22nd December 2024
Share

TUMAKURU:SHAKTHI PEETA FOUNDATION

ಶಕ್ತಿಪೀಠ

ಜಗದ ಆರಾಧ್ಯ ಧೈವ ಶಿವ-ಪಾರ್ವತಿ’ ಜೀವನದ ಇತಿಹಾಸವೇ ಒಂದು ವಿಶಿಷ್ಠವಾಗಿದೆ. ಶಿವನು ಪಾರ್ವತಿಯನ್ನೇ ವಿವಿಧ ಹೆಸರುಗಳಲ್ಲಿ ಹಲವಾರು ಜನ್ಮದಲ್ಲಿ ವಿವಾಹ ಆಗಿದ್ದಾರೆ. ಪ್ರಜಾಪತಿ ದಕ್ಷಬ್ರಹ್ಮನ ಮಗಳು ಸತಿ, ಸತಿಯನ್ನು ಶಿವನು ವಿವಾಹವಾಗಿರುತ್ತಾರೆ.

ಪ್ರಜಾಪತಿ ದಕ್ಷಬ್ರಹ್ಮನು ಮಹಾಯಜ್ಞ ಮಾಡುವ ಸಂಕಲ್ಪ ಮಾಡಿ, ತನ್ನ ಮಗಳು ಸತಿ ಮತ್ತು ಅಳಿಯ ಶಿವನನ್ನು ಯಜ್ಞಕ್ಕೆ ಆಹ್ವಾನಿಸದೆ ಅವಮಾನ ಮಾಡಿದ್ದರಂತೆ. ಸತಿ ತಂದೆ ಕರೆಯದಿದ್ದರೂ ತಂದೆ ಮನೆ ಯಜ್ಞಕ್ಕೆ ಹೋದಾಗ, ತನ್ನ ತಂದೆ ತನ್ನ ಪತಿಯಾದ ಶಿವನನ್ನು ಮಹಾಸಭೆಯ ಮುಂದೆ ಮಾಡಿದ ಅಪಮಾನ ಸಹಿಸದೆ ತನ್ನ ತಂದೆ ಮಾಡುತ್ತಿರುವ ಯಜ್ಞ ಕುಂಡಕ್ಕೆ ಬಿದ್ದಾಗ, ಶಿವ ಸತಿಯ ದೇಹವನ್ನು ಎತ್ತಿಕೊಂಡು ರುದ್ರನರ್ತನ ಮಾಡುವಾಗ, ಹೆದರಿದ ದೇವತೆಗಳು ವಿಷ್ಣುವಿನ ಮೊರೆಹೊಕ್ಕಾಗ, ಸತಿಯ ದೇಹವಿದ್ದರಲ್ಲವೇ ಶಿವ ನರ್ತನ ಮಾಡುವುದು ಎಂದು ತನ್ನ ಸುದರ್ಶನ ಚಕ್ರದಿಂದ ಸತಿಯ ದೇಹವನ್ನು ಛಿಧ್ರ ಮಾಡಿದಾಗ, ಸತಿಯ ದೇಹದ ಭಾಗಗಳು ತುಂಡು ತುಂಡಾಗಿ ಹಲವಾರು ಕಡೆ ಬಿದ್ದಿರುವ ಸ್ಥಳಗಳೇ 108 ಶಕ್ತಿಪೀಠಗಳಾಗಿವೆ’.

ಸತಿಯ ದೇಹದ ಒಂದೊಂದು ಭಾಗ ಬಿದ್ದಕಡೆಯು ಶಕ್ತಿದೇವತೆಗಳ ಆರಾಧನೆ ನಡೆಯುತ್ತಾ ಬಂದಿದೆ. ಇದು ನಡೆದು ಅದೆಷ್ಟೋ ವರ್ಷಗಳಾಗಿವೆ.ಈಗ ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೂಕಿನ, ಜೆಜಿ ಹಳ್ಳಿ ಹೋಬಳಿ, ವಡ್ಡನಹಳ್ಳಿ ಬಳಿ ಇರುವ ಬಗ್ಗನಡು ಕಾವಲ್ ನಲ್ಲಿ ಭೂಮಿಯ ಮೇಲೆ ಭಾರತ ನಕ್ಷೆ ಮಾಡಿ ಎಲ್ಲಾ 108 ಶಕ್ತಿಪೀಠಗಳ ದೇವಾಲಯ ಇರುವ ಪ್ರದೇಶಗಳ ಜಿಐಎಸ್ ಆಧಾರಿತ, ಶಕ್ತಿಪೀಠಗಳ ಪ್ರಾತ್ಯಕ್ಷಿಕೆ ಮಾಡುವ ಕೆಲಸ ಆರಂಭವಾಗಿದೆ. ‘ಇಲ್ಲಿ ಸತಿಯ ದೇಹದ ಯಾವ ಭಾಗ ಬಿದ್ದಿತ್ತೋ ಯಾರಿಗೆ ಗೊತ್ತು?.

ಜಲಪೀಠ

ಕೇಂದ್ರ ಸರ್ಕಾರ ಮಾಡಲು ಉದ್ದೇಶಿಸಿರುವ 30 ನದಿ ಜೋಡಣೆಗಳ ಪ್ರಾತ್ಯಕ್ಷಿಕೆಗಳನ್ನು ಭೂಮಿಯ ಮೇಲೆ ಮಾಡಿರುವ ಭಾರತದ ನಕ್ಷೆಯಲ್ಲಿ ಗುರುತು ಮಾಡಿ, ನದಿ ಹುಟ್ಟುವ ಸ್ಥಳ, ನದಿ ಹರಿದು ಸಮುದ್ರ ಸೇರುವ ಮಾರ್ಗ ಗುರುತಿಸಿ, ಕೃತಕವಾಗಿ ಹಿಂದೂ ಮಾಹಾಸಾಗರ, ಅರಬ್ಬೀಸಮುದ್ರ ಮತ್ತು ಬಂಗಾಳಕೊಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿದೆ.

ಅಭಿವೃದ್ಧಿ ಪೀಠ.

ದೇಶದ 734 ಜಿಲ್ಲೆಗಳ ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಅಧ್ಯಯನ ಮತ್ತು ಮೌಲ್ಯಮಾಪನ ಮಾಡುವ ಅಧ್ಯಯನಗಾರರಿಗೆ ಸಾಮಾನ್ಯ ಸೌಲಭ್ಯ ಕೇಂದ್ರ ಸ್ಥಾಪಿಸುವ ಕೆಲಸವೂ ಆರಂಭವಾಗಿದೆ. ದೇಶದ 37 ರಾಜ್ಯಗಳ ಭವನಗಳಿಗೂ ಒಂದೊಂದು ನಿವೇಶನ ನಿಗದಿ ಪಡಿಸಲಾಗಿದೆ. ‘ದಿಶಾ ಅಧ್ಯಯನ ಪೀಠಗಳ ಹಬ್’ ನಿರ್ಮಾಣವಾಗಲಿದೆ. ಆಸಕ್ತರು ಹೂಡಿಕೆ ಮಾಡಬಹುದಾಗಿದೆ.

ಜಲಶಕ್ತಿ ಕೇಂದ್ರ.

ಕೇಂದ್ರ ಸರ್ಕಾರ ಜಲಶಕ್ತಿ ಅಭಿಯಾನ ಆರಂಭಿಸಿದೆ. ದೇಶದ 734 ಜಿಲ್ಲೆಗಳಲ್ಲೂ ಜಲಶಕ್ತಿ ಕೇಂದ್ರ ಸ್ಥಾಪಿಸಲು ಸೂಚಿಸಿದೆ. ಇವುಗಳ ಕಾರ್ಯವೈಖರಿ ಮೌಲ್ಯಮಾಪನ ಮಾಡುವ ಕೇಂದ್ರವೂ ಇದಾಗಲಿದೆ.

ದಿನಾಂಕ:22.08.2021 ರಂದು ಶಂಕುಸ್ಥಾಪನೆ ಮಾಡುವ ಕಟ್ಟಡದ ಉಪಯೋಗ.

ವಿಶ್ವದ ಆರು ದೇಶಗಳಾದ ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಟಿಬೆಟ್ ಮತ್ತು ಪಾಕಿಸ್ಥಾನಗಳಲ್ಲಿರುವ 108 ಶಕ್ತಿಪೀಠಗಳ ಜನರು ಬಂದು ತಂಗುವ, ಭಾರತ ದೇಶದ 734 ಜಿಲ್ಲೆಗಳ ಸಂಶೋಧಕರು ಬಂದು ತಂಗುವ ಮತ್ತು ಕರ್ನಾಟಕ ರಾಜ್ಯದ 31 ಜಿಲ್ಲೆಗಳ ಸಂಶೋಧಕರು ಬಂದು ತಂಗುವ, ವಿವಿಧ ತರಭೇತಿ ಪಡೆಯುವ, ಅನ್ನದಾನ, ಜ್ಞಾನದಾನ ಮಾಡುವ ಬಹುಪಯೋಗಿ ಕಟ್ಟಡವಾಗಲಿದೆ. ಇದೊಂದು ಸಂಶೋಧಕರ ತಾಣವೂ’ ಆಗಲಿದೆ.

ಕ್ಯಾಂಪಸ್ ಉದ್ದೇಶ ಹಲವಾರು ಇದ್ದರೂ ಪ್ರಮುಖ ಅಂಶಗಳು ಇವು.

  1. ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿಗೆ ಅನುದಾನ ಪಡೆದ ರಾಜ್ಯವಾಗಲೇಬೇಕು.
  2. ಕರ್ನಾಟಕ ರಾಜ್ಯದ ಪ್ರತಿಯೊಂದು ಗ್ರಾಮಕ್ಕೂ ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಘೋಷಣೆಯಡಿಯಲ್ಲಿ ರಾಜ್ಯದ 29640 ಗ್ರಾಮಗಳಿಗೂ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯದಡಿ ನದಿ ನೀರು ಅಲೋಕೇಷನ್ ಮಾಡಲೇ ಬೇಕು.

ಎರಡು ಪ್ರಮುಖ ಅಂಶಗಳು ಅನುಷ್ಠಾನ ಗೊಳ್ಳಬೇಕಾದರೇ ರಾಜ್ಯದ 28 ಜನ ಲೋಕಸಭಾ ಸದಸ್ಯರು, 12 ಜನ ರಾಜ್ಯ ಸಭಾ ಸದಸ್ಯರು, 225 ಜನ ವಿಧಾನಸಭಾ ಸದಸ್ಯರು,75 ಜನ ವಿಧಾನಪರಿಷತ್ ಸದಸ್ಯರು, ದೆಹಲಿ ಪ್ರತಿನಿಧಿ. 31 ಜನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರು, 31 ಜನ ಜಿಲ್ಲಾಧಿಕಾರಿಗಳು ಮತ್ತು 31 ಜನ ಜಿಲ್ಲಾ ಪಂಚಾಯತ್ ಸಿ.ಇ.ರವರು ಸೇರಿದಂತೆ ಸುಮಾರು 440 ಜನರನ್ನು ಬಡಿದೆಬ್ಬಿಸಬೇಕು. ಸದಾ ಹಸನ್ಮುಖಿಗಳನ್ನಾಗಿ ಮಾಡಬೇಕು.ಅವರ ಕರ್ತವ್ಯಗಳನ್ನು ಆಗಿದಾಂಗ್ಗೆ ಜ್ಞಾಪಿಸುತ್ತಿರಬೇಕು.’

ಕೆಲಸಕ್ಕೆಂದೇ ಶಕ್ತಿಪೀಠ ಕ್ಯಾಂಪಸ್ ಜನ್ಮ ತಾಳಿದೆ.

ವಿಶ್ವದ 108 ಶಕ್ತಿಪೀಠಗಳ, 12 ಜ್ಯೋತಿರ್ಲಿಂಗಗಳ, ಹಿಮಲಿಂಗ, ಭಗಿರಥ/ಜಲಲಿಂಗ, ಗಣಪತಿ, ಷಣ್ಮುಖ, ಹನುಮ, ನವಗ್ರಹಗಳ, ಅಷ್ಟದಿಕ್ಪಾಲಕರ, ಬಲಿಪೀಠ,  ವೀರಭಧ್ರ, ಭೈರವ, ಗರುಡ, ಧ್ವಾರ ಪಾಲಕರ, ಕಾಳ ಭಧ್ರ, ಜಯಾಯ, ಬಾಲಾಯ, ನಂದಾಯ, ಕುಮುದಾಯ, ಸಪ್ತ ಮಾತೃಕೆಯರ, ಇವುಗಳ ಜೊತೆಗೆ ಶಿರಡಿ, ಪುಟ್ಟಪರ್ತಿ, ಭವಿಷ್ಯದಲ್ಲಿನ ಮಂಡ್ಯದ ಸಾಯಿಬಾಬಾ, ವಿಶ್ವಗುರು ಬಸವಣ್ಣನವರ, ಸ್ವಾಮಿ ವಿವೇಕನಂದರ ಸ್ಪೂರ್ತಿಯೊಂದಿಗೆ, ಕೇಂದ್ರ ಸರ್ಕಾರದ 30 ನದಿ ಜೋಡಣೆಗಳ ಪ್ರಾತ್ಯಾಕ್ಷಿಕೆಗಳಿಗೆ ಪ್ರತಿ ನಿತ್ಯ ನಮಸ್ಕರಿಸಿ, ಪ್ರತಿ ನಿತ್ಯ ಅಗ್ನಿಹೋತ್ರ ಹೋಮ ಮಾಡಿ, ದೇವಿ ಪುಸ್ತಕ ಪಾರಾಯಣ ಮಾಡಿ, ತಾಯಿ ಜಗನ್ಮಾತೆಗೆ ನಮಸ್ಕರಿಸಿ, ನಿರ0ತರವಾಗಿ ಶ್ರಮಿಸುವ ಪ್ರಭುದ್ಧರ ಒಂದು ವೇದಿಕೆ ಇಲ್ಲಿ ಸಿದ್ಧವಾಗಲಿದೆ.

ಕುಂದರನಹಳ್ಳಿ ಗಂಗಮಲ್ಲಮ್ಮನನ್ನು ಕಳೆದ 33 ವರ್ಷಗಳಿಂದ ಪೂಜಿಸಿ, ನಮ್ಮ ಹೂಟ್ಟೂರಿಗೆ ಸುಮಾರು ರೂ 6400 ಕೋಟಿ ವೆಚ್ಚದ, ಕೇಂದ್ರ ಸರ್ಕಾರ ಸ್ವಾಮ್ಯದ ರಕ್ಷಣಾ ಇಲಾಖೆಯ ಹೆಚ್.ಎ.ಎಲ್ ವತಿಯಿಂದ ಹೆಲಿಕ್ಯಾಪ್ಟರ್ ಘಟಕ ಬರಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಸಹಕಾರದಿಂದ ನಿರಂತರವಾಗಿ ಶ್ರಮಿಸಿದ ನನಗೆ, ಈಗ ಮೇಲ್ಕಂಡ 440 ಜನರ ಸಹಕಾರದಿಂದ, ನೂರಾರು ಪರಿಣಿತರ ಸಲಹೆಗಳಿಂದ, ಈ ಎರಡು ಬೇಡಿಕೆಗಳ ಅನುಷ್ಠಾನಕ್ಕೆ ಶ್ರಮಿಸುವ ದೇಗುಲವೇ ಶಕ್ತಿ ಪೀಠ ಕ್ಯಾಂಪಸ್’.

ತಾವೂ ಕೈಜೋಡಿಸ ಬಹುದು.

ಇಂಥಹ ಹುಚ್ಚರು ಇದ್ದಾರೆಯೇ ಎಂದು ನಿಮಗನಿಸ ಬಹುದಲ್ಲವೇ?

ಇಂದು(22.08.2021) ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೂ ಪೂಜೆ ಮತ್ತು ಚರ್ಚೆ ನಡೆಯಲಿದೆ.