12th September 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲಾ ದಿಶಾ ಸಮಿತಿ ಸಭೆಗಳಲ್ಲಿ ಹೌಸಿಂಗ್ ಫಾರ್ ಆಲ್-2022 ಯೋಜನೆ ವಿಳಂಭವಾಗಲು ಆಶ್ರಯ ಸಮಿತಿಗಳ ಸಭೆ ನಡೆಸಿದೆ ಇರುವುದೇ ಕಾರಣ ಎಂಬ ಸತ್ಯದ ಮಾಹಿತಿ ದೊರೆತಾಗ, ಯಾರ ವಿರುದ್ದ ಕ್ರಮ ಕೈಗೊಳ್ಳ ಬೇಕು ಎಂಬ ಸ್ಪಷ್ಟ ಮಾಹಿತಿ ತಿಳಿಯಲು ರಾಜ್ಯ ದಿಶಾ ಸಮಿತಿ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ.

ತುಮಕೂರು ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮತ್ತು 11 ವಿಧಾನಸಭಾ ಸದಸ್ಯರ ಕ್ಷೇತ್ರಗಳ ಗ್ರಾಮೀಣ ಆಶ್ರಯ ಸಮಿತಿ ಸಭೆಗಳ ಮಾಹಿತಿ ನೀಡಲು, ಹಿಂದಿನ ದಿಶಾ ಸಮಿತಿ ಸಭೆಯಲ್ಲಿ ನಿರ್ಣಯಕೈಗೊಳ್ಳಲಾಗಿದೆ.

ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‍ರವರು ಶಾಸಕರಾದ ನಂತರ ಆಶ್ರಯ ಸಮಿತಿ ಸಭೆಗೂ ಕಾಯದೆ ತುಮಕೂರು ನಗರದ ವಸತಿ ರಹಿತರಿಗೆ ವಸತಿ ನೀಡಲು ಜಮೀನು ಹುಡುಕುಲು ಆರಂಭಿಸಿದರೂ, ಜೊತೆಗೆ ಸಂಸದ ಶ್ರೀ ಜಿ.ಎಸ್.ಬಸವರಾಜ್‍ರವರು ಕಡತದ ಹಿಂದೆ ಬಿದ್ದರು.

ಕೇಂದ್ರ ಸರ್ಕಾರದ ಪೋರ್ಟಲ್‍ನಲ್ಲಿ ನೋಂದಣಿ ಮಾಡಿದವರ ಮನೆ ಮನೆ ಸಮೀಕ್ಷೆಯನ್ನು ಆಯುಕ್ತೆ ಶ್ರೀ ಮತಿ ರೇಣುಕರವರು ಅವರ ತಂಡದಿಂದ ಮಾಡಿಸಿದರು. ಹಿಂದಿನ ಜಿಲ್ಲಾಧಿಕಾರಿ ಶ್ರೀ ರಾಕೇಶ್‍ಕುಮಾರ್‍ರವರು, ಈಗಿನ ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರು, ಹಿಂದಿನ ಉಪವಿಭಾಗಾಧಿಕಾರಿ ಶ್ರೀ ಶಿವಕುಮಾರ್‍ರವರು, ಈಗಿನ ಉಪವಿಭಾಗಾಧಿಕಾರಿ   ಶ್ರೀ ಅಜಯ್ ರವರು ಮತ್ತು ತಹಶೀಲ್ದಾರ್ ಶ್ರೀ ಮೋಹನ್‍ರವರ ತಂಡ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ನಗರದಲ್ಲಿ ಮತ್ತು ನಗರದ ಹೊರವಲಯದಲ್ಲಿ ತುಮಕೂರು ನಗರದ ವಸತಿ ರಹಿತರಿಗೆ ಬೇಕಾಗುವ 40 ಎಕರೆ ಜಮೀನಿಗಾಗಿ ಹುಡುಕಾಟ ಮಾಡಿ, ಈಗಾಗಲೇ ಸುಮಾರು 17 ಎಕರೆ ಜಮೀನನ್ನು ಪಾಲಿಕೆಗೆ ವರ್ಗಾಯಿಸಿರ ಬಹುದು. ಉಳಿದ ಜಮೀನನ್ನು ಒಂದೆರಡು ತಿಂಗಳಿನಲ್ಲಿ ವರ್ಗಾಯಿಸಬಹುದು. ಮುಂದಿನ ದಿಶಾ ಸಮಿತಿ ಸಭೆಯಲ್ಲಿ ನಿಖರ ಮಾಹಿತಿ ದೊರೆಯಲಿದೆ.

ಜೊತೆಗೆ ಪಹಣೆಯಲ್ಲಿ ಪಾಲಿಕೆ ಜಮೀನು ಬಂದ ತಕ್ಷಣ, ಡಿಪಿಆರ್ ಸಹ ಮಾಡಲು ಆರಂಭಿಸಿದ್ದಾರೆ. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ 2022 ರ ಗಡುವಿನೊಳಗೆ ನಿವೇಶನ ಗುರುತಿಸಿ, ಪಲಾನುಭವಿಗಳ ಪಟ್ಟಿಯನ್ನು ಮಾಡಿ, ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗುವುದು. ಅನುದಾನ ನೀಡುವುದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜವಾಬ್ಧಾರಿ.

ಉಳಿದ 223 ಶಾಸಕರ ಹೌಸಿಂಗ್ ಯೋಜನೆಯ ಬಗ್ಗೆ ಮಾಹಿತಿಯನ್ನು ಪಡೆಯಲು ಈ ಪತ್ರ ಬರೆಯಲಾಗಿದೆ.