20th May 2024
Share

ಗಂಗಸಂದ್ರ ಗ್ರಾಮ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರ ಜನ್ಮ ಸ್ಥಳ, ಅವರು ಸದಾ ನೀರು ಮತ್ತು ಮರ ಗಿಡಗಳ ಬಗ್ಗೆ ವಿಶೇಷ ಕಾಳಜಿ ವಹಿಸುವ ಹಿನ್ನೆಲೆಯಲ್ಲಿ ಹಾಗೂ  ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಸ್ಥಾಪಿಸುವ ಪ್ರಮುಖ ರೂವಾರಿಯೂ ಆಗಿದ್ದಾರೆ.

 ಅವರ ಗ್ರಾಮದಲ್ಲಿಯೇ ಅಧ್ಯಯನ ಪೀಠದ ಚಟುವಟಿಕೆ ನಡೆಯಲಿ ಎಂಬ ಚಿಂತನೆಯಿಂದ ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‌ರವರು, ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು, ಗಂಗಸಂದ್ರ ಗ್ರಾಮದ ಪ್ರಮುಖರು, ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೋ. ಶ್ರೀ ವೈ.ಎಸ್.ಸಿದ್ದೇಗೌಡರವರು, ಪೀಠದ ನಿರ್ಧೇಕರಾದ ಶ್ರೀ ಕೆ.ಜೈಪ್ರಕಾಶ್, ಶ್ರೀ ಡಾ. ಬಿ. ರವೀಂದ್ರ ಕುಮಾರ್  ರವರೊಂದಿಗೆ ಸಮಾಲೋಚನೆ ನಡೆಸಿದಾಗ ಎಲ್ಲರೂ ಸಹ ಸಹಮತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಬಗ್ಗೆ ಪೂರ್ವಭಾವಿ ಸಭೆಯನ್ನೂ ಅಯೋಜಿಸಿಲಾಗಿದೆ.

ತುಮಕೂರು ವಿಶ್ವವಿದ್ಯಾನಿಲಯದ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ವತಿಯಿಂದ ತುಮಕೂರು ನಗರದ 11 ನೇ ವಾರ್ಡ್ ವ್ಯಾಪ್ತಿಯ ಗಂಗಸಂದ್ರ ಗ್ರಾಮದಲ್ಲಿ ದಿನಾಂಕ:16.02.2020  ನೇ ಭಾನುವಾರ ಬೆಳಿಗ್ಗೆ 8  ಗಂಟೆಯಿಂದ 10 ಗಂಟೆವರೆಗೆ  ಕೇಂದ್ರ ಸರ್ಕಾರ 2020-21  ನೇ ಸಾಲಿನ ಮುಂಗಡ ಪತ್ರದಲ್ಲಿ ಮಂಡಿಸಿರುವ ಕೆಳಕಂಡ ಎರಡು ವಿಷಯಗಳ ಬಗ್ಗೆ, ಸಮಾಲೋಚನಾ ಸಭೆಯನ್ನು ನಡೆಸಲಾಗುವುದು.

GOI BUDGET 2020-21 : PRIVATE SECTOR TO BUILD DATA CENTRE PARKS

WATER AUDIT, WATER BUDGET, WATER STRATAGY

GREEN AUDIT, GREEN BUDGET, GREEN STRATAGY

CLIMATE  AUDIT, CLIMATE BUDGET, CLIMATE STRATAGY

62 (1). To bring out soon a policy to enable private sector to build Data

Centre parks throughout the country. It will enable our firms to skilfully

incorporate data in every step of their value chains.

78. India submitted its Nationally Determined Contribution, under the

Paris Agreement in 2015 on a “best effort” basis, keeping in mind the

development imperative of the country. Its implementation effectively

begins on 1st January 2021. Our commitments as action will be executed in

various sectors by the Departments/Ministries concerned through the

normal budgeting process.

 ಈ ಸಭೆಗೂ ಮುನ್ನ ಗಂಗಸಂದ್ರ ಅಮಾನಿಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಬಗ್ಗೆ, ಕೆರೆಗೆ ಹೊಂದಿಕೊಂಡಿರುವ ಸರ್ವೆ ನಂಬರ್ 45  ರ ಜಮೀನಿನಲ್ಲಿ ಅಂತರ ರಾಷ್ಟ್ರೀಯ ಮಟ್ಟದ ನೀರಾವರಿ ಡಿಜಿಟಲ್ ಹೈಟೆಕ್ ಲೈಬ್ರರಿ ಸ್ಥಾಪಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು.

  ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀ ರಾಕೇಶ್ ಸಿಂಗ್, ತುಮಕೂರು ಜಿಲ್ಲಾಧಿಕಾರಿ ಡಾ. ಶ್ರೀ ರಾಕೇಶ್ ಕುಮಾರ್, ತುಮಕೂರು ಜಿಲ್ಲಾ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿ ಶ್ರೀಮತಿ ಶುಭಕಲ್ಯಾಣ್, ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಮತ್ತು ತುಮಕೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ಧೇಶಕರಾದ ಶ್ರೀ ಭೂಬಾಲನ್ ಮತ್ತು ತುಮಕೂರು ಟೂಡಾ ಆಯುಕ್ತ ಶ್ರೀ ಯೋಗಾನಂದ್ ಸೇರಿದಂತೆ ಸಂಬಂಧಿಸಿದ ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೂ ಈ ಬಗ್ಗೆ ಸಮಾಲೋಚನೆ ನಡೆಸಲಾಗುವುದು.

 ಆಸಕ್ತರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯವಾದ ಸಲಹೆ, ಸಹಕಾರ ಮತ್ತು ಮಾರ್ಗದರ್ಶನ ನೀಡಲು ಮನವಿ ಮಾಡಲಾಗಿದೆ.