22nd December 2024
Share

ತುಮಕೂರು ಜಿಲ್ಲೆಯೂ ಸೇರಿದಂತೆ ರಾಜ್ಯದ ಹದಿನೇಳು ಜಿಲ್ಲೆಗಳಲ್ಲಿ ತೆಂಗು ಬೆಳೆ ಬೆಳೆಯುತ್ತಾರೆ, ಈ ರೈತರ ಬೆಳೆಗೆ ಮೌಲ್ಯವರ್ಧಿತ ಬೆಲೆ ದೊರೆಯಬೇಕೆಂಬ ದೃಷ್ಠಿಯಿಂದ ತುಮಕೂರು ಜಿಲ್ಲೆಯಲ್ಲಿ  COSEZ ಸ್ಥಾಪನೆ ಮಾಡಬೇಕು ಎಂಬುದಾಗಿ ಮೊದಲು ಧ್ವನಿಯೆತ್ತಿದ್ದು ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ.

  ಈ ಬೇಡಿಕೆಗೆ ಸ್ಪಂಧಿಸಿದ ಆಗಿನ ತುಮಕೂರು ಜಿಲ್ಲಾಧಿಕಾರಿ ಆಗಿದ್ದ ಶ್ರೀ ಕೆ.ಪಿ.ಮೋಹನ್ ರಾಜ್ ರವರು ವಿಶೇಷ ಆಸಕ್ತಿ ವಹಿಸಿದರು. ಸುಮಾರು ಮಿಟಿಂಗ್‌ಗಳನ್ನು ಮಾಡಿದರು, ಗುಬ್ಬಿ ತಾಲ್ಲೂಕಿನಲ್ಲಿ ಸರ್ಕಾರಿ ಜಮೀನು ಗುರುತಿಸಲು ಕ್ರಮ ಕೈಗೊಂಡರು. ಕರ್ನಾಟಕ ಕಾಯರ್ ಕಾರ್ಪೋರೇಷನ್ ನಿಗಮದ ಆಗಿನ ಆಧ್ಯಕ್ಷರಾದ ಶ್ರೀ ವೆಂಕಟಾಚಲಯ್ಯನವರು ವಿಶೇಷ ಆಸಕ್ತಿ ವಹಿಸಿದ್ದರು. ಆದರೆ ಎಂ.ಡಿ ಯ ಉದಾಸೀನ ಮನೋಭಾವದಿಂದ ಅನುಭವದ ಕೊರತೆಯಿಂದ ಮುಂದೆ ಬರಲಿಲ್ಲವಾದ್ದರಿಂದ ಯೋಜನೆ ನೆನೆಗುದಿಗೆ ಬಿತ್ತು.

ಆಗಿನ ವಿರೋಧ ಪಕ್ಷದ ನಾಯಕರಾಗಿದ್ದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಸಹ ತುಮಕೂರಿನಲ್ಲಿ ಪತ್ರಿಕಾಘೋಷ್ಠಿ ಮಾಡಿ ತುಮಕೂರಿನಲ್ಲಿ  COSEZ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದ್ದರು. ತುಮಕೂರಿನಲ್ಲಿ ಜಮೀನು ಗುರುತಿಸಲು ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಸಹ ಬರೆದಿದ್ದರು.

  ಆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಅಮಿತ್‌ಷಾರವರು ತಿಪಟೂರಿನಲ್ಲಿ ಭಾಷಣ ಮಾಡಿ ನಮ್ಮ ಸರ್ಕಾರ ತುಮಕೂರಿನಲ್ಲಿ   COSEZ ಸ್ಥಾಪನೆ ಮಾಡಲಿದೆ ಎಂದು  ಪ್ರಕಟಿಸಿದ್ದರು.

 ಪ್ರಸ್ತುತ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮಾನ್ಯ ಪ್ರಧಾನಿಯವರಿಗೆ ಮತ್ತು ವಾಣಿಜ್ಯ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ ಹಿನ್ನೆಲೆಯಲ್ಲಿ ಮಾನ್ಯ ಶ್ರೀ ಪಿಯೂಷ್ ಗೋಯಲ್‌ರವರು ಬರೆದಿರುವ ಪತ್ರ ನೋಡಿದಲ್ಲಿ ರಾಜ್ಯ ಸರ್ಕಾರದ ಕೆಎಸ್‌ಎಸ್‌ಐಡಿಸಿ/ ಕೆಐಎಡಿಬಿ/ಎಪಿಎಂಸಿ ಅಥವಾ ಪಿಪಿಪಿ ಮೇಲೆ ಖಾಸಗಿಯವರು ಮಾತ್ರ ಮಾಡಬಹುದಾಗಿದೆ.

  ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿ ಮಹತ್ತರವಾದ ಚಿಂತನೆಗೆ ಯೋಜನೆ ರೂಪಿಸಿದೆ. ಕೇಂದ್ರ ಸರ್ಕಾರ ಮುಂಗಡ ಪತ್ರದಲ್ಲಿ ಪ್ರಕಟಿಸಿರುವ DISTRICT-1 PRODUCT-1  ಯೋಜನೆಯಡಿಯಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಯಾವ ಬೆಳೆಯನ್ನು ಹೆಚ್ಚಿಗೆ ಬೆಳೆಯುತ್ತಾರೆ. ಯಾವ ಯೋಜನೆ ರೂಪಿಸ ಬಹುದು ಎಂದು ಅಧ್ಯಯನ ಮಾಡಲು ಅರಂಭಿಸಿದ್ದಾರೆ. ಈ ಎರಡು ಯೋಜನೆಗಳ ಸಲಹೆಗಳನ್ನು ಫೋರಂ ನೀಡಿರುವುದು ವಿಶೇಷ. ಯಾರೇ ಮಾಡಲಿ ಈ ಯೋಜನೆ ಆಗಲೇಬೇಕು, ನೋಡೋಣ ಬೆಂಕಿಗೆ ಗಂಟೆ ಕಟ್ಟುವವರು ಯಾರಗಾಲಿದ್ದಾರೆ.