11th November 2024
Share

TUMAKURU:SHAKTHI PEETA FOUNDATION

ಶ್ರೀ ಜಿ.ಎಸ್.ಬಸವರಾಜ್ ರವರು ಗುಬ್ಬಿ ತಾಲ್ಲೂಕಿಗೆ ಮಂಜೂರು ಮಾಡಿರುವ ಕಾಮಗಾರಿಗಳ ಪಟ್ಟಿ.

ಕೇಂದ್ರ ಸರ್ಕಾರದ ಮಹತ್ವಾ ಕಾಂಕ್ಷೆ ಯೋಜನೆಯಾದ ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಯಡಿ, ಗುಬ್ಬಿ ತಾಲ್ಲೂಕು ವ್ಯಾಪ್ತಿಯಲ್ಲಿ ಸುಮಾರು ರೂ 24.66 ಕೋಟಿ ವೆಚ್ಚದಲ್ಲಿ  32.58 ಕೀಮೀ ಉದ್ದದ 5 ರಸ್ತೆಗಳನ್ನು ಮಂಜೂರು ಮಾಡಿಸಿದ್ದಾರೆ. ಇವುಗಳಲ್ಲಿ  ಇಂದು(22.06.2021) ಮೂರು ಕಡೆ ಪೂಜೆ ಮಾಡುವ ಮೂಲಕ 3 ರಸ್ತೆ ಕಾಮಗಾರಿಗೆ ಚಾಲನೆ ನೀಡುತ್ತಾರೆ.

ಬೆಳಿಗ್ಗೆ 10 ಗಂಟೆಗೆ ನಲ್ಲೂರು ಗ್ರಾಮದಲ್ಲಿ, ಮಧ್ಯಾಹ್ನ 11 ಗಂಟೆಗೆ ಮಾದೇನಹಳ್ಳಿ  ಮತ್ತು ಮಧ್ಯಾಹ್ನ 12 ಗಂಟೆಗೆ ಕುಂದರನಹಳ್ಳಿ ಗ್ರಾಮದಲ್ಲಿ ಪೂಜೆ ನಡೆಯಲಿದೆ. ಕೊರೊನಾ ಹಿನ್ನಲೆಯಲ್ಲಿ ಸಭೆ ಸಮಾರಂಭಗಳು ನಡೆಯುವುದಿಲ್ಲ.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ಗುಬ್ಬಿ ವಿಧಾನಸಭಾ ಸದಸ್ಯರಾದ ಶ್ರೀ ಎಸ್.ಆರ್.ಶ್ರೀನಿವಾಸ್ ರವರು, ಸ್ಥಳೀಯ ಗ್ರಾಮಪಂಚಾಯತ್ ಅಧ್ಯಕ್ಷರು, ಉಪಾದ್ಯಾಕ್ಷರು, ಸದಸ್ಯರು, ಚುನಾಯಿತ ಜನಪ್ರತಿಧಿಗಳು, ಮುಖಂಡರುಗಳು, ರಸ್ತೆಯ ಪಲಾನುಭವಿಗಳು, ಅಧಿಕಾರಿಗಳು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸುವರು.