22nd November 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯಲ್ಲಿ, ಈ ವರ್ಷ ಮಗುವಿಗೊಂದು ಮರ-ಶಾಲೆಗೊಂದು  ವನ’ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿರುವ ಪ್ರತಿಯೊಬ್ಬ ಮಗುವಿಗೂ ಒಂದೊಂದು ಗಿಡ ಹಾಕುವ ಆಂದೋಲನದ ಬಗ್ಗೆ ನಿರ್ಣಯ ಕೈ ಗೊಳ್ಳಲಾಗಿದೆ.

ಅರಣ್ಯ ಇಲಾಖೆಯ ಡಿಎಫ್‍ಓ ಮತ್ತು ಸಾಮಾಜಿಕ ಅರಣ್ಯ ಇಲಾಖೆಯ ಡಿಎಫ್‍ಓ ಗಿಡಗಳನ್ನು ಸರಬರಾಜು ಮಾಡುವ ಭರವಸೆ ನೀಡಿದ್ದಾರೆ.

ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐಗಳು ಶಾಲಾವಾರು, ವಿದ್ಯಾರ್ಥಿವಾರು ಗಿಡಗಳ ಪಟ್ಟಿ ಮಾಡಿ ಅರಣ್ಯ ಇಲಾಖೆಗೆ ಈಗಾಗಲೇ ಸಲ್ಲಿಸಿದ್ದಾರೆ.

ಗ್ರಾಮ ಪಂಚಾಯಿತಿಗಳು ನರೇಗಾ ಯೋಜನೆಯಡಿಯಲ್ಲಿ ಶಾಲಾ ಮಕ್ಕಳ ಜಾಬ್ ಕಾರ್ಡ್ ಇರುವ ಪೋಷಕರಿಗೆ ಕೆಲಸ ನೀಡುವ ಮೂಲಕ ಗುಂಡಿಗಳನ್ನು ತೆಗೆಯಲು ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.

ದಾನಿಗಳು ಗೊಬ್ಬರ ಮತ್ತು ಗಿಡಗಳಿಗೆ ಮಣ್ಣು ಹಾಕ ಬಹುದು.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ಥಳೀಯ ಸಂಸ್ಥೆಗಳು ಅಗತ್ಯವಿರುವ ಕಡೆ ಗುಂಡಿ ತೆಗೆಯಲು ವ್ಯವಸ್ಥೆ ಮಾಡ ಬೇಕಾಗುವುದು.

ಬೀಟ್ ಪೊಲೀಸ್‍ಗಳ ಮೂಲಕ ಅವರವರ ಬೀಟ್ ವ್ಯಾಪ್ತಿಯಲ್ಲಿ ಗಿಡ ಹಾಕಲು ಕೈಗೊಂಡಿರಯವ ಕ್ರಮಗಳ ಬಗ್ಗೆ ಹಸಿರು ಪೋಲೀಸ್ ಮಿತ್ರರಾಗಿ ಸೇವೆ ಸಲ್ಲಿಸಲು ಜಿಲ್ಲೆಯ ಎಸ್.ಪಿ.ರವರಲ್ಲಿ ಮನವಿ ಮಾಡಲಾಗುವುದು.

ಪ್ರತಿಯೊಂದು ಮಗುವ ಹಾಕಿದ ಗಿಡಗಳನ್ನು ಗಿಡ ಸಹಿತ ಪೋಟೋ ತೆಗೆದು ಅಫ್ ಲೋಡ್ ಮಾಡಲು NIC, NRDMS.ICCC & KSRSAC  ಕ್ರಮಕೈಗೊಳ್ಳಲು ಸೂಚಿಸಲಾಗಿದೆ.

ಸೋಶಿಯಲ್ ಮೀಡಿಯಾಗಳಲ್ಲಿ ಮುಂದಿನ ತಿಂಗಳ ಪರಿಸರ ದಿನಾಚರಣೆ ಅಂಗವಾಗಿ ಗಿಡ ಹಾಕಿ, ಊರು ಬಿಟ್ಟವರೆಲ್ಲಾ ಊರು ಸೇರಿದ್ದೀರಾ ಎಂಬ ಚರ್ಚೆ ನಡೆಯುತ್ತಿದೆ.

ಈ ಆಂದೋಲನವನ್ನು ಕೊರೊನಾ ಹಸಿರು ಕ್ರಾಂತಿ’ ಯಾಗಿ ಆಚರಿಸಲು ಆಸಕ್ತರೆಲ್ಲರೂ ನಿಮ್ಮ ಗ್ರಾಮದ ಶಾಲೆಯ ಉಪಾದ್ಯಾಯರೊಂದಿಗೆ  ಸಂಪರ್ಕ ಮಾಡಿ, ಸಹಕರಿಸಿ.

‘ಪರಿಸರ ದಿನದಂದು ಸಾಮೂಹಿಕವಾಗಿ ಒಂದೇ ದಿವಸ ಜಿಲ್ಲಾಧ್ಯಾಂತ  ಗಿಡ ಹಾಕುವ ಮೂಲಕ ಕೊರೊನಾ ಸಮಯದಲ್ಲೂ ಹಸಿರು ಆಂದೋಲನವನ್ನು ನಿಮ್ಮೂರಿನ ಮಕ್ಕಳ ಮೂಲಕ ರೂಪಿಸೋಣ.’