15th September 2024
Share

TUMAKURU:SHAKTHIPEETA FOUNDATION

ಕಾಂಗ್ರೆಸ್ ಕೋವಿಡ್ ಲಸಿಕೆಗೆ ರೂ 100 ಕೋಟಿ ಹಣ ನೀಡುತ್ತೇವೆ, ತೆಗೆದುಕೊಳ್ಳಿ ಎಂಬ ಡಿಜಿಟಲ್ ಆಂದೋಲನವನ್ನು ರೂಪಿಸಿದೆ. ರಾಜಾಹುಲಿ ಕಾಂಗ್ರೆಸ್ ನವರಿಗೆ ಅಲ್ಲ  ಅಕ್ಷರಷಃ ಬಿಜೆಪಿಯ ಹಿತಶತ್ರುಗಳಿಗೂ ಮುಟ್ಟಿ ನೋಡಿಕೊಳ್ಳುವ ಹಾಗೆ ಬರೊಬ್ಬರಿ ರೂ 6769 ಕೋಟಿ ವೆಚ್ಚದ ಜಲಜೀವನ್ ಮಿಷನ್ ಯೋಜನೆಗೆ, ಅಂದರೆ ಮನೆ ಮನೆಗೆ ನಲ್ಲಿ ನೀರು ಸರಬರಾಜು ಮಾಡುವ ಕಾಮಗಾರಿಗೆ ಸಚಿವ ಸಂಪುಟದ ಅನುಮೋದನೆ ನೀಡುವ ಮೂಲಕ ಒಂದು ‘ಅಭಿವೃದ್ಧಿ ಬಾಂಬ್’ ಹಾಕಿದ್ದಾರೆ ಎಂದರೆ ತಪ್ಪಾಗಲಾರದು.

ಈ ಯೋಜನೆಯನ್ನು ಯಾವ ಜಿಲ್ಲೆಗೆ ರೂಪಿಸಬೇಕು ಎಂಬ ಬಗ್ಗೆ ಬಹಳ ಬುದ್ದಿವಂತಿಕೆಯಿಂದ ಒಂದು ತಂತ್ರವನ್ನೇ ರೂಪಿಸಿದ್ದಾರೆ, ಮುಖ್ಯಮಂತ್ರಿಯವರ ತವರು ಜಿಲ್ಲೆ, ಮುಖ್ಯಮಂತ್ರಿಯವರ ಹುಟ್ಟಿದ ಜಿಲ್ಲೆ ಮತ್ತು ಮುಖ್ಯಮಂತ್ರಿಯಾಗ ಬೇಕು ಎಂದು ಕನಸು ಕಾಣುವವರ ಜಿಲ್ಲೆಗೂ’ ಹಣ ಹಂಚಿದ್ದು ಯಾರು ಮಾತನಾಡುವ ಹಾಗೆಯೂ ಇಲ್ಲ.

ಅಷ್ಟೆ ಅಲ್ಲ ಇನ್ನೂ ಮುಂದಿದೆ ಮಾರಿ ಹಬ್ಬ ಎನ್ನುವಂತೆ, ಮುಂದಿನ ಸರದಿಯಲ್ಲಿ ಇನ್ನೂ ಯಾವ ಜಿಲ್ಲೆಗೆ ಮಂಜೂರು ಮಾಡಬೇಕು ಎಂಬ ಬಗ್ಗೆ ಪಟ್ಟಿ ಸಿದ್ಧವಾಗುತ್ತಿದೆಯಂತೆ. ಶ್ರೀ ಹೆಚ್.ಡಿ. ಕುಮಾರಸ್ವಾಮಿಯವರು ಸಾಲಮನ್ನಾ’ ಮಾಡಿ, ಶ್ರೀ ಸಿದ್ಧರಾಮಯ್ಯನವರು ಭಾಗ್ಯಗಳ’ ಕೊಡುಗೆ ನೀಡಿದರೆ, ಶ್ರೀ ಬಿ.ಎಸ್.ಯಡಿಯೂರಪ್ಪನವರು ಎಲ್ಲರಿಗೂ ನೀರು ಕುಡಿಸುವ ಮೂಲಕ  ಅವರ ವರಸೆ’ ತೋರಿದ್ದಾರೆ ಎಂದು ಅವರ ಅಭಿಮಾನಿಗಳು ಹಿಗ್ಗಿ ಹೋಗಿದ್ದಾರೆ. ದುಡ್ಡಿಲ್ಲ, ದುಡ್ಡಿಲ್ಲ ಎನ್ನುತ್ತಿರುವವರಿಗೆ ದುಡ್ಡು ಯಾವುದು’ ಎಂದು ಹುಡುಕುತ್ತಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಈ ಯೋಜನೆಗೆ ಪ್ರಧಾನಿ ಶ್ರೀ ನರೇಂದ್ರಮೋದಿಯವರು ಮತ್ತು ಮುಖ್ಯ ಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪನವರು ಹಣ ನೀಡಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪನವರು ನನ್ನ ಖಾತೆ ಏನು ಕಡಿಮೆ ಇಲ್ಲ ಎಂದು ಅಬ್ಬರಿಸುವ ಕಾಲ ಬಂದಿದೆ. ವಿರೋಧ ಪಕ್ಷಗಳ ವಿರೋಧದ ತಂತ್ರಗಾರಿಕೆ’ ಕಾದು ನೋಡಬೇಕು.

ಕೇಂದ್ರದ ಮಲತಾಯಿ ಧೋರಣೆ? ರಾಜ್ಯದ ಮಲತಾಯಿ ಧೋರಣೆ? ವಿರೋಧ ಪಕ್ಷಗಳ ಅಬ್ಬರ!!