21st November 2024
Share

PMKSY#ATAL BHUJAL#JALJEEVAN MISSION#RIVER LINKING

TUMKURU:SHAKTHI PEETA FOUNDATION

 ‘ಹರಿಯುವ ನೀರನ್ನು ತಡೆಯಿರಿ ತಡೆದ ನೀರನ್ನು ಇಂಗಿಸಿರಿ’ ಈ ವಾಕ್ಯ ಕರ್ನಾಟಕದ ರಾಜ್ಯದ ಮಟ್ಟಿಗೆ ಬದಲಾಗಿ ಹರಿಯುವ ನೀರನ್ನು ತಡೆದು-ಹಿಂಗಿಸಿದ ನೀರನ್ನು-ಬೋರ್ ವೆಲ್ ಬಕಾಸುರ ಕಬಳಿಸಿದ’ ಎಂದು ಹೇಳಬಹುದಾಗಿದೆ. ಇದು ಕಟು ಸತ್ಯ

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ:

ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ದೇಶಾಧ್ಯಾಂತ 2016 ರಲ್ಲಿ ನೀರಿನ ಆಡಿಟ್, ನೀರಿನ ಬಡ್ಜೆಟ್ ಮತ್ತು ನೀರಿನ ಸ್ಟ್ರಾಟಜಿ ಮಾಡಿಸಿದರು. ಇದಕ್ಕೆ ‘ಸ್ಟೇಟ್ ಇರ್ರಿಗೇಷನ್ ಪ್ಲಾನ್’ ಮತ್ತು ಡಿಸ್ಟ್ರಿಕ್ಟ್ ಇರ್ರಿಗೇಷನ್ ಪ್ಲಾನ್’ ಎಂದು ಕರೆದರು. ಕೇಂದ್ರದ ಪೋರ್ಟಲ್ ನಲ್ಲಿ ಅಫ್ ಲೋಡ್ ಆಗಿದೆ.

  1. ರಾಜ್ಯದಲ್ಲಿ ಉತ್ಪತ್ತಿಯಾಗುವ ನದಿ ನೀರು   3438 ಟಿ.ಎಂ.ಸಿ ಅಡಿ ನೀರು.
  2. ಇದೂವರೆಗೂ ಅಲೋಕೇಷನ್ ಆಗಿರುವ ನದಿ ನೀರು 1246 ಟಿ.ಎಂ.ಸಿ ಅಡಿ ನೀರು.
  3. ಉಳಿದಿರುನ ನದಿ ನೀರು 2192 ಟಿ.ಎಂ.ಸಿ ಅಡಿ ನೀರು.
  4. ರಾಜ್ಯದ ಎಲ್ಲಾ ಕೆರೆ ಕಟ್ಟೆಗಳಿಗೆ ಅಗತ್ಯವಿರುವ ನದಿ ನೀರಿನ ಸಾಮಾಥ್ರ್ಯ ಕೇವಲ 350 ಟಿ.ಎಂ.ಸಿ ಅಡಿ ನೀರು.
  5. ರಾಜ್ಯದ ಗ್ರಾಮೀಣ ಭಾಗದ ಜನರಿಗೆ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನಲ್ಲಿ ನೀರು ನೀಡಲು ಅಗತ್ಯವಿರುವ ನೀರು ಕೇವಲ 72 ಟಿ.ಎಂ.ಸಿ ಅಡಿ ನೀರು.
  6. ಕೆರೆಗಳಿಲ್ಲದ ಗ್ರಾಮಗಳಿಗೆ ವಾಟರ್ ಬಾಡಿ ನಿರ್ಮಾಣ ಮಾಡಲಿ ಅಲೋಕೇಷನ್ ಮಾಡಲು ಬೇಕಾಗುವ ನದಿ ನೀರು, ಅಂತರ್ಜಲ, ನೀರಿನ ಆವಿಯಾಗುವಿಕೆ, ಇತರೆ ಎಲ್ಲಾ ವಿಧವಾದ ಲಾಸ್ ಸುಮಾರು 178 ಟಿ.ಎಂ.ಸಿ ಅಡಿ ನೀರು.

ಅಟಲ್ ಭೂಜಲ್:

ಈ ಯೋಜನೆಯು ಸಹ ರಾಜ್ಯದ 41 ತಾಲ್ಲೂಕಗಳಲ್ಲಿ  ವಾಟರ್ ಆಡಿಟ್, ವಾಟರ್ ಬಡ್ಜೆಟ್ ಮತ್ತು ವಾಟರ್ ಸ್ಟ್ರಾಟಜಿ ಮಾಡುವ ಮಹತ್ವಾಕಾಂಕ್ಷೆ ಯೋಜನೆ. ಇದನ್ನು ರಾಜ್ಯದ ಎಲ್ಲಾ ತಾಲ್ಲೂಕುಗಳಿಗೂ ವಿಸ್ತರಣೆ ಮಾಡಬೇಕು. ಪಕ್ಕಾ ಡಿಜಿಟಲ್ ಡಾಟಾ ಸಂಗ್ರಹಣೆ ಆಗಲಿದೆ.

ಜಲಜೀವನ್ ಮಿಷನ್:

2024 ರ ವೇಳೆಗೆ ದೇಶದ ಪ್ರತಿ ಮನೆ ಮನೆಗೂ ಶಾಶ್ವತವಾದ ಕುಡಿಯುವ ನೀರಿಗಾಗಿ ಮನೆ ಮನೆಗೂ ನಲ್ಲಿ ನೀರು ನೀಡುವ ಬೃಹತ್ ಯೋಜನೆಯನ್ನು ಪ್ರಧಾನಿ ಶ್ರೀ ನರೇಂದ್ರಮೋದಿಯವರು ಘೋಶಿಸಿದ್ದಾರೆ. ಕೇಂದ್ರ ಅರ್ಧ ಹಣ ನೀಡಿದರೆ ರಾಜ್ಯ ಅರ್ಧ ಹಣ ಹಾಕಬೇಕು. ರಾಜ್ಯದ ಕೆರೆ-ಕಟ್ಟೆಗಳಿಗೆ ನದೀ ನೀರು ತುಂಬಿಸಿದರೆ ಮಾತ್ರ ಮನೆ ಮನೆ ನಲ್ಲಿಯಲ್ಲಿ ನೀರು ಬರಲಿದೆ. ಇಲ್ಲದೆ ಇದ್ದಲ್ಲಿ ನಲ್ಲಿಯಲ್ಲಿ ನೀರಿನ ಬದಲು ಗಾಳಿ ಬರಲಿದೆ’.

ರಾಜ್ಯದ ನದಿ ಜೋಡಣೆ ಮತ್ತು ಕೇಂದ್ರದ ನದಿ ಜೋಡಣೆ:

ಕೇಂದ್ರ ಸರ್ಕಾರದ ನದಿ ಜೋಡಣೆಯಿಂದ ನಮ್ಮ ರಾಜ್ಯಕ್ಕೆ ದೊರೆಯುವ ನದಿ ನೀರನ್ನು ಕೃಷಿಗಾಗಿ ಉಪಯೋಗಿಸಿಕೊಳ್ಳಲು ಕನ್ನಡಿಯೊಳಗಿನ ಗಂಟಿನಂತೆ, ಜಾತಕ ಪಕ್ಷಿಯ ಹಾಗೆ ಕಾಯಲೇ ಬೇಕು.

 ರಾಜ್ಯದ ನದಿ ಜೋಡಣೆ ಯೋಜನೆ ಜಾರಿಗೊಳಿಸಿದಲ್ಲಿ ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆಯಡಿಯಲ್ಲಿ ರಾಜ್ಯದ ಕೆರೆ-ಕಟ್ಟೆಗಳಿಗೆ 350 + ಜಲಜೀವನ್ ಮಿಷನ್ ಯೋಜನೆಗೆ 72 + ಕೆರೆಗಳಿಲ್ಲದ ಗ್ರಾಮಗಳಿಗೆ ನದಿ ನೀರು, ಅಂತರ್ಜಲ, ನೀರಿನ ಆವಿಯಾಗುವಿಕೆ, ಇತರೆ ಎಲ್ಲಾ ವಿಧವಾದ ಲಾಸ್ ಸುಮಾರು 178 = 600 ಟಿ.ಎಂ.ಸಿ ಅಡಿ ನೀರಿನ ಯೋಜನೆ ರೂಪಿಸಲೇ ಬೇಕು. ಇಲ್ಲದೆ ಇದ್ದಲ್ಲಿ ರಾಜ್ಯದಲ್ಲ ಕೆಲವೇ ವರ್ಷಗಳಲ್ಲಿ ನೀರಿಗಾಗಿ ಯುದ್ಧ ಆಗಲಿಗೆ. ಜಲ ಬರ ಬರಲಿದೆ. ರಾಜ್ಯವೇ ಅಲ್ಲೋಲ ಕಲ್ಲೋಲ ಆಗಲಿದೆ’.

ರಾಜ್ಯ ಏನು ಮಾಡಿದೆ? ಕೇಂದ್ರ ಏನು ಮಾಡಬೇಕು?

ಶ್ರೀ ಜಿ.ಎಸ್.ಬಸವರಾಜ್ ಅಧ್ಯಕ್ಷತೆಯ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆ ನಡವಳಿಕೆ ಪ್ರಕಾರ, ರಾಜ್ಯದ ಜಲಸಂಪನ್ಮೂಲ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ರಾಕೇಶ್ ಸಿಂಗ್ ಅಧ್ಯಕ್ಷತೆಯಲ್ಲಿ ಕಾವೇರಿ ನೀರಾವರಿ ನಿಗಮದಲ್ಲಿ ಸಭೆ ನಡೆಸಿ, ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಂದ,  ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರಿಗೆ ಸುಮಾರು 640 ಟಿ.ಎಂ.ಸಿ.ಅಡಿ ನೀರಿನ ರಾಜ್ಯದ ನದಿ ಯೋಡಣೆ ರೂಪಿಸಲು ಪತ್ರ ಬರೆದಿದ್ದಾರೆ.

 ಜೊತೆಗೆ ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ಮತಿ ಶಾಲಿನಿ ರಜನೀಶ್ ರವರು ಕೇಂದ್ರ ಸರ್ಕಾರದ ನೀತಿ ಆಯೋಗದ ಪೋರ್ಟಲ್‍ನಲ್ಲಿ   ಲಕ್ಷ- ಲಕ್ಷ  ಕೋಟಿಯ ವೆಚ್ಚದಲ್ಲಿ ರಾಜ್ಯದ ನದಿ ಜೋಡಣೆ ಯೋಜನೆ ಕೈಗೊಳ್ಳುವುದಾಗಿ ಅಪ್ ಲೋಡ್ ಮಾಡಿದ್ದಾರೆ.

 ಶ್ರೀ ಜಿ.ಎಸ್.ಬಸವರಾಜ್‍ರವರ ಮನವಿ ಮೇರೆಗೆ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ರವರು ಈ ಬಗ್ಗೆ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮತ್ತೆ ಶ್ರೀ ಜಿ.ಎಸ್.ಬಸವರಾಜ್‍ರವರ ಮನವಿ ಮೇರೆಗೆ ಮಾನ್ಯ ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮತ್ತು ಮಾಜಿ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆ ರವರು ರಾಜ್ಯದ ನದಿ ಜೋಡಣೆ ಮಾಡಿ, ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಅಲೋಕೇಷನ್ ಮಾಡುವ ಯೋಜನೆಗೆ ಮತ್ತು ರಾಜ್ಯದ ನದಿ ಜೋಡಣೆಗೆ ಡಿಪಿಆರ್ ಮಾಡಲು ಆದೇಶ ಮಾಡಿದ್ದಾರೆ.

 ಈ ಯೋಜನೆ ಡಿಪಿಆರ್ ಮಾಡಲು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್ ರವರನ್ನು ನೋಡೆಲ್ ಆಫಿಸರ್ ಆಗಿ ನೇಮಿಸಿದ್ದಾರೆ. ಅವರು ಅತಿ ಶೀಘ್ರದಲ್ಲಿ ಮಾನ್ಯ ಮುಖ್ಯ ಮಂತ್ರಿಯವರಿಗೆ ವರದಿ ನೀಡಲಿದ್ದಾರೆ.

ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಶ್ರೀ ಲಕ್ಷ್ಮಣರಾವ್ ಪೇಶ್ವೆ ರವರು, ರಾಕೇಶ್ ಸಿಂಗ್ ರವರು, ರಾಜ್ಯಮಟ್ಟದ ದಿಶಾ ಸಮಿತಿ ಕಾರ್ಯದರ್ಶಿಯಾದ ಶ್ರೀಮತಿ ಶಾಲಿನಿ ರಜನೀಶ್ ಅವರು ಕಡತದ ಅನುಸರಣೆ ಮಾಡುತ್ತಿದ್ದಾರೆ.

 ಈಗಾಗಲೇ ಕೇಂದ್ರ ಸರ್ಕಾರ ಭಧ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ   ಘೋಶಿಸಲು ಕೇವಲ ಒಂದು ಮೆಟ್ಟಿಲು ಮಾತ್ರ ಬಾಕಿ ಇದೆ.

ಎತ್ತಿನ ಹೊಳೆ ಯೋಜನೆಯನ್ನು ಕೇಂದ್ರದ ನೇತ್ರಾವತಿ-ಹೇಮಾವತಿ ನದಿ ಜೋಡಣೆಗೆ ಬದಲಾಗಿ ನೇತ್ರಾವತಿ- ಪಾಲರ್ ನದಿ ಜೋಡಣೆಯಾಗಿ ಮಾರ್ಪಡು ಮಾಡಲು ಕೇಂದ್ರ ಸರ್ಕಾರದ ಜೊತೆ ಚರ್ಚೆ ಆರಂಭವಾಗಿದೆ. ಈ ಯೋಜನೆಯ ತೀರ್ಮಾನವನ್ನು ಕೇಂದ್ರದ ಜಲಶಕ್ತಿ ಸಚಿವಾಲಯ ಕೈಗೊಳ್ಳ ಬೇಕಿದೆ ಎಂದು ಈಗಾಗಲೇ ರಾಜ್ಯ ಸರ್ಕಾರಕ್ಕೆ ನ್ಯಾಷನಲ್ ವಾಟರ್ ಡೆವಲಪ್ ಮೆಂಟ್ ಎಜೆನ್ಸಿಯವರು ಪತ್ರ ಬರೆದಿದ್ದಾರೆ. ಪತ್ರ ವ್ಯವಹಾರ ಪ್ರಗತಿಯಲ್ಲಿದೆ.

ಮೇಕೆದಾಟು ಯೋಜನೆ ಅಬ್ಬರಿಸುತ್ತಿದೆ. ರಾಜ್ಯದ ಸರ್ವ ಪಕ್ಷಗಳ ನಾಯಕರೂ ಈ ಯೋಜನೆಗೆ ಬೆಂಬಲ ನೀಡಿದ್ದಾರೆ.

ರಾಜ್ಯ ಸರ್ಕಾರದ ಮನವಿ ಮೇರೆಗೆ ಬೇಡ್ತಿ-ವರದಾ ನದಿಯ ಜೋಡಣೆಯ ಡಿಪಿಆರ್ ಮಾಡಲು ಸಹ ಕೇಂದ್ರ ಸರ್ಕಾರ ಆದೇಶ ನೀಡಿದೆ.ಆದರೇ ಇಲ್ಲಿ ಒಂದು ತಪ್ಪು ಆಗುತ್ತಿದೆ, ಈ ನೀರನ್ನು ತುಂಗ-ಭಧ್ರಾ ಡ್ಯಾಂಗೆ ಜೋಡಣೆ ಮಾಡಲು ಡಿಪಿಆರ್ ಮಾಡುತ್ತಿದ್ದಾರೆ. ಇದು ಸರಿಯಲ್ಲಿ ಈಗಾಗಲೇ ತುಂಗ-ಭಧ್ರಾ ಡ್ಯಾಂ ಊಳಿನಿಂದ ತುಂಬಿದೆ, ಹೊಸದಾಗಿ ಡ್ಯಾಂ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ, ಅಲ್ಲಿಗೆ ಜೋಡಣೆ ಮಾಡಿ ಎಂದು ಕೇಂದ್ರ ಜಲಶಕ್ತಿ ಸಮಿತಿ ಸದಸ್ಯರೂ ಆಗಿರುವ ಶ್ರೀ ಜಿ.ಎಸ್.ಬಸವರಾಜ್ ಪತ್ರ ಬರೆದಿದ್ದಾರೆ. ಅವರಿಂದ ಇನ್ನೂ ಉತ್ತರ ಬಂದಿಲ್ಲ.

ಇವೆಲ್ಲಾ ಮಾಹಿತಿ ತಿಳಿದಿರುವ ‘ಜಲಯೋಧರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಮುಖ್ಯ ಮಂತ್ರಿ’ಯಾಗಿದ್ದಾರೆ, ವಿಶೇಷವೆಂದರೆ ಈ ಎಲ್ಲಾ ನಡವಳಿಕೆಗಳು ನಡೆದಾಗ ರಾಜ್ಯದ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯವರಾಗಿದ್ದ ಶ್ರೀ ಅನಿಲ್ ಕುಮಾರ್ ರವರು ಮಾನ್ಯ ಮುಖ್ಯ ಮಂತ್ರಿಯವರ ಆಪ್ತ ಕಾರ್ಯದರ್ಶಿಯಾಗಿದ್ದಾರೆ. ಇದೊಂದು ರಾಜ್ಯಕ್ಕೆ ವರದಾನವಾಗಲಿದೆ’.

ಕೇಂದ್ರದ ಜಲಶಕ್ತಿ ಸಮಿತಿಯ ಸದಸ್ಯರಾಗಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ಹಾವೇರಿ ಲೋಕಸಭಾ ಸದಸ್ಯರಾದ ಶ್ರೀ ಶಿವಕುಮಾರ್ ಉದಾಸಿ ರವರು ಜಂಟಿ ಲಾಭಿ ಮಾಡುತ್ತಿದ್ದಾರೆ. ಇವರಿಗೆ ಬೆನ್ನುಲಬಾಗಿ ಕೇಂದ್ರದ ಸಚಿವರಾದ ಶ್ರೀ ಪ್ರಹ್ಲಾದ್ ಜೋಷಿಯವರು ನಿಂತಿದ್ದಾರೆ.

ಜಲಸಂಪನ್ಮೂಲ ಸಚಿವರಾದ ಶ್ರೀ ಗೋವಿಂದ ಕಾರಜೋಳರವರು, ಸಣ್ಣ ನೀರಾವರಿ ಸಚಿವರಾದ ಶ್ರೀ  ಜೆ.ಸಿ.ಮಾಧುಸ್ವಾಮಿಯವರ ಪಾತ್ರವೂ ಮಹತ್ತರವಾಗಿದೆ. ಎಲ್ಲರ ಜಂಟಿ ಪ್ರಯತ್ನ ರಾಜ್ಯಕ್ಕೆ ಜಲಕ್ರಾಂತಿಯಾಗಲಿದೆ ಎಂಬ ಆಶಾ ಭಾವನೆ ನಮ್ಮ ರಾಜ್ಯದ ಜನರದ್ದಾಗಿದೆ.

ಜಲಯೋಧ ಮುಖ್ಯ ಮಂತ್ರಿಯವರ ಅವಧಿಯಲ್ಲಿ ಜಲವರ್ಷ, ಜಲಕ್ರಾಂತಿ ಆಗಲಿದೆಯೇ ಕಾದು ನೋಡಬೇಕು?’

ನಮ್ಮ ಶಕ್ತಿಪೀಠ ಫೌಂಡೇಷನ್ ಈ ಎಲ್ಲಾ ಕಡತಗಳ ಅನುಸರಣೆಯನ್ನು ಮಾಡುತ್ತಿದೆ. ಎಲ್ಲರೊಂದಿಗೂ ಆತ್ಮೀಯವಾಗಿ ನಗು ಮೊಗದಿಂದ ಸಮಾಲೋಚನೆ ನಡೆಸುತ್ತಿದೆ.

‘ರಾಜ್ಯದ ಎಲ್ಲಾ ಪಕ್ಷದವರು ಒಂದೇ ಧ್ವನಿಯಾಗಿ ಮುಖ್ಯ ಮಂತ್ರಿಯವರಿಗೆ ಬೆಂಬಲ ನೀಡಲಿದ್ದಾರೆ ಎಂಬ ಆಶಾ ಭಾವನೆಯಿದೆ. ಭವಿಷ್ಯದಲ್ಲಿ ಮುಖ್ಯ ಮಂತ್ರಿಯವರ ಕನಸು ಕಾಣುತ್ತಿರುವವರು, ಕೇಂದ್ರ ಸರ್ಕಾರದಲ್ಲಿ ಪ್ರಭಾವ ಇರುವವರು ಸಹ ಬೆಂಬಲ ನೀಡುವುದು ಸಮಯೋಚಿತವಾಗಿದೆ’.

ರಾಜ್ಯದ ಪ್ರತಿಯೊಂದು ಗ್ರಾಮಕ್ಕೂ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯದ ಪ್ರಕಾರ ನದಿ ನೀರಿನ ಅಲೋಕೇಷನ್ ಮಾಡಿ, ಯೋಜನೆ ಯಾವಾಗ ಬೇಕಾದರೂ ಪೂರ್ಣಗೊಳ್ಳಲಿ. ನಿಮ್ಮ ಹೆಸರು ಸೂರ್ಯ ಚಂದ್ರ ಇರುವವರೆಗೂ ಇರಲಿದೆ.

ಇದು ಕರ್ನಾಟಕದ ಮಟ್ಟಿಗೆ ನಿಜವಾದ ‘ಜಲಶಕ್ತಿ ಅಭಿಯಾನ’

                                              ಕುಂದರನಹಳ್ಳಿ ರಮೇಶ್.

                                       ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ.