27th November 2022
Share

TUMAKURU:SHAKTHIPEETA FOUNDATIN

ಸಂಸದ ಶ್ರೀ ಜಿ.ಎಸ್.ಬಸವರಾಜ್‍ರವರ  ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಮಿತಿಯ ನಿರ್ಣಯದಂತೆ ತುಮಕೂರು ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 253 ಕೋವಿಡ್ ವಾರ್ಡ್ ಕಮಿಟಿಗಳಿಗೆ ಜೀವ ನೀಡಲಾಗುವುದು ಎಂದು ನಗರ ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಕರಾದ  ಶ್ರೀ ಮತಿ ಶುಭರವರು ತಿಳಿಸಿದ್ದಾರೆ.

ಈ ಹಿಂದೆಯೇ ವಾರ್ಡ್ ಕಮಿಟಿಗಳು ರಚನೆಯಾಗಿದ್ದರೂ ಕಾರ್ಯಾರಂಭ ಮಾಡಿರಲಿಲ್ಲ.  ಈಗ  ಎಲ್ಲಾ 11 ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಚೀಫ್ ಆಫೀಸರ್ ರವರಿಂದ ಮಾಹಿತಿ ಪಡೆದು ಪ್ರತಿ ದಿನದ ಮಾಹಿತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಮತ್ತು ಶಾಸಕರುಗಳಿಗೆ ರವಾನಿಸಲಾಗುವುದು.

ನಗರದ ವ್ಯಾಪ್ತಿಯ ಸೋಂಕಿತರ ಮನೆ ಮನೆಗೂ ಭೇಟಿ ಮಾಡಿ ಸರ್ಕಾರದಿಂದ ದೊರೆಯುವ ಎಲ್ಲಾ ಸವಲತ್ತುಗಳನ್ನು ನೀಡಲಾಗುವುದು, ಸೋಂಕಿತರಿಗೆ ಆತ್ಮ ಸ್ಥೈರ್ಯ ನೀಡುವ ಕೆಲಸವನ್ನು ಮಾಡುವುದರ ಜೊತೆಗೆ ಸಭೆಗಳ ವರದಿಯ ಮೇರೆಗೆ ಅಗತ್ಯ ಕ್ರಮಕೈಗೊಳ್ಳಲು ಸಂಬಂದಿಸಿದ ಡಾಕ್ಟರ್‍ಗಳಿಗೆ ನೀಡಲಾಗುವುದು.

ಪ್ರಶಸ್ತಿ ಮತ್ತು ಪುರಸ್ಕಾರ: ತುಮಕೂರು ಜಿಲ್ಲೆಯ 253 ವಾರ್ಡ್ ಕಮಿಟಿಗಳಲ್ಲಿ ಒಳ್ಳೆಯ ಕೆಲಸ ಮಾಡಿದ ಕೋವಿಡ್  ವಾರ್ಡ್ ಕಮಿಟಿಗಳಿಗೆ ನಾಗರೀಕ ಸನ್ಮಾನ ಮಾಡಲು ಜಿಲ್ಲೆಯ ಹಲವಾರು ಸಂಘ ಸಂಸ್ಥೆಗಳು ಮುಂದೆ ಬಂದಿವೆ, ಶೀಘ್ರವಾಗಿ ರೂಪುರೇಷೆ ಸಿದ್ಧಪಡಿಸಲು ಚಿಂತನೆ ನಡೆಸಲಾಗಿದೆ.

 ನಿಮಗೆ ತಾತ್ಕಾಲಿಕ ಆಶಾ ಕಾರ್ಯಕರ್ತರ ಅಗತ್ಯ ಇದ್ದಲ್ಲಿ ವಾರ್ಡ್‍ವಾರು ಪಟ್ಟಿ ಮಾಡಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದಲ್ಲಿ ಹಣ ಬಿಡುಗಡೆ ಮಾಡುವ ಜವಾಬ್ಧಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರದ್ದು. ಅವರು ಈಗಾಗಲೇ ದಿಶಾ ಸಭೆಯಲ್ಲಿಯೇ ಘೋಷಣೆ ಮಾಡಿದ್ದಾರೆ ಎಂಬ ಅಂಶವನ್ನು ಮತ್ತೊಮ್ಮೆ ನಿಮ್ಮ ಗಮನಕ್ಕೆ ತರಬಯಸುತ್ತೇನೆ.