15th September 2024
Share
ಇದು ತುಮಕೂರಿನ ಸ್ಪೆಕ್ಟ್ರಾ ಅಸೋಶಿಯೇಟ್ಸ್ ಶ್ರೀ ಸತ್ಯಾನಂದ್ ಸಿದ್ಧಪಡಿಸಿರುವುದು, ಆನೇಕ ಸಲಹೆಗಳು ಬರುತ್ತಿವೆ ಅಂತಿಮವಾಗಿ ಯಾರ ಸಲಹೆ ಆಯ್ಕೆ ಆಗಲಿದೆ ಕಾದು ನೋಡೋಣ?

TUMAKURU:SHAKTHIPEETA FOUNDATION

ಶಕ್ತಿಪೀಠ ಕ್ಯಾಂಪಸ್ ನಲ್ಲಿ ಭಾರತ ನಕ್ಷೆಯನ್ನು ಭೂಮಿಯ ಮೇಲೆ ನಕ್ಷೆಯಲ್ಲಿ ತೋರಿಸಿರುವಂತೆ ಕಾಂಕ್ರೀಟ್ ವಾಲ್ ನಿಂದ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ. ಭೂಮಿಯ ಮೇಲಿನಿಂದ ಎರಡು ಅಡಿ ಎತ್ತರ, ಒಂದುವರೆ ಅಡಿ ಎತ್ತರ ಹೀಗೆ ಎತ್ತರದ ಬಗ್ಗೆ ಒಬ್ಬೊಬ್ಬರದ್ದು ಒಂದೊಂದು ಅನಿಸಿಕೆ ಇದೆ.

  1. ನದಿ ಜೋಡಣೆ ಪ್ರಾತ್ಯಕ್ಷಿಕೆಯಿಂದ ನೀರು ಗೋಡೆಯ ಭಾಗದಿಂದ ಹೊರಗೆ ಹೋಗಬೇಕಿದೆ.
  2. ಶ್ರೀ ಲಂಕಾ ಶಕ್ತಿ ಪೀಠಗಳಿಗೆ ಹೋಗಬೇಕಾದರೆ ಭಾರತದ ಮೂಲಕ ಗೇಟ್ ನಿರ್ಮಾಣ ಮಾಡಬೇಕಿದೆ.
  3. ಭಾರತ ನಕ್ಷೆಯೊಳಗೆ ಹೋಗಬೇಕಾದರೂ ಒಂದು ಗೇಟ್ ಇರಬೇಕು.
  4. ಈ ಎರಡು ಗೇಟ್ ಗಳು ಭಾರತದ ಗಡಿಯಂತೆ ಕಾಣುವ ಗೇಟ್ ಗಳು ಇರಬೇಕಾಗುತ್ತದೆ.
  5. ಹಿಮಾಲಯ ಪರ್ವತ ಮತ್ತು ಭಾರತದ ಗಡಿ ಹೇಗಿರಬೇಕು ಎಂಬ ಗೊಂದಲವಿದೆ.
  6. ಭಾರತ ನಕ್ಷೆ ವ್ಯೂ ಪಾಯಿಂಟ್ ನಿಂದ ನೋಡಿದರೆ ಯಾವ ರೀತಿ ಕಾಣುತ್ತದೆ.
  7. ವ್ಯೂ ಪಾಯಿಂಟ್ ಎಷ್ಟು ಎತ್ತರ ಇರಬೇಕು ಎಂಬ ಗೊಂದಲವೂ ಇದೆ.

ಈ ಎಲ್ಲಾ ವಿಚಾರಗಳ ಬಗ್ಗೆ ಓದುಗರ ಅಭಿಪ್ರಾಯಗಳನ್ನು ಆಹ್ವಾನಿಸಲಾಗಿದೆ. ದಯವಿಟ್ಟು ನಿಮ್ಮ ಸಲಹೆಗಳಿಗಾಗಿ?