28th November 2022
Share

Action Research  & Social Development By Siddhartha University

TUMAKURU:SHAKTHIPEETA FOUNDATION

ತುಮಕೂರಿನ ಸಿದ್ಧಾರ್ಥ  Action Research  & Social Development By Siddhartha University ಎಂಬ ವಿಭಾಗವನ್ನು ಆರಂಭಿಸಿದೆ. ಈ ಗ್ರೂಪ್‌ಗೆ ನನ್ನನ್ನು ವಿಶೇಷ ಸದಸ್ಯನಾಗಿ ಸೇರ್ಪಡೆ ಮಾಡಲಾಗಿದೆ ಎಂದು ದಿನಾಂಕ:21.06.2020 ರಂದು ಸೂರ್ಯಗ್ರಹಣದ ಸಮಯದಲ್ಲಿ ವಿಸಿಯವರು ತಿಳಿಸಿದಾಗ ನನಗೆ ಆಗಿನ್ನು ಟಿವಿಯಲ್ಲಿ ನೋಡುತ್ತಿದ್ದಾಗ, ಈ ದಿನ ಸಂಕಲ್ಪ ಮಾಡಿದ ಯಾವುದೇ ಕೆಲಸ ಚೆನ್ನಾಗಿ ಆಗುವುದು ಎಂದು ಹೇಳುತ್ತಿದ್ದರು.

 ನಾನು ಈ ವಿಭಾಗಕ್ಕೆ ಹೃದಯಪೂರ್ವಕ ಮನವಿ ಮಾಡುವುದೇನೆಂದರೆ ಕೇಂದ್ರ ಸರ್ಕಾರದ ಎಐಸಿಟಿ ಮಾರ್ಗದರ್ಶಿ ಸೂತ್ರದ ಪ್ರಕಾರ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆಕ್ಟಿವಿಟಿ ಪಾಯಿಂಟ್ಸ್ ಕಡ್ಡಾಯ ಮಾಡಿರುವುದರಿಂದ, ತುಮಕೂರು ಸ್ಮಾರ್ಟ್ ಸಿಟಿ ಕೈಗೆತ್ತಿಕೊಂಡಿರುವ ಡೇಟಾ ಸಿಟಿ’ ಯೋಜನೆಯ ಒಂದೊಂದು ಇಲಾಖೆಯ ಜಿಐಎಸ್ ಲೇಯರ್‌ಗಳನ್ನು ಪೂರ್ಣಗೊಳಿಸಲು ಜವಾಬ್ದಾರಿ ತೆಗೆದುಕೊಂಡರೆ ಉತ್ತಮ ಯೋಜನೆಗೆ ಸಹಕಾರ ನೀಡಿದಂತಾಗುತ್ತದೆ.

 ಈ ಮೂಲಕ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆಕ್ಟಿವಿಟಿ ಪಾಯಿಂಟ್ಸ್ ಮತ್ತು ಪ್ರಾಜೆಕ್ಟ್ ವರ್ಕ್ ನೀಡಿದಂತಾಗುತ್ತದೆ. ಗ್ರೂಪ್‌ನ ಒಬ್ಬೊಬ್ಬರು ಒಂದು ಇಲಾಖೆಯ ಹೊಣೆಗಾರಿಕೆ ಪಡೆಯ ಬಹುದಾಗಿದೆ. ಇದೊಂದು ಟೀಮ್ ವರ್ಕ್ಸ್ ಆಗಲಿದೆ. ಇದೂ ಸ್ಮಾರ್ಟ್ ಸಿಟಿಯ ಗುರಿಯೂ ಹೌದು!