21st November 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆಗೆ ಹೇಮಾವತಿ ಲಿಂಕಿಂಗ್ ಕೆನಾಲ್ ಅಥವಾ ಹೇಮಾವತಿ ಎಕ್ಸ್‍ಪ್ರೆಸ್  ಕೆನಾಲ್ ಮರಣ ಶಾಸನ ಬರೆಯುವುದರಲ್ಲಿ ಎರಡು ಮಾತಿಲ್ಲ. ಲೋಕಸಭಾ ಚುನಾವಣೆಗೂ ಮುನ್ನ ಜಿಲ್ಲೆಯ ಬೃಹತ್ ಸುದ್ದಿ ಈ ವಿಚಾರ.

ಮಾಜಿ ಪ್ರಧಾನಿ ಶ್ರೀ ದೇವೆಗೌಡರವರ  ಸೋಲಿಗೆ ಇದು ಒಂದು ಪ್ರಮುಖ ವಿಷಯವಾಗಿತ್ತು ಎಂದರೆ ಅತಿಶಯೋಕ್ತಿಯಲ್ಲ. ಚುನಾವಣೆ ಗೆದ್ದ ಮೇಲೆ ಬಿಜೆಪಿಯ ಧುರೀಣರು ಈ ವಿಚಾರ ಮರೆತ ಹಾಗಿದೆ. ವಿರೋಧ ಪಕ್ಷದ ನಾಯಕರಾಗಿದ್ದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಸಿದ್ಧಗಂಗಾ ಮಠಕ್ಕೆ ಬಂದು ಹೇಮಾವತಿ ನಾಲೆಯ ವೀಕ್ಷಣೆ ಮಾಡುವಾಗಲೇ ಮತ್ತೊಮ್ಮೆ ಮುಖ್ಯಮಂತ್ರಿಯ ಆಗುವ ಭಾಗಿಲು ತೆರೆಯಿತು’.

ಇಂದು(28.05.2021) ಸಹ ಸಿದ್ಧಗಂಗಾ ಮಠಕ್ಕೆ ಬರುತ್ತಿದ್ದಾರೆ. ಬಹತೇಕ ಕಡತಕ್ಕೆ ಸಹಿ ಹಾಕಿ ಬರುತ್ತಾರೆ ಅಥವಾ ಇಲ್ಲಿ ಬಹಿರಂಗವಾಗಿ ಹೇಳಿ ನಂತರ ಸಹಿ ಹಾಕುತ್ತಾರೆ ಎಂಬ ದೃಢವಾದ ನಂಬಿಕೆ ನನ್ನದಾಗಿದೆ. ಏಕೆಂದರೆ ಶ್ರೀ ಬಿ.ಎಸ್.ಯಡಿಯೂರಪ್ಪನವರ ರಾಜಕೀಯ ಪಟ್ಟುಗಳಲ್ಲಿ ಶೇ 0.1 ರಷ್ಟು ನನಗೂ ತಿಳಿದಿದೆ.’ 

  ಪ್ರಸ್ತುತ ಕೊರೊನಾ ವಿಷಯ ಪ್ರಮುಖವಾಗಿದ್ದರೂ ಯಾವುದೇ ಅಭಿವೃದ್ಧಿ ಯೋಜನೆಗಳು ನಿಂತಿಲ್ಲ, ನಿಲ್ಲುವುದೂ ಇಲ್ಲ. ಸುಮಾರು ರೂ 614 ಕೋಟಿಯ ಹೇಮಾವತಿ ಲಿಂಕಿಂಗ್ ಕೆನಾಲ್ ರದ್ಧು ಮಾಡಿ, ರೂ 550 ಕೋಟಿ ಯೋಜನೆಯ  ಹೇಮಾವತಿ ತುಮಕೂರು ನಾಲಾ ಯೋಜನೆಯ 70 ನೇ ಕೀಮಿನಿಂದ 169 ನೇ ಕೀಮಿ ವರೆಗೆ ನಾಲಾ ಆಧುನೀಕರಣಕ್ಕೆ ಸಚಿವ ಸಂಪುಟದ ಅನುಮೋದನೆ ನೀಡಿರುವುದಕ್ಕೆ ಶ್ರೀ ಬಿ.ಎಸ್.ಯಡಿಯೂರಪ್ಪನವರು, ಮಾಜಿ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರು, ಶ್ರೀ ಜಿ.ಎಸ್.ಬಸವರಾಜ್‍ರವರಿಗೂ, ಶ್ರೀ ಜೆ.ಸಿ.ಮಾಧುಸ್ವಾಮಿಯವರಿಗೂ ಹಾಗೂ ಸ್ಪಂಧಿಸಿದ ಜಿಲ್ಲೆಯ ಪಕ್ಷಾತೀತವಾಗಿ ಎಲ್ಲಾ ಚುನಾಯಿತ ಜನಪ್ರತಿನಿಧಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಲೇ ಬೇಕು.

ಸಚಿವ ಸಂಪುಟದ ಅನುಮೋದನೆಯಾಗಿದ್ದರೂ ಟೆಂಡರ್ ಕರೆಯದೆ ಇರುವುದು, ಡಿಕೆ ಬ್ರದರ್ಸ್ ಕೈವಾಡವಾ?’ ಎಂಬ ಅನುಮಾನ ಜಿಲ್ಲೆಯ ಜನತೆಗೆ ಇದೆ. ಅದೇನೆ ಇರಲಿ ಅದಕ್ಕೂ ನಮಗೂ ಸಂಬಂಧವಿಲ್ಲ. ಹೇಮಾವತಿ ಭಾಗದ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‍ರವರು, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು. ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಸುರೇಶ್‍ಗೌಡರವರು, ಶಾಸಕರುಗಳಾದ ಶ್ರೀ ಬಿ.ಸಿ.ನಾಗೇಶ್‍ರವರು, ಶ್ರೀ ಜಿ.ಬಿ.ಜ್ಯೋತಿಗಣೇಶ್‍ರವರು, ಶ್ರೀ ಮಸಾಲೆ ಜಯರಾಮ್‍ರವರು, ಶ್ರೀ ರಾಜೇಶ್‍ಗೌಡರವರು, ವಿಧಾನ ಪರಿಷತ್ ಸದಸ್ಯರುಗಳಾದ ಶ್ರೀ ನಾರಾಯಣಸ್ವಾಮಿರವರು, ಶ್ರೀ ಚಿದಾನಂದ್ ಗೌಡರವರು ಸೇರಿದಂತೆ ಡಜನ್ ಗಟ್ಟಲೇ ಪ್ರಭಾವಿ ನಾಯಕರುಗಳಿದ್ದರೂ ಟೆಂಡರ್ ಕರೆಯದೇ ಇರುವುದರಿಂದ  ಜಿಲ್ಲೆಯ ಪಾಲಿಗೆ ಇವರು ಖಳನಾಯಕರಾಗುವುದು ಕಟು ಸತ್ಯ’.

ಹಾಗೆಯೇ ತುಮಕೂರು ಜಿಲ್ಲೆಯ ಎಲ್ಲಾ ಕೆರೆಗಳಿಗೆ ನದಿ ನೀರಿನಿಂದ ತುಂಬಿಸಲು ಯೋಜನೆ ರೂಪಿಸದೆ, ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರು ಕೆರೆಗಳಿಗೆ ಮಾತ್ರ ಯೋಜನೆ ಮಂಜೂರಾತಿ ಪಡೆದಿರುವುದು ಬೂದಿ ಮುಚ್ಚಿದ ಕೆಂಡಂದತಿದೆ’

‘ಹೇಮಾವತಿ ಪ್ರವಾಹದ ನೀರು ಅಥವಾ ಕುಮಾರಧಾರ ನದಿ ನೀರನ್ನು ಎತ್ತಿನಹೊಳೆ ಯೋಜನೆಗೆ ಅಥವಾ ಹೇಮಾವತಿ ಕಾಲುವೆಯ ಮೂಲಕ ನೀರು ಹರಿಸಿ ಜಿಲ್ಲೆಯ ಎಲ್ಲಾ ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆ ಮಂಜೂರು ಮಾಡದಿದ್ದರೂ ಅಷ್ಟೆ ಘೋರ ತಪ್ಪಾಗಲಿದೆ. ಇಂದಿನ ಶ್ರೀ ಬಿ.ಎಸ್.ಯಡಿಯೂರಪ್ಪನವರ ತುಮಕೂರು ಭೇಟಿ ಜಿಲ್ಲೆಯ ಪಾಲಿಗೆ ವರದಾನವಾಗ ಬಹುದು ಕಾದು ನೋಡೋಣ?’

 ‘ಜಿಲ್ಲೆಯ ಬಿಜೆಪಿ ನಾಯಕರುಗಳು ಚಕರಾವೆತ್ತದೆ ಸುಮ್ಮನಿದ್ದರೂ, ಸಿದ್ಧಗಂಗಾ ಶ್ರೀಗಳ ಗದ್ದುಗೆಯಲ್ಲಿ ಹಿರಿಯ ಶ್ರೀಗಳು ಸುಮ್ಮನೆ ಇರುವುದಿಲ್ಲ, ಶ್ರೀ ಬಿ.ಎಸ್.ಯಡಿಯೂರಪ್ಪನವರ ಗಮನ ಸೆಳೆಯಬಹುದು ಎಂಬ ಆಶಾಭಾವನೆ ಜಿಲ್ಲೆಯ ಜನತೆಯದ್ದಾಗಿದೆ’

ಇವರು ಮಂಜೂರು ಮಾಡದೇ ಇದ್ದಲ್ಲಿ ತುಮಕೂರಿನ ಪಾಲಿಗೆ ಒಂದು ದೊಡ್ಡ ದುರಂತವಾಗಲಿದೆ. ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಈ ಯೋಜನೆಯ ಮಹತ್ವ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಮತ್ತೆ ಹೇಮಾವತಿ ಲಿಂಕಿಂಗ್ ಕೆನಾಲ್ ಆದರೆ. ಜಿಲ್ಲೆಯ ಜನತೆ ಪಾಲಿಗೆ ಮರಣ ಶಾಸನದ ಮುನ್ನುಡಿ. ಚಿನ್ನದ ಸೂಜಿ ಎಂದು ಕಣ್ಣಿಗೆ ಚುಚ್ಚಿ ಕೊಳ್ಳಲು ಸಾಧ್ಯವಿಲ್ಲ ಬೀದಿಗೆ ಇಳಿಯಲೇ ಬೇಕು’ ಎಂಬುದು ಬಹುತೇಕ ಬಿಜೆಪಿ ನಾಯಕರ ಮತ್ತು ಕಾರ್ಯಕರ್ತರ ಅಭಿಪ್ರಾಯವೂ ಆಗಿದೆಯಂತೆ.

               -ಕುಂದರನಹಳ್ಳಿ ರಮೇಶ್.