22nd December 2024
Share

TUMAKURU:SHAKTHI PEETA FOUNDATION

ಭಾರತ ಸರ್ಕಾರ.

ರಾಜ್ಯ ಮಟ್ಟದ ದಿಶಾ ಸಮಿತಿ, ಕರ್ನಾಟಕ ಸರ್ಕಾರ.

ವಿಧಾನ ಸೌಧ, ಬೆಂಗಳೂರು.

ಸದಸ್ಯ:ಕುಂದರನಹಳ್ಳಿ ರಮೇಶ್.

ಪಾರ್ವತಿ ನಿಲಯ, ಒಂದನೇ ಮುಖ್ಯ ರಸ್ತೆ. ಜಯನಗರ ಪೂರ್ವ, ಶೆಟ್ಟಿಹಳ್ಳಿ ಮುಖ್ಯ ರಸ್ತೆ.

ತುಮಕೂರು-572102, ಮೊಬೈಲ್:9886774477

e-mail: rameshkundaranahalli @gmail.com.

ಗೆ.

ಶ್ರೀ ಮತಿ ಶಾಲಿನಿ ರಜನೀಶ್ ರವರು.

ಸದಸ್ಯ ಕಾರ್ಯದರ್ಶಿ, ರಾಜ್ಯ ಮಟ್ಟದ ದಿಶಾ ಸಮಿತಿ,

ಹಾಗೂ ಅಪರ ಮುಖ್ಯ ಕಾರ್ಯದರ್ಶಿ ಯೋಜನಾ ಇಲಾಖೆ. ಕರ್ನಾಟಕ ಸರ್ಕಾರ.ಬಹುಮಹಡಿಗಳ ಕಟ್ಟಡ. ಬೆಂಗಳೂರು.

ಮಾನ್ಯರೇ.

ವಿಷಯ: ಜಲಶಕ್ತಿ ಅಭಿಯಾನ ಮತ್ತು ಜಲಶಕ್ತಿ ಕೇಂದ್ರಗಳ ಸ್ಥಾಪನೆ ಬಗ್ಗೆ.

  ಕೇಂದ್ರ ಸರ್ಕಾರ ದಿನಾಂಕ:22.03.2021 ರಂದು ದೇಶಾದ್ಯಾಂತ ‘ಜಲಶಕ್ತಿ ಅಭಿಯಾನ’ ಘೋಶಿಸಿದೆ. ಹಲವಾರು ಇಲಾಖೆಗಳ ಸಹಭಾಗಿತ್ವದಲ್ಲಿ ಜಿಲ್ಲೆಗೊಂದು ಜಲಶಕ್ತಿ ಕೇಂದ್ರ’ ಆರಂಭಿಸಿ, ನೆಹರು ಯುವ ಕೇಂದ್ರ, ವಿಶ್ವ ವಿದ್ಯಾನಿಲಯಗಳ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು. ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆಕ್ಟಿವಿಟಿ ಪಾಯಿಂಟ್ಸ್, ಸಂಘ ಸಂಸ್ಥೆಗಳು, ಪರಿಣಿತರು ಹೀಗೆ ವಿವಿಧ ವರ್ಗದವರ ಸಹಕಾರದೊಂದಿಗೆ ದೇಶದ 37 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯ 734 ಜಿಲ್ಲೆಯ, 4378 ನಗರ ಸ್ಥಳೀಯ ಸಂಸ್ಥೆಗಳ, ದೇಶದ 250000 ಗ್ರಾಮ ಪಂಚಾಯಿತಿ 664369 ಗ್ರಾಮಗಳಲ್ಲೂ ಜಿಐಎಸ್ ಆಧಾರಿತ ಜಲಮೂಲಗಳ ಲೇಯರ್ ನೊಂದಿಗೆ ತಾಜಾ ಲೈವ್ ಡಾಟಾ ಸಂಗ್ರಹ ಮಾಡಲು ಬೃಹತ್ ಆಂದೋಲನವನ್ನು ಜಲಶಕ್ತಿ ಸಚಿವಾಯಲಯ ಆರಂಭಿಸಿದೆ.

ದಿನಾಂಕ: 22.3.2021 ರಂದು ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಜಲಶಕ್ತಿ ಅಭಿಯಾನ ಉದ್ಘಾಟನೆ ಮಾಡಿದ್ದಾರೆ. ರಾಜ್ಯ ಮಟ್ಟದಲ್ಲಿ ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯ ರಾಜ್ಯ ಮಟ್ಟದ ದಿಶಾ ಸಮಿತಿ ಮತ್ತು ಜಿಲ್ಲಾ ಮಟ್ಟದಲ್ಲಿ ಮಾನ್ಯ ಲೋಕಸಭಾ ಸದಸ್ಯರ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ದಿಶಾ ಸಮಿತಿ ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಬೇಕಿದೆ.

ರಾಜ್ಯದಲ್ಲಿ ನೀರಾವರಿ ತಜ್ಞರಾದ ಶ್ರೀ ಬಸವರಾಜ ಬೊಮ್ಮಾಯಿಯವರು ಮುಖ್ಯ ಮಂತ್ರಿಯಾಗಿದ್ದಾರೆ. ಈಗಲಾದರೂ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕನ್ವರ್ಜೆನ್ಸ್ ಯೋಜನೆಗಳನ್ನು ಜಾರಿಗೆ ತರಲು ಮನವಿ.’

  1. ರಾಜ್ಯದ 31 ಜಿಲ್ಲೆಗಳಲ್ಲಿ ಎಷ್ಟು ಜಿಲ್ಲೆಗಳಲ್ಲಿ ಜಲಶಕ್ತಿ ಕೇಂದ್ರ ಅಂರಂಭಿಸಲಾಗಿದೆ ಪ್ರಗತಿ ಪರಿಶೀಲನೆ ಮಾಡುವುದು.
  2. ರಾಜ್ಯದ ಎಷ್ಟು ಗ್ರಾಮಗಳ ನೀರಿನ ಆಡಿಟ್, ಬಡ್ಜೆಟ್ ಮತ್ತು ಸ್ಟ್ರಾಟಜಿ ಮಾಡಲಾಗಿದೆ ಪ್ರಗತಿ ಪರಿಶೀಲನೆ ಮಾಡುವುದು.
  3. ನೀರಿಗೆ ಸಂಬಂಧಿಸಿದ ಎಲ್ಲಾ ಯೋಜನೆಗಳನ್ನು ಒಂದೇ ವೇದಿಕೆಯಡಿ ತರುವ ಯೋಜನೆ ಸರ್ಕಾರದ ಮುಂದೆ ಇದೆಯಾ? ಪರಿಶೀಲನೆ ಮಾಡುವುದು.
  4. ದಿನಾಂಕ:15.08.2021 ರಂದು ರಾಜ್ಯದ ಪ್ರತಿ ಗ್ರಾಮದಲ್ಲೂ ಕೇಂದ್ರ ಸರ್ಕಾರದ ಸಲಹೆಯಂತೆ ನೆಹರು ಯುವ ಕೇಂದ್ರ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವಕ-ಯುವತಿ ಸಂಘಗಳ ನೇತೃತ್ವದಲ್ಲಿ, ಆಯಾ ಗ್ರಾಮದ ವಿದ್ಯಾರ್ಥಿಗಳ, ಆಯಾ ಗ್ರಾಮದಲ್ಲಿನ ವಿದ್ಯಾವಂತರು, ಸರ್ಕಾರಿ ಇಲಾಖೆಗಳ ಅಥವಾ ಖಾಸಗಿ ಸಂಸ್ಥೆಗಳ ಅಧಿಕಾರಿಗಳು, ನೌಕರರು, ಕೈಗಾರಿಕೋಧ್ಯಮಿಗಳ ಸಹಕಾರದಿಂದ ಗ್ರಾಮದ ರೈತರಿಗೆ ಅನೂಕೂಲ ಮಾಡಲು  ಜಲಶಕ್ತಿ ಕೇಂದ್ರ’ ಗಳನ್ನು ರಚಿಸಿ, ಆಯಾ ಗ್ರಾಮಗಳ ಜಿಐಎಸ್ ಆಧಾರಿತ ಜಲಮೂಲಗಳ ನಕ್ಷೆ ಸಿದ್ಧಪಡಿಸಲು ಬೃಹತ್ ಆಂದೋಲನ ರೂಪಿಸಲು ಕೋರಲಾಗಿದೆ.
  5. ದಿನಾಂಕ:15.08.2022 ರಂದು ಪ್ರತಿ ಗ್ರಾಮದ ಪಕ್ಕಾ ಡಿಜಿಟಲ್ ಲೈವ್ ಡಾಟಾಗಳೊಂದಿಗೆ ಜಿಐಎಸ್ ನಕ್ಷೆಯನ್ನು ಪ್ರಕಟಿಸಿ, ಊರಿಗೊಂದು ಕೆರೆ- ಕೆರೆಗೆ ನದಿ ನೀರಿನ ಅಲೋಕೇಷನ್’ ಘೋಷಣೆ ಮಾಡುವುದು.

 ನನಗೆ ನೆನಪಿಗೆ ಬಂದ ಯೋಜನೆಗಳನ್ನು ಮಾತ್ರ ಪಟ್ಟಿ ಮಾಡಿದ್ದೇನೆ, ಇನ್ನೂ ಹಲವಾರು ಯೋಜನೆಗಳು ಇರಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕೋಟಿ ಗಟ್ಟಲೆ ಹಣ ವ್ಯಯ ಮಾಡಲಾಗಿದೆ. ಕರ್ನಾಟಕದ ಯಾವುದಾದರೊಂದು ಗ್ರಾಮದ ಎಲ್ಲಾ ವಿಧವಾದ ಜಲಮೂಲಗಳ ಜಿಐಎಸ್ ಆಧಾರಿತ ನಕ್ಷೆ ಮತ್ತು ಪಕ್ಕಾ ಡಿಜಿಟಲ್ ಡಾಟಾ ಮಾಡಿದ್ದಲ್ಲಿ ಸಂಭಂದಿಸಿದ ಅಧಿಕಾರಿಗಳ ಕಾಲಿಗೆ ಬಹಿರಂಗವಾಗಿ ಬಿಳುತ್ತೇನೆ.

ಬರಿಕಾಗದಲ್ಲಿ, ಪಿಪಿಟಿಯ ಬಣ್ಣ ಬಣ್ಣದ ಚಿತ್ರಗಳಲ್ಲಿ ಮಾತ್ರ ಎಲ್ಲವೂ ಸರಿಯಿದೆ. ಬಹುಮಾನಗಳನ್ನು ಪಡೆದಿದ್ದಾರೆ. ಗ್ರೌಂಡ್ ರಿಯಾಲಿಟಿಯೇ ಬೇರೆ ಇದೆ. ಅದೇನೆ ಇರಲಿ ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಯೋಜನೆಗಳ ಸಹಕಾರದಿಂದ, ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಯ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಎಲ್ಲಾ ಗ್ರಾಮಗಳ ಜಿಐಎಸ್ ಆಧಾರಿತ ನಕ್ಷೆ ಮಾಡಿ, ನೀರಿನ ಆಡಿಟ್, ಬಡ್ಜೆಟ್ ಮತ್ತು ಸ್ಟ್ರಾಟಜಿ ಮಾಡಿ, ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ಮೂಲಕ ಕೋರುತ್ತೇನೆ.’

ಅಂಕಿಅಂಶಗಳನ್ನು ಬರೆಯುವಾಗ ನನಗೆ ಹಿಂಸೆ ಆಗುತ್ತಿದೆ. ಒಂದೊಂದು ಕಡೆ ಒಂದೊಂದು ರೀತಿ ಅಂಕಿ ಅಂಶಗಳು ಇರಲಿವೆ.

ಕೇಂದ್ರ ಸರ್ಕಾರದ ಯೋಜನೆಗಳು

  1. ಜಿಲ್ಲೆಗೊಂದು ಜಲಶಕ್ತಿ ಕೇಂದ್ರ.
  2. ಜಲಶಕ್ತಿ ಅಭಿಯಾನ
  3. ಕ್ಯಾಚ್ ದ ರೇಯಿನ್.
  4. ಅಟಲ್ ಭೂಜಲ್ – ವಾಟರ್ ಬಡ್ಜೆಟ್, ವಾಟರ್ ಆಡಿಟ್, ವಾಟರ್ ಸ್ಟ್ರಾಟಜಿ
  5. ಜಲಜೀವನ್ ಮಿಷನ್ (ಗ್ರಾಮೀಣ) 2024 ರೊಳಗೆ ಪ್ರತಿ ಮನೆಗೂ ನಲ್ಲಿ ನೀರು
  6. ಜಲಜೀವನ್ ಮಿಷನ್ (ನಗರ)
  7. ಸರ್ಕಾರಿ ಶಾಲೆಗಳಿಗೆ ನಲ್ಲಿ ನೀರು 100 ದಿನದ ಆಂದೋಲನ.
  8. ಅಂಗನವಾಡಿಗಳಿಗೆ ನಲ್ಲಿ ನೀರು 100 ದಿನದ ಆಂದೋಲನ.
  9. ಕೇಂದ್ರ ಸರ್ಕಾರದ ನದಿ ಜೋಡಣೆ ಯೋಜನೆ.
  10. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ- ಡಿಸ್ಟ್ರಿಕ್ ಇರ್ರಿಗೇಷನ್ ಪ್ಲಾನ್ ಮತ್ತು ರಾಜ್ಯ ಇರ್ರಿಗೇಷನ್ ಪ್ಲಾನ್.
  11. ಜಿಲ್ಲೆಗೊಂದು ಜಲಗ್ರಾಮ.
  12. ಪ್ರತಿ ಗ್ರಾಮದ ಜಲಮೂಲಗಳ ಜಿಐಎಸ್ ಆಧಾರಿತ ನಕ್ಷೆ.
  13. ಪ್ರತಿ ಗ್ರಾಮ ಪಂಚಾಯಿತಿಗೊಂದು ಜೀವ ವೈವಿದ್ಯ ದಾಖಲಾತಿ ಮ್ಯಾನೇಜ್ ಮೆಂಟ್ ಕಮಿಟಿ.
  14. ಪ್ರತಿ ಗ್ರಾಮ ಪಂಚಾಯಿತಿಗೊಂದು ಗ್ರಾಮ ನೈರ್ಮಲ್ಯ ಮತ್ತು ಕುÀಡಿಯುವ ನೀರಿನ ಸಮಿತಿ.
  15. ಪ್ರತಿ ಗ್ರಾಮಕ್ಕೊಂದು ಪಾನಿ ಸಮಿತಿ
  16. ಪ್ರತಿ ನಗರ ಸ್ಥಳೀಯ ಸಂಸ್ಥೆಗೊಂದು ಜೀವ ವೈವಿದ್ಯ ದಾಖಲಾತಿ ಮ್ಯಾನೇಜ್ ಮೆಂಟ್ ಕಮಿಟಿ- ಇಲ್ಲೂ ಜಲಮೂಲಗಳ ಡಿಜಿಟಲ್ ಸಂಗ್ರಹಣೆ ಮಾಡಬೇಕು.
  17. ಅಂತ್ಯೋದಯ ಯೋಜನೆ- ಇಲ್ಲೂ ಜಲಮೂಲಗಳ ಡಿಜಿಟಲ್ ಡಾಟಾ ಸಂಗ್ರಹಣೆ ಮಾಡಬೇಕು.
  18. ಜಲಾನಯನ ಅಭಿವೃದ್ಧಿ ಯೋಜನೆ.
  19. ಮೈಕ್ರೋ ಇರ್ರಿಗೇಷನ್ ಯೋಜನೆ.
  20. ಬಹುಗ್ರಾಮ ಕುಡಿಯುವ ನೀರಿನ ಯೋಜನೆ.
  21. ಗ್ರಾಮ ಪಂಚಾಯತ್ ಡೆವಲೊಪ್ ಮೆಂಟ್ ಪ್ಲಾನ್.
  22. ಕೇಂದ್ರ ಸರ್ಕಾರದ ಅಂತರ್ಜಲ ಅಭಿವೃದ್ಧಿ ಯೋಜನೆಗಳು.
  23. ಪ್ರವಾಹದ ಯೋಜನೆಗಳು.
  24. ಸುಜಲ

ಕರ್ನಾಟಕ ರಾಜ್ಯ ಸರ್ಕಾರದ ಯೋಜನೆಗಳು.

  1. ಜಲಾಮೃತ – ವಾಟರ್ ಬಡ್ಜೆಟ್, ವಾಟರ್ ಆಡಿಟ್, ವಾಟರ್ ಸ್ಟ್ರಾಟಜಿ.
  2. ನದಿ ನೀರಿನಿಂದ ಕೆರೆ ತುಂಬಿಸುವ ಯೋಜನೆ.
  3. ಕೃಷಿ ಭಾಗ್ಯ ಯೋಜನೆ.
  4. ಜಲಗ್ರಾಮ ಕ್ಯಾಲೆಂಡರ್- ಮುಂಗಡ ಪತ್ರದಲ್ಲಿ ಘೋಶಿಸಲಾಗಿದೆ.
  5. ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು – ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು. ನೋಡೆಲ್ ಆಫೀಸರ್.
  6. ರಾಜ್ಯದ ನದಿ ಜೋಡಣೆ – ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು. ನೋಡೆಲ್ ಆಫೀಸರ್.
  7. ರಾಜ್ಯ ಸರ್ಕಾರದ ಅಂತರ್ಜಲ ಅಭಿವೃದ್ಧಿ ಯೋಜನೆಗಳು.
  8. ಗ್ರಾಮೀಣ ಕುಡಿಯುವ ನೀರು ಮಂಡಳಿ ಯೋಜನೆಗಳು.
  9. ನಗರ ನೀರು ಕುಡಿಯುವ ಮಂಡಳಿ ಯೋಜನೆಗಳು.
  10. ಸಣ್ಣ ನೀರಾವರಿ ಇಲಾಖೆ ಯೋಜನೆಗಳು.
  11. ಜಲಸಂಪನ್ಮೂಲ ಇಲಾಖೆಯ ಯೋಜನೆಗಳು.
  12. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಅಭಿವೃದ್ಧಿ ಇಲಾಖೆ ಯೋಜನೆಗಳು.
  13. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಯೋಜನೆಗಳು.
  14. ಮಳೆ ನೀರು ಸಂಗ್ರಹ ಮಾಡುವ ಅರಣ್ಯ ಇಲಾಖೆ ಯೋಜನೆಗಳು.
  15. ಮಳೆ ನೀರು ಸಂಗ್ರಹ ಮಾಡುವ ತೋಟಗಾರಿಕಾ ಯೋಜನೆಗಳು.
  16. ಮಳೆ ನೀರು ಸಂಗ್ರಹ ಮಾಡುವ ಕೃಷಿ ಇಲಾಖೆ ಯೋಜನೆಗಳು.
  17. ಕೈಗಾರಿಕಾ ಅಭಿವೃದ್ಧಿ ಮಂಡಳಿ ಯೋಜನೆಗಳು.
  18. ಕೊಳಚೆ ನೀರು ಪುನರ್ ಬಳಕೆ ನೀರು ಯೋಜನೆಗಳು.
  19. ಅಂತರ್ಜಲ ಭೂಚೇತನ

ಕೈಗೊಂಡ ಕ್ರಮದ ಬಗ್ಗೆ ಮರುಪತ್ರ ನಿರೀಕ್ಷಿಸಲಾಗಿದೆ.

ವಂದನೆಗಳೊಂದಿಗೆ,                                                                           ತಮ್ಮ ವಿಶ್ವಾಸಿ

                                                                                                    (ಕುಂದರನಹಳ್ಳಿ ರಮೇಶ್)