22nd December 2024
Share

TUMAKURU:SHAKTHI PEETA FOUNDATION

ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂಪ್ಪನವರು ಕೊರೊನಾ ಪ್ಯಾಕೇಜ್ ಅನ್ನು ಬಹುತೇಕ ವರ್ಗದವರಿಗೆ ನೀಡಿದ್ದರು. ಪ್ರಸ್ತುತ ಕೊರೊನಾ 3 ನೇ ಅಲೆ ಆರಂಭವಾಗುವ ಲಕ್ಷಣಗಳು ಗೋಚರಿಸಿವೆ. ಯಾವುದೇ ಪ್ರಭಲ ಸಂಘಟನೆ ಇಲ್ಲದೆ ರಾಜ್ಯದ ನಾಟಿ ವೈಧ್ಯ, ಪಾರಂಪರಿಕ ವೈಧ್ಯ ಮತ್ತು ಹಕೀಮರಿಗೆ ಪ್ಯಾಕೇಜ್  ನೀಡಲು ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರಿಗೆ ಬಹಿರಂಗ ಮನವಿ ಮಾಡಲಾಗಿದೆ.

‘ನ್ಯಾಷನಲ್ ಬಯೋಡೈವರ್ಸಿಟಿ ಆಥಾರಿಟಿ ಪ್ರಕಾರ  ಜನತಾ ಜೀವ ವೈವಿದ್ಯ ದಾಖಲಾತಿ’ ಯಲ್ಲಿ ದೇಶದ ಪ್ರತಿ ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಆಯಾ ವ್ಯಾಪ್ತಿಯಲ್ಲಿರುವ ನಾಟಿ ವೈಧ್ಯ, ಪಾರಂಪರಿಕ ವೈಧ್ಯ ಮತ್ತು ಹಕೀಮರನ್ನು’ ದಾಖಲಾತಿ ಮಾಡಬೇಕಿದೆ.

ಒಂದು ವೇಳೆ ದಾಖಲು ಮಾಡದೇ ಇರುವವರ ಪಟ್ಟಿಯನ್ನು ಪುನಃ ಮಾಡಲು ರಾಜ್ಯ ಮಟ್ಟದ ದಿಶಾ ಸಮಿತಿಯಲ್ಲಿ ವಿಷಯ ಪ್ರಸ್ತಾಪಿಸಲು ಸಹ ಚಿಂತನೆ ನಡೆಸಲಾಗಿದೆ. ಕೇಂದ್ರ ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತಾ ಜೀವ ವೈವಿದ್ಯ ದಾಖಲಾತಿ ಮಾಡಲು ರೂ 25000 ಹಾಗೂ ಪಾಲಿಕೆಗೆ ರೂ 200000 ಹಣ ನೀಡಿದೆಯಂತೆ. ಇಷ್ಟು ಹಣ ನೀಡಿದರೂ ಏಕೆ  ನಾಟಿ ವೈಧ್ಯ, ಪಾರಂಪರಿಕ ವೈಧ್ಯ ಮತ್ತು ಹಕೀಮರನ್ನು’ ದಾಖಲಾತಿ ಮಾಡಿಲ್ಲ ಎಂಬ ಪ್ರಶ್ನೆ ಆರಂಭವಾಗಿದೆ.

 ನಾನು ತುಮಕೂರು ಜಿಲ್ಲೆಯ ಜನತಾ ಜೀವ ವೈವಿದ್ಯ ದಾಖಲಾತಿ ಪರಿಶೀಲನೆ ಮಾಡಿದೆ. ಇದರಲ್ಲಿ ನಮ್ಮ ಊರಿನಲ್ಲಿ ಭಧ್ರಮ್ಮ ಎಂಬುವರು ಹೆಸರು ಇದೆ. ನಾನಂತು ನಮ್ಮ ಊರಿನಲ್ಲಿ ಈ ಹೆಸರಿನ ನಾಟಿ ವೈಧ್ಯರ ಹೆಸರನ್ನು ಕೇಳಿಲ್ಲ. ಶ್ರೀಕೆ.ಎಸ್.ಸದಾಶಿವಯ್ಯ ನವರು ಮತ್ತು ಶ್ರೀ ತಿಮ್ಮಕ್ಕನವರ ಸಿದ್ಧಯ್ಯನವರು ನಾಟಿ ವೈಧ್ಯದ ಜ್ಷಾನ ಹೊಂದಿದ್ದಾರೆ. ಅವರ ಹೆಸರು ಏಕೆ ದಾಖಲಾತಿ ಆಗಿಲ್ಲ.

ಈ ರೀತಿ ರಾಜ್ಯಾಧ್ಯಾಂತ ಆನೇಕರ ಹೆಸರು ಕೈಬಿಟ್ಟಿರ ಬಹುದು. ಕೊರೊನಾ ಪ್ಯಾಕೇಜ್ ಗಾದರೂ ಇವರೆಲ್ಲಾ ದಾಖಲಾತಿ ಮಾಡಿಕೊಂಡರೂ ನಮ್ಮ ರಾಜ್ಯ ಇವರ ಸೇವೆಯನ್ನು ಗೌರವಿಸಿದಂತಾಗುತ್ತಿದೆ. ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರು ಈ ಬಗ್ಗೆ ವಿಶೇಷ ಗಮನ ಹರಿಸ ಬೇಕಿದೆ.

ಶಕ್ತಿಪೀಠ ಫೌಂಡೇಷನ್ ಎರಡನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ  ನಾಟಿ ವೈಧ್ಯ, ಪಾರಂಪರಿಕ ವೈಧ್ಯ ಮತ್ತು ಹಕೀಮರಿಗೆ ಪ್ಯಾಕೇಜ್’  ಬೇಡಿಕೆಯನ್ನು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರ ಮುಂದೆ ಇಡಲು ನಿರ್ಣಯ ಮಾಡಿದೆ.

ಮೊದಲನೇ ವರ್ಷದ ಅಂಗವಾಗಿ ಆಗಿನ ಮುಖ್ಯ ಮಂತ್ರಿಯವರಾಗಿದ್ದ ಶ್ರೀ ಬಿ.ಎಸ್.ಯಡಿಯೂರಪ್ಪನವರೊಂದಿಗೆ ಊರಿಗೊಂದು ಕೆರೆ- ಕೆರೆಗೆ ನದಿ ನೀರು ಯೋಜನೆ ಮತ್ತು ರಾಜ್ಯದ ನದಿ ಜೋಡಣೆ’ಬಗ್ಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮೂಲಕ ಮಾನ್ಯ ಮುಖ್ಯ ಮಂತ್ರಿಯವರ ಗಮನ ಸೆಳೆಯಲಾಗಿತ್ತು. ಮಾನ್ಯ ಮುಖ್ಯ ಮಂತ್ರಿಯವರ ಆಧೇಶದಿಂದ ವರದಿ ಅಧ್ಯಯನ ಆರಂಭವಾಗಿದೆ.