TUMAKURU:SHAKTHIPEETA FOUNDATION
ಕೊರೊನಾ ಮಹಾಮಾರಿಯ ಆರ್ಭಟದ ಹಿನ್ನಲೆಯಲ್ಲಿ ತುಮಕೂರು ಜಿಲ್ಲೆಯ ಖಾಸಗಿ ಶಾಲಾ ಕಾಲೇಜುಗಳು ತಮ್ಮ ನೌಕರರ ಮತ್ತು ಅವರ ಕುಟುಂಬದವರಿಗೆ ಪಿಪಿಪಿ ಮಾದರಿ ತಾತ್ಕಾಲಿಕ ಕೋವಿಡ್ ಆಸ್ಪತ್ರೆ ತೆರೆಯುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ.
ಗುಬ್ಬಿ ಚನ್ನಬಸವೇಶ್ವರ ಇಂಜನಿಯರಿಂಗ್ ಕಾಲೇಜಿನ ನಿರ್ದೇಶಕರಾದ ಶ್ರೀ ಡಿ.ಎಸ್. ಸುರೇಶ್‍ರವರು ಈ ಬಗ್ಗೆ ಸಮಾಲೋಚನೆ ನಡೆಸಿದರು. ನಮ್ಮ ಯೋಜನೆಗೆ ಸರ್ಕಾರ ಯಾವ ರೀತಿ ಸ್ಪಂದಿಸಲಿದೆ ಎಂಬ ವಿಷಯದ ಬಗ್ಗೆಯೂ ಚರ್ಚಿಸಿದರು. ಇದೊಂದು ವಿನೂತನ ಐಡಿಯಾ ಆಗಿದೆ. ಕೇಂದ್ರ ಸರ್ಕಾರ ಇಂಥಹ ಯೋಜನೆಗೆ ಸದಾ ಬೆನ್ನು ತಟ್ಟಲಿದೆ.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪಿಪಿಪಿ ಮಾದರಿ ಯೋಜನೆಗಳ ಸಮಿತಿ ಇದೆ, ಅಲ್ಲಿ ಚರ್ಚಿಸಿ ಸರ್ಕಾರದ ಅನುಮೋದನೆ ಪಡೆಯುವುದು ಸೂಕ್ತ ಎಂಬ ಬಗ್ಗೆ ವಿಷಯ ಹಂಚಿಕೊಳ್ಳಲಾಗಿದೆ.
ಇದೇ ರೀತಿ ಕೋ-ಆಪ್‍ರೇಟಿವ್ ಬ್ಯಾಂಕ್‍ಗಳು ಪಿಪಿಪಿ ಮಾದರಿ ತಾತ್ಕಾಲಿಕ ಕೋವಿಡ್ ಆಸ್ಪತ್ರೆ ತೆರೆದು ತಮ್ಮ ಬ್ಯಾಂಕಿನ ನೌಕರರಿಗೆ ಮತ್ತು ಸದಸ್ಯರ ಕುಟುಂಬದವರಿಗೆ ಸೇವೆಗೆ ಮುಂದಾಗುವುದು ಸೂಕ್ತವಾಗಿದೆ.
ಎಲ್ಲವನ್ನೂ ಸರ್ಕಾರ ಮಾಡಲಿ ಎಂಬ ಭಾವನೆ ಬಿಟ್ಟು, ಖಾಸಗಿ ಸಂಸ್ಥೆಗಳು ಸರ್ಕಾರದ ಕೈಜೋಡಿಸಲು ಸಮೋರೋಪಾದಿಯಲ್ಲಿ ಮುಂದಾಗುವುದು ಒಳ್ಳೆಯದು.
ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿ ಪಿಪಿಪಿ ಯೋಜನೆ ಸಮಿತಿಯಲ್ಲಿ ಚರ್ಚಿಸಿ ಸೂಕ್ತ ಪ್ರಸ್ತಾವನೆ ತರಿಸಿಕೊಳ್ಳುವ ಮೂಲಕ ಕೊರೊನಾ 3 ನೇ ಅಲೆ ಮತ್ತು 4 ನೇ ಅಲೆಗೆ ಸಜ್ಜಾಗುವುದು ಸೂಕ್ತವಾಗಿದೆ.