TUMAKURU:SHAKTHI PEETA FOUNDATION
ಕರ್ನಾಟಕ ರಾಜ್ಯದ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೆಶನಾಲಯ ಪ್ರತಿ ವರ್ಷ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಅಂಕಿ ಅಂಶಗಳ ನೋಟವನ್ನು ಬಿಡುಗಡೆ ಮಾಡುತ್ತಿದೆ. ಡಿಜಿಟಲ್ ಯುಗದಲ್ಲೂ ಯಾವೊದೋ ಓಬಿರಾಯನ ಕಾಲದ ಮೆಥೆಡ್ ನಲ್ಲಿ ಪ್ರಕಟಣೆ ಮಾಡುತ್ತಿದೆ. ಈ ಬಗ್ಗೆ ನಿರ್ದೆಶಕರಾದ ಶ್ರೀ ಮಾಧವ್ ರವರೊಂದಿಗೆ ಬೆಂಗಳೂರಿನ ಅವರ ಕಚೇರಿಯಲ್ಲಿ ಸಮಾಲೋಚನೆ ನಡೆಸಲಾಯಿತು.
ಕೇಂದ್ರ ಸರ್ಕಾರದ ಪಶುಪಾಲನಾ ಸಚಿವಾಲಯದ ಲೈವ್ ಡಾಟಾ ಪೋರ್ಟಲ್ ನೋಡಿ ಪ್ರತಿ ಸೆಕೆಂಡ್ ನ ಮಾಹಿತಿಯೂ ಅಫ್ ಡೇಟ್ ಆಗುತ್ತದೆ. ತಾವು ಏಕೆ ಈ ರೀತಿ ಲೈವ್ ಡಾಟಾ ಮಾಡಲು ಮುಂದಾಗಿಲ್ಲ ಎಂಬ ಪ್ರಶ್ನೆಗೆ ಅವರ ಉತ್ತರ ಸರ್ಕಾರದಿಂದ ನಿರ್ದೇಶನ ಬಂದಲ್ಲಿ ‘ಲೈವ್ ಡಾಟಾ ಬೇಸ್’ ಮಾಡಲಾಗುವುದು.
ಪ್ರತಿಯೊಂದು ಇಲಾಖೆಯೂ ಡಿಜಿಟಲ್ ಡಾಟಾ ಬೇಸ್ ಮಾಡುತ್ತಿದೆ. ನಮ್ಮ ಇಲಾಖೆಯು ಸಹ ಅಗತ್ಯ ಉಪಕರಣಗಳು ಮತ್ತು ಸಲಕರಣೆಗಳನ್ನು ಹಾಗೂ ಜಿಐಎಸ್ ಪರಿಣಿತರನ್ನು ನೀಡಿದಲ್ಲಿ ನಾವು ಸಹ ಮಾಡಲು ಉತ್ಸುಕರಾಗಿದ್ದೇವೆ ಎಂಬ ಸಮಾಲೋಚನೆ ನಡೆಸಲಾಯಿತು.
ತುಮಕೂರು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಂದು ಇಲಾಖೆಯ ಅಂಕಿ ಅಂಶಗಳನ್ನು ಡಿಜಿಟಲ್ ಡಾಟಾ ಬೇಸ್ ಮಾಡುವ ಬಗ್ಗೆ ಅಧ್ಯಯನವನ್ನು ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಆರಂಭಿಸಿದೆ. 2022 ರ ವೇಳೆಗೆ ತುಮಕೂರು ಜಿಲ್ಲೆಯನ್ನು ‘ಡಿಜಿಟಲ್ ಡಾಟಾ ಜಿಲ್ಲೆ ಘೋಷಣೆ’ ಮಾಡಲು ಶ್ರಮಿಸುತ್ತಿರುವುದರಿಂದ ತಮ್ಮ ಇಲಾಖೆಯು ನೇತೃತ್ವ ವಹಿಸ ಬೇಕಿದೆ ಎಂಬ ಬಗ್ಗೆ ಮನವರಿಕೆ ಮಾಡಲಾಯಿತು.
ಸರ್ಕಾರದ ಹಂತದಲ್ಲಿ ನಡವಳಿಕೆ ಮಾಡಿದಲ್ಲಿ ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಡಿಜಿಟಲ್ ಅಂಕಿ ಅಂಶಗಳ ಮಾಹಿತಿಯನ್ನು ಲೈವ್ ಮಾಡಬಹುದಾಗಿದೆ ಎಂಬ ಅಭಿಪ್ರಾಯ ಬಂದಿದೆ.
ಈ ಸಂದರ್ಭದಲ್ಲಿ ಚಿಕ್ಕ ಮಂಗಳೂರು ಸಿಪಿಓ ಶ್ರೀ ಪರಪ್ಪಸ್ವಾಮಿಯವರು ಕಚೇರಿಯಲ್ಲಿ ಇದ್ದರು.