19th May 2024
Share

TUMAKURU:SHAKTHIPEETA FOUNDATIN

ಎಲ್ಲರೂ ಸಹ ಅರಿತು ಕೊಂಡು ಅವರವರ ಕೆಲಸ ಮಾಡಿದರೆ ಮಾತ್ರ ಕೋರೊನಾ ಹೆದರಲಿದೆ. ನಾಟಕ ಮಾಡಿದರೆ ಅದೂ ಸಹ ಅದರ ಆಟ ಆಡಲಿದೆ. ಎಲ್ಲಾ ಹಂತದ ವಿಕೇಂದ್ರಿಕರಣ ಮತ್ತು ಅಧಿಕಾರಿಗಳಿಗೆ ಫ್ರಿಹ್ಯಾಂಡ್ ಸೂಕ್ತ ಮದ್ದು. ಯಾರು, ಯಾರು ಏನು ಮಾಡಬೇಕು ನೋಡೊಣ.

1.ಕೇಂದ್ರ ಸರ್ಕಾರ ಹಾಗೂ ಲೋಸಭಾ ಸದಸ್ಯರು

ಕೇಂದ್ರ ಸರ್ಕಾರ ಎಲ್ಲಾ 37 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಜನಸಂಖ್ಯೆವಾರು/ಶೇಕಡವಾರು ಲಸಿಕೆ ಬಿಡುಗಡೆ ಮಾಡಬೇಕು, ಮಾಧ್ಯಮಗಳಿಗೆ ಸತ್ಯ ಹೇಳಬೇಕು. ಲಸಿಕೆ ವಿತರಣೆಗೆ ಕಾಲಮಿತಿ ನಿಗದಿ ಮಾಡಬೇಕು. ಮಂತ್ರಮಾಡಲು ಸಾಧ್ಯವಿಲ್ಲ.

ಕೇಂದ್ರ ಸರ್ಕಾರ ಎಲ್ಲಾ 37 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೋಂಕಿತರವಾರು/ ಶೇಕಡವಾರು ಆಕ್ಸಿಜಿನ್, ರೆಮ್ಡಿಸಿವಿರ್, ಔಷಧಿ, ಮಾತ್ರೆ, ಬೆಡ್ ಇತರೆ ಹಣಕಾಸನ್ನು  ಬಿಡುಗಡೆ ಮಾಡಬೇಕು, ಮಾಧ್ಯಮಗಳಿಗೆ ಸತ್ಯ ಹೇಳಬೇಕು.

ಸಂಸದರು ಅವರವರ ಜಿಲ್ಲೆಗೆ ಕೇಂದ್ರ ಸರ್ಕಾರ ನೀಡಿರುವ ನೆರವು ಘೋಷಣೆ ಮಾಡುವುದು ಮತ್ತು ಅಗತ್ಯವಿರುವ ನೆರವು ಪಡೆಯಲು ಶ್ರಮಿಸುವುದು.

2.ರಾಜ್ಯ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು.

ರಾಜ್ಯ ಸರ್ಕಾರ ಎಲ್ಲಾ 31 ಜಿಲ್ಲೆಗಳಿಗೆ ಜನಸಂಖ್ಯೆವಾರು/ಶೇಕಡವಾರು ಲಸಿಕೆ ಬಿಡುಗಡೆ ಮಾಡಬೇಕು, ಮಾಧ್ಯಮಗಳಿಗೆ ಸತ್ಯ ಹೇಳಬೇಕು.

ರಾಜ್ಯ ಸರ್ಕಾರ ಎಲ್ಲಾ 31 ಜಿಲ್ಲೆಗಳಿಗೆ ಸೋಂಕಿತರವಾರು/ ಶೇಕಡವಾರು ಆಕ್ಸಿಜಿನ್, ರೆಮ್ಡಿಸಿವಿರ್, ಔಷಧಿ, ಮಾತ್ರೆ, ಬೆಡ್ ಇತರೆ ಹಣಕಾಸನ್ನು  ಬಿಡುಗಡೆ ಮಾಡಬೇಕು, ಮಾಧ್ಯಮಗಳಿಗೆ ಸತ್ಯ ಹೇಳಬೇಕು.

ರಾಜ್ಯ ಸರ್ಕಾರ ಕೋವಿಡ್ ಟೆಸ್ಟ್‍ನ್ನು ವ್ಯಾಪಕವಾಗಿ ಮಾಡಬೇಕು, ಟೆಸ್ಟ್ ಮಾಡಿದರೆ ಜಾಸ್ತಿ ಆಗಲಿದೆ ಎಂದು ಸುಮ್ಮನಿರುವುದೇ ಮಾಹಾನ್ ತಪ್ಪು.

ಕೆಳಹಂತದ ಆಶಾ ಕಾರ್ಯಕರ್ತೆಯರು, ನರ್ಸ್‍ಗಳು, ಡಾಕ್ಟರ್‍ಗಳು, ಚಿತಾಗಾರಗಳ ನೌಕರರು, ಆಬುಲೆನ್ಸ್‍ಗಳ ಡೈವರ್‍ಗಳಿಗೆ ಹೊಣೆಗಾರಿಕೆ ಜೊತೆಗೆ ಕೆಲಸ ಒತ್ತಡ ಬೀಳದಂತೆ ತಾತ್ಕಾಲಿಕವಾಗಿ ಹೆಚ್ಚುವರಿಯಾಗಿ ನೇಮಿಸಿಕೊಳ್ಳಬೇಕು. ಅವರೆಲ್ಲರಿಗೂ ಪ್ರೋತ್ಸಾಹ, ನೆರವು ಆತ್ಮಸ್ಥೈರ್ಯ ತುಂಬುವುದು.

ಎಲ್ಲಾ ಹಂತದಲ್ಲೂ ವಿಕೇಂದ್ರಿಕರಣ ವಾಗಬೇಕು, ಕೋವಿಡ್ ಕೇರ್ ಸೆಂಟರ್, ವಾರ್ ರೂಮ್, ಕೋವಿಡ್ ಆಸ್ಪತ್ರೆ ಇತ್ಯಾದಿ,

ಆನರ ಮನೆ ಬಾಗಿಲಿಗೆ ಸೇವೆ, ಎಲ್ಲಾ ಯೋಜನೆಗಳಿಗೂ ಮೊಬೈಲ್ ಸೇವೆಗಳಿಗೆ ಆಧ್ಯತೆ ನೀಡಬೇಕು.

ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯ ಸರ್ಕಾರ, ವಿಧಾನಸಭಾ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸುವುದು. ಸರ್ಕಾರದಿಂದ ಅಗತ್ಯ ನೆರವು ಪಡೆಯುವುದು. ಸಮಸ್ಯೆಗಳಿಗೆ ಸ್ಪಂಧಿಸುವುದು.

3.ವಿಧಾನಸಭಾ ಸದಸ್ಯರು.

ಗ್ರಾಮ ಮಟ್ಟದ ಟಾಸ್ಕ್ ಪೋರ್ಸ್ , ಗ್ರಾಮ ಪಂಚಾಯಿತಿ ಮಟ್ಟದ ಟಾಸ್ಕ್ ಪೋರ್ಸ್ ಮತ್ತು ವಾರ್ಡ್ ಟಾಸ್ಕ್ ಪೋರ್ಸ್ ಚುರುಕು ಗೊಳಿಸಿ, ಪ್ರತಿ ದಿನದ ಸಭೆಗಳ ವರದಿ ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವುದು. ಕೊರತೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡುವುದು. ಸೋಂಕಿತರನ್ನು ಮತ್ತು ವಾರಿಯರ್ಸ್‍ಗಳನ್ನು  ಆನ್‍ಲೈನ್ ಮೂಲಕ ಸಂಪರ್ಕಿಸಿ ಆತ್ಮಸ್ಥೈರ್ಯ ತುಂಬುವುದು. ಅರ್ಹರಿಗೆ ನೆರವು ದೊರಕಿಸುವುದು.

4.ಮಾಧ್ಯಮ 

ಪಾರದರ್ಶಕತೆ ಬಗ್ಗೆ ಒತ್ತು, ಸರ್ಕಾರಗಳ, ವಿರೋಧ ಪಕ್ಷಗಳ ಹಂತದ ಸರಿ ತಪ್ಪುಗಳನ್ನು ಎತ್ತಿ ಹಿಡಿಯುವುದರ ಜೊತೆಗೆ, ಸೋಕಿತರಿಗೆ ಮತ್ತು ವಾರಿಯರ್ಸ್‍ಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಹೆಚ್ಚು ಮಾಡಬೇಕು.

5.ಪರಿಣಿತರು.

ಹಾಲಿ ಇರುವ ಸ್ಥಿತಿ ಮತ್ತು ಮುಂದೆ ಬರಬಹುದಾದ ಗಂಡಾಂತರಗಳಿಗೆ, ಪರಿಹಾರ ಹೇಗೆ ಎಂಬ ಬಗ್ಗೆ ಸರ್ಕಾರಕ್ಕೆ ವರದಿ ನೀಡುವುದು ಮತ್ತು ಮಾಧ್ಯಮಗಳಿಗೆ ಬಿಡುಗಡೆ ಮಾಡುವುದು.

6.ಜನತೆ

ಸೋಂಕು ಮುಚ್ಚಿಕೊಳ್ಳದೆ, ಸುಸ್ತು ಆಗುವವರೆಗೂ ಮನೆಯಲ್ಲಿ ಇರದೆ, ಸೋಂಕು ಇರುವ ಬಗ್ಗೆ ಸತ್ಯ ಹೇಳುವುದು. ವೈದ್ಯರು ಹೇಳಿದ ಹಾಗೆ ನಡೆದು ಕೊಳ್ಳುವುದು. ಧೈರ್ಯವಾಗಿರುವುದು, ಹೆದರಿಕೆ ಒದ್ದೊಡಿಸುವುದು. ಅಕ್ಕ-ಪಕ್ಕದ ಮನೆಯವರಿಗೂ ಮುಚ್ಚಿಡಬಾರದು.

7.ದಾನಿಗಳು

 ಮಠ ಮಾನ್ಯಗಳು, ಕೈಗಾರಿಕೋಧ್ಯಮಿಗಳು, ಉದ್ಯಮಿಗಳು, ಸಿಎಸ್‍ಆರ್.ಫಂಡ್, ದಾನಿಗಳು, ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳು, ದೇವಾಲಯಗಳು, ಚರ್ಚ್ ಮಸೀದಿ ಇತ್ಯಾದಿ ಸರ್ಕಾರದ ಜೊತೆ ಸೇರಿ ನಗರ ಪ್ರದೇಶಗಳಲ್ಲಿ ಬಡಾವಣೆವಾರು ಮತ್ತು ವಾರ್ಡ್‍ವಾರು ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಿ, ಹೋಂ ಐಸೋಲೇಷನ್ ಇರುವವರನ್ನು ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಇರಲು ಪ್ರೋತ್ಸಾಹಿಸುವುದು. ಆತ್ಮಸ್ಥೈರ್ಯ ತುಂಬುವುದು. ಸೋಂಕಿತರಿಗೆ ಒಳ್ಳೆ ಆತಿಥ್ಯ ಮಾಡುವುದು. ಸೋಂಕಿತರು ಮನೆಯಲ್ಲಿ ಇರದೆ ಕೋವಿಡ್ ಕೇರ್ ಸೆಂಟರ್‍ಗೆ ತಾನಾಗೆ ಬರುವಂಥಹ ವಾತಾವರಣ ಸೃಷ್ಟಿ ಮಾಡಬೇಕು. ಊಟೋಪಚಾರ, ಕಲೆ, ಸಂಸ್ಕøತಿ, ಯೋಗ, ಚಿಕಿತ್ಸೆ, ಶುಚಿತ್ವ, ಆತ್ಮೀಯತೆ, ಪ್ರೀತಿ, ವಾತ್ಸಲ್ಯದ ತವರಾಗಬೇಕು.

8.ವಿರೋಧ ಪಕ್ಷಗಳು

ಎಲ್ಲಾ ಹಂತದ ಯೋಜನೆಗಳ ಬಗ್ಗೆ ವಿಶ್ಲೇಷಣೆ ಮಾಡುವುದು, ತಾರತಮ್ಯಗಳಾಗಿದ್ದಲ್ಲಿ ಜನತೆಗೆ ಮನವರಿಕೆ ಮಾಡುವುದು. ವಾರಿಯರ್ಸ್‍ಗಳಿಗೆ ಮತ್ತು ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವುದು. ಸರ್ಕಾರಗಳಿಗೆ ರಚನಾತ್ಮಕ ಸಲಹೆ ನೀಡುವುದು. ಕೊರೊನಾ ವಿಚಾರದಲ್ಲಿ  ರಾಜಕೀಯ ಮಾಡುವುದನ್ನು ತಕ್ಷಣ ನಿಲ್ಲಿಸುವುದು.

9.ನ್ಯಾಯಾಲಯ

ಕರ್ನಾಟಕ ರಾಜ್ಯದ ಹೈಕೋರ್ಟ್ ಈಗ ಏನು ಮಾಡುತ್ತಿದೆಯೋ ಅದನ್ನು ಮುಂದುವರೆಸಿ ಕೊಂಡು ಹೋಗುವುದು.