22nd December 2024
Share

TUMAKURU:SHAKTHIPEETA FOUNDATION                         

ಕೊರೊನಾ ಮಹಾಮಾರಿಯಿಂದ ರಾಜ್ಯದ ನದಿ ಜೋಡಣೆ ಡಿಪಿಆರ್ ಮಾಡುವ ಕೆಲಸ ವಿಳಂಭವಾಗಿದ್ದು, ಪ್ರಸ್ತುತ ಜೂನ್ ಒಂದನೇ ತಾರೀಖಿನಿಂದ ಚುರುಕು ಗೊಳಿಸಲಾಗಿದೆ. ಸಂಸದ ಶ್ರೀ ಜಿ.ಎಸ್.ಬಸವರಾಜ್‍ರವರು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರೊಂದಿಗೆ ಮಾತನಾಡಿದ್ದು ಶೀಘ್ರವಾಗಿ   ಸಭೆ ಕರೆಯುವ ಭರವಸೆ ನೀಡಿದ್ದಾರೆ.

ಈ ಹಿನ್ನಲೆಯಲ್ಲಿ ಜಲಸಂಪನ್ಮೂಲ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ರಾಕೇಶ್‍ಸಿಂಗ್‍ರವರು, ಕಾರ್ಯದರ್ಶಿ ಶ್ರೀ ಲಕ್ಷ್ಮಣರಾವ್ ಪೇಶ್ವೆರವರು, ನೋಡೆಲ್ ಆಫೀಸರ್ ಶ್ರೀ ಕೆ. ಜೈಪ್ರಕಾಶ್‍ರವರು, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮಲ್ಲಿಕಾರ್ಜುನ್ ಗುಂಗೆರವರು, ಶ್ರೀ ಮೋಹನ್‍ರವರು, ಶ್ರೀ ಅನಿಲ್‍ಕುಮಾರ್‍ರವರು, ಶ್ರೀ ಬಂಗಾರಸ್ವಾಮಿರವರು, ಶ್ರೀರಾಮಯ್ಯನವರು ಹೀಗೆ ನೀರಾವರಿ ಶಿಲ್ಪಿಗಳ ಬಗ್ಗೆ ಸರಣೆ ಚರ್ಚೆ ನಡೆಸುವ ಮೂಲಕ ಚಾಲನೆ ನೀಡಲಾಗಿದೆ.

 ಮುಖ್ಯ ಮಂತ್ರಿಯವರಿಗೂ ಸಭೆ ನಡೆಸಲು ಬಸವರಾಜ್ ರವರು ಈಗಾಗಲೇ ಪತ್ರ ನೀಡಿದ್ದಾರೆ, ಹಾವೇರಿ ಸಂಸದರು ಮತ್ತು ಕೇಂದ್ರ ಜಲಶಕ್ತಿ ಸಮಿತಿ ಸದಸ್ಯರಾದ ಶ್ರೀ ಶಿವಕುಮಾರ್ ಉದಾಸಿಯವರ ಜೊತೆಯು ಸಮಾಲೋಚನೆ ನಡೆಸಿದ್ದಾರೆ. ಈ ತಿಂಗಳು ಬಹುತೇಕ ಕಲ್ಪನಾ ವರದಿ ಸರ್ಕಾರದ ಕೈಸೇರುವ ನೀರಿಕ್ಷೆಯಿದೆ.

 ಕಲ್ಪನಾ ವರದಿ ಸಿದ್ಧಪಡಿಸಿದ ನಂತರ ಮಾನ್ಯ ಮುಖ್ಯಮಂತ್ರಿಯವರೇ ಸ್ವತಃ ಬಹಿರಂಗ ಪತ್ರ ಬರೆಯುವ ಮೂಲಕ ರಾಜ್ಯದ ಪ್ರತಿ ಗ್ರಾಮದ ಜನರಿಗೂ ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆ ಬಗ್ಗೆ ಅರಿವು ಮೂಡಿಸುವ ಪ್ರಯತ್ನಕ್ಕೂ ಚಾಲನೆ ದೊರೆಯುವ ಆಶಾಭಾವನೆ ಇದೆ. ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿರಜನೀಶ್‍ರವರು,  ಈ ಬಗ್ಗೆ ಜಲಸಂಪನ್ಮೂಲ ಇಲಾಖೆಯ ಅಭಿಪ್ರಾಯ ಕೇಳಿದ್ದಾರೆ. ರಾಜ್ಯದ 30 ಜಿಲ್ಲಾ ಮಟ್ಟದ ದಿಶಾ ಸಮಿತಿಗಳು ಈ ಯೋಜನೆ ಬಗ್ಗೆ ವಿಶೇಷ ಆಸಕ್ತಿ ವಹಿಸಲಿವೆ.

ಕಳೆದ ಭಾನುವಾರ ರಾಜ್ಯದ ನದಿ ಜೋಡಣೆ ನೋಡೆಲ್ ಆಫೀಸರ್ ಶ್ರೀ ಜೈಪ್ರಕಾಶ್ ರವರೊಂದಿಗೆ ಸುಧೀರ್ಘವಾಗಿ ಸಮಾಲೋಚನೆ ನಡೆಸಿದ್ದು, ವಿವಿಧ ಇಲಾಖೆಗಳಿಗೆ ಈಗಾಗಲೇ ಪತ್ರ ಬರೆದಿದ್ದರೂ ಇದೂವರೆಗೂ ಮಾಹಿತಿ ಬಂದಿಲ್ಲ. ಈ ಹಿನ್ನಲೆಯಲ್ಲಿ ಪ್ರತಿ ಇಲಾಖೆಗೂ, ಜಿಲ್ಲೆಗೂ ಭೇಟಿ ನೀಡಿ ಮಾಹಿತಿ ಕ್ರೋಢಿಕರಿಸುವ ಕೆಲಸಕ್ಕೆ ಕಾರ್ಯತಂತ್ರ ರೂಪಿಸಲು ಚಿಂತನೆ ನಡೆಸಲಾಗಿದೆ.  ಮುಂದಿನ ಆರು ತಿಂಗಳ ಒಳಗೆ ಪಕ್ಕಾ ‘ಜಲಗ್ರಂಥ’ ರಚಿಸುವ ಭರವಸೆ ಇದೆ.

ಕಾರ್ಯದರ್ಶಿ ಶ್ರೀ ಅನಿಲ್ ಕುಮಾರ್‍ ರವರು ರಾಜ್ಯದ ನದಿ ಜೋಡಣೆ ಕಲ್ಪನಾ ವರದಿಗೆ ನಾನು ಕಾರ್ಯದರ್ಶಿಯಿಂದ ನಿವೃತ್ತನಾಗುವ ವೇಳೆಗೆ ಒಂದು ರೂಪು ರೇಷೆ ಕೊಡುವ ಭರವಸೆ ನೀಡಿದ್ದರು. ಆದರೇ ಜೈಪ್ರಕಾಶ್ ರವರನ್ನು ನೋಡೆಲ್ ಅಧಿಕಾರಿಯಾಗಿ ನೇಮಿಸಿದ್ದರಿಂದ ಅವರ ಮಾತು ಉಳಿಸಿಕೊಳ್ಳಲು ಸಾದ್ಯಾವಾಗಿಲ್ಲ ಎಂಬ ಅರಿವು ನನಗಿದೆ.

ಈಗ ಜೈಪ್ರಕಾಶ್‍ ರವರು ನಿವೃತ್ತಿ ಆಗುವ ವೇಳೆಗೆ ಏನು ಮಾಡುತ್ತಾರೆ ಕಾದು ನೋಡೋಣ? ನಮಗಂತೂ ಒಂದೊಂದು ದಿವಸವೂ ಮುಖ್ಯವಾಗಿದೆ. ಅಧಿಕಾರ ದಿನ ದಿನಕ್ಕೂ ಮೈನಸ್ ಆಗಲಿದೆ ಶೀಘ್ರವಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಬಸವರಾಜ್ ರವರು ನಿರಂತರವಾಗಿ ಒತ್ತಡ ಹಾಕುತ್ತಿದ್ದಾರೆ.