7th December 2024
Share

ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿರುವ ಹಾಗೂ ರಾಜ್ಯ ಜಲಸಂಪನ್ಮೂಲ ಸಚಿವಾಲಯದ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ರಾಕೇಶ್‌ಸಿಂಗ್‌ರವರಲ್ಲಿ ಒಂದು ಬಹಿರಂಗ ಮನವಿ.

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠವನ್ನು ತಮ್ಮೆಲ್ಲರ ವಿಶೇಷ ಆಸಕ್ತಿಯಿಂದ ಸ್ಥಾಪಿಸಲಾಗಿದೆ.

ಪರಮಶಿವಯ್ಯನವರ ಹೆಸರನ್ನು ಅಧ್ಯಯನ ಪೀಠಕ್ಕೆ ಇಟ್ಟಿದ್ದರೂ ಉದ್ದೇಶ ಕರ್ನಾಟಕ ರಾಜ್ಯ ಸಮಗ್ರ ನೀರಾವರಿ ಅಧ್ಯಯನ ಪೀಠ ಎಂದು ಆದೇಶದಲ್ಲಿ ಸ್ಪಷ್ಟವಾಗಿದೆ. ಇದು ಪರಮಶಿವಯ್ಯನವರ ಕನಸು ಆಗಿತ್ತು. ಅವರ ಕನಸು ನನಸು ಮಾಡಲು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ತುಮಕೂರು ವಿಶ್ವವಿದ್ಯಾನಿಯಲಕ್ಕೆ ಇದೇ ರೀತಿ ಮನವಿ ಸಲ್ಲಿಸಿದ್ದು ಇತಿಹಾಸ.

  ರಾಜಕಾರಣ ಎಲ್ಲಾ ಕಡೆಯೂ ವ್ಯಾಪಿಸುವುದು, ಮೂಗು ತೂರಿಸುವುದು ಸರ್ವೇ ಸಾಮಾನ್ಯ,  ಈ ಅಧ್ಯಯನ ಪೀಠಕ್ಕೂ ಬಾಲಗ್ರಹಣ ಹಿಡಿದಿತ್ತು ಎಂದರೆ ತಪ್ಪಾಗಲಾರದು. ಈಗ ಮುಕ್ತವಾಗಿದೆ.

  ವಿಶ್ವವಿದ್ಯಾಲಯದ ಕುಲಪತಿಗಳಾದ ಶ್ರೀ ವೈ.ಎಸ್.ಸಿದ್ದೇಗೌಡರವರು ಹಾಗೂ ಸಿಂಡಿಕೇಟ್ ಮತ್ತು ಪರಿಷತ್ ಎಲ್ಲಾ ಸದಸ್ಯರು ಸಹ ಗಂಭೀರವಾಗಿ ಆಳವಾಗಿ ಆಲೋಚಿಸಿ ಈ ಪೀಠಕ್ಕೆ ಇಂಜಿನಿಯರಿಂಗ್ ಇನ್ ಚೀಪ್ ಆಗಿರುವ ಶ್ರೀ ಕೆ.ಜೈಪ್ರಕಾಶ್‌ರವರನ್ನು ಪ್ಲಾನಿಂಗ್ ಮತ್ತು ಇಂಪ್ಲಿಮೆಂಟೇಷನ್ ನಿರ್ಧೇಶಕರಾಗಿ ಆಯ್ಕೆ ಮಾಡಿದ್ದಾರೆ. ಪೀಠವನ್ನು ಸ್ಥಾಪಿಸಲು ಶ್ರಮಿಸಿದ್ದ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಕನಸು ಇದೇ ಆಗಿತ್ತು, ಅವರೆಲ್ಲರಿಗೂ ಫೋರಂ ಅಭಿನಂದನೆ ಸಲ್ಲಿಸುತ್ತಿದೆ.

ಇದೇ ರೀತಿ ಎಲ್ಲರೂ ಸಹ ವಿಶೇಷವಾಗಿ ಯೋಚಿಸಿ ದೇಶದಲ್ಲಿಯೇ ಮಾದರಿ ಜಿಲ್ಲೆಯಾಗಿಸಲು ಶ್ರಮಿಸಲು ಮನವಿ.

ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪವರು ಕರ್ನಾಟಕ ರಾಜ್ಯದ ಎಲ್ಲಾ ಕೆರೆಗಳಿಗೆ ನದಿ ನೀರು ತುಂಬಿಸಲು ಮತ್ತು ಪ್ರತಿ ಗ್ರಾiದ ಜಲಗ್ರಾಮ ಕ್ಯಾಲೆಂಡರ್ ಡಿಪಿಆರ್ ಮಾಡಲು ಆದೇಶ ನೀಡಿದ್ದು, ತುಮಕೂರು ಜಿಲ್ಲೆಯನ್ನು ಪೈಲಟ್ ಯೋಜನೆಯಾಗಿ ಆಯ್ಕೆ ಮಾಡಲು ಆದೇಶಿದ್ದಾರೆ.

ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶ್ರೀ ಜೆ.ಸಿ.ಮಾಧುಸ್ವಾಮಿರವರು ಸಣ್ಣ ನೀರಾವರಿ ಸಚಿವರಾಗಿದ್ದಾರೆ.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಕೇಂದ್ರ ಜಲಶಕ್ತಿ ಸಚಿವಾಲಯದ ಸಮಿತಿಯ ಸದಸ್ಯರೂ ಆಗಿದ್ದಾರೆ.

ತುಮಕೂರು ಜಿಲ್ಲಾ ದಿಶಾ ಸಮಿತಿಯ ನಿರ್ಣಯದಂತೆ ಈಗಾಗಲೇ ಮಾನ್ಯ ಪ್ರಧಾನಿ, ಕೇಂದ್ರ ಜಲಶಕ್ತಿ ಸಚಿವರವರು ಮತ್ತು ಮಾನ್ಯ ಮುಖ್ಯ ಮಂತ್ರಿಗಳಿಗೂ ಈ ಮಾಹಿತಿ ರವಾನಿಸಲಾಗಿದೆ.

ದಿನಾಂಕ:12.02.2020 ರಂದು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಜನ್ಮ ದಿನ, ಅಧ್ಯಯನ ಪೀಠದಲ್ಲಿ ಜನ್ಮ ದಿನ ಆಚರಿಸಿ ಪ್ರಾರ್ಥಿಸಿದರು, ವಂದಿಸಿದರು ಎಂದು ಹೇಳಿ ರೆಕಾರ್ಡ್ ಮಾಡುವ ಬದಲು ತುಮಕೂರು ವಿಶ್ವವಿದ್ಯಾನಿಲಯ ವಿಶ್ವಕ್ಕೆ ಮಾದರಿ ಆಗಿರುವ ಈ ಕೆಳಕಂಡ ಯೋಜನೆಗಳಿಗೆ ಚಾಲನೆ ನೀಡುವುದು ಸೂಕ್ತವಾಗಿದೆ.

ಕೇಂದ್ರ ಸರ್ಕಾರ 2020-21 ನೇ ಸಾಲಿನ ಮುಂಗಡ ಪತ್ರದಲ್ಲಿ ಪ್ರಕಟಿಸಿರುವ ದೇಶದ 100 ಜಿಲ್ಲೆಗಳಲ್ಲಿ ತುಮಕೂರು ಜಿಲ್ಲೆಯೂ ಒಂದಾಗಿದೆ ಎನ್ನುವ ಖಚಿತ ಮಾಹಿತಿ ದೊರಕಿದೆ.

ಕೇಂದ್ರ ಸರ್ಕಾರ ಪ್ರಕಟಿಸಿರುವ ಅಟಲ್‌ಭೂಜಲ್ ಯೋಜನೆಗೆ ತುಮಕೂರು ಜಿಲ್ಲೆಯೂ ಸೇರ್ಪಡೆಯಾಗಿದೆ.

  1. ತುಮಕೂರು ಜಿಲ್ಲೆಯ 2714  ಗ್ರಾಮಗಳ ಜಲ ಕ್ಯಾಲೆಂಡರ್ ಜೊತೆಗೆ ಡಿಜಿಟಲ್ ಡೇಟಾ ವಿಲೇಜ್ ಮ್ಯಾಪ್ ತಯಾರಿಸಲು ಎಕ್ಸ್‌ಪ್ರೆಷನ್ ಆಫ್ ಇಂಟ್ರಸ್ಟ್ ಜಾಗತೀಕ ಟೆಂಡರ್ ಕರೆಯಲು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ನಿರ್ಣಯ ಕೈಗೊಳ್ಳುವುದು.
  2. ತುಮಕೂರು ಜಿಲ್ಲೆಯ ಸಮಗ್ರ ನೀರಾವರಿಗಾಗಿ ಮಾಸ್ಟರ್ ಪ್ಲಾನ್ ರೂಪಿಸಲು ಜಾಗತೀಕ ಟೆಂಡರ್ ಕರೆಯಲು  ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ನಿರ್ಣಯ ಕೈಗೊಳ್ಳುವುದು.
  3. ತುಮಕೂರಿನಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಜಲ ಸಮಾವೇಶ ನಡೆಸಲು ನಿರ್ಣಯ ಕೈಗೊಳ್ಳುವುದು.
  4. ನೀರಾವರಿ ತಜ್ಞ ಡಾ.ಸರ್.ಎಂ. ವಿಶ್ವೇಶ್ವರಯ್ಯ ವಾಟರ್ ಯೂನಿವರ್ಸಿಟಿ ಸ್ಥಾಪಿಸಲು ಶ್ರಮಿಸಲು ನಿರ್ಣಯ ಕೈಗೊಳ್ಳುವುದು.
  5. ರಾಜ್ಯದ 30  ಜಿಲ್ಲೆಗಳಲ್ಲೂ ವಾಟರ್ ಡಿಜಿಟಲ್ ಡೇಟಾ ಸೆಂಟರ್ ಸ್ಥಾಪಿಸಲು ನಿರ್ಣಯ ಕೈಗೊಳ್ಳುವುದು.

   ಡಿಜಿಟಲ್ ಡೇಟಾ ವಿಲೇಜ್ ಮ್ಯಾಪ್ ಸಿದ್ಧಪಡಿಸಲು ಗ್ರಾಮವಾರು,  ಸರ್ವೆ ನಂಬರ್‌ವಾರು, ಗ್ರಾಮಠಾಣದ ಆಸ್ತಿವಾರು, ಕಟ್ಟಡವಾರು ಮತ್ತು ಒಂದು ಇಂಚಿನ ಭೂಮಿಯಲ್ಲಿರುವ ಜಿಐಎಸ್ ಡೇಟಾ ಸಂಗ್ರಹಿಸಲು  ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಆರ್ಥಿಕ ನೆರವು ನೀಡಲು ಸಹ ಕೇಂದ್ರ ಸರ್ಕಾರದ ಚಿಂತನೆಯಲ್ಲಿದೆ.

  ಅಂಗನವಾಡಿ ಕಾರ್ಯಕರ್ತೆಯರ ಮೊಬೈಲ್ ಆಯಾ ಗ್ರಾಮದ ಎಲ್ಲಾ ತಾಜಾ ಡಿಜಿಟಲ್ ಡೇಟಾ ನೀಡುವ ಪ್ರಮುಖ ಸಾಧನವೂ ಆಗಲಿದೆ.

ಪಿಪಿಪಿ ಮಾದರಿಯಲ್ಲಿ ಡೇಟಾ ಸೆಂಟರ್ ತೆರಯಲು ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡಿದೆ.

ಈ ಎಲ್ಲಾ ಹಿನ್ನೆಲೆಯಲ್ಲಿ  ಈ ಆದ್ಯಯನ ಪೀಠ ಪ್ರಸ್ತಾವನೆ ಸಲ್ಲಿಸುವುದು ಆಗತ್ಯವಾಗಿದೆ.

ಈ ಪ್ರಸ್ತಾವನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅಗತ್ಯವಿರುವ ಅನುದಾನ ಪಡೆಯಲು ಶ್ರಮಿಸಲು ಫೋರಂ ಸದಾ ಸಿದ್ಧವಿದೆ.