TUMAKURU:SHAKTHI PEETA FOUNDATION
ಶಕ್ತಿಪೀಠ ಕ್ಯಾಂಪಸ್ ನಲ್ಲಿ ಆಗಸ್ಟ್ ಒಂದರಂದು ಹಿಂದೂ ಧಾರ್ಮಿಕ ನಿಯಮಗಳಿಗೆ ಅನುಗುಣವಾಗಿ ನವಗ್ರಗಳ ಗಿಡ ಮತ್ತು ಬೆಳೆಯನ್ನು ಬಿತ್ತಲಾಯಿತು. ನವಗ್ರಹ ವನವನ್ನು ಮಾಡದೇ ವೃತ್ತದ ಹಾಗೂ ಅಷ್ಟಭುಜದ 8 ದಕ್ಕುಗಳಲ್ಲಿ ಮತ್ತು ಕೇಂದ್ರ ಬಿಂದುವಿನಲ್ಲಿ ಗ್ರಹಗಳನ್ನು ಗುರುತು ಮಾಡಿ ನಿರ್ಧಿಷ್ಠ ಗಿಡ ಮತ್ತು ಬೆಳೆಗಳ ಬೀಜಗಳನ್ನು ಪ್ರಾಯೋಗಿಕವಾಗಿ ಹಾಕಲಾಗಿದೆ. ಈ ಗ್ರಹಗಳ ಗಿಡ ಮತ್ತು ಬೀಜವನ್ನು ಕೆಳಕಂಡ ಒಂಭತ್ತು ಗ್ರಾಮಗಳ ಜನರು ಒಟ್ಟಿಗೆ ಹಾಕಿದ್ದಾರೆ.
- ಕುಂದರನಹಳ್ಳಿ,
- ವಡ್ಡನಹಳ್ಳಿ.
- ತುಮಕೂರು.
- ಗಂಗಸಂದ್ರ.
- ಸೋಮನಹಳ್ಳಿ ಪಾಳ್ಯ.
- ಶಿರಾ,
- ಬೆಂಗಳೂರು.
- ಮುದ್ದಪುರ.
- ಕಟ್ಟೆ ಬಾರೆ
ಹಾಲಿ ಕ್ಯಾಂಪಸ್ ಜಮೀನನಲ್ಲಿ ಇದ್ದ ಮತ್ತು ಹೊಸದಾಗಿ ತಂದು ಇಂದಿಗೆ ಸುಮಾರು 330 ಜಾತಿಯ ವಿವಿದ ಗಿಡಗಳನ್ನು ಮತ್ತು ಬೀಜಗಳನ್ನು ಸಂಗ್ರಹಣೆ ಮಾಡಲಾಗಿದೆ. ನಾಟಿ ಮತ್ತು ಬಿತ್ತನೆ ಕಾರ್ಯ ನಿರಂತರವಾಗಿ ನಡೆಯುತ್ತಿದೆ.
ದೇವಿ ಪುಸ್ತಕ ಪಾರಾಯಣ ಮಾಡಲು ಆರಂಭಿಸಿ ಇಂದಿಗೆ 33 ವರ್ಷಗಳಾದ್ದರಿಂದ 330 ಜಾತಿಯ ಗಿಡಗಳನ್ನು ಹಾಕುವ ಗುರಿ ಹೊಂದಲಾಗಿತ್ತು. ಕ್ಯಾಂಪಸ್‍ನಲ್ಲಿ ಇಂದು ದೇವಿಪುಸ್ತಕದ ಪೂಜೆ ಮಾಡಿ ಪಾರಾಯಣ ಮಾಡುವ ಕಾರ್ಯವನ್ನು ಆರಂಭಿಲಾಯಿತು.
ಆದಿದೇವತೆ 108 ಶಕ್ತಿಪೀಠಗಳಲ್ಲಿ ಪ್ರಾರ್ಥಿಸಿ ರಾಜ್ಯದ 29360 ಗ್ರಾಮಗಳ ಕೆರೆ ಕಟ್ಟೆಗಳಿಗೂ ‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಘೋಷಣೆಯೊಂದಿಗೆ ನದಿ ನೀರು ಅಲೋಕೇಷನ್ ಮಾಡಲು ‘ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರಿಗೆ ಮನಸ್ಸು ಕೊಡಿ ತಾಯಿ ‘ ಎಂದು ಬೇಡಿಕೊಳ್ಳಲಾಯಿತು.
ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂಪ್ಪನವರು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮನವಿ ಮೇರೆಗೆ, ಈ ಯೋಜನೆಗೆ ಆದೇಶ ಮಾಡಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜೈಪ್ರಕಾಶ್ ರವರನ್ನು ನೋಡೆಲ್ ಅಧಿಕಾರಿಯಾಗಿ ನೇಮಿಸಿದ್ದಾರೆ.
ಶಕ್ತಿಪೀಠ ಫೌಂಡೇಷನ್ ನ ಇನ್ನೊಂದು ಪ್ರಮುಖ ಬೇಡಿಕೆಯಾದ, ಕೇಂದ್ರ ಸರ್ಕಾರದಿಂದ ನಮ್ಮ ಕರ್ನಾಟಕ ರಾಜ್ಯ ಅತಿ ಹೆಚ್ಚು ಅನುದಾನ ಪಡೆಯ ಬೇಕಾದರೆ ‘ರಾಜ್ಯ ಮಟ್ಟದ ದಿಶಾ ಸಮಿತಿ’ ಯನ್ನು ಚುರುಕುಗೊಳಿಸ ಬೇಕು. ಇದಕ್ಕೂ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರಿಗೆ ಮನಸ್ಸು ಕೊಡಿ ತಾಯಿ ಎಂದು ಬೇಡಿಕೊಳ್ಳಲಾಯಿತು.
ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪವರು ಬಿಜೆಪಿ ಪಕ್ಷ ಬಲಪಡಿಸಲು ರಾಜ್ಯದ್ಯಾಂತ ಪ್ರವಾಸ ಹಮ್ಮಿಕೊಳ್ಳುವುದಾಗಿ ಪ್ರಕಟಿಸಿದ್ದಾರೆ.ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಅಲ್ಲದೆ, ಮುಖ್ಯ ಮಂತ್ರಿಗಳು ಅಲ್ಲದೆ, ಪ್ರವಾಸ ಮಾಡುವುದು ಸರಿಯೇ ಎಂಬ ಚರ್ಚೆ ಈಗಾಗಲೇ ಆರಂಬವಾಗಿದೆ.
ಈ ಹಿನ್ನಲೆಯಲ್ಲಿ ಅವರೇ ಆದೇಶ ಮಾಡಿದ ‘ರಾಜ್ಯದ ನದಿ ಜೋಡಣೆ ಮತ್ತು ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಯೋಜನೆ ಜಾರಿಗೆ ರಾಜ್ಯದ ಇತರೆ ಮಾಜಿ ಮುಖ್ಯ ಮಂತ್ರಿಯವರ ಸಲಹೆಗಳನ್ನು ಪಡೆದು ಪ್ರವಾಸ ಮಾಡಿದರೇ ಒಳ್ಳೆಯದು ಎಂಬ ಭಾವನೆಯಿಂದ ‘ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೂ ಈ ಯೋಜನೆ ಜಾರಿಗಾಗಿ ಜನ ಜಾಗೃತಿ ಮಾಡಲು ಮನಸ್ಸು ಕೊಡಿ ತಾಯಿ’ ಎಂದು ಬೇಡಿಕೊಳ್ಳಲಾಗಿದೆ.
‘ವಿರೋಧ ಪಕ್ಷಗಳ ನಾಯಕರಾದ ಶ್ರೀ ಸಿದ್ಧರಾಮಯ್ಯನವರಿಗೂ, ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರಿಗೂ ಮತ್ತು ಇತರ ಸರ್ವಪಕ್ಷಗಳ ನಾಯಕರಿಗೂ ಕೇಂದ್ರ ಸರ್ಕಾರ ಅನುದಾನದಲ್ಲಿ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಅಬ್ಬರಿಸುವ ಬದಲು ಕೇಂದ್ರದಿಂದ ಯಾವ, ಯಾವ ಯೋಜನೆ ಜಾರಿಗೆ ಶ್ರಮಿಸಬಹುದು ಎಂಬ ಸಲಹೆಯನ್ನು ಸರ್ಕಾರಕ್ಕೆ ನೀಡುವ ಮೂಲಕ ಅಭಿವೃದ್ಧಿ ವಿಚಾರವಾಗಿ ಸರ್ವಪಕ್ಷಗಳೂ ಒಗ್ಗಟ್ಟಾಗಿ ಶ್ರಮಿಸಲು ಮನಸ್ಸು ಕೊಡಿ ತಾಯಿ ಎಂದು ಬೇಡಿಕೊಳ್ಳಲಾಗಿದೆ.’
’ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರಿಗೆ ಕರ್ನಾಟಕ ರಾಜ್ಯದ ಎಲ್ಲಾ ಪ್ರಸ್ತಾವನೆಗಳಿಗೂ ಮಂಜೂರಾತಿ ನೀಡಲು ಮನಸ್ಸು ಕೊಡಿ ತಾಯಿ ಎಂದು ಬೇಡಿಕೊಳ್ಳಲಾಗಿದೆ.’