TUMAKURU:SHAKTHIPEETA FOUNDATION
ತುಮಕೂರು ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳಲ್ಲಿ ಜಿಲ್ಲೆಯ 11 ನಗರ ಸ್ಥಳಿಯ ಸಂಸ್ಥೆಗಳಲ್ಲೂ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಮನೆ ಮನೆಗೆ ನಲ್ಲಿ ನೀರು ಸರಬರಾಜು ಮಾಡಲು ಪ್ರತಿಯೊಂದು ಗ್ರಾಮದ ವಿಲೇಜ್ ಆಕ್ಷನ್ ಪ್ಲಾನ್ ಮಾಡಲು ಈಗಾಗಲೇ ಅಸ್ಥಿತ್ವದಲ್ಲಿರುವ ‘ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿ’ ಗಳನ್ನೇ ಬಳಸಿಕೊಳ್ಳಲು ದಿನಾಂಕ:13.07.2021 ರಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ದಿಶಾ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಯಿತು
ಜಲಜೀವನ್ ಮಿಷನ್ ಯೋಜನೆ ಮಾರ್ಗದರ್ಶಿಯಲ್ಲಿರುವಂತೆ ಅಗತ್ಯವಿರುವ ಸದಸ್ಯರನ್ನು ನಾಮ ನಿರ್ದೇಶನ ಮಾಡುವ ಮೂಲಕ ‘ಜಲಶಕ್ತಿ ಜನಾಂದೋಲನ’ ಕೈಗೊಳ್ಳಲೂ ಇಡೀ ಜಿಲ್ಲೆಯನ್ನೆ ಸಜ್ಜು ಮಾಡಲಾಗಿದೆ.
ಜಿಲ್ಲೆಯ ಪ್ರತಿಯೊಂದು ಗ್ರಾಮಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳು ನಕ್ಷೆಯಾದರಿತ ಜಲಮೂಲಗಳ ಕರಾರು ವಕ್ಕಾದ ಮಾಹಿತಿಯನ್ನು ಪರಿಶೀಲನೆ ಮಾಡಲು ಈಗಾಗಲೇ ನೀಡಿದ್ದ ದಿನಾಂಕ: 24.07.2021 ಕಾಲಮಿತಿ ಗಡುವುನೊಳಗೆ ಮಾಹಿತಿಗಳನ್ನು ನಕ್ಷೆಯಲ್ಲಿ ಹಾಗೂ ಪಟ್ಟಿಯಲ್ಲಿ ಪೂರ್ಣಗೊಳಿಸುವಂತೆ ಸಂಸದ ಶ್ರೀ ಜಿ.ಎಸ್.ಬಸವರಾಜ್‍ರವರು ಕರೆ ನೀಡಿದರು.
ದಿಶಾ ಸಭೆ ಎಂದರೆ ಭಾಷಣ ಮಾಡುವುದಲ್ಲ, ಯಾವೊದೂ ಮಾಹಿತಿ ನೀಡುವುದಲ್ಲ, ನಾವೂ ಕೇಳುವ ಮಾಹಿತಿ ನೀಡಲು ಅಧಿಕಾರಿಗಳು ಸಜ್ಜಾಗಿರಬೇಕು. ಪ್ರತಿಯೊಂದು ಮಾಹಿತಿಯೂ ದಿಶಾ ಪೋರ್ಟಲ್ ನಲ್ಲಿ ಸಿದ್ಧವಿರಬೇಕು. ಆಯಾ ಇಲಾಖೆಯ ಡಾಟಾ ಅಪರೇಟರ್ ಮಾಹಿತಿ ಅಪ್ ಲೋಡ್ ಮಾಡಿದ್ದರೂ ಇಲಾಖೆಯ ಅಧಿಕಾರಿ ಸಂಪೂರ್ಣ ಜವಾಬ್ಧಾರರಾಗಿರುತ್ತಾರೆ.ಸಣ್ಣ ನೀರಾವರಿ ಇಲಾಖೆಯ ಮೂಲಕ ಸ್ಪೆಕ್ಟ್ರಾ ಅಸೋಯೇಷನ್ ತಯಾರಿಸಿರುವ ‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ವರದಿ ಮತ್ತು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸಿದ್ಧಪಡಿಸಿರುವ ‘ಡಿಸ್ಟ್ರಿಕ್ ಇರ್ರಿಗೇಷನ್ ಪ್ಲಾನ್ ‘ತಾಳೆ ಆಗಬೇಕು. ತಪ್ಪಿದ್ದಲ್ಲಿ ಸರಿಪಡಿಸಿ ಅಂತಿಮ ಗೊಳಿಸಬೇಕು. ಕಥೆ ಹೇಳಿದರೆ ಕೇಳಲು ಸಾದ್ಯಾವಿಲ್ಲ.
ತಾಜಾ ಲೈವ್ ಡಾಟಾ ಇರಬೇಕು. ಇಷ್ಟು ವರ್ಷ ಸುಳ್ಳು ಹೇಳಿ ಸರ್ಕಾರದ ಕೋಟ್ಯಾಂತರ ರೂಗಳು ಉಳ್ಳವರಿಗೆ ಮಾತ್ರ ದೊರೆಯುತ್ತಿತ್ತು. ಬಲಾಡ್ಯರಿಗೆ ಮಾತ್ರ ಯೋಜನೆಗಳು ಮಂಜೂರಾಗುತ್ತಿತ್ತು. ಈಗ ಪ್ರತಿ ಗ್ರಾಮ, ಸರ್ವೆನಬಂರ್, ಪ್ರತಿ ಕುಟುಂಬ, ಪ್ರತಿ ವ್ಯಕ್ತಿಯನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸುವ ಕಾಲ ಬಂದಿದೆ.
ತುಮಕೂರು ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳ ಪ್ರತಿಯೊಂದು ಮನೆಗೂ ನಲ್ಲಿ ನೀರು ದೊರೆಯಬೇಕು. ಈಗ ಹಾಲಿ ನಲ್ಲಿ ಸಂಪರ್ಕ ಇರುವ ಮಾಹಿತಿಯೊಂದಿಗೆ ಪ್ರತಿ ನಿತ್ಯ ಎಷ್ಟು ಮನೆಗೆ ನಲ್ಲಿ ನೀರು ಸರಬರಾಜು ಮಾಡಲಾಗಿದೆ ಎಂಬ ಲೆಕ್ಕ ಇಡಬೇಕು.
ಯಾವ ಗ್ರಾಮಕ್ಕೆ ಯಾವ ನದಿ ನೀರು ಎಂಬ ಕರಾರು ವಕ್ಕಾದ ಮಾಹಿತಿ ಸಿದ್ಧಮಾಡಿಕೊಳ್ಳಬೇಕು. ಹೇಮಾವತಿ, ಎತ್ತಿನಹೊಳೆ, ಭಧ್ರಾ ಮೇಲ್ದಂಡೆ ಮತ್ತು ತುಂಗಾಭಧ್ರಾ ಯೋಜನೆಗಳಲ್ಲಿ ಅಲೋಕೇಷನ್ ಆಗಿರುವ ನೀರಿನ ಮಾಹಿತಿ ಪೋರ್ಟಲ್ ನಲ್ಲಿ ಅಪ್ ಲೋಡ್ ಆಗಬೇಕುÀ. ಕುಮಾರಧಾರ ಯೋಜನೆಯ ನೀರಿನ ಡಿಮ್ಯಾಂಡ್ ಸರ್ವೆ ಮಾಡಬೇಕು, ಜಿಲ್ಲೆಯಲ್ಲಿ ಸುಮಾರು 550 ಗ್ರಾಮಗಳಲ್ಲಿ ಯಾವುದೇ ಜಲಮೂಲಗಳು ಇಲ್ಲದೆ ಇರುವುದನ್ನು ಖಚಿತ ಪಡಿಸಿಕೊಂಡು ಈ ಗ್ರಾಮಗಳ್ಲಿಯೂ ಜಲಮೂಲ ನಿರ್ಮಾಣ ಮಾಡಿ, ‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಯೋಜನೆಯ ಕರಡನ್ನು ಅಂತಿಮ ಗೊಳಿಸಬೇಕು.
ನಂತರ ಯಾವ ಗ್ರಾಮಕ್ಕೆ ಯಾವ ಕೆರೆಯಿಂದ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ನೀರು ಸರಬರಾಜು ಮಾಡಬೇಕು ಎಂದು ನಿರ್ಧರಿಸಬೇಕು. ಈಗಾಗಲೇ ಬಹುಗ್ರಾಮ ಯೋಜನೆಯಡಿ ನೀರು ಸರಬರಾಜು ಆಗುವ ಕರಾರು ವಕ್ಕಾದ ಮಾಹಿತಿ ಲಭ್ಯವಿರಬೇಕು. ಯೋಜನೆ ಮಾಡಿಯೂ ನೀರು ದೊರೆಯದೆ ಇರುವ ಕಟು ಸತ್ಯ ಜನತೆಗೆ ಅರ್ಥವಾಗಬೇಕು.
ಇವೆಲ್ಲಾ ಮಾಹಿತಿಗಳು ‘ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿ’ ಯ ಬಳಿ ಇರಬೇಕು. ಆಗ ಮಾತ್ರ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯದ ಜೊತೆಗೆ, ಕುಡಿಯುವ ನೀರಿನ ಯೋಜನೆ ಯಶಸ್ವಿಯಾಗಲಿದೆ. ಮನೆ ಮನೆಗೆ ನಲ್ಲಿ ಜೊತೆಗೆ ದನಗಳಿಗೆ ಕುಡಿಯುವ ನೀರಿನ ತೊಟ್ಟಿ, ಬಡವರ ಪ್ರದೇಶಗಳ್ಲಿ ಸಾಮೂಹಿಕ ಪಾತ್ರೆ ತೊಳೆಯುವ ನೀರಿನ ತೊಟ್ಟಿ, ಬಟ್ಟೆ ಹೊಗೆಯುವ ನೀರಿನ ತೊಟ್ಟಿ ಮಾಡಿ ನೀರು ಒದಗಿಸಬೇಕು.
ಇವೆಲ್ಲಾ ಜಲಜೀವನ್ ಮಿಷನ್ ಮಾರ್ಗದರ್ಶಿ ಸೂತ್ರದಲ್ಲಿದೆ. ಈಗಾಗಲೇ ಇರುವ ಪ್ರತಿಯೊಂದು ಜಲಮೂಲಗಳ ಮಾಹಿತಿಯೂ ಇರಲಿದೆ. ಆಗ ಮಾತ್ರ ನೈಜತೆ ತಿಳಿಯುವುದು ಎಂಬ ಮಾಹಿತಿಯನ್ನು ಶ್ರೀ ಜಿ.ಎಸ್.ಬಸವರಾಜ್ ರವರು, ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರು, ಸಿಇಓ ಶ್ರೀಮತಿ ಡಾ.ವಿಧ್ಯಾಕುಮಾರಿಯವರು ಮತ್ತು ಎಡಿಡಿಸಿ ಶ್ರೀ ಚನ್ನ ಬಸಪ್ಪನವರು ಎಳೆ ಎಳೆಯಾಗಿ ಪ್ರತಿ ಪಾದಿಸಿದರು.
ಯಾವ ಇಲಾಖೆ ಅಧಿಕಾರಿ ಏನೇನು ಮಾಡಬೇಕು, ಯಾರು ಯಾರಿಗೆ ಹೊಣೆಗಾರಿಕೆ ನೀಡಬೇಕು ಎಂಬ ಬಗ್ಗೆ ಪ್ರತಿ ಇಲಾಖೆವಾರು ಇರುವ ಹೊರಗುತ್ತಿಗೆ ಹಾಗೂ ಇಲಾಖೆ ಅಧಿಕಾರಿಗಳಿಗೆ ಹೊಣೆಗಾರಿಕೆ ಹಂಚಿ, ದಿಶಾ ಮಾರ್ಗದರ್ಶಿ ಸೂತ್ರದಂತೆ ಪೋನ್ ನಂಬರ್ ಸಹಿತ ಪಟ್ಟಿಯನ್ನು ದಿಶಾ ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡಲು ಸೂಚಿಸಲಾಯಿತು. ಇಂದಿನ ಸಭೆ ನಡವಳಿಕೆಯೇ ಒಂದು ಮಾರ್ಗದರ್ಶಿ ಸೂತ್ರದಂತಿರಲಿದೆ.
ಆಗಸ್ಟ್ ನಲ್ಲಿ ‘ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಯ’ ಬೃಹತ್ ಸಮಾವೇಶ ನಡೆಸಲಾಗುವುದು. ಅಂದು ಪ್ರತಿಯೊಂದು ಗ್ರಾಮ ನಕ್ಷೆಯಲ್ಲಿಯೂ ಜಲ ಮಾಹಿತಿ ರಾರಾಜಿಸುತ್ತಿರಬೇಕು. ಅಂದು ಸಭೆಗೆ ಬರುವ ವಾಹನಗಳಲ್ಲಿ ‘ಗ್ರಾಮದ ನೀರಿನ ಲೆಕ್ಕದ ನಕ್ಷೆ ಬ್ಯಾನರ್’ ಕಟ್ಟಿಕಕೊಂಡು ಬರುವಂತಾಗಬೇಕು.
ಸಭೆಯಲ್ಲಿ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯರಾದ ಕುಂದರನಹಳ್ಳಿ ರಮೇಶ್, ಜಿಲ್ಲಾ ಮಟ್ಟದ ದಿಶಾ ಸಮಿತಿ ಸದಸ್ಯ ಶ್ರೀ ಟಿ.ಆರ್.ರಘೊತ್ತಮರಾವ್ ಸೇರಿಧಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಈ ಸಭೆ ಒಂದು ಸಂವಾದಂತೆ ಇತ್ತು.