11th December 2024
Share

TUMAKURU: SHAKTHI PEETA FOUNDATION

ಕಳೆದ 33 ವರ್ಷಗಳಿಂದ ಸಾಮಾಜಿಕ ಜೀವನದಲ್ಲಿ ತೊಡಗಿಸಿ ಕೊಂಡಿರುವ ನಾನು ಒಬ್ಬ ರೈತ ಎಂದು ಪರಿಚಯ ಮಾಡಿಕೊಂಡರೆ ಬಹುತೇಕರು ಒಪ್ಪುವುದೇ ಇಲ್ಲ. 1995 ರಲ್ಲಿ ತುಮಕೂರು ಡೈರಿ ಹಗರಣದ ಬಗ್ಗೆ ಹೋರಾಟ ಆರಂಭಿಸಿದಾಗ ತುಮಕೂರು ಹಾಲು ಒಕ್ಕೂಟದ ನೌಕರರು ಕುಂದರನಹಳ್ಳಿಗೆ ಹುಡುಕಿ ಕೊಂಡು ಬಂದಿದ್ದರು.

ಅವರು ನನ್ನನ್ನು ನೋಡಿರಲಿಲ್ಲ, ನಾನೇ ಕುಂದರನಹಳ್ಳಿ ರಮೇಶ್ ಎಂದರು ನಂಬಲಿಲ್ಲ ನೀವು ಸುಳ್ಳು ಹೇಳುತ್ತಿರಾ ಎಂದಾಗ ಬೈದು ಎದ್ದು ಹೋಗಿ ಎಂದು ಹೇಳಿ ಮನೆಯಿಂದ ಹೊರಗೆ ಕಳುಹಿಸದ್ದಾಯಿತು. ನಂತರ ಒಂದೆರಡು ತಿಂಗಳಿಗೆ ಬಂದು ಸಾರಿ ಕೇಳಿದರು, ನಾನು ಅಂದು ಏಕೆ ನಂಬಲಿಲ್ಲ ಎಂದಾಗ ಅವರು ಹೇಳಿದ್ದು ಇಷ್ಟು ಸಿಂಪಲ್ ಆಗಿ ಇದ್ದಿರಿ ಅಷ್ಟು ಅಬ್ಬರ ಹೇಗೆ ಸಾರ್ ಎಂದಾಗ ನಕ್ಕು ಸುಮ್ಮನಾದೆ.

ಕಳೆದ 3 ತಿಂಗಳಲ್ಲಿ ಬೆಂಗಳೂರಿನಿಂದ ಒಬ್ಬರು ಹುಡಕಿ ಕೊಂಡು ನಮ್ಮ ಕಚೇರಿಗೆ ಬಂದಾಗ ಏನು ಸಾರ್ ಇಷ್ಟೊಂದು ನಿಮ್ಮ ಆಸ್ತಿ ಇದೆ, ಇಷ್ಟು ಕಡತಗಳನ್ನು ಹೇಗೆ ನೋಡುತ್ತೀರಿ, ಎಷ್ಟು ವಿಷಯ ನಿಮ್ಮ ತಲೆಯಲ್ಲಿದೆ ಎಂದಾಗಲೂ ನಾನು ನಕ್ಕಿದ್ದೆ ಅವರಿಗೆ ಉತ್ತರ.

ನನ್ನ ಮಗ ಸೋಹನ್ ಶಕ್ತಿಪೀಠ ಇ- ಪೇಪರ್ ಮಾಡಲು ಹೇಳಿದಾಗ ನನಗೆ ಭಯ ಆಗಿತ್ತು, ಏಕೆಂದರೆ ಈಗಾಗಲೇ ಪರಿವರ್ತನ ಮತ್ತು ಅಪ್ನಾಸ್ ನ್ಯೂಸ್ ಎಂಬ ಎರಡು ಪತ್ರಿಕೆ ಆರಂಭಿಸಿ ಸಾಲ ಮಾಡಿ ಕೈ ಸುಟ್ಟು ಕೊಂಡಿದ್ದು ನೆನಪಿಗೆ ಬಂತು.

ಆದರೂ ಆರಂಭಿಸಿದೆ ಒಂದು ವರ್ಷದಲ್ಲಿ ಯಾವುದೇ ಪ್ರಚಾರವಿಲ್ಲದೆ, ಸುಮ್ಮನೆ ಬರೆದು ಪೋಸ್ಟ್ ಮಾಡುತ್ತಾ ಬಂದೆ, ಪರವಾಗಿಲ್ಲ ನನ್ನ ಪೇಪರ್ ಅನ್ನು ಓದುವ ಜನ ಇದ್ದಾರೆ ಎನಿಸಿತು. ಈಗ ಮತ್ತೆ ನನ್ನ ಮಗ ಒಂದು ಯೂ-ಟ್ಯೂಬ್ ಚಾನಲ್ ಆರಂಭ ಮಾಡಿ, ನಿಮ್ಮ ತಲೆಯಲ್ಲಿರುವುದು ಜನಕ್ಕೂ ಸ್ವಲ್ಪ ತಿಳಿಯಲಿ ಎಂದಾಗಲೂ ನಗು ಬಂತು.

ಆಯಿತು ಆರಂಭ ಮಾಡೋಣ ಎಂದೆ, ಆತನೇ ಎಲ್ಲಾ ಮಾಡಿ, ನನ್ನ ಮೊಬೈಲ್ ಕ್ಯಾಮರಾ ಮುಂದಿಟ್ಟು ನಿಮ್ಮ ತಲೆಗೆ ಬಂದಿದ್ದನ್ನು ಒಂದೆರಡು ಮಾತನಾಡಿ ಎಂದಾಗ ಜನರಲ್ ಆಗಿ ಕೊರೊನಾ ಸುಪ್ರೀಂ ಕೋರ್ಟ್ ಆಕ್ಸಿಜನ್ ಬಗ್ಗೆ ಮಾತನಾಡಿದೆ, ನಂತರ ಅದೇ ವೀಡಿಯೋ ಅಪ್ ಲೋಡ್ ಮಾಡಿ, ನಿಮ್ಮ ಯೂ-ಟ್ಯೂಬ್ ಚಾನಲ್ ಆರಂಭವಾಯಿತು ಎಂದಾಗ ನನಗೆ ನಗು ಬಂತು.

ನೀನು ಇದನ್ನೆ ಅಪ್ ಲೋಡ್ ಮಾಡುತ್ತೇನೆ ಎಂದಿದ್ದರೆ ಯೂ-ಟ್ಯೂಬ್ ಚಾನಲ್ ಬಗ್ಗೆ ಮಾತನಾಡಬಹುದಾಗಿತ್ತು ಎಂದಾಗ ಮೊದಲು ಕಲಿಯಿರಿ ನಂತರ ಪೂರ್ಣ ಪ್ರಮಾಣದಲ್ಲಿ ಲ್ಯಾಬ್ ಮಾಡೋಣ, ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಪ್ರಾಕ್ಟೀಸ್ ಮಾಡಿ ಎಂದಾಗ ಅದು ಸರಿ ಅನ್ನಿಸಿತು.

ಸರಿ ಹೆಸರು ಏನು ಇಡುವುದು ಎಂದಾಗ ಹೆಸರನ್ನಿಡದೆ ಹೇಗೆ ಅಫ್ ಲೋಡ್ ಮಾಡಲಿ, ನಿಮ್ಮ ಊರೇ ನಿಮಗೆ ಬ್ರ್ಯಾಂಡ್ ಅದಕ್ಕಿನ್ನ ಹೆಸರು ಬೇರೆ ಏಕೆ? ಎಂದ ನನ್ನ ಮಗನ ಪ್ರಶ್ನೆಗೆ ಮೌನವೇ ನನ್ನ ಉತ್ತರ ವಾಯಿತು. ಇಂದು(ದಿನಾಂಕ:08.05.2021) ಅತ್ಯಂತ ಸರಳವಾಗಿ  KUNDARANAHALLI RAMESH :YOU TUBE CHANNEL   ಆರಂಭ ಮಾಡಿದ್ದೇನೆ ಎಂದು ತಿಳಿಸಲು ಹರ್ಷಿಸುತ್ತೇನೆ. ತಾವುಗಳು  SUBSCRIBE ಆಗಿ ಪ್ರೋತ್ಸಾಹಿಸಲು ಮನವಿ.