22nd December 2024
Share

 ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠವನ್ನು ತುಮಕೂರು ವಿಶ್ವ ವಿದ್ಯಾಲಯದಲ್ಲಿ ಸ್ಥಾಪನೆ ಮಾಡಿ ಕರ್ನಾಟಕ ರಾಜ್ಯದ ಸಮಗ್ರ ನೀರಾವರಿ ಅಧ್ಯಯನ ಮಾಡುವುದಾಗಿ ಪ್ರಕಟಿಸಿದ್ದು ಇತಿಹಾಸ.

 ದಿನಾಂಕ:12.02.2020  ರಂದು ಜಿ.ಎಸ್.ಪರಮಶಿವಯ್ಯ ಅವರ ಜನ್ಮ ದಿನ ಆಚರಣೆ ಅಂಗವಾಗಿ ನೀರಾವರಿ ಯೋಜನೆಗಳ ಅನುಷ್ಠಾನ, ನಿರ್ವಹಣೆ ಮತ್ತು ಕಾರ್ಯತಂತ್ರ ಎಂಬ ವಿಷಯದ ಬಗ್ಗೆ ಉಪನ್ಯಾಸ ಏರ್ಪಡಿಸಿರುವುದು ಸ್ವಾಗಾತಾರ್ಹ.

 ನಮ್ಮ ಸಂಸ್ಥೆ ಅಧ್ಯಯನ ಪೀಠದ ಸೋಶಿಯಲ್ ಆಡಿಟ್ ಬಗ್ಗೆ ಗಮನ ಹರಿಸಲಿದೆ. ಅಧ್ಯಯನ ಪೀಠ ಆರಂಭದಿಂದ ಈವರೆಗೆ ನಡೆಸಿರುವ ಅಧ್ಯಯನ ವಿಷಯಗಳ ಬಗ್ಗೆ ಮತ್ತು ಮುಂದಿನ ಅಜೆಂಡಾ ಬಗ್ಗೆ ಸ್ಪಷ್ಠ ಪರಿಕಲ್ಪನಾ ವರದಿಯನ್ನು ಸಭೆಯಲ್ಲಿ ಮಂಡಿಸಲು ಅಧ್ಯಯನ ಪೀಠದ ನಿರ್ಧೇಶಕರಲ್ಲಿ ಮನವಿ ಮಾಡಲಾಗಿದೆ.

 ಇಲ್ಲಿಯೂ ಇಬ್ಬರೂ ನಿರ್ಧೇಶಕರು ಒಬ್ಬರು ತಾಂತ್ರಿಕ ನಿರ್ಧೇಶಕ, ಇನ್ನೊಬ್ಬರೂ ಆರ್ಥಿಕ ನಿರ್ಧೇಶಕ, ಇದೂ ಸಹ ನಮಗೆ ಸಂಬಂದವಿಲ್ಲ. ಇದೂವರೆಗೂ ನೀವು ಖರ್ಚು ಮಾಡಿರುವ ಹಣದ ಸೋಶಿಯಲ್ ಆಡಿಟ್ ನಮಗೆ ಅಗತ್ಯವಿಲ್ಲ.

   ಆದರೇ ಪೀಠದ ಉದ್ದೇಶಗಳ ಬಗ್ಗೆ ನೀರಾವರಿ ಕನಸಿನ ಜನತೆ ಮೌನ ಮುರಿಯುವುದು ಅನಿವಾರ್ಯವಾಗಿದೆ. ಮೊದಲು ಈ ವಿಷಯ ಮಂಡನೆ ಮಾಡಿ ನಂತರ ಉಪನ್ಯಾಸ ಆರಂಭಿಸಲಿ, ತಾಂತ್ರಿಕ ನಿರ್ಧೇಶಕರು ಒಂದು ಪರಿಣಿತರ ತಜ್ಞರ ತಂಡವನ್ನು ಕಟ್ಟ ಬೇಕಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಶ್ರಮಿಸುತ್ತಿರುವವರನ್ನು ಒಂದೆಡೆ ಕಲೆ ಹಾಕುವ ಮೂಲಕ ಎಲ್ಲರಿಗೂ ಒಪ್ಪುವ ಯೋಜನೆ ಜಾರಿಗೆ ಸರ್ಕಾರಗಳಿಗೆ ಸಲಹೆ ನೀಡುವುದು ತುರ್ತು ಆಗಬೇಕಿದೆ.

  ಅಧ್ಯಯನ ಪೀಠಗಳು ಗಂಜಿ ಕೇಂದ್ರವಾಗಬಾರದು, ಸ್ವಾಗತ, ವಂದನೆ ಮಾಡಿ ಪತ್ರಿಕೆಯಲ್ಲಿ ವಿಷಯ ಬಂದರೆ ಉದ್ದೇಶ ಸಫಲವಾಗುವುದಿಲ್ಲ, ವಿಶ್ವದ ಗಮನ ಸೆಳೆಯುವತ್ತ ಸಾಗಲಿ ಎಂಬುದು ಪರಮಶಿವಯ್ಯನವರ ಅಭಿಮಾನಿಗಳ ಆಗ್ರಹವಾಗಿದೆ.

ಆಸಕ್ತರು ಸಭೆಯಲ್ಲಿ ಭಾಗವಹಿಸಲು ಮನವಿ.