CHITRADURGA:SHAKTHI PEETA CAMPUS
ಶಕ್ತಿಪೀಠ ಕ್ಯಾಂಪಸ್ ಘೋಷಣೆ-2021
ಶಕ್ತಿಪೀಠ ಫೌಂಡೇಷನ್ ನ ಎರಡನೇ ವಾರ್ಷಿಕೋತ್ಸವದಲ್ಲಿ ಕ್ಯಾಂಪಸ್ ಮಟ್ಟದ, ರಾಜ್ಯ ಸರ್ಕಾರ ಮಟ್ಟದ ಮತ್ತು ಕೇಂದ್ರ ಸರ್ಕಾರ ಮಟ್ಟದ ಹಲವಾರು ಮಹತ್ವದ ಘೋಷಣೆಗಳನ್ನು ಮಾಡಲಾಯಿತು. ವಿವಿಧ ವರ್ಗದ ಪರಿಣಿತರು ಆಯಾ ಯೋಜನೆಗಳ ಜಾರಿ ಮಾಡಲು ‘ವಿಷನ್ ಗ್ರೂಪ್ ಮತ್ತು ಪ್ರಷರ್ ಗ್ರೂಪ್’ ರಚಿಸಿಕೊಂಡು ಶ್ರಮಿಸಲು ತೀರ್ಮಾನಿಸಲಾಗಿದೆ. ಪ್ರತಿಯೊಂದು ಘೋಷಣೆಯ ಅಂಶಗಳನ್ನು ಪ್ರತ್ಯೇಕವಾಗಿ ಬರೆಯಲಾಗುವುದು.
ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ದಿನಾಂಕ:11.10.2017 ರಂದು ಬಿಡುಗಡೆ ಮಾಡಿದ್ದ ಜನತೆಯ ವಿಷನ್ ಡಾಕ್ಯುಮೆಂಟ್ ನಲ್ಲಿ ಪ್ರಸ್ತಾಪ ಮಾಡಿದ್ದ ಕೆಳಕಂಡ ಅಂಶಗಳ ಜಾರಿಗೆ ಕೇಂದ್ರ ಸರ್ಕಾರ ಜಾರಿ ಮಾಡಿರುವ ಯೋಜನೆಗಳ ಸ್ಥಿತಿ-ಗತಿಯನ್ನು ಜನತೆಯ ಮುಂದೆ ಇಡುವ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಚಾಟಿ ಬೀಸುವ ಕೆಲಸ ಮಾಡಲು ಘೋಶಿಸಿಲಾಗಿದೆ.
- ಜಲಶಕ್ತಿ ಕೇಂದ್ರ : ಭಾರತ ದೇಶದ 734 ಜಿಲ್ಲೆಗಳಲ್ಲಿನ ಜಲಶಕ್ತಿ ಕೇಂದ್ರದಗಳ ಮೌಲ್ಯ ಮಾಪನ.
- ಕರ್ನಾಟಕ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳ ಮೌಲ್ಯ ಮಾಪನ.
- ದಿಶಾ: ಭಾರತ ದೇಶದ 697 ಜಿಲ್ಲೆಗಳಲ್ಲಿನ ಮತ್ತು 37 ರಾಜ್ಯಗಳ ದಿಶಾ ಸಮಿತಿ ಮೌಲ್ಯ ಮಾಪನ.
- ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬಂದಿರುವ ಅನುದಾನದ ಮೌಲ್ಯ ಮಾಪನ.
- ರಾಜ್ಯದ ನದಿ ಜೋಡಣೆ: ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಆಧೇಶ ಮಾಡಿದ ರಾಜ್ಯದ ನದಿ ಜೋಡಣೆ ಯೋಜನೆ.
- ಸಣ್ಣ ನೀರಾವರಿ ಇಲಾಖೆ ಪ್ರಸ್ತಾವನೆ.(ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು): ರಾಜ್ಯದ ಸಣ್ಣ ನೀರಾವರಿ ಇಲಾಖೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ರೂ 11000 ಕೋಟಿ ಯೋಜನೆ.(ಶ್ರೀ ಜೆ.ಸಿ.ಮಾಧುಸ್ವಾಮಿ ರವರ ಮತ್ತು ಶ್ರೀ ಜಿ.ಎಸ್.ಬಸವರಾಜ್ ರವರ ಕನಸಿನ ಯೋಜನೆ)
- ಗಣಿ ದುಡ್ಡು; ನೆನೆಗುದಿಗೆ ಬಿದ್ದಿರುವ ರೂ 25000 ಕೋಟಿ ಹಣ ಬಳಕೆ.
- ತುಮಕೂರು ಡಾಟಾ ಜಿಲ್ಲೆ-2022; 2022 ರೊಳಗೆ ತುಮಕೂರು ಜಿಲ್ಲೆಯನ್ನು ಡಾಟಾ ಜಿಲ್ಲೆಯಾಗಿ ಘೋಷಣೆ ಮಾಡಲು ತುಮಕೂರು ಸಂಸದರಾಧ ಶ್ರೀ ಜಿ.ಎಸ್.ಬಸವರಾಜ್ ರವರ ನಿರಂತರ ಪ್ರಯತ್ನದ ಯೋಜನೆ.
- ಮೋದಿ 2014-2024 ಕಾಲಮಿತಿ ಯೋಜನೆಗಳು ; ಶ್ರೀ ನರೇಂದ್ರ ಮೋದಿಯವರ ಸರ್ಕಾರ 2014 ರಿಂದ 2024 ರೊಳಗೆ ಕಾಲಮಿತಿ ಘೋಷಣೆ ಮಾಡಿರುವ ರಾಜ್ಯದ ವಿವಿಧ ಯೋಜನೆಗಳ ಮೌಲ್ಯ ಮಾಪನ.
ಬೇರೆ ಯೋಜನೆಗಳ ಬಗ್ಗೆ ಶ್ರಮಿಸುವುದೇ ಇಲ್ಲ ಎಂದಲ್ಲ, ಈ 9 ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ರಾಜ್ಯದ ಮತ್ತು ದೇಶದ ಜನತೆಯ ಮುಂದೆ ಇಡಲು ನಿರ್ಣಯ ಮಾಡಲಾಗಿದೆ.
ತಾವೂ ಕೈಜೋಡಿಸ ಬಹುದು.