12th October 2024
Share

TUMAKURU:SHAKRHTI PEETA FOUNDATION

ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯ ದೇಶಾಧ್ಯಾಂತ ‘ಜಲಶಕ್ತಿ ಅಭಿಯಾನ’ ಘೋಶಿಸಿದೆ. ದೇಶದ ಪ್ರತಿ ಜಿಲ್ಲೆಯಲ್ಲೂ ಒಂದೊಂದು ಜಲಶಕ್ತಿ ಕೇಂದ್ರ’ ತೆರೆದು ಯೋಜನೆಯ ಯಶಸ್ವಿಗೆ ಶ್ರಮಿಸಲು ಪ್ರತಿ ಜಿಲ್ಲೆಗೆ ಎರಡು ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲು ನಿರ್ಣಯ ಮಾಡಿದೆ.

ಶಕ್ತಿ ಪೀಠ ಫೌಂಡೇಷನ್ ಜಲಪೀಠ ವಿಭಾಗದಲ್ಲಿ ಕರ್ನಾಟಕ ರಾಜ್ಯದ ಯಾವ ಯಾವ ಜಿಲ್ಲೆಗಳಲ್ಲಿ ಜಲಶಕ್ತಿ ಕೇಂದ್ರ’ರಚಿಸಲಾಗಿದೆ ಎಂಬ ಮಾಹಿತಿಯ ಸಂಗ್ರಹಿಸುವ ಕೆಲಸ ಆರಂಭಿಸಿದೆ.

ಮೊದಲು ತುಮಕೂರು ಜಿಲ್ಲೆಯಲ್ಲಿ ಏನೇನು ಮಾಡಲಾಗಿದೆ, ಏನು ಮಾಡಬೇಕಿತ್ತು ಎಂಬ ಬಗ್ಗೆ ಕುತೂಹಲವಿದೆ. ಏಕೆಂದರೆ ದೇಶಕ್ಕೆ ಮೊದಲು ಈ ರೀತಿ ಆಲೋಚನೆ ಮಾಡಿ, ತುಮಕೂರು ಜಿಲ್ಲಾ ದಿಶಾ  ಮಟ್ಟದ ಸಭೆಯಲ್ಲಿ ನಿರ್ಣಯ ಕೈಗಳ್ಳಲಾಗಿತ್ತು.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆಗೆ ಪೂರಕವಾಗಿ, ರಾಜ್ಯದ ಸಣ್ಣ ನೀರಾವರಿ ಇಲಾಖೆಯ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು ಮತ್ತು ಕಾರ್ಯದರ್ಶಿ ಶ್ರೀ ಮೃತ್ಯುಂಜಯ ಸ್ವಾಮಿರವರು ತುಮಕೂರು ಜಿಲ್ಲೆಗೆ ಒಂದು ಮಾದರಿ ಯೋಜನೆ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಜೊತೆಗೆ ಇಡೀ ರಾಜ್ಯಕ್ಕೆ ಅನೂಕೂಲವಾಗುವ ಒಂದು ಒಳ್ಳೆಯ ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಇವರಿಗೊಂದು ಸಲಾಂ! ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ಬಂಪರ್ ನೀರಿಕ್ಷೆ.

ಈ ಬಗ್ಗೆ ರಾಜ್ಯದ ಅಧಿಕಾರಿಗಳು ದೆಹಲಿಯಲ್ಲಿ ಬಹಳ ಉತ್ತಮವಾಗಿ ಕಡತ ಅನುಸರಣೆ ಮಾಡುತ್ತಿದ್ದಾರೆ. ಕೇಂದ್ರ ಜಲಶಕ್ತಿ ಸಚಿವಾಲಯದ ಸಮಿತಿಯ  ಸದಸ್ಯರು ಆಗಿರುವ ಶ್ರೀ ಜಿ.ಎಸ್.ಬಸವರಾಜ್ ರವರ ಪಾತ್ರ ಇಲ್ಲಿ ಬಹಳ ಮುಖ್ಯ.

ಇಬ್ಬರ ಮಾರ್ಗದರ್ಶನದೊಂದಿಗೆ ಶ್ರೀ ಮೃತ್ಯುಂಜಯ ಸ್ವಾಮಿರವರು ಮತ್ತು ಅವರ ಅಧಿಕಾರಿಗಳ ತಂಡ ನಿರಂತರವಾಗಿ ಶ್ರಮಿಸುತ್ತಿದ್ದು ಅತಿ ಶೀಘ್ರದಲ್ಲಿ ಸಕರಾತ್ಮಕವಾದ ಪಲಿತಾಂಶ ಬರುವ ನೀರಿಕ್ಷೆ ಇದೆ.

ನಾನು ಮಾಧುಸ್ವಾಮಿಯವರೇ ಇದು ನ್ಯಾಯವೇ?  ಎಂಬ ತಲೆ ಬರಹದ ಅಡಿಯಲ್ಲಿ ಕೇವಲ ಚಿಕ್ಕಾನಾಯಕನಹಳ್ಳಿ ಮತ್ತು ತಿಪಟೂರು ತಾಲ್ಲೂಕಿನ ಕೆರೆಗಳಿಗೆ ಮಾತ್ರ ನದಿ ನೀರು ಯೋಜನೆ ಮಾಡಿದ್ದೀರಿ, ಇಡಿ ಜಿಲ್ಲೆಗೆ ಏಕೆ ಮಾಡಿಲ್ಲ ಎಂದು ಬರೆದಿದ್ದೆ.

ಈಗ ನಾನು ಪೂರ್ಣ ಪ್ರಮಾಣದ ವರದಿ ಮತ್ತು ನಕ್ಷೆಯನ್ನು ನೋಡದಿದ್ದರೂ,   ಸಂಸದರು ಬರೆದ ಒಂದು ಪತ್ರ ನನಗೆ ನಿಜಕ್ಕೂ ಸಂತೋಷ ತಂದಿದೆ. ಮಾಧು ಸ್ವಾಮಿಯವರು ಮತ್ತು ಮೃತ್ಯುಂಜಯ ಸ್ವಾಮಿರವರ ತಂಡದ ಕಾರ್ಯ ವೈಖರಿ ರಾಜ್ಯದ ಇತರೆ ಇಲಾಖೆಗಳಿಗೆ ಮಾದರಿಯಾಗಿದೆ.

ಪೂರ್ಣ ವರದಿ ಅಧ್ಯಯನ ಮಾಡಿದ ನಂತರ ವಿವರವಾದ ವರದಿ ಮಾಡಲಿದ್ದೇನೆ. ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಕನಸಿನ ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆಗೆ  ತುಮಕೂರು ಜಿಲ್ಲೆಯನ್ನು ಫೈಲಟ್ ಯೋಜನೆಯಾಗಿ ತೆಗೆದುಕೊಳ್ಳಲು ಮಾನ್ಯ ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮಾನ್ಯ ಪ್ರಧಾನಿಯವರಿಗೆ ಪತ್ರ ಬರೆದಿದ್ದರು.

ಕೇಂದ್ರ ಜಲಶಕ್ತಿ ಸಚಿವರು ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಸೆಂಟ್ರಲ್ ವಾಟರ್ ಕಮೀಷನ್ ಹತ್ತಾರು ಭಾರಿ ಜಲಸಂಪನ್ಮೂಲ ಸಚಿವಾಲಯಕ್ಕೆ  ಸುತ್ತಾಡಿದ್ದರೂ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸಿರಲಿಲ್ಲ. ಮೊದಲನೆ ಹಂತದಲ್ಲಿ ಈ ಪ್ರಸ್ತಾವನೆ ಸಲ್ಲಿಸಿರುವುದು ನಿಜಕ್ಕೂ ಹೆಮ್ಮೆ ತಂದಿದೆ.

ಈ ಕಡತದ ಅನುಸರಣೆ ಸಂಸದರ ಹೊಣೆಗಾರಿಕೆಯೂ ಹೌದು. ಜೆ.ಸಿ.ಮಾಧುಸ್ವಾಮಿಯವರ ಬದ್ದತೆಯೂ ಹೌದು. ಇಬ್ಬರು ಸಹ ಕೇಂದ್ರ ಸರ್ಕಾರದೊಂದಿಗೆ ನಿಕಟ ಸಂಪರ್ಕದಲ್ಲಿ ಇದ್ದಾರೆ. ಕಳೆದ ಜಲಶಕ್ತಿ ಸಮಿತಿಯಲ್ಲೂ  ಚರ್ಚಿಸಲಾಗಿದೆ. ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಶೇಖಾವತ್ ರವರು ಸಹ ನಿಮ್ಮ ರಾಜ್ಯದ ಸಚಿವರು ಮತ್ತು ನೀವೂ ಒಂದೇ ತರ ಬ್ಯಾಟ್ ಮಾಡುತ್ತಿದ್ದೀರಿ ಎಂದು ಹರ್ಷ ವ್ಯಕ್ತಪಡಿದರಂತೆ. ಬಸವರಾಜ್ ರವರು ಸಭೆಯ ನಂತರ ತಿಳಿಸಿದರು.

ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯನಾದ ನನಗೂ ಇದೊಂದು ಸಂತೃಪ್ತಿಯ ಯೋಜನೆಯಾಗಿದೆ. ಅಂತಿಮ ರೂಪ ದೊರೆಯುವವರೆಗೂ ನಿದ್ದೆ ಮಾಡುವ ಹಾಗಿಲ್ಲ. ಈ ಯೋಜನೆ ತುಮಕೂರು ಜಿಲ್ಲೆಯ ಇತಿಹಾಸದಲ್ಲಿ ದಾಖಲೆ ಆಗಲಿದೆ’.