15th September 2024
Share

TUMAKURU:SHAKTHIPEETA FOUNDATION

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ಗುಬ್ಬಿ ಶಾಸಕರಾದ ಎಸ್.ಆರ್.ಶ್ರೀನಿವಾಸ್ ರವರ ಮಧ್ಯೆ ಅವಾಚ್ಯ ಮಾತುಗಳು ನಡೆದ ಹಿನ್ನಲೆಯಲ್ಲಿ ಬಸವರಾಜ್ ರವರು ಮಾತನಾಡಿದ್ದ ಎರಡು ಯೋಜನೆಗಳಾದ ಹೇಮಾವತಿ ನಾಲಾ ಆಧುನೀಕರಣ ಮತ್ತು ಜಾಲಗುಣಿ ಬಳಿ ಡ್ಯಾಂ ನಿರ್ಮಾಣ’ದ ಬಗ್ಗೆ ದಾಖಲೆ ಸಹಿತ ವಿವರ ನೀಡಿದ್ದೇನೆ.

ಇನ್ನೂ ಯಾವುದಾದರೂ ಮಾಹಿತಿ ಬೇಕಿದ್ದಲ್ಲಿ ಕೇಳಿದರೆ, ಅವರಿಗೆ ಇರುವ ಅನುಮಾನ ಅಥವಾ ಗೊಂದಲಗಳ ಬಗ್ಗೆ ಲಿಖಿತ ಮಾಹಿತಿ ನೀಡಲಾಗುವುದು.

ನನ್ನ ಮೇಲೆ ಗುಬ್ಬಿ ಶಾಸಕರು ಹಾಗೂ ಅವರ ಬೆಂಬಲಿಗರು ಮಾಡಿರುವ ಆರೋಪಗಳು ಈ ಕೆಳಗಿನಂತಿವೆ.

  1. ದಲಿತರ ಭೂಗಳ್ಳ
  2. ತಲೆ ಹಿಡುಕ.
  3. ಕಮಿಷನ್ ಹೊಡೆಯುತ್ತಾನೆ.
  4. ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಹೆಸರಲ್ಲಿ ಲೂಟಿ.
  5. ತೆಂಗಿನ ನಾರಿನ ಕೈಗಾರಿಕೆ ಏನಾಯಿತು.
  6. ಕೇಂದ್ರೀಯ ವಿದ್ಯಾಲಯದ ಪೋಷಕರ ಸಮಿತಿಯಲ್ಲಿ ಸಂಬಳ ಪಡೆದಿದ್ದಾನೆ.
  7. ಹೊಟ್ಟೆ ಪಾಡಿಗಾಗಿ ತುಮಕೂರಿಗೆ ಬಂದಿದ್ದಾನೆ.
  8. ಯಾವಾಗಲೂ ಸಂಸದರ ಜೊತೆ ಏಕೆ ಇರುತ್ತಾನೆ.
  9. ಸ್ಕೂಟರ್ ಹೊಡೆಯುತ್ತಿದ್ದ.

ನನ್ನ ಗಮನಕ್ಕೆ ಬಂದಿರುವ ಆರೋಪಗಳು ಇಷ್ಟು. ಇವುಗಳ ಜೊತೆಗೆ ಗುಬ್ಬಿ ಶಾಸಕರಾಗಲಿ ಅಥವಾ ಅವರ ಹಿಂಬಾಲಕರಾಗಲಿ ಅಥವಾ ಇದೂವರೆಗೂ ನನ್ನಿಂದ ತೊಂದರೆಗೆ ಒಳಪಟ್ಟ ಯಾರೇ ಆಗಲಿ, ದಾಖಲೆಗಳ ಸಹಿತ  ಸೋಶಿಯಲ್ ಮೀಡಿಯಾ ಮೂಲಕ ಅಥವಾ ಲಿಖಿತ ಪತ್ರದ ಮೂಲಕ ಅಥವಾ ಮಾಧ್ಯಮಗಳ ಮೂಲಕ ತಿಳಿಸಿದಲ್ಲಿ, ನಾನು ಅವರಲೆಲ್ಲರ ಆರೋಪಗಳಿಗೂ ಉತ್ತರವನ್ನು ಸಾರ್ವಜನಿಕವಾಗಿ ಪ್ರಕಟಿಸುತ್ತೇನೆ.

ನಾನು ತಪ್ಪು ಮಾಡಿದ್ದರೇ ತಿದ್ದಿಕೊಳ್ಳುತ್ತೇನೆ. ಜೊತೆಗೆ ಯಾವುದೇ ನ್ಯಾಯಾಲಯ ನನಗೆ ಶಿಕ್ಷೆ ನೀಡಿದರೂ ಅನುಭವಿಸಲು ಸಿದ್ಧನಾಗಿದ್ದೇನೆ.’ ಉಪ್ಪು ತಿಂದವನು ನೀರು ಕುಡಿಯಲೇ ಬೇಕಲ್ಲವೇ?’ ನನಗೆ ಇದರ ಅವಶ್ಯ ಕತೆ ಇದೆ. ಸಾರ್ವಜನಿಕ ಜೀವನದಲ್ಲಿ ಮಾತನಾಡುವ ನಾವುಗಳು ಮೊದಲು ಪಾರದರ್ಶಕವಾಗಿರಬೇಕು. ನಮ್ಮ ನಡೆ, ನುಡಿಯೂ ಉತ್ತಮವಾಗಿರಬೇಕು. ನಾವು ಸಂಪಾದಿಸಿದ ಎಲ್ಲಾ ರೀತಿಯ ಆಸ್ತಿಗಳು ಮುಕ್ತವಾಗಿರ ಬೇಕು.

ಒಂದು ವೇಳೆ ನಾವು ತಿಳಿದೋ, ತಿಳಿಯದೋ ತಪ್ಪು ಮಾಡಿದ್ದರೆ, ಸಾರ್ವಜನಿಕವಾಗಿ ಕ್ಷಮೆ ಕೋರಬೇಕು. ಇದು ಸಾರ್ವಜನಿಕ ಜೀವನದಲ್ಲಿ ಇರುವ ಪ್ರತಿಯೊಬ್ಬರಿಗೂ ಅನ್ವಯ ಆಗಬೇಕು. ಆಗ ಮಾತ್ರ ಅರ್ಥಪೂರ್ಣ ಜೀವನ ಎಂಬ ಭಾವನೆ ನನಗೆ ಈಗಾಗಲೇ ಬಂದಿದೆ.

ನನ್ನಲ್ಲಿ ಹುಳಕು ಇಟ್ಟುಕೊಂಡು ಇನ್ನೊಬ್ಬರ ಬಗ್ಗೆ ಮಾತನಾಡಿದರೆ ಆತ್ಮ ವಂಚನೆಯಾಗಲಿದೆ. ನನ್ನ ಜೀವನದ ಮೌಲ್ಯ ಮಾಪನವನ್ನು ನಾನೇ ಮಾಡಿಕೊಳ್ಳುವ ಸಮಯ ಈಗ ಒದಗಿ ಬಂದಿದೆ. ತಾಯಿ ಶಕ್ತಿದೇವತೆಯು 108 ಶಕ್ತಿಪೀಠಗಳ ಸ್ಥಾಪನೆಗೆ ಮುಂಚೆ ಪರಿಶುದ್ಧವಾಗಿ ನನ್ನ ಆಸ್ಥಾನಕ್ಕೆ ಬರಬೇಕು ಎಂಬ ಆದೇಶವೂ ಇದಾಗಿರ ಬಹುದು.ಮುಂದಿನ ಎಚ್ಚರಿಕೆಯ ಗಂಟೆಯೂ ಆಗಿರ ಬಹುದು’.

ಇದಕ್ಕೆ ಈ ಸದಾವಕಾಶ ಒದಗಿ ಬಂದಿರ ಬಹುದು ಅಲ್ಲವೇ?

ನಾನು ಶಕ್ತಿಪೀಠ ಕ್ಯಾಂಪಸ್  ಆರಂಭ ಮಾಡಿದ ಮೇಲೆ,  ಶಕ್ತಿಪೀಠ ಇ-ಪೇಪರ್ ಮಾಡಿ, ಪ್ರತಿಯೊಂದು ವಿಚಾರವನ್ನು ಬರೆಯುತ್ತಿದ್ದೇನೆ. ನನಗಂತೂ ನನ್ನ ಜೀವನ ತೃಪ್ತಿ ತಂದಿದೆ. ಈಗ ಇನ್ನೂ ಹಗುರವಾಗಲಿದೆ.