22nd December 2024
Share

TUMKAURU:SHAKTHIPEETA FOUNDATION

ಕರ್ನಾಟಕ ರಾಜ್ಯ ಸರ್ಕಾರ ಕೊಪ್ಪಳ ಜಿಲ್ಲೆಯ ನವಿಲೆ ಡ್ಯಾಂ’. ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಯ ಮೇಕೆದಾಟು ಡ್ಯಾಂ’ ಮತ್ತು ತುಮಕೂರು ಜಿಲ್ಲೆಯ ‘ಜಾಲಗುಣಿ ಡ್ಯಾಂ’ ಮೂರು ಹೊಸ ಡ್ಯಾಂಗಳನ್ನು ನಿರ್ಮಾಣ ಮಾಡಲು ಚಿಂತನೆ ನಡೆಸಿದೆ

ಕಾಂಗ್ರೆಸ್ ಸರ್ಕಾರವಿದ್ದಾಗಲೇ ನವಿಲೆ ಮತ್ತು ಮೇಕೆದಾಟು ಯೋಜನೆಗೆ ಪರಿಕಲ್ಪನೆ ಆರಂಭವಾಗಿತ್ತು. ಈಗಿನ ಬಿಜೆಪಿ ಸರ್ಕಾರವೂ ಈ ಎರಡು ಡ್ಯಾಂಗಳ ಕನಸಿಗೆ ರೆಕ್ಕೆ ಪುಕ್ಕ ನೀಡಿದೆ. ಕಳೆದ ಮುಂಗಡ ಪತ್ರದಲ್ಲೂ ನವಿಲೆ ಡ್ಯಾಂ ಬಗ್ಗೆ ಪ್ರಸ್ತಾಪಿಸಿದೆ. ತುಮಕೂರು ಜಿಲ್ಲೆಯಲ್ಲಿ ಕಳೆದ 30 ವರ್ಷಗಳಿಂದ ಜಾಲಗುಣಿ ಡ್ಯಾಂ ಬಗ್ಗೆ ಮಾತನಾಡುತ್ತಿದ್ದರೂ, ಈಗ ಕಲ್ಪನಾವರದಿ ತಯಾರಿಸಲು ಸರ್ಕಾರ ಯೋಚಿಸುತ್ತಿದೆ.

ಈ ಮೂರು ಡ್ಯಾಂಗಳು ರಾಜ್ಯದ ಕುಡಿಯುವ ನೀರಿನ ಬವಣೆ ತಪ್ಪಿಸಲು ಅನೂಕೂಲವಾಗಲಿದೆ, ಕೇಂದ್ರ ಸರ್ಕಾರ ಜಲಜೀವನ್ ಮಿಷನ್ ಯೋಜನೆ ಜಾರಿ ಮಾಡಿ, 2024 ರೊಳಗೆ ಮನೆ ಮನೆಗೆ ನಲ್ಲಿ ಮುಖಾಂತರ ಶಾಶ್ವತವಾದ ನೀರು ಕೊಡಿ, ನಾವು ಅರ್ಧ ದುಡ್ಡು ಕೊಡುತ್ತೇವೆ ಎನ್ನುತ್ತಿದೆ.

ನದಿ ನೀರಿನಿಂದ ಯೋಜನೆ ರೂಪಿಸಿದರೆ-ನಲ್ಲಿಗಳಲ್ಲಿ ನೀರು ಬರಲಿದೆ-ಇಲ್ಲದೇ ಇದ್ದಲ್ಲಿ ನಲ್ಲಿಗಳಲ್ಲಿ ಗಾಳಿ ಬರಲಿದೆ’ . ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಗತ್ಯವಿದ್ದಲ್ಲಿ ಇನ್ನೂ ಯಾವುದಾದರೂ ಕಡೆ ಹೊಸದಾಗಿ ಡ್ಯಾಂ ನಿರ್ಮಾಣ ಮಾಡಲು ಸಾಧ್ಯತೆ ಇದ್ದಲ್ಲಿ ಅಂಥಹ ಜಾಗಗಳನ್ನು ಸರ್ಕಾರದ ಜಲಸಂಪನ್ಮೂಲ ಇಲಾಖೆಯ ನಿಗಮಗಳು ಹುಡುಕುತ್ತಿವೆ.

ರಾಜ್ಯದ ನದಿ ಜೋಡಣೆ ಪ್ರಸ್ತಾವನೆಯಲ್ಲಿ ರಾಜ್ಯದ ಯಾವ ಭಾಗದಲ್ಲಿ ನೀರು ನಿಲ್ಲಿಸಲು ಡ್ಯಾಂಗಳನ್ನು ನಿರ್ಮಾಣ ಮಾಡಬಹುದು ಎಂಬ ಹುಡುಕಾಟ ಆರಂಭವಾಗಿದೆ. ನೀರು ಯಾವಾಗಲಾರದರೂ ಬರಲಿ ನೀರು ನಿಲ್ಲಿಸಲು ವಾಟರ್ ಬ್ಯಾಂಕ್’ ಗಳನ್ನು ಮೊದಲು ಮಾಡಲು ಆರಂಭ ಮಾಡಬೇಕು.

ಅಕ್ಕಪಕ್ಕದ ರಾಜ್ಯಗಳ ಕ್ಯಾತೆ, ಕೇಂದ್ರ ಸರ್ಕಾರದ ಅನುಮೋದನೆ ಬಹಳ ಸಮಯವನ್ನು ತಿನ್ನುತ್ತದೆ. ಸಾಧ್ಯತೆ ಇರುವ ಎಲ್ಲಾ ಯೋಜನೆಗಳ ಬಗ್ಗೆ ಕುಡಿಯುವ ನೀರಿಗಾಗಿ ‘ಜಲಜೀವನ್ ಮಿಷನ್ ವಾಟರ್ ಬ್ಯಾಂಕ್’ ಎಂಬ ಆಂದೋಲನದಡಿಯಲ್ಲಿ ಯೋಜನೆ ರೂಪಿಸುವುದು ಅಗತ್ಯವಾಗಿದೆ ಎಂದು ತಜ್ಞರು ಹೇಳುತ್ತಾರೆ.