22nd December 2024
Share

TUMAKURU:SHAKTHIPEETA FOUNDATION

ಶಕ್ತಿಪೀಠ ಫೌಂಡೇಷನ್ ನೊಂದಾಯಿಸಿದ ದಿನಾಂಕ:16.08.2019. ಸಂಸ್ಥೆಯನ್ನು ನೊಂದಾಯಿಸಿದ ನಂತರ ಉತ್ತರಖಾಂಡ ರಾಜ್ಯದ, ಹರಿಧ್ವಾರ ಜಿಲ್ಲೆಯಲ್ಲಿರುವ ಕಂಕಲ್ ನಲ್ಲಿ ಸತಿಯು ಯಜ್ಞದಲ್ಲಿ ಪ್ರವೇಶ ಮಾಡಿದ ಸ್ಥಳ ಮತ್ತು ಉತ್ತರಖಾಂಡದ ಇತರೆ ಶಕ್ತಿಪೀಠಗಳ ಪ್ರವಾಸ ಮಾಡುವ ಮೂಲಕ ನೋಂದಣೆ ವರ್ಷವನ್ನು ವಿಶೇಷವಾಗಿ ಆಚರಿಸಲಾಯಿತು. ವಿಶ್ವದ 108 ಶಕ್ತಿಪೀಠಗಳಿಗೂ ಪ್ರವಾಸ ಮಾಡುವ ಯಾತ್ರೆಗೆ ಗುರಿ ಹಮ್ಮಿಕೊಳ್ಳಲಾಯಿತು. ಕೊರೊನಾ ಕಾರಣದಿಂದ ಶಕ್ತಿಪೀಠ ಯಾತ್ರೆಯನ್ನು ಮೊಟಕುಗೊಳಿಸಲಾಗಿದೆ.

ಪ್ರಥಮ ವಾರ್ಷಿಕೋತ್ಸವದ ದಿನಾಂಕ:16.08.2020 ರಂದು ಶಕ್ತಿಪೀಠ ಕ್ಯಾಂಪಸ್‍ನಲ್ಲಿ ವೃತ್ತ ಮತ್ತು ಅಷ್ಟಭುಜಾಕೃತಿಯ ಕೇಂದ್ರ ಬಿಂದುವಿನಲ್ಲಿ ಸೂರ್ಯನ ಆಸ್ಥಾನದಲ್ಲಿ ಬಿಳಿ ಎಕ್ಕದ ಗಿಡ ಹಾಕುವ ಮೂಲಕ ಹಸಿರು ಕ್ಯಾಂಪಸ್ ಗೆ ಚಾಲನೆ ನೀಡಲಾಯಿತು. ನವಗ್ರಹಗಳ ಆಸ್ಥಾನದಲ್ಲಿ ಅವರವರ ಮರ/ಗಿಡ/ ವಿವಿಧ ಬೆಳೆಗಳನ್ನು ಹಾಕಿ ಬೆಳೆಸುವುದು ಸೇರಿದಂತೆ, ಪ್ರಸ್ತುತ ಸುಮಾರು 330 ಜಾತಿಯ ವಿವಿಧ ಮರಗಿಡಗಳ ತಾಣವಾಗಿದೆ ಶಕ್ತಿ ಪೀಠ ಕ್ಯಾಂಪಸ್. ನಮ್ಮ ಗುರಿ ಈ ವರ್ಷ 440 ಜಾತಿಯ ಗಿಡ ಹಾಕುವುದಾಗಿದೆ, ನಿರಂತರವಾಗಿ ಪ್ರಯತ್ನ ಸಾಗಿದೆ.

ಎರಡನೇ ವಾರ್ಷಿಕೋತ್ಸವದ ದಿನಾಂಕ:16.08.2021 ರ ಬದಲು ದಿನಾಂಕ:22.08.2021 ನೇ ಬಾನುವಾರ ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ. ಈಗಾಗಲೇ ಪ್ರಗತಿಯಲ್ಲಿರುವ ಕೆಳಕಂಡ 9 ಯೋಜನೆಗಳ ಪಕ್ಕಾ ದಾಖಲೆ/ಮಾಹಿತಿ ಸಂಗ್ರಹಿಸುವ ವಿಶೇಷ ಕಾರ್ಯಕ್ರಮಕ್ಕೆ ಅಂತಿಮ ರೂಪ  ನೀಡಲು ಚಿಂತನೆ ನಡೆಸಲಾಗಿದೆ. ನಮ್ಮ ಸಂಸ್ಥೆಯೊಂದಿಗೆ ನಿರಂತರವಾಗಿ ಸಮಪರ್ಕದಲ್ಲಿರುವ 9 ಜನರಿಗೆ ಯೋಜನಾವಾರು ಹಂಚಿಕೆ ಮಾಡಲಾಗಿದೆ.

 ಈ ಕ್ಯಾಂಪಸ್ ಸ್ಥಾಪನೆ ಮಾಡುವ ಪರಿಕಲ್ಪನೆ ಆರಂಭವಾದ 2014 ರಿಂದಲೂ, ಇದೂವರೆಗೂ ಯಾರ ಜೊತೆಯು, ಯಾವುದೇ ಯೋಜನೆಗೆ ಎಂ.ಓ.ಯು ಮಾಡಿಕೊಳ್ಳದೆ ನಿರಂತರವಾಗಿ ಈಗಾಗಲೇ ಬಹಳಷ್ಟು ಕೆಲಸ ಆಗಿದೆ. ಇನ್ನೂ ಮುಂದೆ  ಯಾರು ಯಾವ ಸೇವೆಗೆ ಸಹಕರಿಸಿದ್ದಾರೆ ಎಂಬ ಬಗ್ಗೆ ಮಾಹಿತಿಗಾಗಿ, ಅಂದು ಜಮೀನು ಕೊಡಿಸಿದವರಿಂದ ಆರಂಭಿಸಿ, ಇಲ್ಲಿಯವರೆಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡಿದವರ ದಾಖಲೆಗಳನ್ನು ವೆಬ್‍ಸೈಟ್‍ನಲ್ಲಿ ಪ್ರಕಟಿಸಲು ಚಿಂತನೆ ನಡೆಸಲಾಗಿದೆ.

ಪ್ರತಿ ವಾರ್ಷಿಕೋತ್ಸವದ ದಿವಸ ಸಂಸ್ಥೆಯ ಖರ್ಚು-ವೆಚ್ಚಗಳ ಆಡಿಟ್ ಜೊತೆಗೆ, ಚಿಂತನೆ ನಡೆಸಿದ ಯೋಜನೆಗಳ ಬಗ್ಗೆ, ವಿವಿಧ ವರ್ಗದವರ ಸಂಬಂಧಗಳ ಬಗ್ಗೆ/ಒಡನಾಟದ ಸಾಧಕ-ಭಾದಕಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಗುರಿ ಹಮ್ಮಿಕೊಳ್ಳಲಾಗಿದೆ.

ಎಲ್ಲವನ್ನೂ ನನ್ನ ತಲೆಯಲ್ಲಿ ಗಿರಕಿ ಹೊಡೆಸುವ ಬದಲು ಉಚಿತ ಸೇವೆ ಮೂಲಕ ಅಥವಾ ಸೇವೆಗೆ ತಕ್ಕ ಅವರು ಬಯಸುವ ಪ್ರತಿಫಲ ನೀಡುವ ಮೂಲಕ ಎಲ್ಲವನ್ನು ಹಲವಾರು ಜೊತೆ ಹಂಚಿಕೊಂಡು ಚಿಂತನ- ಮಂಥನ ಮಾಡುವ ಮೂಲಕ ಹೆಜ್ಜೆ ಹಾಕಲು ನಿರ್ಧರಿಸಲಾಗಿದೆ. ಇದೂವರೆಗೂ ಹಾಗೆ ಮಾಡಲಾಗಿದೆ. ಆದರೇ ಎಲ್ಲವನ್ನೂ ಡಿಜಿಟಲ್ ದಾಖಲೆ ಮಾಡಿಲ್ಲ. ಶಕ್ತಿಪೀಠ ಇ-ಪೇಪರ್ ಮೂಲಕ ಕೆಲವೇ ಕೆಲವು ಮಾಹಿತಿ ಹಂಚಿಕೊಳ್ಳಲಾಗಿದೆ.

ನನಗೆ ಇದೂವರೆಗೂ ಆಗಿರುವ ಅನುಭವದ ಪ್ರಕಾರ ಶಕ್ತಿದೇವತೆ ತಾಯಿ ಯಾರಿಂದ ಯಾವ ಸೇವೆಯನ್ನು ಎಷ್ಟು ದಿವಸ ಬಳಸಿಕೊಳ್ಳುತ್ತಾರೆ, ಯಾವುದೇ ಸಕಾರಣವಿಲ್ಲದೆ ಯಾರನ್ನು ಯಾವಾಗ ದೂರಮಾಡುತ್ತಾರೆ ಎನ್ನುವುದೇ ಒಂದು  ಪವಾಡದಂತೆ ಆಗಿದೆ. ನನಗೆ ಇನ್ನೂ ಅರ್ಥವಾಗಿಲ್ಲ, ಬಹುತೇಕ ಅರ್ಥ ಆಗುವುದು ಇಲ್ಲ. ಕೆಲವನ್ನು ಯಾರೊಂದಿಗೂ ಹಂಚಿಕೊಳ್ಳ ಬಾರದು ಎನ್ನಿಸಿದರೂ ತಾಯಿ ಡಿಜಿಟಲ್ ದಾಖಲೆ ಮಾಡಿಸುತ್ತಿದ್ದಾರೆ. ನಂಬುವರು ನಂಬ ಬಹುದು ಅಥವಾ ಬಿಡಬಹುದು.

ಸಭೆಯಲ್ಲಿ ಮಂಡಿಸುವ ವಿಚಾರಗಳು.

  1. ಶ್ರೀ ಅಶೋಕ್:- 108 ಶಕ್ತಿಪೀಠಗಳು, 12 ಜ್ಯೋತಿರ್ಲಿಂಗಗಳು, 3 ಸಾಯಿಬಾಬಾ ಮತ್ತು ಇತರೆ ಪ್ರಾತ್ಯಕ್ಷಿಕೆ,
  2. ಶ್ರೀ ಹರೀಶ್:-ನದಿ ಜೋಡಣೆ ಪ್ರಾತ್ಯಾಕ್ಷಿಕೆ. ರಾಜ್ಯದ ನದಿ ನೀರಿನ ಅಲೋಕೇಷನ್. ಕೇಂದ್ರದ ನದಿ ಜೋಡಣೆ ಮತ್ತು ರಾಜ್ಯದ ನದಿ ಜೋಡಣೆ ಹಾಗೂ ರಾಜ್ಯವಾರು ಬಂಡೆಗಳು.
  3. ಶ್ರೀ ಮಲ್ಲೇಶ್:- ಜಲಶಕ್ತಿ ಕೇಂದ್ರ, ಜಲಗ್ರಾಮ ಕ್ಯಾಲೆಂಡರ್, ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು 
  4. ಶ್ರೀ ಟಿ.ಆರ್.ರಘೋತ್ತಮರಾವ್ :- ದಿಶಾ, ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಕೇಂದ್ರ ಸರ್ಕಾರದ ಅನುದಾನ. 
  5. ಶ್ರೀ ಪ್ರಮೋದ್:- 440 ಜನರ ಮೌಲ್ಯ ಮಾಪನ ಮತ್ತು ವಿವಿಧ ಯೋಜನೆಗಳ ಪ್ರಸ್ತಾವನೆ ಹಾಗೂ ವಿದ್ಯುತ್ ಸಂಪರ್ಕ. ಸೋಲಾರ್ ನಾಮಫಲಕ ಮತ್ತು ಸಿಸಿಟಿವಿ.
  6. ಶ್ರೀ ಗೋವಿಂದಪ್ಪ:- 440 ಜಾತಿಯ ಔಷಧಿ ಇತರೆ ಜಾತಿಯ ಗಿಡಗಳ ಡೆಮೋ ಪ್ಲಾಟ್ ಮತ್ತು ನರ್ಸರಿ
  7. ಶ್ರೀ ಗುರುಸಿದ್ಧರಾಧ್ಯ:- ನಾಟಿ ವೈಧ್ಯ, ಪಾರಂಪರಿಕಾ ವೈಧ್ಯ ಮತ್ತು ಹಕೀಮರು. ತರಬೇತಿ, ಒಂದು ಜಾತಿ – ಗಿಡಕ್ಕೆ ಒಬ್ಬ ಪರಿಣಿತ ಹಾಗೂ ವರ್ಷದ 365 ದಿವಸಗಳ ಕಾರ್ಯಕ್ರಮಗಳ ಅಂತಿಮ ಪಟ್ಟಿ.
  8. ಶ್ರೀ ಸತ್ಯಾನಂದ್ :- ಲೇ ಔಟ್, ಭೂ ಬಳಕೆ, ವಾಸ್ತು, ಯೋಜನಾ ವರದಿ.
  9. ಶ್ರೀ ರಾಜೇಶ್:- ಶಕ್ತಿ ಪೀಠ ಪ್ಯಾಮಿಲಿ ಮತ್ತು ವಿವಿಧ ವರ್ಗದವರೊಂದಿಗೆ  ಎಂ.ಓ.ಯು

ಕಟ್ಟಡದ ಶಂಕುಸ್ಥಾಪನೆ.

ಕ್ಯಾಂಪಸ್ ನಲ್ಲಿ ಒಂದು ಹಳೆ ಮನೆ ಇದೆ, 22 ರಂದು ಕ್ಯಾಂಪಸ್ ನ  ಪ್ರಥಮ ಕಟ್ಟಡದ ಶಂಕುಸ್ಥಾಪನೆ ಮಾಡಲಾಗುವುದು. ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಅವರ ಪೋಷಕತ್ವದಲ್ಲಿ ಅವರ 60 ನೇ ವರ್ಷದಲ್ಲಿ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಆರಂಭಿಸಿ, ತುಮಕೂರು ಜಿಲ್ಲೆಯ ಕೆಲವರಿಗೆ ನಿದ್ದೆ ಕೆಡಿಸಿದೆ. ಈಗ ಈ ಕಟ್ಟಡವನ್ನು ಅವರ 80 ನೇ ವರ್ಷದಲ್ಲಿ ಒಂದು ಅಧ್ಯಯನ ಕಟ್ಟಡವನ್ನಾಗಿ ನಿರ್ಮಾಣ ಮಾಡಲು ಅವರ ಅಭಿಮಾನಿಗಳು ಯೋಚಿಸಿದ್ದಾರೆ. ಈ ಬಗ್ಗೆಯೂ ಸಮಾಲೋಚನೆ ನಡೆಸಲಾಗುವುದು.

ತಂದೆ ತಾಯಿ ದೇವರು

ನಾನು ನಮ್ಮ ತಂದೆ ತಾಯಿ ದೇವರು ಎಂದು ನಂಬಿದವನು, ವಿಗ್ರಹ ಆರಾಧನೆ ಆಡಂಬರದ ಪೂಜೆ, ಹಬ್ಬರದ ಪ್ರಚಾರ ಇವೆಲ್ಲಾ ದೂರ. ತಂದೆ ದಿ.ಕೆ.ಎಸ್.ರಾಮಲಿಂಗಯ್ಯನವರು 2002 ರಲ್ಲಿಯೇ ಶಿವನ ಪಾದ ಸೇರಿದ್ದಾರೆ. ತಾಯಿ ಶ್ರೀಮತಿ ಪಾರ್ವತಮ್ಮನವರಿಗೆ ಈಗ 83 ವರ್ಷ ಎನ್ನುತ್ತಾರೆ. ಅವರ ಸೇವೆಯೇ ದೇವರ ಪೂಜೆ ಎಂದು ನಂಬಿದವನು. 22 ರಂದು ಅವರ ಪಾದಾರವಿಂದಗಳಲ್ಲಿ ಪೂಜಿಸುವುದು ನಿಜವಾದ ಆರಾಧನೆ. ಈ ಕ್ಯಾಂಪಸ್ ಅನ್ನು ತನ್ನ ತಂದೆ ತಾಯಿಗೆ ಸಮರ್ಪಣೆ ಮಾಡುವ ಚಿಂತನೆ ಇದೆ. ಈ ಬಗ್ಗೆ ಸಮಾಲೋಚನೆ ನಡೆಸಲಾಗುವುದು.

ಸಮಯ:ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ .

ದಿನಾಂಕ:22.08.2021

ಪೂಜೆಗೆ ಆಗಮಿಸುವವರು ಮೊದಲೆ ದಯವಿಟ್ಟು ತಿಳಿಸಿ.

ವಿಳಾಸ

ನಕ್ಷೆಯ ಜೊತೆಯಲ್ಲಿರುವ ಪಿಡಿಎಫ್ ನಕ್ಷೆಯನ್ನು ಒತ್ತಿ ಗೂಗಲ್ ಲಿಂಕ್ ಆಗಲಿದೆ.

ಶಕ್ತಿಪೀಠ ಕ್ಯಾಂಪಸ್.

ವಡ್ಡನಹಳ್ಳಿ

ಕೆ.ಆರ್.ಹಳ್ಳಿ ಸರ್ಕಲ್

ಜೆ.ಜಿ.ಹಳ್ಳಿ ಹೋಬಳಿ.

ಹಿರಿಯೂರು ತಾಲ್ಲೂಕು.

ಚಿತ್ರದುರ್ಗ ಜಿಲ್ಲೆ.

ಮೊ:9886774477