22nd July 2024
Share

TUMAKURU:SHAKTHIPEETA FOUNDATION

ಕಳೆದ 7 ವರ್ಷಗಳ ಹಿಂದಿನ ಯುಪಿಎ ಸರ್ಕಾರದಲ್ಲಿ ಆಗಿನ ಸಂಸದರಾಗಿದ್ದ ಶ್ರೀ ಜಿ.ಎಸ್.ಬಸವರಾಜ್ ರವರು ಕೇಂದ್ರ ಸರ್ಕಾರದಿಂದ ತುಮಕೂರಿಗೆ ಸುಮಾರು ರೂ 100 ಕೋಟಿ ವೆಚ್ಚದ ಎಂ.ಎಸ್.ಎಂ.ಇ ಟೆಕ್ನಾಲಾಜಿ ಸೆಂಟರ್ ಮಂಜೂರು ಮಾಡಿಸಿದ್ದರು.

ನಂತರ ಬಂದ ಸಂಸದರಾದ ಶ್ರೀ ಎಸ್.ಪಿ.ಮುದ್ದುಹನುಮೇಗೌಡರು ಪ್ರಯತ್ನ ಮುಂದುವರೆಸಿ ತುಮಕೂರು ತಾಲ್ಲೂಕು ಅಮಲಾಪುರದಲ್ಲಿ 15 ಎಕರೆ ಸರ್ಕಾರಿ ಜಮೀನನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರ  ಮಾಡಲಾಗಿತ್ತು.

  ಪ್ರಸ್ತುತ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯಂತೆ /ನಿಯಾಮನುಸಾರ ರಾಜ್ಯ ಸರ್ಕಾರ ಸುಮಾರು 30000 ಚದುರ ಅಡಿ ಕಟ್ಟಡ ನಿರ್ಮಾಣ ಮಾಡಿ ನೀಡಿದಲ್ಲಿ ಕೇಂದ್ರ ಸರ್ಕಾರ ಸೆಂಟರ್‍ನ್ನು ಆರಂಭಿಸಲಿದೆ ಎಂದು ಕೇಂದ್ರ ಸಚಿವರಾದ ಶ್ರೀ ನಿತಿನ್ ಗಡ್ಕರಿಯವರು ಶ್ರೀ ಜಿ.ಎಸ್.ಬಸವರಾಜ್‍ರವರ ಪತ್ರಕ್ಕೆ ಉತ್ತರಿಸಿದ್ದಾರೆ.

ರಾಜ್ಯ ಸರ್ಕಾರಕ್ಕೆ ಜಿ.ಎಸ್.ಬಸವರಾಜ್ ರವರು ಪತ್ರ ಬರೆದು ಸೂಕ್ತ ಕಟ್ಟಡ ನಿರ್ಮಾಣ ಮಾಡಲು ಮನವಿ ಮಾಡಿದ್ದರು. ಈಗ ರಾಜ್ಯ ಸರ್ಕಾರ ಕಟ್ಟಡ ನಿರ್ಮಾಣ ಮಾಡದೆ ಬಾಡಿಗೆ ಆಧಾರಿತ ಕಟ್ಟಡದಲ್ಲಿ ನಿರ್ಮಾಣ ಮಾಡಿದರೇ ಹೇಗೆ ಎಂಬ ಚಿಂತನೆ ನಡೆಸಿರುವ ಹಾಗೆ ಕಾಣುತ್ತಿದೆ. ಆದರೇ ಬಾಡಿಗೆ ಕೊಡುವವರು ಯಾರು ಎಂಬುದು ನಿರ್ಣಯವಾಗಬೇಕಿದೆ.

   ರಾಜ್ಯ ಸರ್ಕಾರ ಹಲವಾರು ನಿರ್ಧಾರಗಳನ್ನು ಕೈಗೊಳ್ಳಬಹುದಾಗಿದೆ, ಈಗಾಗಲೇ ಮಂಜೂರಾಗಿರುವ ಜಮೀನನಲ್ಲಿ ಯಾರಾದರೂ ಸೆಂಟರ್‍ಗೆ ಅಗತ್ಯವಿರುವ ಕಟ್ಟಡ ನಿರ್ಮಾಣ ಮಾಡಿಕೊಡುತ್ತಾರೋ ಅವರೊಂದಿಗೆ ನಿಯಾಮುನುಸಾರ 30 ವರ್ಷದ ಒಪ್ಪಂದ ಮಾಡಿಕೊಳ್ಳುವುದು. ಜಮೀನು ಇರುವುದರಿಂದ ಸಿ.ಎಸ್.ಆರ್ ಫಂಡ್ ನಲ್ಲೂ ಕಟ್ಟಡ ನಿರ್ಮಾಣ ಮಾಡಬಹುದಾಗಿದೆ.

ಅಥವಾ ಯಾರಾದರೂ ತಮ್ಮ ಸ್ವಂತ ಜಮೀನಿನನಲ್ಲಿ ಸೆಂಟರ್‍ಗೆ ಅಗತ್ಯವಿರುವ ಮಾದರಿಯಲ್ಲಿ ಕಟ್ಟಡ ನಿರ್ಮಾಣ ಮಾಡಿಕೊಂಡಲು ಮುಂದೆ ಬಂದಲ್ಲಿ ಕನಿಷ್ಟ ಪಕ್ಷ 30 ವರ್ಷಗಳ ಮೇಲ್ಪಟ್ಟು ಬಾಡಿಗೆ ಆಧಾರದಲ್ಲಿ ಒಪ್ಪಂದ ಮಾಡಿಕೊಟ್ಟರೇ ಮಾತ್ರ ಕಟ್ಟಡ ನಿರ್ಮಾಣ ಮಾಡಲು ಮುಂದೆ ಬರುವವರೊಂದಿಗೆ ಸಮಾಲೋಚನೆ ನಡೆಸುವುದು.

ಅಥವಾ ಹಾಲಿ ಇರುವ ಸೆಂಟರ್‍ಗೆ ಸೂಕ್ತವಾದ ಕಟ್ಟಡಗಳನ್ನು ಬಾಡಿಗೆ ಪಡೆದು ಅರಂಭ ಮಾಡಬಹುದಾಗಿದೆ. ಯಾವುದಾದರೂ ಮುಚ್ಚಿರುವ ಶಾಲಾ ಕಾಲೇಜುಗಳ ಕಟ್ಟಡಗಳಿದ್ದರೂ ಅಂಥವರು ಬಾಡಿಗೆ ನೀಡಲು ಸಹ ಮುಂದೆ ಬರ ಬಹುದಾಗಿದೆ. ಕೇಂದ್ರ ಸರ್ಕಾರ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಸಮಾಲೋಚನೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಬಹುದಾಗಿದೆ.

 ಈ ಹಿನ್ನಲೆಯಲ್ಲಿ ದಿನಾಂಕ:04.06.2021 ರಂದು ಮಾನ್ಯ ಶ್ರೀ ಸಿ.ಸಿ.ಪಾಟೀಲ್ ರವರು, ಸಣ್ಣ ಕೈಗಾರಿಕಾ ಸಚಿವರು. ಕರ್ನಾಟಕ ಸರ್ಕಾರ, ಇವರಿಗೆ ಪತ್ರ ಬರೆದು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಕೋರಿದ್ದಾರೆ. ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಾದ ಶ್ರೀ ರಾಕೇಶ್ ಸಿಂಗ್ ರವರೊಂದಿಗೂ ಸಮಾಲೋಚನೆ ನಡೆಸಿದ್ದಾರೆ.

  ಸೆಂಟರ್ ಮಂಜೂರು ಮಾಡಿಸುವ ದಿನದಿಂದಲೂ ಶ್ರಮಿಸುತ್ತಿರುವ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ತುಮಕೂರಿ£ಲ್ಲಿÀ ಹಲವಾರು ಸ್ಥಳೀಯ ಹೂಡಿಕೆದಾರರ ಜೊತೆ ಚರ್ಚಿಸಿದ್ದು, ಒಬ್ಬರು ಮಾತ್ರ ಹಾಲಿ ಇರುವ 5000 ಅಡಿ ಕಟ್ಟಡದಲ್ಲಿ ಆರಂಭ ಮಾಡಲಿ, ನಂತರ ಸರ್ಕಾರ ಅಧಿಕೃತವಾಗಿ ಎಂಓಯು ಮಾಡಿಕೊಟ್ಟರೇ ಅವರ ಸ್ವಂತ ಸುಮಾರು 8 ಎಕರೆ 10 ಗುಂಟೆ ಜಮೀನಿನನಲ್ಲಿ ಸೆಂಟರ್‍ಗೆ ಬೇಕಾದ ಮಾದರಿಯಲ್ಲಿ ಕಟ್ಟಡ ನಿರ್ಮಾಣ ಮಾಡಿ ಸುಮಾರು 30 ರಿಂದ 99 ವರ್ಷದವರೆಗೂ ಲೋಕೋÀಪಯೋಗಿ ಇಲಾಖೆ ಅಥವಾ ಕೇಂದ್ರ ಲೋಕೋಪಯೋಗಿ ನಿಗದಿ ಮಾಡುವ ದರದಲ್ಲಿ ಬಾಡಿಗೆ ನೀಡಲು ಮುಂದೆ ಬಂದಿದ್ದಾರೆ.

 ಇನ್ನೊಬ್ಬರೂ ಎಂ.ಎಸ್.ಎಂ.ಇ ಟೆಕ್ನಾಲಾಜಿ ಸೆಂಟರ್‍ಗೆ ಈಗಾಗಲೇ ಮಂಜೂರು ಮಾಡಿರುವ ಜಮೀನನ್ನು ಹೂಡಿಕೆದಾರರಿಗೆ ಮಂಜೂರು ಮಾಡಿಕೊಟ್ಟರೂ ಅಲ್ಲಿಯೂ ಕಟ್ಟಡ ನಿರ್ಮಾಣ ಮಾಡಿ ಸುಮಾರು 30 ರಿಂದ 99 ವರ್ಷದವರೆಗೂ ಲೋಕೋಪಯೋಗಿ ಇಲಾಖೆ ಅಥವಾ ಕೇಂದ್ರ ಲೋಕೋಪಯೋಗಿ ಇಲಾಖೆ ನಿಗದಿ ಮಾಡುವ ದರದಲ್ಲಿ ಬಾಡಿಗೆ ನೀಡಲು ಮುಂದೆ ಬಂದಿದ್ದಾರೆ. ಆಸಕ್ತರು ಯಾರು ಬೇಕಾದರೂ ಮುಂದೆ ಬಂದು ಕಟ್ಟಡ ನೀಡಬಹುದಾಗಿದೆ.

ಇದೊಂದು ವಿನೂತನವಾದ ಚಿಂತನೆ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪಿಪಿಪಿ ಮಾದರಿ ಯೋಜನೆಯ ಸಮಿತಿ ಇದೆ. ಆ ಸಮಿತಿಯಲ್ಲಿ ಕೇಂದ್ರ ಸರ್ಕಾರದ ಎಂ.ಎಸ್.ಎಂ.ಇ ನಿರ್ದೇಶಕರು, ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಈ ರೀತಿ ನಿರ್ಮಾಣ ಮಾಡಿಕೊಡುವವರ ಸಭೆ ನಡೆಸಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಅನುಮತಿ ಪಡೆದು ನಂತರ ನಿಯಾಮುನುಸಾರ ಕ್ರಮ ಕೈಗೊಳ್ಳ ಬೇಕಾಗಿದೆ.

ತುಮಕೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಶ್ರೀ ನಾಗೇಶ್ ರವರೊಂದಿಗೆ ಸಮಾಲೋಚನೆ ನಡೆಸಲಾಯಿತು. ತನ್ನ ಹುಟ್ಟೂರಿನಲ್ಲಿ ಸುಮಾರು 5000 ಜನರಿಗೆ ವಾರ್ಷಿಕವಾಗಿ ತರಬೇತಿ ನೀಡುವ ಇಂತಹ ಶಿಕ್ಷಣಕ್ಕೆ ಕಟ್ಟಡ ನಿರ್ಮಾಣ ಮಾಡಿಕೊಂಡಲು ಚಿಂತನೆ ಮಾಡುತ್ತಿರುವ ಹೂಡಿಕೆದಾರರ ಜಮೀನು ವೀಕ್ಷಣೆ ಮಾಡಲಾಯಿತು.

ಇದೇನು ಅಷ್ಟು ಸುಲಭದ ಮಾತಲ್ಲ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ವ್ಯವಹರಿಸಿದ ನಂತರವೇ ಒಂದು ನಿರ್ಧಾರಕ್ಕೆ ಬರಬಹುದು. ಸೆಂಟರ್‍ನ್ನು ತುಮಕೂರಿನಲ್ಲಿ ಆರಂಭಿಸಲು ಇದು   ಕೊನೆಯ ಆಟ ಇದು ಸಾಧ್ಯವಾಗದೇ ಇದ್ದಲ್ಲಿ ಗುಡ್ ಬೈ ಟು ಎಂ.ಎಸ್.ಎಂ.ಇ ಟೆಕ್ನಾಲಾಜಿ ಸೆಂಟರ್  ರಾಜ್ಯ ಸರ್ಕಾರ ಮತ್ತು ಸಂಸzರು ಏನು ಮಾಡುತ್ತಾರೆ ಕಾದು ನೋಡೋಣ.