12th September 2024
Share

TUMAKURU:SHAKTHIPEETA FOUNDATION

ಶಕ್ತಿಪೀಠ ಕ್ಯಾಂಪಸ್ ನಲ್ಲಿ ಎಲ್ಲೆಲ್ಲಿ ಏನೇನು  ಹೇಗೆ ಬರಲಿದೆ ಎಂದು ಹೇಳುವುದೇ ಒಂದು ದೊಡ್ಡ ಕೆಲಸವಾಗಿದೆ. ಒಬ್ಬ ಗೈಡ್ ಇರಲೇ ಬೇಕು ಎಂಬ ವಾತವಾರಣ ಈಗಲೇ ಸೃಷ್ಠಿಯಾಗಿದೆ. ಈ ಹಿನ್ನಲೆಯಲ್ಲಿ ಸೋಲಾರ್ ಲೈಟ್ ನೊಂದಿಗೆ ಬೋರ್ಡ್‍ಗಳನ್ನು ಹಾಕಿದರೆ ಒಂದು ರೀತಿಯಲ್ಲಿ ಸೋಲಾರ್ ಗೈಡ್ ಆಗುವುದೇ ಎಂಬ ಚರ್ಚೆ ಆರಂಭವಾಗಿದೆ.

  1. ಶಕ್ತಿಪೀಠದಲ್ಲಿ ಸುಮಾರು 150 ಕ್ಕೂ ಹೆಚ್ಚು ದೇವತೆ ಹಾಗೂ ದೇವರುಗಳ ಪ್ರಾತ್ಯಾಕ್ಷಿಕೆಗಳು.
  2. ಜಲಪೀಠದಲ್ಲಿ ಸುಮಾರು 30 ನದಿ ಜೋಡಣೆಗಳ ಪ್ರಾತ್ಯಾಕ್ಷಿಕೆಗಳು.
  3. ಅಭಿವೃದ್ಧಿ ಪೀಠದಲ್ಲಿ ಕರ್ನಾಟಕ ರಾಜ್ಯದ 31 ಜಿಲ್ಲೆಗಳ ಹಾಗೂ ಭಾರತ ದೇಶದ 37 ರಾಜ್ಯಗಳ ಅಧ್ಯಯನ ಪೀಠಗಳ ಕಟ್ಟಡಗಳು ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರಗಳು ಸೇರಿದಂತೆ ಸುಮಾರು 61 ಕಟ್ಟಡಗಳು ಬರಲಿದೆ.
  4. ಸುಮಾರು 430 ಕ್ಕೂ ಹೆಚ್ಚು ಜಾತಿಯ ಔಷಧಿ ಗಿಡ ಮತ್ತು ಇತರೆ ಗಿಡಮರಗಳು.
  5. ಭಾರತ ದೇಶದಲ್ಲಿರುವ ವಿವಿಧ ಬಂಡೆಗಳ ಮಾದರಿ ಪ್ರಾತ್ಯಾಕ್ಷಿಕೆ.
  6. ಭೂಮಿಯ ಮೇಲೆ ಗುರುತು ಮಾಡಿರುವ ಭಾರತ ನಕ್ಷೆಯ ಗಡಿ.
  7. ಕ್ಯಾಂಪಸ್‍ನಲ್ಲಿ  ಕೃತಕವಾಗಿ ನಿರ್ಮಾಣ ಮಾಡಿರುವ ಹಿಂದೂ ಮಹಾ ಸಾಗರ, ಅರಬ್ಬಿ ಸಮುದ್ರÀ ಮತ್ತು ಬಂಗಾಳ ಕೊಲ್ಲಿಗಳ ಪ್ರಾತ್ಯಾಕ್ಷಿಕೆ.
  8. ಕ್ಯಾಂಪಸ್‍ನಲ್ಲಿ  ನಿರ್ಮಾಣ ಮಾಡಿರುವ ರಿಂಗ್ ರಸ್ತೆ ಮತ್ತು ಅಷ್ಟಮಾರ್ಗಗಳು.
  9. ಕ್ಯಾಂಪಸ್‍ನಲ್ಲಿ  ನಿರ್ಮಾಣ ಮಾಡಿರುವ ಅಷ್ಟ ಭುಜಾಕೃತಿ.

 ಇವೆಲ್ಲಾ ಲೇಔಟ್ ನಲ್ಲಿ ಬಂದಿದೆ, ಆದರೂ ಮ್ಯಾಪ್ ನಲ್ಲಿ ಬಂದಿರುವ ಎಲ್ಲಾ ಮಾಹಿತಿಗಳನ್ನು ಭೂಮಿಯ ಮೇಲೆ ಸೋಲಾರ್ ಲೈಟ್ ಮತ್ತು ಬೋರ್ಡ್ ಹಾಕುವ ಮೂಲಕ ಮಾಹಿತಿ ಪ್ರತಿಯೊಬ್ಬರಿಗೂ ಅರ್ಥವಾಗುವ ವಾತವಾರಣ ಸೃಷ್ಟಿ ಮಾಡಲು ಶಕ್ತಿಪೀಠ ಫೌಂಡೇಷನ್ ವಿಶೇಷ ಗಮನ ಹರಿಸಿದೆ.

ಈ ಬಗ್ಗೆ ಕೆಲವು ಸೋಲಾರ್ ಲೈಟ್ ಕಂಪನಿಗಳ ಜೊತೆ ಸಮಾಲೋಚನೆ ನಡೆಸಲಾಗಿದೆ. ಇದು ಒಂದು ಇನ್ನೋವೇಷನ್. ಕ್ಯಾಂಪಸ್ ತುಂಬಾ ನಾಮಫಲಕ ಮತ್ತು ಲೈಟ್ ಹಾಕುವ ಬದಲು ಲೈಟ್ ಮತ್ತು ನಾಮಫಲಕ ಎರಡು ಒಂದರಲ್ಲಿ ಬರಬೇಕು. ಇದು ಕ್ಯಾಂಪಸ್ ನಲ್ಲಿ ಯಾವುದೇ ಗೈಡ್ ಇರದೆ, ಗೈಡ್‍ಗಳು ಹೇಳುವುದನ್ನು ನಾಮಫಲಕಗಳಿಂದಲೇ ತೋರಿಸಲು ಸಾಧ್ಯವೇ ಎಂಬ ಆಲೋಚನೆಯಿದೆ. ಸುಮಾರು ಅರ್ಧಗಂಟೆಯ ವಿಡಿಯೋ ಮಾಡುವ ಮೂಲಕವೂ ಪ್ರದರ್ಶನ ಮಾಡುವ ಉದ್ದೇಶವಿದೆ.

ಒಂದೊಂದಕ್ಕೂ ಒಂದೊಂದು ಕಲರ್ ನೀಡುವ ಮೂಲಕ ತಕ್ಷಣ ಗುರುತು ಹಚ್ಚುವ ಕೆಲಸವೂ ಆಗಬೇಕಿದೆ. ಒಂದೋಂದು ಪ್ರಾತ್ಯಾಕಿಕೆಗಳ ಲೇಯರ್ ಲೈಟ್ ಆಫ್ ಮತ್ತು ಆನ್ ಮಾಡುವ ವ್ಯವಸ್ಥೆಯೂ ಇರಬೇಕು. ಈ ರೀತಿ ಕೆಲಸ ಮಾಡುವ ಪರಿಣಿತರು ಇದ್ದಲ್ಲಿ ಸಂಪರ್ಕಿಸಲು ಮನವಿ.

ಈ ಆಲೋಚನೆಯ ಜೊತೆಗೆ ಇನ್ನೂ ಯಾವುದಾರೂ ಉತ್ತಮ ಐಡಿಯಾ ತಮ್ಮಲ್ಲಿ ಇದ್ದಲ್ಲಿ ತಾವೂ ಸಹ ಹಂಚಿಕೊಳ್ಳಲು ಮನವಿ.