22nd December 2024
Share

TUMAKURU:SHAKTHIPEETA FOUNDATION

ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ಸ್ವತಃ 2022 ರೊಳಗೆ ದೇಶದ ಎಲ್ಲರಿಗೂ ಸೂರು ಎಂಬ ಘೋಷಣೆ ಮಾಡಿದ್ದಾರೆ.

2022 ರೊಳಗೆ ರಾಮ ಮಂದಿರ ಸಂಘ ಪರಿವಾರದವರು ಶ್ರಮಿಸುತ್ತಿದ್ದಾರೆ/ಪೂರ್ಣಗೊಳಿಸುತ್ತಾರೆ.

2022 ರೊಳಗೆ ಸೆಂಟ್ರಲ್ ವಿಸ್ತಾ ಸ್ವತಃ ಮೋದಿಯವರೇ ಶ್ರಮಿಸುತ್ತಿದ್ದಾರೆ/ಪೂರ್ಣಗೊಳಿಸುತ್ತಾರೆ.

2022 ರೊಳಗೆ ಎಲ್ಲರಿಗೂ ಸೂರು ಶಾಸಕರು ಶ್ರಮಿಸಬೇಕು/ ಇವರು ಪೂರ್ಣಗೊಳಿಸುವ ಭರವಸೆಯಿಲ್ಲ.

ಬಡವರಿಗೆ ಸೂರು ಘೋಷಣೆ ಕರ್ನಾಟಕದಲ್ಲಿ ಶೇಕಡ 100 ರಷ್ಟು ಜಾರಿಯಾಗಬೇಕಾದರೆ 224 ಜನ ವಿಧಾನಸಭಾ ಸದಸ್ಯರ ತಾಕತ್ತು. ಬಹುತೇಕ ಶಾಸಕರು ಆಶ್ರಯ ಸಮಿತಿ ಸಭೆಯನ್ನೇ ಮಾಡಿಲ್ಲ ಇವರಗಳನ್ನು ಪ್ರಶ್ನೆ ಮಾಡಲು ವಿರೋಧ ಪಕ್ಷಗಳಿಗೆ ಏನಾಗಿದೆ.

ಎಲ್ಲರಿಗೂ ಸೂರು ಮೋದಿಯವರು ಘೋಷಣೆ ಮಾಡಿದ್ದು 2014 ರಲ್ಲಿ, ಪೂರ್ಣಗೊಳಿಸಬೇಕಾಗಿರುವುದು 2022 ರೊಳಗೆ, ಯಾರು ಈ ಬಗ್ಗೆ ಬೀದಿಗಿಳಿದಿಲ್ಲ, ಸ್ವತಃ ನ್ಯಾಯಾಲಯಗಳೇ ಮುಂದೆ ಬಂದರೂ ಆಶ್ಚರ್ಯವಿಲ್ಲ.

ದೇಶದಲ್ಲಿ ವಿರೋಧ ಪಕ್ಷಗಳಿಗೆ ಮಾನ ಮರ್ಯಾದೆ ಉಳಿಯ ಬೇಕಾದರೆ, ಸೆಂಟ್ರಲ್ ವಿಸ್ತಾ ನಿಲ್ಲಿಸಿ, ರಾಮ ಮಂದಿರ ಏಕೆ ಬೇಕು ಎಂದು ಬುರುಡೆ ಹೊಡೆಯುವುದನ್ನು ಬಿಟ್ಟು, ದೇಶದ ಯಾವ ಗ್ರಾಮದಲ್ಲಿ

ಎಷ್ಟು ಜನರಿಗೆ ಮನೆಯಿಲ್ಲ, ಎಷ್ಟು ಜನರಿಗೆ ನಿವೇಶನವಿಲ್ಲ, ಪ್ರಧಾನಿಯವರೇ ನೀವೇ ಘೋಷಣೆ ಮಾಡಿದ್ದೀರಿ, ಗುರಿ ತಲುಪುವುದು ಯಾವಾಗ? ಶಾಸಕರೇ ಏಕೆ ಆಶ್ರಯ ಸಮಿತಿ ಸಭೆ ಮಾಡಿ ಪ್ರಸ್ತಾವನೆ ಸಲ್ಲಿಸಿಲ್ಲ ಎಂಬ ಚಳುವಳಿ ಮಾಡಲಿ. ಪ್ರತಿ ಗ್ರಾಮಪಂಚಾಯಿತಿ ಮುಂದೆ ಧರಣಿ ಕೂರಲಿ,

ಶ್ರೀ ಸಿದ್ಧರಾಮಯ್ಯನವರೇ? ಶ್ರೀ ಡಿ.ಕೆ.ಶಿವಕುಮಾರ್‍ರವರೇ? ಶ್ರೀ ಹೆಚ್.ಡಿ.ಕುಮಾರಸ್ವಾಮಿರವರೇ? ನಿಮಗೆ 2022 ರೊಳಗೆ ಬಡವರಿಗೆ ಸೂರು ಬೇಕಿಲ್ಲವೇ?