TUMAKURU:SHAKTHI PEETA FOUNDATION
ಕ್ರಮಾಂಕ:ಅಮೃತಮಹೋತ್ಸವ /ಸಿಎಂ/1/2021 ದಿನಾಂಕ:09.08.2021
ಗೆ.
ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿರವರು.
ಮುಖ್ಯ ಮಂತ್ರಿಗಳು ಹಾಗೂ ಅಧ್ಯಕ್ಷರು ರಾಜ್ಯ ಮಟ್ಟದ ದಿಶಾ ಸಮಿತಿ.
ಕರ್ನಾಟಕ ಸರ್ಕಾರ. ವಿಧಾನ ಸೌಧ ಬೆಂಗಳೂರು.
ಮಾನ್ಯರೇ.
ವಿಷಯ:- 2022 ರ 75 ನೇ ವರ್ಷದ ಸ್ವಾತಂತ್ಯ್ರದ ವೇಳೆಗೆ ಶೇ 100 ರಷ್ಟು ಗುರಿ ತಲುಪಲು ಶ್ರಮಿಸಬಹುದಾದ ಯೋಜನೆಗಳ ಪಟ್ಟಿ.
ಕೇಂದ್ರ ಸರ್ಕಾರ ಈಗಾಗಲೇ ಘೋಶಿಸಿರುವ ಕಾಲಮಿತಿ ಯೋಜನೆಗಳು ಮತ್ತು ರಾಜ್ಯ ಸರ್ಕಾರದ ಕೆಲವು ಮಾಡ ಬಹುದಾದ ಯೋಜನೆಗಳು ಸೇರಿದಂತೆ ಅಮೃತ ಮಹೋತ್ಸವ ಸ್ವಾತಂತ್ಯ್ರದ ವೇಳೆಗೆ (22.08.222) ಘೋಷಣೆ ಮಾಡುವ ಯೋಜನೆಗಳ ಪಟ್ಟಿಯನ್ನು ಮಾಡಲಾಗಿದೆ. ಇವುಗಳ ಜೊತೆಗೆ ಇತರೆ ಇಲಾಖೆಗಳ ಯೋಜನೆಗಳನ್ನು ಸೇರ್ಪಡೆ ಮಾಡಿ, ಕೇಂದ್ರ ಸರ್ಕಾರದ ಮಾದರಿಯಲ್ಲಿ 75 ಯೋಜನೆಗಳ ಶೇ 100 ರಷ್ಟು ಪ್ರಗತಿ ಸಾಧಿಸಲು ಗುರಿ ಹಾಕಿ ಕೊಳ್ಳಲು ಈ ಮೂಲಕ ಕೋರಿದೆ.
- 2019 ರೊಳಗೆ ರಾಜ್ಯದ ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಸರಬರಾಜು ಮಾಡುವುದು.
- 2019 ರೊಳಗೆ ರಾಜ್ಯದ ಎಲ್ಲಾ ಗ್ರಾಮ ಪ್ರತಿಯೊಂದು ಮನೆಗಳಿಗೂ ವಿದ್ಯುತ್ ಸರಬರಾಜು ಮಾಡುವುದು.
- 2019 ರೊಳಗೆ ರಾಜ್ಯದ ಎಲ್ಲಾ ರೈಲ್ವೆ ಮಾರ್ಗಗಳಲ್ಲಿ ರೈಲ್ವೇ ಕೆಳ ಸೇತುವೆ ಅಥವಾ ಮೇಲು ಸೇತುವೆ ನಿರ್ಮಾಣ ಮಾಡುವುದು.
- 2022 ರೊಳಗೆ ರಾಜ್ಯದ ಪ್ರತಿಯೊಬ್ಬರಿಗೂ ಸೂರು.
- 2022 ರೊಳಗೆ ರಾಜ್ಯದ ರೈತರ ಆದಾಯ ದುಪ್ಪಟ್ಟು ಮಾಡುವುದು.
- 2024 ರೋಳಗೆ ರಾಜ್ಯದ ಎಲ್ಲಾ ಮನೆಗಳಿಗೂ ನಲ್ಲಿ ನೀರು ನೀರು ನೀಡುವುದು.
- 2024 ರೊಳಗೆ ರಾಜ್ಯದ ಎಲ್ಲಾ ನಿವೇಶನ, ಮನೆ ಸ್ವತ್ತುಗಳಿಗೆ ಪ್ರಾಪರ್ಟಿ ಕಾರ್ಡ್ ನೀಡುವುದು.
- 2022 ರೊಳಗೆ ರಾಜ್ಯದ ಎಲ್ಲಾ ಮನೆಗಳಿಗೂ ಶೌಚಾಲಯ.
- 2022 ರೊಳಗೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಘನತ್ಯಾಜ್ಯ ಘಟಕ ಸ್ಥಾಪನೆ ಮಾಡುವುದು.
- 2022 ರೊಳಗೆ ರಾಜ್ಯದ ಎಲ್ಲಾ ಗ್ರಾಮಗಳಿಗೂ ಸ್ಮಶಾನ.
- 2022 ರೊಳಗೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ನಲ್ಲಿ ನೀರು ಸರಬರಾಜು.
- 2022 ರೊಳಗೆ ರಾಜ್ಯದ ಎಲ್ಲಾ ಅಂಗನವಾಡಿಗಳಿಗೆ ನಲ್ಲಿ ನೀರು ಸರಬರಾಜು.
- 2022 ರೊಳಗೆ ರಾಜ್ಯದ ಎಲ್ಲಾ ಗ್ರಾಮಗಳ ಕೆರೆ-ಕಟ್ಟೆಗಳಿಗೆ ನದಿ ನೀರಿನ ಅಲೋಕೇಷನ್ ಮಾಡುವುದು.
- 2022 ರೊಳಗೆ ರಾಜ್ಯದ ಎಲ್ಲಾ ಗ್ರಾಮಪಂಚಾಯಿತಿಗಳ ನಕ್ಷೆಯಲ್ಲಿ ಪ್ರತಿಯೊಂದು ಸ್ವತ್ತಿನ ಜಿಐಎಸ್ ಲೇಯರ್ ಸಿದ್ಧಪಡಿಸುವುದು.
- 2022 ರೊಳಗೆ ರಾಜ್ಯದ ಎಲ್ಲಾ ನಗರ ಸ್ಥಳಿಯ ಸಂಸ್ಥೆಗಳ ನಕ್ಷೆಯಲ್ಲಿ ಪ್ರತಿಯೊಂದು ಸ್ವತ್ತಿನ ಜಿಐಎಸ್ ಲೇಯರ್ ಸಿದ್ಧಪಡಿಸುವುದು.
- 2022 ರೊಳಗೆ ರಾಜ್ಯದ ಮ್ಯಾಪ್-1 ಸ್ಟೇಟ್-1 ಘೋಷಣೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳು ಒಂದೆ ಡಿಜಿಟಲ್ ನಕ್ಷೆಯಲ್ಲಿ ಸ್ಥಳೀಯ ಸಂಸ್ಥೆವಾರು ಲೈವ್ ಅಫ್ ಡೇಟ್ ಮಾಡುವುದು. ಸ್ಥಳೀಯ ಸಂಸ್ಥೆಗಳು ತಪಾಸಣೆ ಮಾಡಿ ಅಂತಿಮ ಮುದ್ರೆ ಒತ್ತುವುದು.
- 2022 ರೊಳಗೆ ರಾಜ್ಯದ ಎಲ್ಲಾ ಇಲಾಖೆಗಳ ಪ್ರತಿಯೊಂದು ಡಾಟಾ ಲೈವ್ ಅಫ್ ಡೇಟ್ ಮಾಡುವುದು. ಸ್ಥಳೀಯ ಸಂಸ್ಥೆಗಳು ತಪಾಸಣೆ ಮಾಡಿ ಅಂತಿಮ ಮುದ್ರೆ ಒತ್ತುವುದು.
- 2022 ರೊಳಗೆ ಸಾಮಾಜಿಕ ಭಧ್ರತೆಯಡಿ ಅರ್ಹರಿಗೆ ಅಗತ್ಯ ನೆರವು ಶೇ 100 ರಷ್ಟು ಘೋಷಣೆ ಮಾಡುವುದು.
- 2022 ರೊಳಗೆ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ಗ್ರಾಮವಾರು ವಾಟರ್ ಬಡ್ಜೆಟ್, ವಾಟರ್ ಆಡಿಟ್ ಮತ್ತು ವಾಟರ್ ಸ್ಟ್ರಾಟಜಿ ಘೋಷಣೆ ಮಾಡುವುದು.
- 2022 ರೊಳಗೆ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಜೀವ ವೈವಿಧ್ಯ ದಾಖಲಾತಿ ಅಂತಿಮ ಗೊಳಿಸುವುದು.
- 2022 ರೊಳಗೆ ರಾಜ್ಯದ ಎಲ್ಲಾ ಪಾರಂಪರಿಕ ವೈಧ್ಯರು, ನಾಟಿ ವೈಧ್ಯರು ಮತ್ತು ಹಕೀಮರಿಗೆ ಗುರುತಿನ ಪತ್ರ ನೀಡುವುದು.
- 2022 ರೊಳಗೆ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವೈಧ್ಯರು, ನಾಟಿ ವೈಧ್ಯರು ಮತ್ತು ಹಕೀಮರ ಸಹಭಾಗಿತ್ವದಲ್ಲಿ ಔಷಧಿ ವನ ನಿರ್ಮಾಣ ಮಾಡುವುದು.
- 2022 ರೊಳಗೆ ರಾಜ್ಯದ ಎಲ್ಲಾ ಕುಟುಂಬಗಳಿಗೂ ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ ಮಾಡುವುದು.
- 2022 ರೊಳಗೆ ರಾಜ್ಯದ ಎಲ್ಲಾ ಕೊಳಚೆ ಪ್ರದೇಶಗಳ ಕುಟುಂಬಗಳಿಗೂ ಸ್ವತ್ತಿನ ದಾಖಲೆ ನೀಡುವುದು.
- 2022 ರೊಳಗೆ ರಾಜ್ಯದ ಎಲ್ಲಾ ಗ್ರಾಮಗಳ ಸರ್ಕಾರಿ ಸ್ವತ್ತುಗಳ ಪಟ್ಟಿ ಘೋಷಣೆ ಮಾಡುವುದು.
ಈ ಬಗ್ಗೆ ಪ್ರತಿಯೊಂದು ಇಲಾಖೆಗಳ ಶೇಕಡವಾರು ಪ್ರಗತಿಯ ಬಗ್ಗೆ ಮುಂದಿನ ದಿಶಾ ಸಭೆಗೆ ಮುಂಚೆ ಮಾಹಿತಿ ನೀಡಲು. ಈ ಮೂಲಕ ಕೋರಿದೆ.
ವಂದನೆಗಳೊಂದಿಗೆ ತಮ್ಮ ವಿಶ್ವಾಸಿ
(ಕುಂದರನಹಳ್ಳಿ ರಮೇಶ್)
ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ.
ಪಾರ್ವತಿ ನಿಲಯ, ಒಂದನೇ ಮುಖ್ಯ ರಸ್ತೆ.ಜಯನಗರ ಪೂರ್ವ. ತುಮಕೂರು-572102 ಮೊ:9886774477
ತಾವೂ ಸಲಹೆ ನೀಡಬಹುದು