ವರದಿ: ಉಮಾ, ತುಮಕೂರು
ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ನೇರ ಪ್ರಶ್ನೆ.
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಆಚರಿಸಿದ ಪರಮಶಿವಯ್ಯನವರ ಜನ್ಮದಿನ ಆಚರಣೆಯ ಸಂದರ್ಭದಲ್ಲಿ ನಡೆದ ಕೆಲವು ಸ್ವಾರಸ್ಯಕರ ಘಟನೆಗಳು.
ಪ್ರೋ. ಶ್ರೀ ವೈ.ಎಸ್.ಸಿದ್ದೇಗೌಡರವರು ವೇದಿಕೆ ಮೇಲೆ ಬರುವಂತೆ ಕುಂದರನಹಳ್ಳಿ ರಮೇಶ್ ರವರನ್ನು ಕರೆದಾಗ ವೇದಿಕೆ ಮೇಲೆ ಹೋಗಲು ರಮೇಶ್ ನಿರಾಕರಣೆ.
ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ರವರಿಗೆ ಅಧ್ಯಯನ ಪೀಠದ ಕತೃ ಎಂದು ಸನ್ಮಾನ ಮಾಡಲು ಕರೆದಾಗ ಇನ್ನೂ ಮಂದಾದರು ಪೀಠ ಶ್ರೀ ಜಿ.ಎಸ್.ಬಸವರಾಜ್ ರವರ ಅನಿಸಿಕೆ ಮತ್ತು ಜಿ.ಎಸ್.ಪರಮಶಿವಯ್ಯನವರ ಕನಸಿನ ಯೋಜನೆಗಳಿಗೆ ಚುರುಕಾಗಿ ಕಾರ್ಯನಿರ್ವಹಿಸುವ ಭರವಸೆ ನೀಡಿದರೆ ಮಾತ್ರ ಹಾರ ಹಾಕಿ ಎಂಬ ಷರತ್ತು ವಿಧಿಸಿದ ರಮೇಶ್.
ಅಧ್ಯಯನ ಪೀಠ ಇದೂವರೆಗೂ ಯಾವ ವಿಷಯದಲ್ಲಿ ಅಧ್ಯಯನ ಮಾಡಲಾಗಿದೆ ಸಭೆಯ ಮುಂದೆ ಮಂಡಿಸಿ, ಇದೂವರೆಗೂ ಪ್ರಾರ್ಥಿಸಿದರು ವಂದಿಸಿದರು ಎಂಬ ಮಾಹಿತಿ ಬಿಟ್ಟರೆ ಇನ್ನೇನು ಮಾಡಿದ್ದೀರಿ ಯಾವ ಪುರುಷಾರ್ಥಕ್ಕೆ ನಿಮ್ಮಿಂದ ಹಾರ ಸ್ವೀಕರಿಸಬೇಕು ಎಂಬ ನೇರ ಪ್ರಶ್ನೆಯನ್ನು ಕುಲಪತಿಗಳಿಗೆ ರಮೇಶ್ ಹಾಕಿದರು.
ಅಧ್ಯಯನ ಪೀಠಗಳಲ್ಲಿ ರಾಜಕೀಯ ಏಕೆ ಬೇಕು? ಇಂದು ವೇದಿಕೆ ಮೇಲೆ ಕುಳಿತವರು, ನಾಳೆ ಎಲ್ಲರೂ ಮಾಜಿಗಳೆ, ಯಾರಿಗೆ ಶಾಶ್ವತ ಈ ಹುದ್ದೆಗಳು ಏಕೆ ಹೀಗೆ ಮಾಡುತ್ತೀರಿ?
ಈ ಪೀಠ ಸ್ಥಾಪನೆಯಾಗಿರುವುದು ಕರ್ನಾಟಕ ರಾಜ್ಯ ಸಮಗ್ರ ನೀರಾವರಿ ಅಧ್ಯಯನಕ್ಕಾಗಿ, ಈ ಪೀಠಕ್ಕೆ ಪ್ರೋಫೆಸರ್ ನೇಮಿಸಿದರೆ ಏನು ಮಾಡುತ್ತಾರೆ. ಈ ಪೀಠಕ್ಕೆ ಮುಖ್ಯ ಇಂಜಿನಿಯರ್ ಗ್ರೇಡ್ ನಿರ್ಧೇಶಕರು ಅಗತ್ಯವಲ್ಲವೇ? ಎರಡು ವರ್ಷದ ಹಿಂದೆಯೇ ಶ್ರೀ ಕೆ.ಜೈಪ್ರಕಾಶ್ ರವರನ್ನು ನಿರ್ಧೇಶಕರನ್ನಾಗಿ ನೇಮಿಸಲು ಏನಾಗಿತ್ತು?
ಗೆದ್ದ ಚುನಾಯಿತ ಜನಪ್ರತಿನಿಧಿಗಳು ಬುದ್ದಿವಂತರು, ಸೋತವರು ದಡ್ಡರಾ? ಹಾಲಿ ಮತ್ತು ಮಾಜಿ ಎಲ್ಲರನ್ನು ಕರೆದು ಸಮಾಲೋಚನೆ ನಡೆಸುವ ಪರಿಪಾಠ ಹಾಕಿಕೊಳ್ಳಿ.
ತುಮಕೂರು ಜಿಲ್ಲಾ ದಿಶಾ ಸಮಿತಿ ಕರ್ನಾಟಕ ರಾಜ್ಯದ ಸಮಗ್ರ ನೀರಾವರಿ ಅಭಿವೃದ್ಧಿ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ನೀಡಿದೆ, ಇದೇ ವರದಿಯನ್ನು ಈ ಅಧ್ಯಯನ ಪೀಠದಿಂದ ಸಲ್ಲಿಸಿದ್ದರೆ ವಿಶ್ವವಿದ್ಯಾಲಯದ ಘನತೆ ಹೆಚ್ಚುತ್ತಿರಲಿಲ್ಲವೇ?
ಅಧ್ಯಯನ ಮಾಡದೇ ಪರಮಶಿವಯ್ಯನವರ ಕನಸಿಗೆ, ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಲಸ ಏಕೆ ಮಾಡಬೇಕು?
ಈಗಲಾದರೂ ಜ್ಞಾನೋದಯವಾಗಿ ವಿಶ್ವವಿದ್ಯಾಲಯ ಕೈಗೊಂಡಿರುವ ನಿರ್ಣಯಕ್ಕೆ ಅಭಿನಂದನೆ ಸಲ್ಲಿಸಿದರು.
ಕುಂದರನಹಳ್ಳಿ ರಮೇಶ್ ರವರ ಪ್ರಶ್ನೆಗೆ ಪ್ರೋ. ಶ್ರೀ ವೈ.ಎಸ್.ಸಿದ್ದೇಗೌಡರವರ ಖಡಕ್ ಉತ್ತರ.
ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‌ರವರಿಗೆ ನೀರಾವರಿ ಬಗ್ಗೆ ಇರುವ ಕಾಳಜಿ ನೋಡಿದರೆ ನಾವು ನಿಜಕ್ಕೂ ಚಿಂತನೆ ಮಾಡಲೇ ಬೇಕು. ಅವರ ಕನಸಿಗೆ ನಾವೂ ಕೈಜೋಡಿಸುವುದು ನಮ್ಮ ಆಧ್ಯ ಕರ್ತವ್ಯ ಎಂದು ಭಾವಿಸಿ ಕಾರ್ಯನಿರ್ವಹಿಸಲು ಸದಾಬದ್ಧ.
ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಅಧಿಕೃತವಾಗಿ ಇಂದೇ ಆರಂಭ ಎಂದು ತಿಳಿದುಕೊಳ್ಳಿ, ನೀರಾವರಿ ವಿಷಯದಲ್ಲಿ ಇಂದಿನಿಂದ ಇಡೀ ವಿಶ್ವವೇ ತುಮಕೂರು ವಿಶ್ವವಿದ್ಯಾಲಯದ ಕಡೆ ನೋಡುವ ಹಾಗೆ ಕೆಲಸ ಮಾಡೋಣ.
ನನಗೆ ಎರಡು ವರ್ಷದ ಅವಧಿ ಇದೆ, ಇನ್ನೂ ಮುಂದೆ ಕುಂದರನಹಳ್ಳಿ ರಮೇಶ್ ಪ್ರಶ್ನೆ ಹಾಕದ ರೀತಿಯಲ್ಲಿ ನಿಯಮಗಳಿಗೆ ಅನುಗುಣವಾಗಿ ಈ ಪೀಠಕ್ಕೆ ಎಲ್ಲಾ ನೆರವು ನೀಡುವುದಾಗಿ ಘೋಷಣೆ, ನಮ್ಮ ಸಿಂಡಿಕೇಟ್ ಸಂಪೂರ್ಣವಾಗಿ ಸಹಕರಿಸುವ ನಿರ್ಣಯ ಕೈಗೊಳ್ಳಲಾಗಿದೆ.
ಹಾಜರಿದ್ದವರಲ್ಲಿ ಎಷ್ಟು ಜನ ವಿಶ್ವವಿದ್ಯಾಲಯದವರು ಇದ್ದೀರಾ, ಕೈ ಎತ್ತಿ ಎಂದರೆ ಕೇವಲ ಏಳು ಜನ ಮಾತ್ರ ಇದ್ದರು, ಹೀಗಿರುವಾಗ ಇಲ್ಲಿ ಯಾವ ಅಧ್ಯಯನ ಮಾಡುವುದು, ಈಗ ಇಲ್ಲಿರುವ ತಜ್ಞರ ತಂಡ ನೋಡಿದರೆ ಖಂಡಿತಾ ನಾವು ಂiiಶಸ್ವಿಯಾಗುತ್ತೇವೆ.
ಶ್ರೀ ಕೆ.ಜೈಪ್ರಕಾಶ್ ರವರೇ ನೀವೇ ರೂಪುರೇಷೆ ನಿರ್ಧರಿಸಿ ನಾವು ನಿಮಗೆ ಕೈ ಜೋಡಿಸುತ್ತೇವೆ. ರಾಜ್ಯದ ಮೂಲೆ, ಮೂಲೆಗೂ ಸೇವೆ ಮಾಡೋಣ ಎಂಬ ಭರವಸೆ ನೀಡಿದರು.
ಶ್ರೀ ಕೆ.ಜೈಪ್ರಕಾಶ್ ರವರ ನೇರ ಉತ್ತರ.
ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‌ರವರ ನೀರಾವರಿ ಸ್ಪೀಡ್‌ಗೆ ನಾವು ಎಲ್ಲರೂ ಶ್ರಮಿಸ ಬೇಕು. ಅವರು ಕೇಂದ್ರ ಜಲಶಕ್ತಿ ಸಮಿತಿಯ ಸದಸ್ಯರೂ ಆಗಿರುವುದರಿಂದ ನಮ್ಮ ಯೋಜನೆಗಳ ಚಾಲನೆಗೆ ಪ್ರತಿಫಲ ದೊರೆಯಲಿದೆ.
ಇಲ್ಲಿಯವರೆಗೂ ಏನೇ ಆಗಿರಲಿ ಹಿಂದಕ್ಕೆ ಹೋಗುವುದು ಬೇಡ, ಇಲ್ಲಿಂದ ಮುಂದೆ ಸಂಘಟಿತರಾಗಿ ಕಾರ್ಯ ನಿರ್ವಹಿಸೋಣ. ಅಂತರ ರಾಷ್ಟ್ರೀಯ ಮಟ್ಟದಲ್ಲಿ ನಾವು ಬಿಲಿಷ್ಠವಾದ ತಾಂತ್ರಿತ ತಂಡ ಕಟ್ಟುತ್ತೇವೆ. ರಾಜ್ಯದ, ದೇಶದ ಮತ್ತು ವಿಶ್ವದ ಹನಿ ನೀರಿನ ಬಗ್ಗೆ ನಾವು ಅಧ್ಯಯನ ಮಾಡೋಣ ಎಂಬ ಭರವಸೆ ನೀಡಿದರು.
ನೋಡಿ ರಮೇಶ್ ಬರೀ ಅಧ್ಯಯನ ಮಾಡಿ ಕಪಾರ್ಟ್‌ನಲ್ಲಿ ಇಟ್ಟರೂ ಸಾಲದು. ಅವುಗಳ ಯಶಸ್ವಿಗಾಗಿ ಪ್ರಷರ್ ಗ್ರೂಪ್ ಕಾರ್ಯ ನಿರ್ವಹಿಸಬೇಕು.
ನಮ್ಮ ತಾಂತ್ರಿಕ ತಂಡ ವಿಷನ್ ಗ್ರೂಪ್ ಆಗಿ ಕಾರ್ಯನಿರ್ವಹಿಸಿ ವರದಿ ನೀಡುತ್ತೇವೆ.
ನಾವು ನೀಡಿದ ಸಲಹೆಗಳನ್ನು ನಿಮ್ಮ ತಂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತಂದು ಯೋಜನೆ ಅನುಷ್ಠಾನಕ್ಕೆ ಬರುವ ಕೆಲಸ ಮಾಡುವುದು ಅಗತ್ಯವಾಗಿದೆ.
ವಿಶ್ವವಿದ್ಯಾನಿಲಯದ ಮುಖಾಂತರ ಈ ಎಲ್ಲಾ ತಂಡಗಳು ಕೈ ಜೋಡಿಸಿದರೆ ಮಾತ್ರ ಟೋಪೋಶೀಟ್ ಬ್ರಹ್ಮ ಜಿ.ಎಸ್.ಪರಮಶಿವಯ್ಯನವರ ಅಧ್ಯಯನ ಪೀಠಕ್ಕೆ ಬೆಲೆ ಬರಲಿದೆ.