22nd December 2024
Share

TUMAKURU:SHAKTHIPEETA FOUNDATION

ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯು ಇಂದು(28.06.2021) ರಂದು ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.  ಇಂದು ಆರಂಭದಿಂದ ಇದೂವರೆಗೂ ತುಮಕೂರು ಸ್ಮಾರ್ಟ್ ಸಿಟಿ ತೆಗೆದುಕೊಂಡಿರುವ 7 ಪ್ರಶಸ್ತಿಗಳ ಬಗ್ಗೆ ಪಿಪಿಟಿ ಮೂಲಕ ಸಭೆಗೆ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಂಗಸ್ವಾಮಿಯವರು ಮಾಹಿತಿ ನೀಡಿದರು.

ಇಂದಿನ ಸಭೆ ನಿಜಕ್ಕೂ ಒಂದು ಸೌಹಾರ್ಧಯುತ ಕುಟುಂಬದ ಚರ್ಚೆಯಂತೆ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು. ಹಲವಾರು ಎಡರು ತೊಡರುಗಳ ಬಗ್ಗೆಯೂ ಸಮಾಲೋಚನೆ ನಡೆಸಲಾಯಿತು. ಉಧ್ಯಾನವನಗಳ ಅಭಿವೃದ್ಧಿ, ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಬಗ್ಗೆಯೂ ಸಮಾಲೋಚನೆ ನಡೆಯಿತು.

 ನಗರದ ವಸತಿ ರಹಿತರಿಗೆ ವಸತಿ ನೀಡಲು ಅಗತ್ಯವಿರುವ 40 ಎಕರೆ ಜಮೀನಿನಲ್ಲಿ, ಈಗಾಗಲೇ 17 ಎಕರೆ ಜಮೀನನ್ನು ಪಾಲಿಕೆಗೆ ಮಂಜೂರು ಮಾಡಿದ್ದು. ಉಳಿದ 23 ಎಕರೆಯನ್ನು ಆಗಸ್ಟ್ 15 ರೊಳಗೆ ಮಂಜೂರು ಮಾಡಲು ಕಾಲಮಿತಿ ನಿಗದಿಗೊಳಿಸಿ ಉಪವಿಭಾಗಾಧಿಕಾರಿ ಶ್ರೀ ಅಜಯ್ ರವರು ಮತ್ತು ತಹಶೀಲ್ಧಾರ್ ಶ್ರೀ ಮೋಹನ್ ರವರಿಗೆ ಸೂಚಿಸಲಾಯಿತು.

ವಸತಿ ರಹಿತರ ಪಟ್ಟಿಯನ್ನು ಹೊಸದಾಗಿ ಮಾಡಲು ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ತೀರ್ಮಾನಿಸಲಾಯಿತು. 2022 ಆಗಸ್ಟ್ 15 ರೊಳಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವ ಸಂಭಂದ ಸುಧೀರ್ಘವಾಗಿ ಚರ್ಚಿಸಲಾಯಿತು.

ಈ ಸಭೆಯಲ್ಲಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು, ಎಸ್‍ಪಿ ಯವರು, ಪಾಲಿಕೆ ಮೇಯರ್ ಶ್ರೀ ಕೃಷ್ಣಪ್ಪನವರು, ಆಯುಕ್ತೆ ಶ್ರೀಮತಿ ರೇಣುಕರವರು, ಕುಂದರನಹಳ್ಳಿ ರಮೇಶ್, ನರಸಿಂಹಮೂರ್ತಿ, ಸೇರಿದಂತೆ ಹಲವಾರು ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ನಗರದ ಸರ್ಕಾರಿ ಆಸ್ಪತ್ರೆಗೆ, ಹೊಸದಾಗಿ ನಿರ್ಮಾಣ ಮಾಡುವ ಲೈಬ್ರರಿ ಕಟ್ಟಡದ ಎಸಿಯ ಬಿಸಿಯಿಂದ ನಿರಂತರ ಬಿಸಿ ನೀರು ಸರಬರಾಜು ಮಾಡುವ ಬಗ್ಗೆ ಶ್ರೀ ಪ್ರತಾಪ್ ಪಿಪಿಟಿ ಪ್ರದರ್ಶಿಸಿದರು.