7th December 2023
Share
HIRIYUR MLA SMT POORNIMA SRINIVAS

TUMAKURU:SHAKTHI PEETA FOUNDATION

ಕಳೆದ 33 ವರ್ಷಗಳ ಸುಧೀರ್ಘ ಸಾಮಾಜಿಕ ಜೀವನದ ಹಾದಿಯುದ್ದಕ್ಕೂ ವಿಶಿಷ್ಠವಾದ ಪದ್ಧತಿ, ಆಚರಣೆ ನನ್ನದಾಗಿದೆ. ನಮ್ಮ ಸಂಸ್ಥೆಗಳದ್ದು ಇದೇ ಆಗಿದೆ.

  1. ಯಾವುದೇ ಕಾರ್ಯಕ್ರಮಕ್ಕೂ ಆಹ್ವಾನ ಪತ್ರಿಕೆ ಮಾಡಿಸುವುದಿಲ್ಲಾ.
  2. ಹಾರ ತುರಾಯಿ ನೀಡುವುದಿಲ್ಲಾ.
  3. ಶಾಲು ಪೇಟ ತೊಡಿಸುವುದಿಲ್ಲ.
  4. ಆಡಂಬರದ ವೇದಿಕೆ ನಿರ್ಮಾಣ ಇಲ್ಲ, ಹಳ್ಳಿ ಕಟ್ಟೆ ಸಭೆಗಳಂತೆ.
  5. ಊಟ ತಿಂಡಿಯನ್ನು ನೀಡುತ್ತಿರಲಿಲ್ಲ, ಈಗ ಶಕ್ತಿಪೀಠ ಕ್ಯಾಂಪಸ್‍ನಲ್ಲಿ ಉಪಹಾರ ನೀಡುವ ಚಿಂತನೆ ಇದೆ.
  6. ಪಕ್ಷ ರಾಜಕಾರಣ ಮಾಡುವುದಿಲ್ಲ.
  7. ಅಭಿವೃದ್ಧಿ ರಾಜಕಾರಣ  ಮಾತ್ರ.
  8. ದ್ವೇಷ ರಾಜಕಾರಣ ಇರುವುದಿಲ್ಲ.
  9. ಜಾತಿಯಂತು ಇಲ್ಲವೇ ಇಲ್ಲ.
  10. ಸಭೆಗೆ ಬನ್ನಿ ಎಂದು ಕರೆಯುವುದಿಲ್ಲ,
  11. ಚರ್ಚೆಗೆ ಅಗತ್ಯವಿರುವ ವಿಷಯವಾರು ಪರಿಣಿತರನ್ನು ಮಾತ್ರ ಕರೆಯಲಾಗುವುದು.
  12. ಆಸಕ್ತರು ಯಾರು ಬೇಕಾದರೂ ಭಾಗವಹಿಸಬಹುದು.
  13. ಈಗ ಕೋರೊನಾ ಸಭೆಗಳಂತೆಯೇ ನಮ್ಮ ಇಡೀ ಜೀವಮಾನದ ಸಭೆಗಳು ನಡೆದಿರುವುದು.
  14. ಶಕ್ತಿಪೀಠ ಇ ಪೇಪರ್  ಪ್ರಕಟಣೆಯೇ ನಮ್ಮ ಆಹ್ವಾನ.
  15. ಎಲ್ಲವೂ ಪಾರದರ್ಶಕ.
  16. ದಿನಾಂಕ:04.05.2002 ರಂದು ಸ್ಥಾಪಿತವಾದ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಹೆಸರಿನಲ್ಲಿ ಇದೂವರೆಗೂ ಯಾವುದೆ ದೇಣಿಗೆ, ದಾನ, ಸದಸ್ಯತ್ವ, ಸಿಎಸ್‍ಆರ್ ಫಂಡ್, ಸರ್ಕಾರದ ಅನುದಾನ ಪಡೆದಿಲ್ಲ.ಇನ್ನೂ ಮುಂದೆಯೂ ಪಡೆಯುವುದಿಲ್ಲ.
  17. ದಿನಾಂಕ:16.08.2019 ರಂದು ಸ್ಥಾಪನೆಯಾದ ಶಕ್ತಿಪೀಠ ಫೌಂಡೇಷನ್ ಗೆ ರೂ 20000 ವರೆಗೆ ನಗದು ಹಣ ಸ್ವೀಕರಿಸಲಾಗುತ್ತಿದೆ. ಅದಕ್ಕಿಂತ ಹೆಚ್ಚಿಗೆ ದಾನ, ನಿಧಿ ಇತ್ಯಾದಿ ಡಿಜಿಟಲ್ ಮೂಲಕ ಪಡೆಯಲಾಗುವುದು.
  18. ಕೇಂದ್ರ ಮತ್ತು ಸರ್ಕಾರದಿಂದ ಅನುದಾನ ಪಡೆಯಲು ಚಿಂತನೆ ಇದೆ. ಸೇವೆಗೆ ತಕ್ಕ ಹಣ ಪಡೆದು ಸೇವೆ ನೀಡಲಾಗುವುದು. ಇಲ್ಲಿ ಯಾವದೂ ಉಚಿತ ಇಲ್ಲ.ಇದೊಂದು ತರ ಕೂಲಿ ಮಠ, ನಾನು ಕೂಲಿ ಮಾಡಿ ಸಂಸ್ಥೆ ಸ್ಥಾಪಿಸಲು ದೇವಿಯ ಅನುಗ್ರಹ ದೊರಕಿದೆ. ಅಗ್ರಿಮೆಂಟ್ ಬಾಬಾ ಇದ್ದ ಹಾಗೆ.
  19. ಕ್ಯಾಂಪಸ್ ನಲ್ಲಿ ಜಾಗ ಇರುವವರೆಗೂ ಭಕ್ತರು ಅನುಮತಿ ಪಡೆದು, ಗಿಡ ತಂದು ಹಾಕಬಹುದು. ಹೊಸ ತಳಿಗಳಿಗೆ ಸದಾ ಆಹ್ವಾನ.
  20. ಶಕ್ತಿಪೀಠ ಕ್ಯಾಂಪಸ್ ನಲ್ಲಿ ಶಕ್ತಿದೇವತೆಯ ಪ್ರಸಾದ ರೂಪದಲ್ಲಿ ಗಿಡ, ಔಷಧಿ ಗಿಡ, ಬಿತ್ತನೆ ಬೀಜ ನೀಡಲು ಆಲೋಚನೆ ನಡೆಯುತ್ತಿದೆ. ಬೀಜಗಳ ಪ್ರಾಮಾಣಿಕತೆಯ ಬಗ್ಗೆ ಚಿಂತನೆ ನಡೆಯುತ್ತಿದೆ.
  21. ಯಾವುದೇ ಬ್ಲಾಕ್ ಮೇಲ್ ಮಾಡುವುದಿಲ್ಲಾ!
  22. ಯಾವುದೇ ಬ್ಲಾಕ್ ಮೇಲ್‍ಗೆ ಜಗ್ಗುವುದೂ ಇಲ್ಲ. 
  23. ತಾಯಿ ಅವರು ಹೇಳಿದ ರೀತಿ ಎಲ್ಲವೂ ನಡೆಯುತ್ತದೆ.
  24. ನಾವೂ-ನೀವೂ ಇಲ್ಲಿ ನೆಪ ಮಾತ್ರ.
  25. ತಾವೂ ಹೊಸದಾಗಿ ನಮ್ಮ ಕಾರ್ಯಕ್ರಮಕ್ಕೆ ಬರುವವರು ಆದ್ದರಿಂದ ಮೊದಲೇ ನಮ್ಮ  ಪದ್ಧತಿ ಬಗ್ಗೆ ಮಾಹಿತಿ ನೀಡಿದ್ದೇನೆ.

  ಯಾವ ಋಣವೋ- ಸಂಭಂದವೋ ನಮ್ಮ ಕ್ಯಾಂಪಸ್ ಆರಂಭಿಸಲು ತಾಯಿ ಶಕ್ತಿದೇವತೆ ನೀವೂ ಪ್ರತಿನಿಧಿಸುತ್ತಿರುವ ಹಿರಿಯೂರು ವಿಧಾನ ಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸತಿಯ ದೇಹದ ಯಾವುದಾದರೂ ಪ್ರಮುಖ ಅಂಗ ಇಲ್ಲಿಯೂ ಬಿದ್ದಿರ ಬಹುದಾ? ಎಂಬ ಚಿಂತನೆ ನನ್ನನ್ನು ಸದಾ ಕಾಡುತ್ತಿದೆ. ನಾನು 33 ವರ್ಷ ನಿರಂತರವಾಗಿ ದೇವಿ ಪುಸ್ತಕ ಪಾರಾಯಣ ಮಾಡಿರುವುದೇ ನಮ್ಮ ಆಸ್ತಿ’ ಇನ್ನೂ ಮುಂದೆ ದೇವತೆಯ ಇಷ್ಟದಂತೆ.

About The Author