22nd December 2024
Share

TUMAKURU:SHAKTHIPEETA FOUNDATION

ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರು ಒಳ್ಳೆ ಸಲಹೆ ನೀಡಿದ್ದಾರೆ, ನಗರ ಪ್ರದೇಶಗಳಲ್ಲಿ ವಾರ್ಡ್ ಮಟ್ಟದ ಮತ್ತು ಗ್ರಾಮೀಣ ಪ್ರದೇಶಗಳ ಗ್ರಾಮ ಪಂಚಾಯಿತಿ ಮಟ್ಟದ ಹಾಗೂ ಗ್ರಾಮ ಮಟ್ಟದ ಕೋವಿಡ್ ಟಾಸ್ಕ್ ಪೋರ್ಸ್‍ಗಳು  ಯಾವ ಕೊರೊನಾ ಸೋಂಕಿತರು ಮನೆಯಲ್ಲಿ ಇರಬಹುದು, ಯಾರು ಕೋವಿಡ್ ಕೇರ್ ಸೆಂಟರ್‍ನಲ್ಲಿರ ಬೇಕು, ಯಾರು ಆಸ್ಪತ್ರೆಯಲ್ಲಿರ ಬೇಕು. ಯಾವ ಬೆಡ್ ನಲ್ಲಿರಬೇಕು ಎಂಬ ಬಗ್ಗೆ ನಿರ್ಣಯ ಮಾಡಲಿ ಡಾಕ್ಟರ್‍ಗಳು ಈ ಮಟ್ಟದಲ್ಲಿಯೇ ಪಿಲ್ಟರ್ ಮಾಡಲಿ ಅರ್ಹರಿಗೆ ಅವಕಾಶ ದೊರೆಯಲಿದೆ ಎಂಬ ಅರ್ಥದಲ್ಲಿ ಹೇಳಿರುವುದು ಓಳ್ಳೆಯ ಸಲಹೆ.

ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು ಸಹ ಮನೆಗಿಂತ ಕೋವಿಡ್ ಕೇರ್ ಸೆಂಟರ್‍ನಲ್ಲಿ ಸೋಂಕಿತರು ಇರಲಿ ಎಂದಿದ್ದಾರೆ.

ಕೇಂದ್ರ ಸರ್ಕಾರವೂ ಕೋವಿಡ್ ಟೆಸ್ಟ್ ಕಡ್ಡಾಯವಲ್ಲ ಯಾರು ಬೇಕಾದರು ಬಂದು ಕೋವಿಡ್ ಕೇರ್ ಸೆಂಟರ್‍ನಲ್ಲಿರಲಿ ಎಂದಿರುವುದು ಸೂಕ್ತವಾಗಿದೆ. ಅನುಮಾನ ಇರುವವರು, ಮನೆಯಲ್ಲಿ ವ್ಯವಸ್ಥೆ ಇಲ್ಲದೆ ಇರುವವರು ಸೆಂಟರ್ ನಲ್ಲಿರುವುದು ಓಳ್ಳೆಯದಲ್ಲವೇ?

ಪ್ರತಿ ಗ್ರಾಮ ಪಂಚಾಯತ್ ಮತ್ತು ವಾರ್ಡ್ ಮಟ್ಟದಲ್ಲಿಯೇ ಸೂಕ್ತ ಕಟ್ಟಡದಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡುವುದು ಒಳ್ಳಯದೇ ಸ್ಥಳೀಯ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿಗಳ ಅಭಿಪ್ರಾಯ ಕೇಳುವ ವ್ಯವದಾನ ಇರಬೇಕಷ್ಟೆ.