22nd November 2024
Share

TUMAKURU:SHAKTHIPEETA FOUNDATION

  ರಾಜ್ಯ ಮಟ್ಟದ ದಿಶಾ ಸಮಿತಿ  ಸದಸ್ಯನಾದ ನನಗೆ ಕೇಂದ್ರ ಸರ್ಕಾರ ಪಿಎಂ ಫಂಡ್‍ನಿಂದ ರಾಜ್ಯದಲ್ಲಿ ಆಕ್ಸಿಜನ್ ಘಟಕ ಸ್ಥಾಪಿಸಲು ಯಾವಾಗ ಸೂಚಿಸಲಾಗಿತ್ತು. ಇದೂವರೆಗೂ ಯಾವ ಕಾರಣಕ್ಕೆ ಆಕ್ಸಿಜನ್ ಘಟಕ ಸ್ಥಾಪನೆ ಮಾಡಿಲ್ಲ ಕಚೇರಿ ಟಿಪ್ಪಣೆಗಳ  ಸಹಿತ ಮಾಹಿತಿ ನೀಡಲು ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿಯಾದ ಶ್ರೀಮತಿ ಶಾಲಿನಿ ರಜನೀಶ್ ರವರಿಗೆ ಪತ್ರ ಬರೆಯಲಾಗಿದೆ.

 ಕೇಂದ್ರ ಸರ್ಕಾರದ ಅನುದಾನದ ಬಳಕೆ, ದುರುಪಯೋಗ, ವಿಳಂಭ ಹೀಗೆ ಯಾವುದೇ ರೀತಿಯ  ಅವ್ಯವಹಾರಗಳ ಬಗ್ಗೆ ಪರೀಶಿಲನೆ ನಡೆಸುವ ಅಧಿಕಾರ ದಿಶಾ ಸಮಿತಿಗೆ ಇದೆ. ಒಂದು ವೇಳೆ ದಿನಾಂಕ:01.05.2021 ರಂದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಪ್ರಕಟಣೆಯಾದಂತೆ ಕೇಂದ್ರ ಸರ್ಕಾರ ಕಳೆದ 6-8 ತಿಂಗಳಿನಲ್ಲಿಯೇ ಮಂಜೂರು ಮಾಡಿದ್ದರೂ, ಅಧಿಕಾರಿಗಳು ಕಡತ ಮಂಜೂರು ಮಾಡಿ ಅನುಮೋದನೆಗೆ ಸಚಿವರಿಗೆ ಕಳುಹಿಸಿದ್ದರೂ, ಈ ವರೆಗೂ ಸಚಿವರು ಸಹಿ ಹಾಕಿಲ್ಲ ಎಂಬ ಸುದ್ದಿ ನಿಜವೇ ಆಗಿದ್ದಲ್ಲಿ ದಿಶಾ ಸಮಿತಿಯ ಮಾರ್ಗದರ್ಶಿ ಸೂಚಿಯನ್ವಯ ಕಾನೂನು ಕ್ರಮ ಕೈಗೊಳ್ಳಲು ಪತ್ರ ಬರೆಯಲಾಗುವುದು.

ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಗಮನಕ್ಕೂ ತರಲಾಗುವುದು. ಒಂದು ವೇಳೆ ಇದು ನಿಜವೇ ಆಗಿದ್ದಲ್ಲಿ ಇದು ಒಂದು ದೇಶದ್ರೋಹದ ಕೆಲಸ ಎಂದರೂ ತಪ್ಪಾಗಲಾರದು.

ಕುಂದರನಹಳ್ಳಿ ರಮೇಶ್.

ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ, ಕರ್ನಾಟಕ.