27th July 2024
Share

BIODVERSITY MANAGEMENT COMMITTEE

TUMAKURU:SHAKTHI PEETA FOUNDATIN

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ  ಜನತಾ ಜೀವ ವೈವಿಧ್ಯ ದಾಖಲಾತಿಯ ಮ್ಯಾನೇಜ್ ಮೆಂಟ್ ಕಮಿಟಿ ಒಂದು ತಂಡವಾಗಿ, ಒಂದು ಶಕ್ತಿಯಾಗಿ ಕಾರ್ಯನಿರ್ವಹಿಸಲು ದಿನಾಂಕ:28.07.2021 ರಂದು ನಡೆದ ಸಭೆಯಲ್ಲಿ ಮಹತ್ತರವಾದ ನಿರ್ಣಯ ಕೈಗೊಂಡಿದೆ. ಅಧ್ಯಕ್ಷರಾದ ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀ ಕೃಷ್ಣಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಪಿಪಿಟಿ ತಯಾರಿಸಲು ವಿವಿಧ ವರ್ಗದ ಪರಿಣಿತರಿಗೆ  ಹೊಣೆಗಾರಿಕೆ ನೀಡಿದೆ.

ಮೊದಲ ಹಂತದಲ್ಲಿ ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಉಧ್ಯಾನವನಗಳ ಜಿಐಎಸ್ ಲೇಯರ್ ಅನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ನಮ್ಮೂರಿನ ಪಾರ್ಕ್‍ಗಳ ರಕ್ಷಣೆ ನಮ್ಮೆಲ್ಲರ ಹೊಣೆ’ ಎಂಬ ಘೋಷಣೆಯೊಂದಿಗೆ ಆಂದೋಲನವನ್ನೇ ಆರಂಭಿಸಿದೆ.

ದಿನಾಂಕ:31.07.2021 ರಂದು ನಡೆದ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದ ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಒಂದು ತಿಂಗಳೋಳಗಾಗಿ ಎಲ್ಲಾ ಉಧ್ಯಾನವನಗಳ ಜಿಐಎಸ್ ಲೇಯರ್ ಅನ್ನು ಪೂರ್ಣಗೊಳಿಸಲು ಗಡುವು ನೀಡಿದ್ದಾರೆ. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ನಾಗೇಶ್ ರವರು ಮತ್ತು ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀ ಕೃಷ್ಣಪ್ಪನವರು ಸಹಮತ ವ್ಯಕ್ತಪಡಿಸಿದ್ದಾರೆ.

ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿಯವರಾದ ಶ್ರೀಮತಿ ಕೆ.ವಿದ್ಯಾಕುಮಾರಿಯವರು ಸಭೆಯಲ್ಲಿ ಭಾಗವಹಿಸಿ ಮಾತನಾಡಿ ತುಮಕೂರು ಮಹಾನಗರ ಪಾಲಿಕೆಯ ಮಾದರಿಯಂತೆ ತುಮಕೂರು ಜಿಲ್ಲೆಯ ಎಲ್ಲಾ 330 ಗ್ರಾಮಪಂಚಾಯಿತಿಗಳು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳು ಕಾರ್ಯ ಆರಂಭಿಸಲು ಕರೆ ನೀಡಿದ್ದಾರೆ.

 ತುಮಕೂರು ಲೋಕಸಭಾ ಸದಸ್ಯರು ಹಾಗೂ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ  ಅಧ್ಯಕ್ಷರಾದ  ಶ್ರೀ ಜಿ.ಎಸ್.ಬಸವರಾಜ್ ರವರು ಆಂದೋಲನದ ಆರಂಭವಾದ  ದಿವಸ ದೆಹಲಿಯಲ್ಲಿ ಉಳಿದುಕೊಂಡಿದ್ದರಿಂದ ವಿಶೇಷ ಸಭೆಯಲ್ಲಿ ಭಾಗವಹಿಸಲು ಇಚ್ಚಿಸಿದ್ದಾರೆ. ಆದ್ದರಿಂದ ಈ ಕೆಳಕಂಡ ಮಾಹಿತಿಗಳೊಂದಿಗೆ ಅಧಿಕಾರಿಗಳು ಭಾಗವಹಿಸಲು ಮಾಹಿತಿಗಳನ್ನು ಸಿದ್ಧಪಡಿಸಿಕೊಳ್ಳುವುದು ಅಗತ್ಯವಾಗಿದೆ.

  1. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ರಚನೆಯಾಗುವ ಮುಂಚಿನ ಲೇಔಟ್‍ವಾರು ಉಧ್ಯಾನವನಗಳ ಪಟ್ಟಿ.
  2. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ರಚನೆಯಾದÀ ನಂತರ ಲೇಔಟ್‍ವಾರು ಉಧ್ಯಾನವನಗಳ ಪಟ್ಟಿ.
  3. ದಿನಾಂಕ:28.07.2021 ರವರೆಗೆ ಜಿಐಎಸ್ ಲೇಯರ್ ಮಾಡಿರುವ ಉಧ್ಯಾನವನಗಳ ಪಟ್ಟಿ.
  4. ಅಂದಿನಿಂದ ಪ್ರತಿ ದಿವಸ ಗುರುತು ಹಚ್ಚಿರುವ ಉಧ್ಯಾನವನಗಳ ಪಟ್ಟಿ.
  5. ತುಮಕೂರು ನಗರದಲ್ಲಿರುವ ಔಷಧಿಗಿಡಗಳ ಪಟ್ಟಿ.
  6. ತುಮಕೂರು ನಗರದಲ್ಲಿರುವ ಪಾರಂಪರಿಕ ವೈಧ್ಯರು, ನಾಟಿ ವೈಧ್ಯರು ಮತ್ತು ಹಕೀಮರ ಪಟ್ಟಿ.
  7. ದಿನಾಂಕ>29.07.2021 ರ ಸಭೆಯ ನಿರ್ಣಯಗಳು ಮತ್ತು ಪಿಪಿಟಿ ಗಳ ಪ್ರದರ್ಶನಕ್ಕೆ ಸಿದ್ಧತೆ.
  8. ತುಮಕೂರು ಮಹಾನಗರ ಪಾಲಿಕೆಯ ಎಲ್ಲಾ 35 ಕಾರ್ಪೋರೇಟರ್‍ಗಳಿಗೆ ಆಯಾ ವಾರ್ಡ್ ನಕ್ಷೆ ಕಳುಹಿಸಿ ಹಾಲಿ ಇರುವ ಉಧ್ಯಾನವನಗಳ ಜೊತೆಗೆ ಉಳಿದ ಉಧ್ಯಾನವನಗಳನ್ನು ಗುರುತಿಸಿ ಲಿಖಿತ ವರದಿ ನೀಡಲು ಪತ್ರ ಬರೆಯುವುದು.
  9. ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳು, ನೌಕರರು ಮತ್ತು ಕಾರ್ಮಿಕರಿಗೆ ಅವರ ಮನೆಯ ಅಕ್ಕ-ಪಕ್ಕ ಇರುವ ಉಧ್ಯಾನವನಗಳನ್ನು ಅಥವಾ ಅವರು ಇಚ್ಚಿಸುವ ಉಧ್ಯಾನವನವನ್ನು ವಿಶೇಷವಾಗಿ ಗಮನಹರಿಸಲು ನಿಗದಿಗೊಳಿಸಿದ ಉಧ್ಯಾನವನಗಳವಾರು ಪಟ್ಟಿ.

ಕೇಂದ್ರ ಸರ್ಕಾರದ ಯೋಜನೆಯ ಅನುಷ್ಠಾನಕ್ಕೆ ಇರುವ ದಿಶಾ ಸಮಿತಿಯ ಸದಸ್ಯರೊಂದಿಗೆ ಸಂಸದರು ಯಾವಾಗ ಬೇಕಾದರೂ ತುಮಕೂರು ಮಹಾನಗರಪಾಲಿಕೆಗೆ ಆಗಮಿಸಲಿದ್ದಾರೆ. ಎಲ್ಲಾ ಮಾಹಿತಿಗಳನ್ನು ಸಿದ್ಧಪಡಿಸಿಕೊಂಡಿರಲು ಸಲಹೆ ನೀಡಿದೆ.

ಒಂದು ಸೋಶಿಯಲ್ ಮೀಡಿಯಾ ಗ್ರೂಪ್ ರಚಿಸಿಕೊಂಡು ದಿನ ನಿತ್ಯದ ಮಾಹಿತಿ ಪಡೆಯಲು ಉದ್ದೇಶಿದೆ.