22nd December 2024
Share

‘ಊರಿಗೊಂದು ಕೆರೆ- ಆ ಕೆರೆಗೆ ನದಿ’ ನೀರು ಯೋಜನೆ ಮಾಡಿ, ರಾಜ್ಯದ 29340 ಗ್ರಾಮಗಳ 38608 ಕೆರೆ-ಕಟ್ಟೆಗಳಿಗೆ ನದಿ ನೀರು ತುಂಬಿಸಲು ಎಷ್ಟು ಟಿ.ಎಂ.ಸಿ.ಅಡಿ ನೀರು ಬೇಕಾಗಿದೆ ಎಂದು ಲೆಕ್ಕಾ ಹಾಕುತ್ತಿರುವ ಶ್ರೀ ಜಿ.ಎಸ್.ಬಸವರಾಜ್.

TUMAKURU:SHAKTHIPEETA FOUNDATION

 ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ಕ್ಯಾಂಪಸ್  ಕರ್ನಾಟಕ ರಾಜ್ಯ ಕೇಂದ್ರ ಸರ್ಕಾರದಿಂದ ಅತಿ ಹೆಚ್ಚಿನ ಅನುದಾನ ಪಡೆದ ರಾಜ್ಯವನ್ನಾಗಿಸುವ ಗುರಿ ಹೊಂದಿರುವುದರಿಂದ’ ನಮ್ಮ ರಾಜ್ಯದ 225 ವಿಧಾನ ಸಭಾ ಸದಸ್ಯರ, 75 ವಿಧಾನ ಪರಿಷತ್ ಸದಸ್ಯರ, 12 ಜನ ರಾಜ್ಯ ಸಭಾ ಸದಸ್ಯರ, 28 ಜನ ಲೋಕಸಭಾ ಸದಸ್ಯರ, ಒಬ್ಬರು ದೆಹಲಿ ಪ್ರತಿನಿಧಿ, 31 ಜನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, 31 ಜನ ಜಿಲ್ಲಾಧಿಕಾರಿಗಳು ಮತ್ತು 31 ಜನ ಜಿಲ್ಲಾ ಪಂಚಾಯತ್ ಸಿಇಓಗಳು ಹಾಗೂ ಜಿಲ್ಲಾ ಮಟ್ಟದ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿಗಳು ಸೇರಿದಂತೆ ‘440 ಜನರ ಅಭಿವೃದ್ಧಿ ಚಟುವಟಿಕೆಗಳ ಮೌಲ್ಯಮಾಪನ ಮಾಡಿ ಅಭಿವೃದ್ಧಿ ಜಾಗೃತಿ ಮೂಡಿಸುವ ಮಹತ್ತರವಾದ ಉದ್ದೇಶ ಹೊಂದಿದೆ’.

 ‘ಭೂಮಿಯ ಮೇಲೆ ಭಾರತದ ನಕ್ಷೆಯನ್ನು ಮಾಡಿ ವಿಶ್ವದ 108 ಶಕ್ತಿಪೀಠಗಳ, 12 ಜ್ಯೋತಿರ್ಲಿಂಗಗಳ ಮತ್ತು 3 ಸಾಯಿಬಾಬಾ(ಶಿರಡಿ-ಪುಟ್ಟಪರ್ತಿ- ಭವಿಷ್ಯದಲ್ಲಿ ಮಂಡ್ಯ) ಸೇರಿದಂತೆ ಹಲವಾರು ಪ್ರಾತ್ಯಾಕ್ಷಿಕೆಗಳು. ದೇಶದ 30 ನದಿ ಜೋಡಣೆ ಪ್ರಾತ್ಯಾಕ್ಷಿಕೆ ಹಾಗೂ ಈ 440 ಜನರ ಹೆಸರಿನಲ್ಲೂ ಒಂದೊಂದು ಜಾತಿಯ ಔಷಧಿಗಿಡ/ವಿವಿಧ ಜಾತಿಯ ಮರ ಗಿಡಳನ್ನು ಬೆಳೆಸುವ ಕಾರ್ಯ ಆರಂಭವಾಗಿದೆ’.

 ನನ್ನ 33 ವರ್ಷದ ಅಭಿವೃದ್ಧಿ ಪಯಣದ ಅನುಭವದ ಹಿನ್ನಲೆಯಲ್ಲಿ, ಈ ಕ್ಯಾಂಪಸ್ ದಾನಿಗಳ, ಸಿಎಸ್‍ಆರ್ ಫಂಡ್ ಮತ್ತು ಹೂಡಿಕೆ ದಾರರ ಸಹಕಾರವನ್ನು ಪಡೆದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಶಕ್ತಿಪೀಠ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಪಿಪಿಪಿ ಮಾದರಿಯಲ್ಲಿ ಆರಂಭಿಸುವ ಪರಿಕಲ್ಪನೆಯಿದೆ. ಕಾಕತಾಳೀಯವಾಗಿ ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾಗಿರುವುದರಿಂದ ಯೋಜನೆಗೆ ಪೂರಕವಾಗಿದೆ.

ಯಾವ ರೀತಿ ಮಾಡಬೇಕು ಎಂಬ ಬಗ್ಗೆ ಕಳೆದ 5 ವರ್ಷಗಳಿಂದ ಲೈವ್ ಆರ್ ಅಂಡ್ ಡಿ’ ಮಾಡುತ್ತಾ ಕ್ಯಾಂಪಸ್ ಲೇಔಟ್ ಮಾಡಲಾಗಿದೆ. ಪ್ರಥಮ ಭವನದ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಇದೊಂದು ಪ್ರಭುಧ್ಧರ, ಅಭಿವೃದ್ಧಿ ಚಿಂತಕರ ತಾಣವಾಗುವ ಲಕ್ಷಣಗಳು ಕನಸಿನಲ್ಲಿ ತೇಲಾಡುತ್ತಿವೆ. 108 ಶಕ್ತಿದೇವತೆಗಳ ಕೃಪೆ ಹೇಗಿದೆಯೋ ಕಾದು ನೋಡೋಣ!’

ತಾವೂ ಸಲಹೆ ನೀಡಬಹುದು.

ಕ್ರಮಾಂಕ: ಶಕ್ತಿಪೀಠ/ ಒಂದನೇ ಭವನ/1                           ದಿನಾಂಕ:08.08.2021                          

ಗೆ.

ಶ್ರೀ ಜಿ.ಎಸ್.ಬಸವರಾಜ್ ರವರು

ತುಮಕೂರು ಲೋಕಸಭಾ ಸದಸ್ಯರು.

ತುಮಕೂರು.

ಮಾನ್ಯರೇ

ವಿಷಯ: ತುಮಕೂರು ಮತ್ತು ಉತ್ತರಖಾಂಡ ಭವನ ನಿರ್ಮಾಣ ಮಾಡಲು ತಮ್ಮ ಅನುಮತಿ ಬಗ್ಗೆ.

  ಕಳೆದ 31 ವರ್ಷದ ನನ್ನ ಮತ್ತು ನಿಮ್ಮ ಒಡನಾಟದ ಅಂಗವಾಗಿ ಹಾಗೂ ತಮ್ಮ 80 ನೇ ವರ್ಷದ ಸವಿ ನೆನೆಪಿನ ಅಂಗವಾಗಿ ತಮ್ಮ ಮತ್ತು ಶ್ರೀಮತಿಯವರ ಹೆಸರಿನಲ್ಲಿ ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕಿನ ವಡ್ಡನಹಳ್ಳಿಗೆ ಹೊಂದಿಕೊಂಡಿರುವ ಬಗ್ಗನಡುಕಾವಲ್ ನಲ್ಲಿ ಶಕ್ತಿಪೀಠ ಫೌಂಡೇಷನ್ ವತಿಯಿಂದ ನಿರ್ಮಾಣವಾಗುತ್ತಿರುವ ಕ್ಯಾಂಪಸ್‍ನಲ್ಲಿ  ತುಮಕೂರು – ಉತ್ತರಖಾಂಡ ಭವನ’ ನಿರ್ಮಾಣ ಮಾಡಲು ತಮ್ಮ ಅನುಮತಿ ನೀಡಲು ಈ ಮೂಲಕ ಕೋರಿದೆ.

  ಕಳೆದ 20 ವರ್ಷದಿಂದ ತಮ್ಮ ಪೋಷಕತ್ವದಲ್ಲಿ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ರಚಿಸಿಕೊಂಡು ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ನಿರಂತರವಾಗಿ  ಶ್ರಮಿಸುತ್ತಿದ್ದು. ದಿನಾಂಕ:15.08.2022 ರೊಳಗೆ ತುಮಕೂರು ಜಿಲ್ಲೆಯನ್ನು ಡಿಜಿಟಲ್ ಡಾಟಾ ಜಿಲ್ಲೆಯಾಗಿ ಘೋಷಣೆ’ ಮಾಡಲು ಹಗಲು ಇರಳು ಶ್ರಮಿಸುತ್ತಿರುವುದರಿಂದ ಮತ್ತು ಉತ್ತರಖಾಂಡ ‘108 ಶಕ್ತಿಪೀಠಗಳ ಸ್ಥಾಪನೆಯ ತವರು’ ಆಗಿರುವುದರಿಂದ ‘ತುಮಕೂರು-ಉತ್ತರಖಾಂಡ ಭವನ’ ವನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.

   29X51=1479 ಚದುರ ಅಡಿ ಈ ಭವನದಲ್ಲಿ ನೆಲಮಹಡಿ-ವಾಹನ ಪಾರ್ಕಿಂಗ್, ಮೊದಲನೇ ಮಹಡಿಯಲ್ಲಿ ನಾಲ್ಕು ಕೊಠಡಿಗಳು, ಎರಡನೇ ಮಹಡಿಯಲ್ಲಿ ಐದು ಕೊಠಡಿಗಳು, ಮೂರನೇ ಮಹಡಿಯಲ್ಲಿ ಆರು ಕೊಠಡಿಗಳು ಮತ್ತು ಮೇಲ್ಭಾಗದಲ್ಲಿ ಸೋಲಾರ್ ರೂಪ್ ನಿರ್ಮಾಣ ಮಾಡಿ ಉಪಹಾರ ಬಳಕೆಗೆ ಬಳಸಲು ಚಿಂತನೆ ನಡೆಸಲಾಗಿದೆ.

  ಈ ಭವನದ 15 ಕೊಠಡಿಗಳಿಗೂ ಒಂದೊಂದು ‘ನದಿ ಹೆಸರನ್ನು’ ಇಡಲಾಗುವುದು. ರಾಜ್ಯದ 31 ಜಿಲ್ಲೆಗಳ ಮತ್ತು ದೇಶದ 37 ರಾಜ್ಯಗಳ ತಲಾ ಒಬ್ಬರಂತೆ ಸುಮಾರು 31 ರಿಂದ 37 ಜನರಿಗೆ ನಿರಂತರವಾಗಿ ಬ್ಯಾಚ್ ಮಾಡಿ, ತರಬೇತಿ ನೀಡುವ ಮೂಲಕ ದೇಶದ ಒಂದೊಂದು ಹನಿ ನೀರಿನ ಡಿಜಿಟಲ್ ಡಾಟಾಬೇಸ್’ ಸಂಗ್ರಹಣೆ ಮಾಡಿ, ಜಲ ಶಕ್ತಿ ಜಾಗೃತಿ’ ಮೂಡಿಸಲು ಬಳಸಿಕೊಳ್ಳಲಾಗುವುದು. ದಿನಾಂಕ:22.08.2021 ರಂದು ಭವನದ ಶಂಕುಸ್ಥಾಪನಾ ಮಾಡಿ, ದಿನಾಂಕ:04.05.2022 ರೊಳಗೆ ಲೋಕಾರ್ಪಣೆ ಮಾಡಲಾಗುವುದು’.

ತಮ್ಮ ಅಭಿಮಾನಿಗಳು ತಂಡ ರಚಿಸಿಕೊಂಡು ಈ ಭವನ ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಲು ಉದ್ದೇಶಿಸಿದ್ದಾರೆ. ನಮ್ಮ ಪೌಂಡೇಷನ್ ರಾಜ್ಯದ 31 ಜಿಲ್ಲೆಗಳು ಮತ್ತು ದೇಶದ 37 ರಾಜ್ಯಗಳ ಹೆಸರಿನಲ್ಲಿ ಸುಮಾರು 37 ಭವನಗಳನ್ನು ನಿರ್ಮಾಣ ಮಾಡಿ ಸುಮಾರು ‘440 ಅಭಿವೃದ್ಧಿ ಅಧ್ಯಯನ ಪೀಠಗಳ ಹಬ್’ ಮಾಡಲು ನಿರ್ಧಿಷ್ಠ ಗುರಿ ಹೊಂದಲಾಗಿದೆ. ತಮ್ಮ ಹೆಸರಿನಲ್ಲಿ ನಿರ್ಮಾಣವಾಗುವ ಈ ಭವನ ಪ್ರಥಮ ಕಟ್ಟಡವಾಗಿದೆ ಎಂಬ ಅಂಶವನ್ನು ಆಧ್ಯಗಮನಕ್ಕೆ ತರಬಯಸುತ್ತೇನೆ.

ವಂದನೆಗಳೊಂದಿಗೆ                                               ತಮ್ಮ ವಿಶ್ವಾಸಿ

            (ಕುಂದರನಹಳ್ಳಿ ರಮೇಶ್)