರಾಂತಿಯಾಗಲಿದೆ.
ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್, ಅಂಗನವಾಡಿಯಿಂದಲೇ ಡಿಜಿಟಲ್ ಅದ್ಭುತ ಆಲೋಚನೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಇನ್ನೂ ಮುಂದೆ ಡಿಜಿಟಲ್ ಮಿತ್ರ ಎಂದು ಹೆಸರು ಬದಲಾಯಿಸುವ ಕಾಲ ದೂರವಿಲ್ಲ.
ಬೆಂಗಳೂರು ಸಬ್‌ಅರ್ಬನ್ ರೈಲು ಯೋಜನೆಗೆ ಅನುದಾನ, ವೈಯಕ್ತಿಕ ತೆರಿಗೆ ಸರಳೀಕರಣ, ಎಂಎಸ್‌ಎಂಇ, ಸ್ಟಾರ್ಟ್ ಅಫ್, 5 ಕೋಟಿವರೆಗೆ ಆಡಿಟ್ ರದ್ದು, ರಫ್ತುದಾರರಿಗೆ ವಿಶೇಷ ಆಧ್ಯತೆ. ರಿಯಲ್ ಎಸ್ಟೆಟ್ ಹೀಗೆ ಎಲ್ಲರಿಗೂ ನೆರವು ನೀಡಿದ್ದಾರೆ.
ಇನ್ನೂ ವಿಶೇಷವಾದ ಯೋಜನೆ ಎಂದರೆ ಮೂಲಭೂತ ಸೌಕರ್ಯಗಳ ಯೋಜನೆಗಳಿಗೆ ಪೈಪ್‌ಲೈನ್ ಯೋಜನೆ ಜಾರಿ ಕ್ರಾಂತಿಕಾರಿಯಾಗಲಿದೆ. ಇದರರ್ಥ ಯಾವುದೇ ಜಿಲ್ಲೆ ಅಥವಾ ಯಾವುದೇ ರಾಜ್ಯ ನಾವು ಇಂತಹ ಯೋಜನೆಯನ್ನು ಮಾಡುತ್ತೇವೆ, ನಮಗೆ ಇಷ್ಟು ಅನದಾನ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ಕಳುಹಿಸಿದಲ್ಲಿ ಮುಂಗಡ ಪತ್ರದಲ್ಲಿ ಇಲ್ಲದಿದ್ದರೂ ಉತ್ತಮ ಯೋಜನೆಗಳನ್ನು ಈ ಪೈಪ್‌ಲೈನ್ ಯೋಜನೆಯಲ್ಲಿ ಇಟ್ಟಿರುತ್ತಾರೆ. ಹಣ ಇದ್ದಾಗ ಈ ಯೋಜನೆಗಳಿಗೆ ಬಿಡುಗಡೆ ಮಾಡಲು ಅನೂಕೂಲವಾಗುತ್ತದೆ. ಈ ಯೋಜನೆ ಕತೆ ಹೇಳುವವರಿಗೆ ತಲೆ ಮೇಲೆ ಹೊಡೆದಂತಿದೆ.
ಉದಾಃ ತುಮಕೂರು ಜಿಲ್ಲಾ ದಿಶಾ ಸಮಿತಿ ನಿರ್ಣಯ ಮಾಡಿ, ರಾಜ್ಯದ ಎಲ್ಲಾ ಕೆರೆ-ಕಟ್ಟೆಗಳಿಗೆ ನದಿ ನೀರು ತುಂಬಿಸಲು ರೂ 1.93 ಲಕ್ಷ ಕೋಟಿ ಯೋಜನೆಯನ್ನು ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಕಳುಹಿಸಲಾಗಿದೆ. ಈ ರೀತಿ ಅಗತ್ಯವಿರುವ ಯೋಜನೆ ಪ್ರಸ್ತಾವನೆ ಸಲ್ಲಿಸ ಬಹುದಾಗಿದೆ.
ಸ್ಟಾರ್ಟ್‌ಅಫ್ ಸ್ಮಾರ್ಟ್ ಸಿಟಿ ಯೋಜನೆ ಘೋಶಿಸಿದ್ದಾರೆ. ತುಮಕೂರು ಸ್ಮಾರ್ಟ್ ಸಿಟಿಯ ಅಧಿಕಾರಿಗಳಿಗೆ ನಾನು ಹೇಳಿದ್ದೆ, ಈ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿ ಬಹುಷಃ ಸ್ಮಾರ್ಟ್ ಸಿಟಿ-2 ಇದೇ ರೀತಿ ಬರಲಿದೆ ಎಂದಾಗ ಇಂಗುತಿಂದ ಮಂಗನಹಾಗೆ ನೋಡುತ್ತಿದ್ದವರಿಗೆ ಈಗ ಜ್ಞಾನೋದಯ ಆಗಬಹುದು.
ಬಹುಷಃ ಮುಂಗಡ ಪತ್ರದಲ್ಲಿನ ಬಹುತೇಕ ಯೋಜನೆಗಳಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲು ನಾನು ಒತ್ತಾಯಿಸುತ್ತಾ ಬಂದಿದ್ದೆ. ಇದೆಲ್ಲಾ ಸಾಧ್ಯವಾ ಸಾರ್ ಅನ್ನುತ್ತಿದ್ದವರಿಗೆ ಮೋದಿಯವರ ಮುಂಗಡ ಪತ್ರ ನಿಜಕ್ಕೂ ಶಾಕ್ ಆಗಿರಬಹುದು.