12th September 2024
Share

TUMAKURU:SHAKTHI PEETA FOUNDATION

ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ತಾವೇ ಸ್ವಯಂ ಆಗಿ ಕೆಲವು ನಿರ್ಧಿಷ್ಠ ಅಭಿವೃದ್ಧಿ ಯೋಜನೆಗಳಿಗೆ ಕಾಲಮಿತಿ ಗಡುವು ಹಾಕಿಕೊಂಡಿದ್ದಾರೆ. ಯಾರೇ ಏನೇ ಕೂಗಾಡಿದರೂ ಅವರು ಅವರ ನಿಲುವಿನಿಂದ ಹಿಂದೆ ಸರಿದಿಲ್ಲ. ಆನೆ ನಡೆದಿದ್ದೇ ದಾರಿ’ ಎಂದು ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ನೇಚರ್ ಮತ್ತೆ ಹೊಡೆತ ಕೊಟ್ಟರೆ ಬದಲಾಗ ಬಹುದೇನೋ?

ಮೋದಿಯವರ ಟಾರ್ಗೆಟ್ -2022 ಕ್ಕೆ ಮತ್ತೆ ಈಗ ಹೊಸದಾಗಿ  ಕೊರೊನಾ ಲಸಿಕೆಯನ್ನು ದೇಶವಾಸಿಗಳಿಗೆ ಹಾಕಿ ಪೂರ್ಣಗೊಳಿಸಲು ಡಿಸೆಂಬರ್-2021 ಕಾಲಮಿತಿ ಗಡುವನ್ನು ಪುನಃ ಅವರೇ ಹಾಕಿಕೊಂಡಿದ್ದಾರಂತೆ. ಏನೇ ಕಷ್ಟ ಬರಲಿ ವೇಳೆಗೆ ದೇಶದ ಪ್ರತಿಯೊಬ್ಬರಿಗೂ ಲಸಿಕೆ ಹಾಕಲೇ ಬೇಕು ಎಂಬ ದೃಢ ನಿಲುವಿನಿಂದ ಹೆಜ್ಜೆ ಹಾಕುತ್ತಿದ್ದಾರೆ.’

2014 ರಲ್ಲಿ ಮೋದಿಯವರು ದೇಶದ ಪ್ರಧಾನಿಯಾದರೂ, ಆಗಿನ್ನು ಯಾರು ಅವರನ್ನು ಲೆಕ್ಕಕೊಡಿ ಎಂದು ಕೇಳಿರಲಿಲ್ಲ. ಆದರೂ ಹಿಂದಿನ ಪ್ರಧಾನಿ ಶ್ರೀ ಮನಮೋಹನ್‌ಸಿಂಗ್‌ರವರು ಲೆಕ್ಕ ನೀಡಲು ಮಾಹಿತಿ ಹಕ್ಕು ಅಧಿನಿಯಮ ಜಾರಿಗೊಳಿಸಿದರು. 2016 ರಲ್ಲಿ ಮೋದಿಯವರು ದಿಶಾ ಸಮಿತಿ ಮಾಡಿ, ಕೇಂದ್ರದಿಂದ ಬಿಡುಗಡೆ ಮಾಡಿದ ಅನುದಾನವನ್ನು ರಾಜ್ಯ ಮಟ್ಟದಲ್ಲಿ ಮಾನ್ಯ ಮುಖ್ಯ ಮಂತ್ರಿಯವರು, ಜಿಲ್ಲಾ ಮಟ್ಟದಲ್ಲಿ ಲೋಕಸಭಾ ಸದಸ್ಯರು ಪರಿಶೀಲನೆ ಮಾಡಿ, ದುರುಪಯೋಗವಾಗಿದ್ದರೆ ಶಿಕ್ಷೆಗೆ ಶಿಪಾರಸ್ಸು ಮಾಡಿ, ಹೊಸದಾಗಿ ಏನಾದರೂ ಅಗತ್ಯವಿದ್ದರೆ ಪ್ರಸ್ತಾವನೆ ಕಳುಹಿಸಿ, ಜನತೆಗೆ ಲೆಕ್ಕಕೊಡಿ’ ಎಂದು ಆದೇಶ ನೀಡಿದ್ದಾರೆ.

ಅಷ್ಟೆ ಅಲ್ಲ ಈ ಸಮಿತಿಗೆ ರಾಜ್ಯದ ಸರ್ವ ಪಕ್ಷಗಳ ಚುನಾಯಿತ ಸದಸ್ಯರು ಇರಬೇಕು. ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದಲ್ಲಿ ಅವರಲ್ಲಿ ಒಬ್ಬರೂ ಇರಬೇಕು, ಅಧಿಕಾರಿಗಳು, ಪರಿಣಿತರು ಇರಬೇಕು ಎಲ್ಲರೂ ಕುಳಿತು ಕೇಂದ್ರ ಸರ್ಕಾರ ನೀಡಿದ ಹಣವನ್ನು ಸಕಾಲದಲ್ಲಿ ಪಾರದರ್ಶಕವಾಗಿ, ದುರುಪಯೋಗವಾಗದಂತೆ ವ್ಯಯಮಾಡಿ ’ಮತದಾರ ಪ್ರಭುಗಳಿಗೆ ಕನಿಷ್ಟ ಮೂರು ತಿಂಗಳಿಗೊಮ್ಮೆ ಲೆಕ್ಕಕೊಡಿ ಎಂದಿದ್ದಾರೆ’.

ದೇಶದ ವಿವಿಧ ರಾಜ್ಯಗಳ ವಿರೋಧ ಪಕ್ಷಗಳ ಮುಖ್ಯ ಮಂತ್ರಿಗಳು, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ವಿರೋಧ ಪಕ್ಷಗಳು ಮೋದಿಯವರೇ ಮಲತಾಯಿ ಧೋರಣೆ ಮಾಡುತ್ತಿದ್ದೀರಿ ಕೇಂದ್ರದ ಹಣದ ಲೆಕ್ಕಕೊಡಿ ಎನ್ನುತ್ತಿದ್ದಾರೆ.’

  ಲೆಕ್ಕ ಕೊಡುವ ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ, ಇಡೀ ದೇಶದಲ್ಲಿ ಗೆದ್ದಿರುವ ಯಾವುದೇ ಪಕ್ಷದ ಸಂಸದರು, ರಾಜ್ಯ ಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು, ನಗರ ಮತ್ತು ಗ್ರಾಮೀಣ ಪ್ರದೇಶದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಇದ್ದಾರೆ. ನಿಮಗೆ ಅಧಿಕಾರ ಕೊಟ್ಟಿದ್ದರೂ ದಿಶಾ ಸಮಿತಿ ಸಭೆಗೆ ಭಾಗವಹಿಸಿ, ತಪಾಸಣೆ ಮಾಡದೆ ಮೊದಿಯವರೇ ಲೆಕ್ಕಕೊಡಿ ಎನ್ನಲು ನಾಚಿಕೆ ಆಗುವುದಿಲ್ಲವೇ?’

ಕೇಂದ್ರದ ಅನುದಾನದ ಲೆಕ್ಕ ಕೊಡುವ ಸಮಿತಿಗೆ ನಿಮ್ಮನ್ನೇ ಸದಸ್ಯರನ್ನಾಗಿ ಮಾಡಿದ್ದಾರೆ. ಲೆಕ್ಕ ಕೇಳಲು ನಾಚಿಕೆ ಆಗುವುದಿಲ್ಲವೇ? ಕೇಂದ್ರದಿಂದ ಪತ್ರದ ಮೇಲೆ ಪತ್ರ ಬರುತ್ತದೆ, ದಿಶಾ ಸಮಿತಿ ಸಭೆ ಮಾಡಿ ವರದಿ ಸಲ್ಲಿಸಿ ಎಂದು, ದಿಶಾ ಸಮಿತಿ ಸಭೆ ನಡೆಸಲು, ಊಟ ತಿಂಡಿಗೂ ಕೇಂದ್ರ ಸರ್ಕಾರವೇ ಅನುದಾನ ನೀಡುತ್ತದೆ. ಸಭೆ ನಡೆಸುವ ಯೋಗ್ಯತೆ ಇಲ್ಲದವರಿಗೆ ಮೋದಿಯವರು ಏಕೆ ಉತ್ತರಿಸ ಬೇಕು?’ ಬಿಜೆಪಿಯವರಿಗೂ ಸೇರಿದಂತೆ ಇದು ಸರ್ವಪಕ್ಷಗಳ ಚುನಾಯಿತ ಸದಸ್ಯರಿಗೂ ಅನ್ವಯಿಸುತ್ತದೆ.

ಮುಖ್ಯ ಮಂತ್ರಿಯವರು ಅಥವಾ ಲೋಕಸಭಾ ಸದಸ್ಯರು ದಿಶಾ ಸಮಿತಿ ಸಭೆ ನಡೆಸದಿದ್ದರೇ, ಸದಸ್ಯರಾಗಿರುವ ನೀವೂಗಳು ಧರಣೆ ಮಾಡಿ, ನಿಮ್ಮ ಹಕ್ಕನ್ನು ಚಲಾಯಿಸಿ, ನ್ಯಾಯಾಲಯಕ್ಕೆ ಹೋಗಿ, ಮಾಧ್ಯಮಗಳಲ್ಲಿ ಮಲತಾಯಿ ಧೋರಣೆ ಎಂದರೆ ನಂಬ ಬೇಕಾ? ಅಂಕಿ ಅಂಶ ನೀಡುವ ಮೂಲಕ ಮಲತಾಯಿ ಧೋರಣೆ ಬಗ್ಗೆ ವಿಶ್ಲೇಷಣೆ ಮಾಡಿದರೆ ನಿಮಗೂ ಗೌರವ ಇರುತ್ತದೆ.’

2022 ರೊಳಗೆ ದೇಶದ ಎಲ್ಲರಿಗೂ ಸೂರು, 2023 ರೊಳಗೆ ಮನೆ ಮನೆಗೆ ನಲ್ಲಿ ನೀರು, 2022 ರೊಳಗೆ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರ ಸ್ವತ್ತಿಗೂ ಆಸ್ತಿಕಾರ್ಡ್, 2019 ರೊಳಗೆ ದೇಶದ ಪ್ರತಿಯೊಂದು ಮನೆಗೂ ಹಾಗೂ ಪ್ರತಿಯೊಂದು ಗ್ರಾಮಕ್ಕೂ ವಿದ್ಯುತ್ ಸರಬರಾಜು, 2022 ರೊಳಗೆ ರೈತರ ಆದಾಯ ದ್ವಿಗುಣ, 2019 ರೊಳಗೆ ದೇಶದ ಎಲ್ಲಾ ರೈಲ್ವೇ ಸೇತುವೆಗಳಿಗೆ ರೈಲ್ವೆ ಮೇಲು ಅಥವಾ ಕೆಳ ಸೇತುವೆ ಹೀಗೆ ಹಲವಾರು ಯೋಜನೆ ಘೋಶಿಸಿ ಹಣ ಕೊಡುತ್ತೇವೆ, ಪ್ರಸ್ತಾವನೆ ಕಳುಹಿಸಿ ಎಂದರೆ ನೀವೂ ಮಾಡುತ್ತಿರುವುದೇನು? ನೀವೇ ಆತ್ಮವಾಲೋಕನ ಮಾಡಿಕೊಳ್ಳಿ.’

ಕಡೇ ಪಕ್ಷ 2024 ರೊಳಗೆ ಎಷ್ಟು ಯೋಜನೆಗಳಿಗೆ ಮೋದಿಯವರು ಕಾಲಮಿತಿ ಗಡುವು ನೀಡಿದ್ದಾರೆ ಎಂದು, ಆಡಳಿತ ಪಕ್ಷದ ಅಥವಾ ವಿರೋಧ ಪಕ್ಷದ ಯಾವುದೇ ಒಬ್ಬ ಸದಸ್ಯರು ಹೇಳಿದರೂ ಅವರಿಗೆ ನಾಗರೀಕ ಸನ್ಮಾನ ಮಾಡಲೇ ಬೇಕು. ಊಹುಃ ಗೊತ್ತೇ ಇಲ್ಲ.’

ಅದಿರಲಿ ದಿಶಾ ಸಮಿತಿಯಲ್ಲಿ ಆಯಾ ಜಿಲ್ಲೆಗೆ ಒಂದು ವರ್ಷದಲ್ಲಿ ಯಾವ ಯಾವ ಇಲಾಖೆಯಡಿಯಲ್ಲಿ ಎಷ್ಟೆಷ್ಟು ಹಣ ಬಂದಿದೆ, ಎಲ್ಲಾ ಇಲಾಖೆಯಿಂದ ಒಟ್ಟು ಎಷ್ಟು ಹಣ ಬಂದಿದೆ, ಎಂಬ ಒಂದು ವರ್ಷದ ಇಂಡೆಕ್ಸ್ ಮಾಡಿ ಲೆಕ್ಕ ಕೊಡಲು ಸಾದ್ಯಾವಾಗದೇ ಇದ್ದಲ್ಲಿ ‘ದಿಶಾ ಸಮಿತಿ ಏಕೆ ಇರಬೇಕು? ಸಂಸದರೇ ನಿಮ್ಮ ಅಧಿಕಾರ ಚಲಾಯಿಸಿ, ದಯವಿಟ್ಟು ಬಿಲ ಸೇರದಿರಿ?’