27th July 2024
Share

TUMAKURU:SHAKTHIPEETA FOUNDATION                                                                  

ಚನ್ನೈ-ಬೆಂಗಳೂರು-ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್ ಹಾಗೂ ಬೆಂಗಳೂರು-ಮುಂಬೈ ಎಕನಾಮಿಕ್ ಕಾರಿಡಾರ್ ನ ಪಕ್ಕದಲ್ಲಿ ಕರ್ನಾಟಕ ಹೆರಿಟೇಜ್ ಹಬ್ ಕನಸು ಕಂಡಿದ್ದವರು ಮಾಜಿ ಸಚಿವರಾದ ಶ್ರೀ ಟಿ.ಬಿ.ಜಯಚಂದ್ರವರು. ಇದು ನನ್ನ ಆಸೆಯು ಕೂಡ. ವಿಜ್ಞಾನ ಗುಡ್ಡಕ್ಕೆ ಕೊಕ್ಕೆ ಬಿದ್ದಾಗ ನಮ್ಮ ಜಿಲ್ಲೆಯಲ್ಲಿ ಎಲ್ಲಾದರೂ ಮಾಡಿಸಲೇ ಬೇಕು ಎಂಬ ಹಂಬಲ ವ್ಯಕ್ತಪಡಿಸಿದಾಗ ಶ್ರೀ ಟಿ.ಬಿ.ಜಯಚಂದ್ರವರು ದೇವರ ಹಾಗೆ ಬಂದು ಚಾಲನೆ ನೀಡಿದರು.

ನಾನು ತುಮಕೂರು ಜಿಲ್ಲಾ ದಿಶಾ ಸಮಿತಿ ಸದಸ್ಯನಾಗಿ ಈ ವಿಚಾರವನ್ನು ಹಲವಾರು ಭಾರಿ ದಿಶಾ ಸಭೆಯಲ್ಲಿ ಚರ್ಚೆ ಮಾಡಿದ್ದೇನೆ. ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ವ್ಯಾಪ್ತಿಗೆ ಬರದಿದ್ದರೂ ಜಿಲ್ಲಾ ಮಟ್ಟದ ದಿಶಾ ಸಮಿತಿ ಅಧ್ಯಕ್ಷರಾಗಿ ಈ ಯೋಜನೆಗೆ ಚಾಲನೆ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಳೆದ ದಿಶಾ ಸಮಿತಿಯ ಸಭೆಯಲ್ಲಿ ಹಾಜರಿದ್ದ ನೂತನ ಕೇಂದ್ರ ಸಚಿವರಾದ ಹಾಗೂ ಚಿತ್ರದುರ್ಗ ಲೋಕಸಭಾ ಸದಸ್ಯರಾದ ಶ್ರೀ ಎ.ನಾರಾಯಣಸ್ವಾಮಿರವರ ಗಮನವನ್ನು ನಾನೇ ಸೆಳೆದಿದ್ದೆ. ಅವರು ಸಹ ಜಿಲ್ಲಾಧಿಕಾರಿಗಳಿಗೆ ಈ ವಿಷಯವನ್ನು ಗಂಬೀರವಾಗಿ ತೆಗೆದು ಕೊಳ್ಳಲು ಸಲಹೆ ನೀಡಿದ್ದರು.

ಬಸವರಾಜ್ ರವರು ಸಭೆಯ ನಂತರ ಜಿಲ್ಲಾಧಿಕಾರಿಗಳಿಗೆ ಪತ್ರಬರೆದು ಚಾಲನೆ ನೀಡಲು ಸೂಚಿಸಿದ್ದರ ಹಿನ್ನಲೆಯಲ್ಲಿ ಕರ್ನಾಟಕ ಹರಿಟೇಜ್ ಹಬ್ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ  ಶ್ರೀ ವೈ.ಎಸ್.ಪಾಟೀಲ್ ರವರು ಸಭೆ ನಡೆಸಿ ಹಬ್ ಗೆ ಜೀವ ತುಂಬಲು ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಈಗ ಮತ್ತೆ ಬಸವರಾಜ್ ರವರು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ, ಸ್ಕಿಲ್ ಡೆವಲಪ್ ಮೆಂಟ್ ಸಚಿವರಾದ ಶ್ರೀ ಅಶ್ವಥ್ ನಾರಾಯಣ್ ರವರಿಗೆ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀ ಸೆಲ್ವಕುಮಾರ್ ರವರಿಗೂ ಪತ್ರ ಬರೆದಿದ್ದಾರೆ.

ಈಗ ಕೇಂದ್ರದಲ್ಲಿ ನೂತನ ಸಚಿವರಾಗಿರುವ ಚಿತ್ರದುರ್ಗ ಲೋಕಸಭಾ ಸದಸ್ಯರಾದ ಶ್ರೀ ಎ.ನಾರಾಯಣಸ್ವಾಮಿರವರು ಮುಂದಿನ ಮೂರು ವರ್ಷದಲ್ಲಿ ಸುಮಾರು ಒಂದು ಸಾವಿರ ಕೋಟಿ ವೆಚ್ಚದ ವಿವಿಧ ಯೋಜನೆಗಳನ್ನು  ಮಂಜೂರು ಮಾಡಿಸಬಹುದು.ವಿಶ್ವದ ಗಮನವನ್ನೂ ಸೆಳೆಯ ಬಹುದಾಗಿದೆ. ಶಿರಾ ವಿಧಾನಸಭಾ ಸದಸ್ಯರಾದ ಶ್ರೀ ರಾಜೇಶ್ ಗೌಡರವರು ಮತ್ತು ಹಿರಿಯೂರು ವಿಧಾನಸಭಾ ಸದಸ್ಯರಾದ ಶ್ರೀ ಮತಿ ಪೂರ್ಣಿಮಾರವರು ಈ ವಿಚಾರದಲ್ಲಿ ಚುರುಕಾದರೇ ಆನೇಕ ಉದ್ಯೋಗ ಸೃಷ್ಠಿ ಮಾಡಬಹುದಾಗಿದೆ.

ಇಲ್ಲಿ ರಾಜಕೀಯ ಮಾಡದೇ ಎಲ್ಲಾ ಪಕ್ಷದವರೂ ಕುಳಿತು ಚರ್ಚೆ ಮಾಡಿ, ಯೋಜನೆ ರೂಪಿಸಿದರೆ ಶಿರಾ ಮತ್ತು ಹಿರಿಯೂರು ದಿಕ್ಕು ಬದಲಾಗಲಿದೆ. ನಮ್ಮ ಜಿಲ್ಲೆಗೂ ಮತ್ತು ರಾಜ್ಯಕ್ಕೂ ವಿಶೇಷ ಮೆರಗು ಬರಲಿದೆ.