TUMAKURU:SHAKTHI PEETA FOUNDATION
ಸಾರ್ವಜನಿಕ ಜೀವನದಲ್ಲಿರುವ ಯಾವುದೇ ವ್ಯಕ್ತಿಯ ಮೇಲೆ ಕೇಳಿ ಬರುವ ಆರೋಪಗಳು ಮತ್ತು ನ್ಯಾಯಾಲಯದಲ್ಲಿ ಎದುರಿಸಿರುವ, ಎದುರಿಸುತ್ತಿರುವ ಕೇಸ್ ಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು ಸೂಕ್ತವಾಗಿದೆ ಎಂಬ ಭಾವನೆ ನನ್ನದಾಗಿದೆ.
ನಾನಂತೂ ಯಾವುದೇ ವ್ಯಕ್ತಿಯ ಮೇಲಿನ ವ್ಯಕ್ತಿಗತ ಆರೋಪ, ಭ್ರಷ್ಠಾಚಾರಗಳ ಬಗ್ಗೆ ಹೋರಾಟಗಳನ್ನು ಇದೂವರೆಗೂ ಮಾಡಿಲ್ಲ, ಮುಂದೆಯೂ ಮಾಡಬಾರದು ಎಂದು ಕೊಂಡಿದ್ದೇನೆ. ಸಂದರ್ಭ ಹೇಗೆ ಬರುತ್ತದೆಯೋ ಕಾದು ನೋಡೋಣ?
ಆದರೇ ಅಭಿವೃದ್ಧಿ ಯೋಜನೆಗಳ ಬಗ್ಗೆ ನನ್ನ ಹುಟ್ಟೂರು ಕುಂದರನಹಳ್ಳಿ ಯಿಂದ ಆರಂಭಿಸಿ, ದೆಹಲಿ ಮಟ್ಟದವರಿಗೆ ಶ್ರಮಿಸಲು ಎಲ್ಲಾ ವಿಧವಾದ ವ್ಯವಸ್ಥೆ ಮಾಡಲು ಆರಂಭಿಸಿದ್ದೇನೆ.
‘ನಾನು ಪ್ರಾಥಮಿಕ ಶಾಲೆಯಿಂದಲೇ ನಾಯಕತ್ವದ ಗುಣ ಹೊಂದಿದ್ದವನು. ಆದರೇ ಹಣೆ ಬರಹ ಸರಿ ಇಲ್ಲ, ಯಾವುದೇ ಅಧಿಕಾರ ಸಿಗಲಿಲ್ಲ. ಆದರೂ ಸಿಕ್ಕಿದ ಅಧಿಕಾರದಲ್ಲಿಯೇ ಸದಾ ಸುದ್ಧಿ ಮಾಡಿದ್ದೇನೆ ಎಂಬ ಸಮಾಧಾನ, ತೃಪ್ತಿ ನನಗಿದೆ. ಅಂದಿನಿಂದಲೇ ನನ್ನ ಮೇಲೆ ಹಲವಾರು ಆರೋಪಗಳು ಬಂದಿವೆ. ಅವುಗಳನ್ನು ಎದುರಿಸಿದ ಮಾರ್ಗಗಳೇ ನನ್ನನ್ನು ದೆಹಲಿ ಮಟ್ಟದವರೆಗೆ ಎಳೆದುಕೊಂಡು ಹೋಗಿದೆ’.
ಇಲ್ಲಿಯವರೆಗೂ ನನ್ನ ಮೇಲೆ ಬಂದಿರುವ ಎಲ್ಲಾ ಆರೋಪಗಳ ಮತ್ತು ನಾನು ಇದೂವರೆಗೂ ನ್ಯಾಯಾಲಯದಲ್ಲಿ ಎದುರಿಸಿರುವ ಕೇಸ್ ಗಳ ಬಗ್ಗೆಯೂ ಡಿಜಿಟಲ್ ದಾಖಲೆ ಮಾಡಬೇಕು ಎಂಬ ಆಸೆ ಹುಟ್ಟಿದೆ.
ನಮ್ಮ ಗುಬ್ಬಿ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಆರ್.ಶ್ರಿನಿವಾಸ್ ರವರು ನಾನು ಅಭಿವೃದ್ಧಿ ಬಗ್ಗೆ ದಾಖಲೆ ಬಿಡುಗಡೆ ಮಾಡಿದ ದಿನದಿಂದ ನನ್ನ ಮೇಲೆ ಆರೋಪ ಮಾಡುತ್ತಿರುವ ಹಿನ್ನಲೆಯಲ್ಲಿ ನನಗೆ ಇ-ಪೇಪರ್ ಶಕ್ತಿಪೀಠದಲ್ಲಿ ‘ನನ್ನ ಮೇಲಿನ ಆರೋಪಗಳು – ನ್ಯಾಯಾಲಯದ ಕೇಸ್ ಗಳು – ನಮ್ಮ ಆಸ್ತಿ’ ಎಂಬ ಮೂರು ವಿಭಾಗಗಳನ್ನು ಪ್ರತ್ಯೇಕವಾಗಿ ಬರೆಯಲು ಯೋಚಿಸಿದ್ದೇನೆ.
ನಾನು ಬಹಳ ಬಡತನದಿಂದ ಬಂದವನು, ನಮಗೆ ಪಿತ್ರಾರ್ಜಿತ ಆಸ್ತಿ ಇದ್ದರೂ, ನಮ್ಮ ಊರಿನಲ್ಲಿ ‘ಬಿಲ್ಲೆ ಮನೆ’ ಮತ್ತು ‘ಕಾವಲರ ಮನೆ’ ಎಂಬ ಮನೆತನದವರೂ ಬಹಳ ಶ್ರೀಮಂತ ಕುಟುಂಬದವರಂತೆ, ನಂತರ ದುಡಿಯುವ ಮಾರ್ಗ ಮಾಡಿಕೊಳ್ಳದೇ, ಉಳ್ಳವರು ಮೋಸ ಮಾಡಿ, ನಮ್ಮ ಆಸ್ತಿ ಕಬಳಿಸಿದ ಹಿನ್ನಲೆಯಲ್ಲಿ ತಿನ್ನಲು ಹಿಟ್ಟು ಇಲ್ಲದೆ ಸಂಭಂಧಿಕರ ಮನೆಯಲ್ಲಿ ಕಾಲಕಳೆದವರು ಎಂಬ ಇತಿಹಾಸವಿದೆ.
‘ನಾನು ಬುದ್ದಿಕಂಡ ಮೇಲೆ ಬಡತನವೇ ನಮ್ಮ ಆಸ್ತಿ. ಶ್ರೀನಿವಾಸ್ ರವರಂತೆ ಹುಟ್ಟಿದಾಗಲೇ ತೆರಿಗೆ ಕಟ್ಟಿದ ಕುಟುಂಬ ನಮ್ಮದಲ್ಲ. ಅಷ್ಟು ಬಡತನದಿಂದ ಬಂದ ನಾನು ದೆಹಲಿ ಮಟ್ಟದವರಿಗೆ ಮಾತನಾಡಿದರೇ ಎಲ್ಲರಿಗೂ ಸಿಟ್ಟು ಬರುವುದು ಸಹಜ. ಅಂದ ಮೇಲೆ ಸರಣಿ ಆರೋಪಗಳು ಸದಾ ನನ್ನ ಜೊತೆಯಲ್ಲಿಯೇ ಬಂದಿವೆ’.
ಇಂದಿನಿಂದ ಬರುವ ಹೊಸ, ಹೊಸ, ಆರೋಪಗಳು ಮತ್ತು ನನಗೆ ನೆನಪಿರುವ ಹಿಂದಿನ ಎಲ್ಲಾ ಆರೋಪಗಳ ಬಗ್ಗೆಯೂ ಬರೆಯುತ್ತೇನೆ.
ನನ್ನ ಜೀವನದ ಆತ್ಮಾವಾಲೋಕನ ಮಾಡಿಕೊಳ್ಳುವುದು ನನಗೆ ಅನಿವಾರ್ಯವಾಗಿದೆ. ಏಕೆಂದರೆ ನಾನು ಶಕ್ತಿಪೀಠ ಕ್ಯಾಂಪಸ್ ಆರಂಭಿಸಿ, ಇಡೀ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕನಸು ಕಂಡಿದ್ದೇನೆ. ತುಮಕೂರು ಜಿಲ್ಲೆ ಡಿಜಿಟಲ್ ಡಾಟಾ ಜಿಲ್ಲೆಯಾಗ ಬೇಕು. ಯಾವುದೇ ಮಾಹಿತಿ ಬೆರಳ ತುದಿಯಲ್ಲಿ ಇರಬೇಕು ಎಂದು ಶ್ರಮಿಸುತ್ತಿರುವ ‘ನನ್ನ ಜೀವನದ ತಾಜಾ ಡಿಜಿಟಲ್ ಡಾಟಾ ಇರಲೇ ಬೇಕಲ್ಲವೇ?’
ನೀವೆನಂತಿರಾ?
ಬರೆಯ ಬೇಕೋ ಅಥವಾ ಮೌನವಾಗಿರ ಬೇಕೋ?