22nd November 2024
Share

TUMKURU:SHAKTHIPEETA FOUNDATION

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು, ತುಮಕೂರು ನಗರ ವಿಧಾನಸಭಾ ಸದಸ್ಯರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸದಸ್ಯರುಗಳ ಸಲಹೆ ಮೇರೆಗೆ, ಪ್ರತಿ ಶುಕ್ರವಾರ ಸಂಜೆ 5 ಗಂಟೆಗೆ ತುಮಕೂರು ನಗರದ ಟೌನ್ ಹಾಲ್‌ನಲ್ಲಿರುವ ಐಸಿಸಿಸಿ ಯಲ್ಲಿ ಜಿಐಎಸ್ ಲೇಯರ್ – ಮನೆ – ಗಿಡ’ ಪ್ರಗತಿ ಪರೀಶೀಲನಾ ಸಭೆ ನಡೆಸುವ ಮಹತ್ವದ ನಿರ್ಧಾರ ಕೈಗೊಳ್ಳಾಗಿದೆ ಎಂದು ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಯವರಾದ ಶ್ರೀ ಡಾ.ರಾಕೇಶ್ ಕುಮಾರ್ ಸ್ಪಷ್ಟಪಡಿಸಿದರು.

  ದಿನಾಂಕ:12.06.2020 ನೇ ಶುಕ್ರವಾರ ಈಗಾಗಲೇ ಪ್ರಥಮ ಸಭೆಯನ್ನು ನಡೆಸಲಾಗಿದೆ, ಅಂದು ವಿವಿದ ಕಾರಣಗಳಿಂದ ಸಂಸದರು, ಶಾಸಕರು ಮತ್ತು ಸದಸ್ಯರುಗಳು ಹಾಜರಾಗಿರಲಿಲ್ಲ, ಜಿಐಎಸ್ ಲೇಯರ್’ ಬಗ್ಗೆ ಪರಿಶೀಲಿಸಿ ವಾರ್ಡ್ ನಂ 22 ರ ಸಂಪೂರ್ಣ ಲೇಯರ್‍ಸ್‌ಗಳನ್ನು ಸಿದ್ಧಪಡಿಸಿಕೊಂಡು ಬರಲು ಖಡಕ್ ನಿರ್ದೇಶನ ನೀಡಲಾಗಿದೆ.

  ನಂತರ ಸಾಧಕ-ಭಾದಕ ನೋಡಿಕೊಂಡು ಎಲ್ಲಾ ವಾರ್ಡ್‌ಗಳ ಲೇಯರ್‍ಸ್ ಅಂತಿಮಗೊಳಿಸಲಾಗುವುದು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವ ಪ್ರಶ್ನೆ ಇಲ್ಲ, ಆಸಕ್ತ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸದಸ್ಯರು ಮತ್ತು ದಿಶಾ ಸಮಿತಿ ಸದಸ್ಯರು ಭಾಗವಹಿಸಿ ಪರಿಶೀಲಿಸಿ ಲಿಖಿತ ಸಲಹೆ ನೀಡಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಜಿಲ್ಲಾಧಿಕಾರಿಗಳಿಗೆ ಬಹಿರಂಗ ಮನವಿ

ತುಮಕೂರು ನಗರದ ಜಿಐಎಸ್ ಲೇಯರ್‍ಸ್:- ತುಮಕೂರು ನಗರದ ಜಿಐಎಸ್ ಲೇಯರ್‍ಸ್‌ಗಳ ಇತಿಹಾಸ ಅಫ್ ಲೋಡ್ ಮಾಡಲು  ತುಮಕೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೆಶಕರು ಹಾಗೂ ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ  ಶ್ರೀ ಭೂಬಾಲನ್‌ರವರು, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತಾರಾದ ಶ್ರೀ ಯೋಗಾನಂದ್‌ರವರು ಮತ್ತು ಪಾಲಿಕೆ ಎಸ್ಟೇಟ್ ಆಫೀಸರ್ ಇಲಾಖಾವಾರು ಲೇಯರ್‍ಸ್ ಗಳಿಗೆ ಆಯಾ ಇಲಾಖಾ ಅಧಿಕಾರಿಗಳು ಸಂಪೂರ್ಣ ಜವಾಬ್ಧಾರಿ ಹೊರಬೇಕು.

 (ಸೋಶಿಯಲ್ ಆಡಿಟ್: ಸಂಘ ಸಂಸ್ಥೆಗಳ ಪ್ರತಿನಿಧಿ ಮತ್ತು ಟ್ಯಾಕ್ಸ್ ಅಸೀಯೇಷನ್ ಪ್ರತಿನಿಧಿ)

ತುಮಕೂರು ನಗರದ ವಸತಿರಹಿರಿಗೆ ನಿವೇಶನ:- ತುಮಕೂರು ನಗರದ ವಸತಿ ರಹಿತರಿಗೆ ಅಗತ್ಯ ನಿವೇಶನ ನೀಡಲು ತುಮಕೂರು ಉಪವಿಭಾಗಾಧಿಕಾರಿ ಹಾಗೂ ಸರ್ಕಾರಿ ಜಮೀನುಗಳ ಒತ್ತುವರಿ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷರಾದ  ಶ್ರೀ ಅಜಯ್‌ರವರು ಮತ್ತು ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ  ಶ್ರೀ ಭೂಬಾಲನ್‌ರವರು ಸಂಪೂರ್ಣ ಜವಾಬ್ಧಾರಿ ಹೊರಬೇಕು.

(ಸೋಶಿಯಲ್ ಆಡಿಟ್: ಕೊಳಚೆ ನಿವಾಸಿಗಳ ಪ್ರತಿನಿಧಿ ಮತ್ತು  ಆರ್ಕಿಟೆಕ್ಚರ್ ಪ್ರತಿನಿಧಿ)

ಹಸಿರು-ತುಮಕೂರು :-ವೃಕ್ಷಪ್ರಾಧಿಕಾರದ ಅಧ್ಯಕ್ಷರು ಮತ್ತು ಟ್ರೀ ಆಫೀಸರ್ ತುಮಕೂರು ನಗರದ  ಹಸೀರಕರಣ ಮಾಡುವುದು ಮತ್ತು ನಿಯಮ ಪ್ರಕಾರ ಎಲ್ಲಾ ಡಿಜಿಟಲ್ ಮಾಹಿತಿ ನೀಡುವ ಜವಾಬ್ಧಾರಿ ಹೊರಬೇಕು.

(ಸೋಶಿಯಲ್ ಆಡಿಟ್: ಚೇಂಬರ್‍ಸ್ ಆಫ್ ಕಾಮರ್ಸ್ ಪ್ರತಿನಿಧಿ ಮತ್ತು ಯುವ ಪ್ರತಿನಿಧಿ)

ತುಮಕೂರು ಸ್ಮಾರ್ಟ್ ಸಿಟಿ ಸದಸ್ಯರುಗಳಿಗೂ ಜವಾಬ್ಧಾರಿ ಅವರ ಕಾರ್ಯವೈಖರಿ ಹೆಚ್ಚಿಸಲಿದೆ. ಇಂಜಿನಿಯರ್‌ವಾರು / ಕೇಸ್ ವರ್ಕರ್‌ವಾರು ಆಯಾ ಇಲಾಖೆಗಳ ಅಧಿಕಾರಿಗಳು ಹೊಣೆಗಾರಿಕೆ ಹಂಚಬೇಕು ಯಾರು ಯಾವ ಕೆಲಸ ಮಾಡುವುದಿಲ್ಲವೋ ಅವರ ಮೇಲೆ ನಿಯಮ ಪ್ರಕಾರ ಸೂಕ್ತ ಕ್ರಮಕೈಗೊಳ್ಳುವಂತಿರ ಬೇಕು. ಆಗ ಮಾತ್ರ ತುಮಕೂರು ಸ್ಮಾರ್ಟ್ ಸಿಟಿ ದೇಶಕ್ಕೆ ನಂಬರ್-1 ಆಗಲಿದೆ, ದಿಟ್ಟ ನಿರ್ಧಾರ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಫೋರಂ ಬಹಿರಂಗ ಮನವಿ ಮಾಡಿದೆ.