9th October 2024
Share

ಜಲಶಕ್ತಿ ಅಭಿಯಾನ:ತುಮಕೂರು ಮಾದರಿ ಇಡೀ ದೇಶಕ್ಕೆ.

TUMAKURU:SHAKTHIPEETA FOUNDATION  

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರಿಗೂ ನೀರಾವರಿ ಯೋಜನೆಗಳಿಗೂ ಅವಿನಾಬಾವ ಸಂಬಂದವಿದೆ. ನೀರಾವರಿ ತಜ್ಞ ಜಿ.ಎಸ್.ಪರಮಶಿಯವಯನವರ ಒಡನಾಟ ಶ್ರೀ ಜಿ.ಎಸ್.ಬಸವರಾಜ್ ಅವರಿಗೂ ಮತ್ತು ನನಗೂ ಒಂದು ನೀರಾವರಿ ಪಿಹೆಚ್‍ಡಿ ಪಡೆದಂತಾಗಿದೆ.

ಕಾಕತಾಳೀಯವಾಗಿ ಇಂದು(10.8.2021) ರಂದು ಶಕ್ತಿ ಪೀಠ ಇ- ಪೇಪರ್ ನಲ್ಲಿ ನೀರಿಗೆ ಸಂಬಂಧಿಸಿದ ವರದಿ ಮಾಡಿದ್ದೆ. ದೆಹಲಿಯಲ್ಲಿರುವ ಶ್ರೀ ಬಸವರಾಜ್ ರವರು ಪೇಪರ್ ಓದಿ, ಇಂದು 4 ಗಂಟೆಗೆ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ರವರ ಅಧ್ಯಕ್ಷತೆಯಲ್ಲಿ ಜಲಶಕ್ತಿ ಅಭಿಯಾನದ ಬಗ್ಗೆ ಸಭೆಯಿದೆ. ಏನು ಹೇಳಬೇಕಪ್ಪಾ ಎಂದು ಶುರು ಮಾಡಿದರು.

ನಾನು ಮೀಟಿಂಗ್ ನೋಟೀಸ್ ಕಳುಹಿಸಲು ಕೇಳಿದಾಗ ವಾಟ್ಸ್ ಅಫ್ ಮೂಲಕ ಕಳುಹಿಸಿದರು. ಅದರಲ್ಲಿ ಅಜೆಂಡಾ ಪ್ರತ್ಯೇಕವಾಗಿರುವ ಬಗ್ಗೆ ಇತ್ತು. ಮತ್ತೆ ಅಜೆಂಡಾ ಕಳುಹಿಸಲು ಕೇಳಿದಾಗ, ಹುಡುಕಿಸಿದರು ಅಜೆಂಡಾ ಅವರಿಗೆ ಸಿಗಲಿಲ್ಲ, ದೆಹಲಿ ಮತ್ತು ತುಮಕೂರು ಕಚೇರಿಯ ನೌಕರರ ಕ್ರೀಯಾ ಶೀಲತೆ ಬಗ್ಗೆ ಅವರ ಭಾಷೆಯಲ್ಲಿ ಅವರು ಸುಭಾಷಿತ ಶುರು ಮಾಡಿಕೊಂಡರು’.

 ನಂತರ ಎಲ್ಲೋ ಹುಡುಕಿ ಕಳುಹಿಸಿದಾಗ ನಾನು ಅದನ್ನು ಓದಿ, ಕುಣಿದು ಕುಪ್ಪಳಿಸಿದೆ. ಕಾರಣ ನಮ್ಮ ಅನಿಸಿಕೆ ಅಭಿಪ್ರಾಯಕ್ಕೆ ಕೇಂದ್ರ ಸರ್ಕಾರದ ಸಮಿತಿ ಸಭೆಯಲ್ಲಿ ನಿರ್ಣಯ ಮಾಡಿದ್ದಾಗ, ನಾನೂ ಓದಿ ಖುಷಿಯಾದರೂ ಪರಿಪೂರ್ಣ ಅಂಶಗಳು ಇಲ್ಲ ಎಂಬ ಕೊರಗು ಇತ್ತು.

 ಇಂದಿನ ಸಭೆಯ ಅಜೆಂಡಾದಲ್ಲಿ ಅಕ್ಷರಷಃ ಬಸವರಾಜ್ ರವರ ಪರಿಕಲ್ಪನೆಯ, ಪರಮಶಿವಯ್ಯನವರ ದೂರದೃಷ್ಠಿಯ, ನಾನು ತುಮಕೂರಿನ ಸ್ಪೆಕ್ಟ್ರಾ ಅಸೋಯೇಟ್ಸ್ ನ ಶ್ರೀ ಸತ್ಯಾನಂದ್ ರವರ ಬಳಿ, ಅವರ ಪಾಲುದಾರ ಶ್ರೀ ಗಂಗಣ್ಣನವರ ಗ್ರಾಮವಾದ ಸ್ವಾಂದೇನಹಳ್ಳಿ ಗ್ರಾಮದ ಜಲಗ್ರಾಮ ಕ್ಯಾಲೆಂಡರ್’ ಮಾಡಿಸಿದ ಮಾದರಿ, ದಿನಾಂಕ:07.01.2020 ಸಭೆಗೆ ಮ್ಯಾಪ್ ನ್ನು ಮೇಲ್ ಮೂಲಕ ದೆಹಲಿಯಲ್ಲಿರುವ ಶ್ರೀ ಮುರುಳೀದರ್ ನಾಯಕ್ ಅವರಿಗೆ ಕಳುಹಿಸಿ, ಅವರು ಪ್ರಿಂಟ್ ತೆಗೆಸಿ ಸಮಯಕ್ಕೆ ಸರಿಯಾಗಿ ಕೊಟ್ಟಿದ್ದು.  ಇಡೀ ದೇಶಕ್ಕೆ ಒಂದು ಮಾದರಿಯಾದಾಗ, ಇದಕ್ಕೆ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯ ದಿಶಾ ಸಮಿತಿಯ ಶ್ರಮದ ಫಲಕ್ಕೆ ಒಂದು ಕೀರಿಟ’ ಇಟ್ಟಂತೆ ಆಯಿತು.

ಇಂದಿನ ಮೀಟಿಂಗ್ ಅಜೆಂಡಾ ವಿಷಯ ಹೇಳಿದಾಗ ಜಿ.ಎಸ್.ಬಸವರಾಜ್ ಅವರಿಗೆ ಆದ ಖುಷಿ ಹೇಳಲು ಸಾಧ್ಯವಿಲ್ಲ. ನಾವು ಮಾಡಿರುವ ಕ್ರಮಗಳ ಬಗ್ಗೆ ವಿವರವಾದ ಪತ್ರ ಮಾಡಲು ಸಲಹೆ ನೀಡಿದರು. ಅವರ ಎಲ್ಲಾ ಅನಿಸಿಕೆಗಳನ್ನು ಹೇಳಿದರು. ಅವರ ಅಭಿಪ್ರಾಯದಂತೆ  ನಾನು ಕನ್ನಡದಲ್ಲಿ ಈ ಕೆಳಕಂಡ ಪತ್ರ ಬರೆದೆ. ನಂತರ ನಮ್ಮ ಶ್ರೀ ಟಿ.ಆರ್.ರಘೋತ್ತಮ ರಾವ್ ರವರು ಇಂಗ್ಲೀಷ್ ನಲ್ಲಿ ಬಾಷಾಂತರ ಮಾಡಿ ದೆಹಲಿಗೆ ಮೇಲ್ ಮಾಡಿದ್ದಾರೆ.

ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಕೈಗೊಂಡ ಕ್ರಮಗಳು ಇಂತಿವೆ? ನಾವು ತುಮಕೂರು ಜಿಲ್ಲೆಗೆ ಶ್ರಮಿಸುತ್ತಿಲ್ಲ.  ಇಡೀ ರಾಜ್ಯಕ್ಕೆ ಶ್ರಮಿಸುತ್ತಿದ್ದೇವೆ. ಕೇಂದ್ರ ಸರ್ಕಾರದಲ್ಲೂ ತುಮಕೂರು ಜಿಲ್ಲಾ ದಿಶಾ ಸಮಿತಿಯ ನಿರ್ಣಯ ಮೊಳಗಿದೆ. ಇದು ಕಣ್ರಿ ಒಬ್ಬ ಎಂಪಿ ಮಾಡಬೇಕಾದ ಕೆಲಸ’. ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು.

ಶ್ರೀ ಬಸವರಾಜ್ ರವರನ್ನು ಮೊದಲು ಆಹಾರ ಮತ್ತು ನಾಗರೀಕ ಸರಬರಾಜು ಸಮಿತಿ ಸದಸ್ಯರಾಗಿ ಮಾಡಿದ್ದರು. ಅವರು  ಕೇಂದ್ರ ಸಚಿವ ಶ್ರೀ ಪ್ರಹ್ಲಾದ್ ಜೋಷಿಯವರೊಂದಿಗೆ ಸಮಾಲೋಚನೆ ನಡೆಸಿ, ಜಲಶಕ್ತಿ ಸಮಿತಿಗೆ ಸದಸ್ಯರಾಗಿದಕ್ಕೂ ಸಾರ್ಥಕವಾಯಿತು.

‘ನೋಡ್ರಿ ತುಮಕೂರು ಜಿಲ್ಲೆಯ ಅಧಿಕಾರಿಗಳು ಹೇಗೆ ರಾಜ್ಯದ ಯೋಜನೆಗಳನ್ನು, ತುಮಕೂರು ಜಿಲ್ಲಾ ಮಟ್ಟದ ದಿಶಾ ಸಭೆಯಲ್ಲಿ ಚರ್ಚಿಸಿ, ಕೇಂದ್ರ ಸರ್ಕಾರದಲ್ಲೂ ಭಾಗಿಯಾಗುತ್ತಾರೆ.’

ಕ್ರಮಾಂಕ:ಜಲಶಕ್ತಿ ಅಭಿಯಾನ/1/2021                                  ದಿನಾಂಕ:10.08.2021

ಗೆ

 ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ರವರು.

ಜಲಶಕ್ತಿ ಸಚಿವರು.

ಭಾರತ ಸರ್ಕಾರ. ನವದೆಹಲಿ

ಮಾನ್ಯರೇ

ವಿಷಯ: ಜಲಶಕ್ತಿ ಅಭಿಯಾನದ ಸಾಧಕ-ಭಾದಕ ಗಳ  ಬಗ್ಗೆ

ದಿನಾಂಕ:07.01.2021 gಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ‘CONSULTATIVE COMMITTEE FOR MINISTRY OF JALASHKTHI’ ಸಭೆಯಲ್ಲಿ ಕರ್ನಾಟಕ ರಾಜ್ಯದ, ತುಮಕೂರು ಜಿಲ್ಲೆಯ ತುಮಕೂರು ತಾಲ್ಲೂಕಿನ, ಸ್ವಾಂದೇನಹಳ್ಳಿ ಗ್ರಾಮ ಪಂಚಾಯಿತಿಯ ಸ್ವಾಂದೇನಹಳ್ಳಿ ಗ್ರಾಮದ ಜಲಗ್ರಾಮ ಕ್ಯಾಲೆಂಡರ್’ ಮಾಡಿ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದೆ. ತಾವು ಅಂದು ಈ ಕೆಲಸ ಮಾಡಲು ಎಷ್ಟು ಸಮಯ ತೆಗೆದುಕೊಂಡಿತ್ತು ಎಂದು ಪ್ರಶ್ನೆ ಮಾಡಿದ್ದು ಇತಿಹಾಸ. ಅಂದಿನ ಸಭೆಯಲ್ಲಿ ಸಭೆ ನಡವಳಿಕೆಯೂ ಆಗಿದೆ.

ತಮ್ಮ ದೂರದೃಷ್ಠಿಯ ಪ್ರತಿಫಲವಾಗಿ ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ದಿನಾಂಕ:22.03.2021 ರಂದು ಜಲಶಕ್ತಿ ಅಭಿಯಾನ’ ಆರಂಭಿಸಿರುವುದು ನಿಜಕ್ಕೂ ಸ್ವಾಗಾತಾರ್ಹ, ಅದರಲ್ಲೂ ನಾನು ಪ್ರಸ್ತಾಪ ಮಾಡಿದ್ದ ಎಲ್ಲಾ ಅಂಶಗಳು ಯೋಜನೆಯಲ್ಲಿ ಸೇರ್ಪಡೆ ಮಾಡಿರುವುದು ನನಗೆ ತೃಪ್ತಿ ತಂದಿದೆ. ಪ್ರಧಾನಿಯವರು, ತಮ್ಮನ್ನು ಮತ್ತು ತಮ್ಮ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.

ದಿನಾಂಕ:10.08.2021 ರಂದು ಈ ಬಗ್ಗೆ ಸಭೆ ನಡೆಸುತ್ತಿರುವುದು ನಿಜಕ್ಕೂ ಉತ್ತಮವಾಗಿದೆ. ನಮ್ಮ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಭೆಯಲ್ಲಿ ಕೈಗೊಂಡಿರುವ ನಿರ್ಣಯಗಳ ಪ್ರಗತಿ ಬಗ್ಗೆ ಈ ಕೆಳಕಂಡ ಅಂಶಗಳನ್ನು ತಮ್ಮ ಆಧ್ಯ ಗಮನಕ್ಕೆ ತರಬಯಸುತ್ತೇನೆ.

  1. ನಾನು 5 ನೇ ಭಾರಿ ಲೋಕಸಭೆಗೆ ಆಯ್ಕೆಯಾದ ನಂತರ ಕೇಂದ್ರ ಸರ್ಕಾರದ ಆದೇಶದಂತೆ  ದಿನಾಂಕ:21.09.2019 ರಂದು ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯನ್ನು ನಡೆಸಿದೆ.
  2. ದಿನಾಂಕ:21.10.2019 ರಂದೇ ತುಮಕೂರು ಜಿಲ್ಲೆಯ ಸಮಗ್ರ ನೀರಾವರಿ ಬಗ್ಗೆ ಸಮಾಲೋಚನೆ’ ಮಾಡಿ, ನಂತರ ರಾಜ್ಯದ ಜಲಸಂಪನ್ಮೂಲ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ,  ನಮ್ಮ ರಾಜ್ಯದ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಂದ ಮಾನ್ಯ ಪ್ರಧಾನಿಯವರಿಗೂ ಶ್ರೀ ನರೇಂದ್ರ ಮೋದಿಯವರಿಗೆ ಪತ್ರ ಬರೆಸಿದೆ.
  3. ನಾನು ತಮಗೂ ಸಹ ಈ ವಿಚಾರವಾಗಿ ಪತ್ರ ಬರೆದಾಗ ತಾವೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ವಿವರವಾದ ವರದಿ ನೀಡಲು ಸೂಚಿದ್ದೀರಿ.
  4. ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆಯªರÀ ಅಧ್ಯಕ್ಷತೆಯಲ್ಲೂ ರಾಜ್ಯದ ‘ವಾಟರ್ ಆಡಿಟ್, ವಾಟರ್ ಬಡ್ಜೆಟ್ ಮತ್ತು ವಾಟರ್ ಸ್ಟ್ರಾಟಜಿ’ ಬಗ್ಗೆ ಸಭೆ ನಡೆಸಲಾಯಿತು.
  5. ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂಪ್ಪನವರು ರಾಜ್ಯದ ಮುಂಗಡ ಪತ್ರದಲ್ಲಿ ರಾಜ್ಯದ ಪ್ರತಿಯೊಂದು ಗ್ರಾಮದಲ್ಲೂ ಜಲಗ್ರಾಮ ಕ್ಯಾಲೆಂಡರ್’ ಮಾಡಲು ಘೋಶಿಸಿದರು.
  6. ಕರ್ನಾಟಕ ರಾಜ್ಯದ 29360 ಗ್ರಾಮಗಳಲ್ಲಿರುವ ಸುಮಾರು 36608 ಕೆರೆ-ಕಟ್ಟೆಗಳನ್ನು ಮತ್ತು ಎಲ್ಲಾ ವಿಧವಾದ  ಜಲಮೂಲಗಳನ್ನು ಗುರುತಿಸಿ, ಜಿಐಎಸ್ ಲೇಯರ್ ಮಾಡಿ, ಮಳೆ ನೀರು ಸಂಗ್ರಹದ ಡಿಜಿಟಲ್ ಡೇಟಾ ಸಂಗ್ರಹ ಮಾಡಿದ ನಂತರ. ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆ ರೂಪಿಸಿ, ರಾಜ್ಯದ ನದಿ ಜೋಡಣೆ ಮಾಡುವ ಮೂಲಕ ಪ್ರತಿಯೊಂದು ಗ್ರಾಮಕ್ಕೂ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ದೊರಕಿಸಲು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದು, ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರೊಡನೆ ಚರ್ಚಿಸಿ, ವಿವರವಾದ ಯೋಜನಾ ವರದಿ ಸಿದ್ಧಪಡಿಸಲು ಕಾವೇರಿ ನೀರಾವರಿ ನಿಗಮದ ವ್ಯಸ್ಥಾಪಕರನ್ನು ನೋಡೆಲ್ ಆಫೀಸರ್ ಆಗಿ ನೇಮಕ ಮಾಡಿಸಲಾಯಿತು.
  7. ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯ ನಿರ್ಣಯದಂತೆ ತುಮಕೂರು ಜಿಲ್ಲೆಯ 330 ಗ್ರಾಮಪಂಚಾಯಿತಿಗಳು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಪ್ರತಿ ಗ್ರಾಮದಲ್ಲಿಯೂ ಜಿಐಎಸ್ ಆಧಾರಿತ ಜಲ ಮಾಹಿತಿ’ಯನ್ನು ಸಿದ್ಧಗೊಳಿಸಲು ಸಹ ಆರಂಭಿಸಲಾಯಿತು.
  8. ಸಣ್ಣ ನೀರಾವರಿ ಇಲಾಖೆಯ ಮೂಲಕ ಟೆಂಡರ್ ಕರೆಸಿ, ತುಮಕೂರು ಜಿಲ್ಲೆಯ ಎಲ್ಲಾ ಜಲಮೂಲಗಳು, ನದಿ ನೀರಿನ ಅಲೋಕೇಷನ್, ಅಗತ್ಯವಿರುವ ನೀರಿನ ವರದಿ ಸಿದ್ಧಪಡಿಸಲಾಯಿತು.
  9. 2016 ರಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸಿದ್ಧಪಡಿಸಿದ್ದ ತುಮಕೂರು ಜಿಲ್ಲೆಯ ಡಿಸ್ಟ್ರಿಕ್ ಇರ್ರಿಗೇಷನ್ ಪ್ಲಾನ್’ ನಲ್ಲಿ ಇರುವ ಅಂಶಗಳನ್ನು ಪರಿಗಣನೆಗೆ ತೆಗೆದು ಕೊಂಡು ತಪಾಸಣೆ ಮಾಡಲು ನಿರ್ಣಯ ಮಾಡಲಾಯಿತು.
  10. ನಮಗೆ ಈ ಎಲ್ಲಾ ವಿಚಾರಗಳನ್ನು ಗಮನಿಸಿದಾಗ ತಿಳಿದು ಬಂದ ಅಂಶಗಳು ಒಂದಕ್ಕೊಂದು ಡಾಟಾ ತಾಳೆಯಾಗದೆ ಇರುವುದು.. ವಾಸ್ತವಿಕವಾಗಿ ಇರುವ ಡಾಟಾ ಬೇರೆಯಾದರೆ. ಪ್ರತಿ ಗ್ರಾಮಗಳ ಸರ್ವೆ ನಂಬರ್ ವಾರು ಅಧ್ಯಯನ ಮಾಡಿದಾಗ ತಾಜಾ ಲೈವ್ ಡಾಟಾ ಬೇರೆಯೇ ದೊರೆಯಲು ಆರಂಭಿಸಿದಾಗ ನಮಗೆ ಖುಷಿಯಾಯಿತು’.
  11. ಕೊರೊನಾ ಹಿನ್ನಲೆಯಲ್ಲಿ ಎಲ್ಲಾ ಕೆಲಸಗಳು ಸ್ಥಗಿತ ಗೊಂಡವು. ನಂತರ ಈಗ ಭರದಿಂದ ಆರಂಭವಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.
  12. ಗ್ರಾಮ ಪಂಚಾಯಿತಿಗಳಲ್ಲಿ ಆಗಲಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಗಲಿ, ತಾಲ್ಲೂಕು ಮಟ್ಟದಲ್ಲಿ ಆಗಲಿ, ಜಿಲ್ಲಾ ಮಟ್ಟದಲ್ಲಿ ಆಗಲಿ, ಜಿಲ್ಲಾ ಪಂಚಾಯತ್ ಗಳಲ್ಲಿರುವ ಎನ್‍ಆರ್‍ಡಿಎಂಎಸ್ ನಲ್ಲಿ ಆಗಲಿ ಹಾಗೂ ಸ್ಮಾರ್ಟ್ ಸಿಟಿಗಳಲ್ಲಿ ಆಗಲಿ ‘ಜಿಐಎಸ್ ಅರಿತಿರುವ ನೌಕರರು ಇಲ್ಲದೆ ಇರುವ ಅಂಶ ಬೆಳಕಿಗೆ ಬಂತು’.
  13. ಎನ್‍ಐಸಿ ಯಲ್ಲಿ ಕೇವಲ ಒಬ್ಬರು ಮಾತ್ರ ಆಫೀಸರ್ ಇದ್ದು ಪೂರ್ಣ ಪ್ರಮಾಣದ ಕೆಲಸ ಮಾಡಲು ಸಾಧ್ಯಾವಾಗದೇ ಇರುವ ಅಂಶಗಳ ಬಗ್ಗೆಯೂ ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ಚರ್ಚೆ ಮಾಡಿದೆವು.
  14. ತುಮಕೂರು ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿಯವರಾದ ತುಮಕೂರು ಜಿಲ್ಲಾ ಪಂಚಾಯತ್ ಸಿಇಓ ರವರು ಮತ್ತು ಸಂಭಂಧಿಸಿದ ಎಲ್ಲಾ ಅಧಿಕಾರಿಗಳು ಸಭೆ ನಡೆಸಿ ತುಮಕೂರು ದಿಶಾ ಪೋರ್ಟಲ್ ರಚಿಸಿ, ಜಲಶಕ್ತಿ ಮಾಹಿತಿಯೂ ಸೇರಿದಂತೆ, ಪ್ರತಿಯೊಂದು ಇಲಾಖೆಯ ಡಿಜಿಟಲ್ ಲೈವ್ ಡಾಟಾ ಸಂಗ್ರಹ ಮಾಡಿ, ದಿನಾಂಕ:15.08.2022 ರೊಳಗೆ ‘ತುಮಕೂರು ಜಿಲ್ಲೆಯನ್ನು ಡಿಜಿಟಲ್ ಲೈವ್ ಡಾಟಾ ಜಿಲ್ಲೆಯಾಗಿ ಘೋಶಿಸಲು ನಿರ್ಣಯ ಮಾಡಿ’, ಎನ್‍ಐಸಿ ಮೂಲಕ ವೆಬ್ ಸೈಟ್ ರಚಿಸಲಾಯಿತು.
  15. ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಮೂಲಕ ತುಮಕೂರು ಜಿಐಎಸ್ ಪೋರ್ಟಲ್’ ಅನ್ನು ರಚಿಸಲಾಯಿತು.
  16. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮಾಡಿರುವ ಆಪ್ ಮಾಹಿತಿಗಳು ಎಲ್ಲೋ ಹೋಗಿ ಸಂಗ್ರಹವಾಗುತ್ತಿವೆ’. ಇವುಗಳು ಸರಿಯಾಗಿ ಇವೆಯಾ ಅಥವಾ ತಪ್ಪುಗಳು ಇವೆಯಾ ಎಂಬ ಬಗ್ಗೆ ಸ್ಥಳೀಯ ಸಂಸ್ಥೆಗಳ ಮೂಲಕ, ಆಯಾ ಇಲಾಖೆಗಳ ಅಧಿಕಾರಿಗಳ ಸಹಭಾಗಿತ್ವದಲ್ಲಿ ತಪಾಸಣೆ ನಡೆಸುವ ಕಾರ್ಯ ಪ್ರಾಯೋಗಿಕವಾಗಿ ಜಲಶಕ್ತಿ ಇಲಾಖೆಯ ಎಲ್ಲಾ ಯೋಜನೆಗಳ ಜಿಐಎಸ್ ಲೇಯರ್ ಗಳ ಮೂಲಕ ಚಾಲನೆ ನೀಡಿದ್ದೇವೆ’.
  17. ಈ ಲೋಕಸಬಾ ಅಧಿವೇಶನ ಮುಗಿದ ಕೂಡಲೇ ಎಲ್ಲಾ ತಾಲ್ಲೂಕುಗಳ ಮಟ್ಟದಲ್ಲೂ, ಸ್ಥಳೀಯ ಗ್ರಾಮ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳ ಹಂತದಲ್ಲೂ ‘ಜಲಶಕ್ತಿ ಅಭಿಯಾನ’ದ ಆಂದೋಲನ  ಕೈಗೊಳ್ಳಲು ದಿಶಾ ಸಮಿತಿಯ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ.
  18. ಇದರ ಜೊತೆಗೆ ಜಲಜೀವನ್ ಮಿಷನ್ ಯೋಜನೆಯ ವಿಲೇಜ್ ಆಕ್ಷನ್ ಪ್ಲಾನ್’ ಸಿದ್ಧಪಡಿಸಲು ಸಹ ಯೋಚಿಸಿ, ಪ್ರತೈಕವಾಗಿ ಎರಡು ದಿಶಾ ಸಮಿತಿ ಸಭೆಗಳನ್ನು ನಡೆಸಲಾಗಿದೆ.
  19. ಈಗಾಗಲೇ ಎನ್‍ಆರ್‍ಡಿಎಂಎಸ್ ಮೂಲಕ ಗ್ರಾಮ ಪಂಚಾಯಿತಿಗಳ ನಕ್ಷೆಗಳನ್ನು ರವಾನಿಸಲಾಗಿದೆ.
  20. ನಗರ ಸ್ಥಳೀಯ ಸಂಸ್ಥೆಗಳಿಗೆ ಕೆ.ಎಂ.ಡಿ.ಎಸ್ ಮೂಲಕ ನಕ್ಷೆಗಳನ್ನು ರವಾನಿಸಲಾಗಿದೆ.
  21. ಎನ್.ಐ.ಐ.ಸಿ ಗೆ ಒಂದು ವರ್ಷದ ಅವಧಿಗೆ ಇಬ್ಬರು ಸಾಪ್ಟ್ ವೇರ್ ಡೆವಲಪ್ಪರ್ ನೇಮಕ ಮಾಡಿಕೊಳ್ಳಲು ಜಿಲ್ಲಾ ಪಂಚಾಯತ್ ಗೆ ಸೂಚಿಸಿದ್ದು. ಈಗಾಲೇ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದವರಿಗೆ ಸೂಚಿಸಲಾಗಿದೆ.
  22. ಅಗತ್ಯ ಮೂಲಭೂತ ಸೌಕರ್ಯಕ್ಕಾಗಿ ಎಂ.ಪಿ.ಎಲ್.ಎ.ಡಿ ಅನುದಾನದಲ್ಲಿ ರೂ 20 ಲಕ್ಷ ಅನುದಾನ ಮತ್ತು ತುಮಕೂರು ಜಿಲ್ಲಾ ಪಂಚಾಯತ್ ನಿಂದ ರೂ 5 ಲಕ್ಷ ಅನುದಾನ ಮೀಸಲಿಟ್ಟಿದೆ.
  23. ತುಮಕೂರು ಸ್ಮಾರ್ಟ್ ಸಿಟಿಯ ಐಸಿಸಿಸಿಯಲ್ಲಿ ಎನ್.ಐ.ಸಿಯ ಸಹಭಾಗಿತ್ವದಲ್ಲಿ  ತುಮಕೂರು ದಿಶಾ ಮಾನಿಟರಿಂಗ್ ಸೆಲ್’ ಆರಂಭಿಸಲು ರಾಜ್ಯ ಸರ್ಕಾರದ ಅನುಮತಿಗಾಗಿ  ಸೂಕ್ತ ಪ್ರಸ್ತಾವನೆ ಸಲ್ಲಿಸಲು ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಲಾಗಿದೆ.
  24. ಸೆಪ್ಟಂಬರ್ ವೇಳೆಗೆ ಜಲಶಕ್ತಿಯ ಎಲ್ಲಾ ಜಿಐಎಸ್ ಲೇಯರ್ ಮಾಡಿ, ಪ್ರತಿ ಗ್ರಾಮದಲ್ಲೂ ಗ್ರಾಮ ಸಭೆ ನಡೆಸಿ, ತಪಾಸಣೆ ನಡೆಸಲು ‘ಪಾನಿ ಸಮಿತಿ’ಗೆ ಬದಲಾಗಿ ಗ್ರಾಮೀಣ ಕುಡಿಯುವ ನೀರಿನ ಸಮಿತಿ ಮತ್ತು ನ್ಯಾಷನಲ್ ಬಯೋ ಡೈವರ್ಸಿಟಿ ಅಥಾರಿಟಿ ಮೂಲಕ ಪ್ರತಿ ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಚಿಸಿರುವ, ಬಯೋ ಡೈವರ್ಸಿಟಿ ಮ್ಯಾನೇಜ್ ಮೆಂಟ್ ಸಮಿತಿಗಳ ಮೂಲಕ ತಪಾಸಣೆ ಮಾಡಿಸಲು’  ನಿರ್ಣಯ ಮಾಡಲಾಗಿದೆ. ಅಂತಿಮವಾಗಿ ತಮ್ಮ ನೇತೃತ್ವದಲ್ಲಿ ತುಮಕೂರಿನಲ್ಲಿ ಜಲಶಕ್ತಿ ಅಭಿಯಾನ ಆಂದೋಲನ ಸಭೆ ನಡೆಸಿ, ಕೇಂದ್ರ ಸರ್ಕಾರಕ್ಕೆ ತುಮಕೂರು ಜಿಲ್ಲೆಯ ಸಮಗ್ರ ನೀರಾವರಿ ಅಭಿವೃದ್ಧಿ ಪ್ರಸ್ತಾವನೆಯನ್ನು ಸಲ್ಲಿಸಲು ನಿರ್ಣಯ ಮಾಡಲಾಗಿದೆ’.
  25. ಸ್ವಾತಂತ್ರ್ಯ ಪೂರ್ವದಿಂದ ಆರಂಭಿಸಿ, ಇದೂವರೆಗೂ ಮಾಡಿರುವ ಮತ್ತು ಮುಂದೆ ಮಾಡಬಹುದಾದ ಎಲ್ಲಾ ಜಲಮೂಲಗಳ ಯೋಜನೆಗಳ ಮಾಹಿತಿಯನ್ನು ಜಿಐಎಸ್ ಆಧಾರಿತ ನಕ್ಷೆಯಲ್ಲಿ ನಮೂದಿಸಿ, ಈ ಯೋಜನೆಗಳನ್ನೇ ಮುಂದೆ ಕೈಗೊಳ್ಳಲು ‘ಸರ್ಕಾರಿ ಆದೇಶ ಮಾಡಿಸಲು’ ಸಹ ಯೋಚಿಸಲಾಗಿದೆ.

ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವೂ ನಮ್ಮ ಅಲೋಚನೆಗಳಿಗೆ ಪೂರಕವಾಗಿ ರೂಪಿಸಿರುವ ಯೋಜನೆ ಅದ್ಭುತವಾಗಿದೆ ಎಂದು ತಿಳಿಸಲು ಬಯಸುತ್ತೇನೆ.

 ಜಿಐಎಸ್ ಅರಿತಿರುವ ನೌಕರರನ್ನು ಸ್ಥಳೀಯ ಸಂಸ್ಥೆಗಳಿಗೆ ನೇಮಕ ಮಾಡುವ ಮೂಲಕ ಒಂದು ಗ್ರಾಮ ಪಂಚಾಯಿತಿ ಒಂದೇ ನಕ್ಷೆ’ ಹಾಗೂ. ಒಂದು ಗ್ರಾಮ ಪಂಚಾಯಿತಿ- ಒಂದೇ ಡಿಜಿಟಲ್ ಡಾಟಾ’ ಇರುವಂತೆ, ನಗರ ಸ್ಥಳೀಯ  ಸಂಸ್ಥೆಗಳಿಗೂ ಅನ್ವಯಾಗುವಂತೆ, ನಿರ್ದೇಶನವನ್ನು ಕೇಂದ್ರ ಸರ್ಕಾರದ ಮೂಲಕ ಮಾಡಬೇಕಿದೆ.

 ‘ಯಾವುದೇ ಯೋಜನೆ ಆರಂಭವಾದರೂ ಜಿಐಎಸ್ ನಕ್ಷೆಯಲ್ಲಿ ನಮೂದು ಮಾಡದೇ ಬಿಲ್ ಪಾಸ್ ಮಾಡುವ ಹಾಗಿಲ್ಲ ಎಂಬ ಷರತ್ತನ್ನು ವಿಧಿಸುವ ಅಗತ್ಯವಿದೆ,  ಆಗ ಮಾತ್ರ ಈಗ ರೂಪಿಸಿರುವ ಜಲಶಕ್ತಿ ಅಭಿಯಾನಕ್ಕೆ ಒಂದು ತಿರುವು ಪಡೆಯಲಿದೆ   ಎಂಬ ಅಂಶವನ್ನು ತಮ್ಮ ಆಧ್ಯ ಗಮನಕ್ಕೆ ತರಬಯಸುತ್ತೇನೆ’.

ವಂದನೆಗಳೊಂದಿಗೆ                                                               ತಮ್ಮ ವಿಶ್ವಾಸಿ

                                                                      (ಜಿ.ಎಸ್.ಬಸವರಾಜ್)

                      ತುಮಕೂರು ಲೋಕಸಭಾ ಸದಸ್ಯ ಹಾಗೂ ಕೇಂದ್ರ ಜಲಶಕ್ತಿ ಸಮಿತಿಯ ಸದಸ್ಯ.